‘ಮಯೂರ ‘ ಮತ್ತೆ ಮೈ ಕೊಡವಿ ನಿಂತಿದೆ

ಟಿ ವಿ ಆರ್ಭಟದಲ್ಲಿ ಮಾಸಪತ್ರಿಕೆಗಳು ಮಾಸಿಹೋಗುತ್ತಿದೆಯೇನೋ ಎಂಬ ಗುಮಾನಿ ಉಂಟಾಗಿತ್ತು. ಆದರೆ ಅದನ್ನು ನಿವಾರಿಸುವಂತೆ ‘ಮಯೂರ ‘ ಮತ್ತೆ ಮೈ ಕೊಡವಿ ನಿಂತಿದೆ. ಹೊಸ ಹುಡುಗರಿಗೆ ಮಯೂರ ಒಂದು ಭರವಸೆಯ ಕ್ಯಾನ್ವಾಸ್ ಆಗಿ ಅರಳಿದೆ .

ಬರಹಗಾರ, ಉತ್ಸಾಹಿ ಜಿ  ಪಿ  ಬಸವರಾಜು  ಹೊಸ ಸಾಧ್ಯತೆಗಳತ್ತ ಮಯೂರವನ್ನು  ಕೊಂಡೊಯ್ಯುತ್ತಿದ್ದಾರೆ . ತೇಜಸ್ವಿ ನೆನಪಿಗಾಗಿ ಈ ಹಿಂದೆ ಮಯೂರ ವಿಶೇಷ ಸಂಚಿಕೆ ತಂದಾಗ ಅವಧಿ ಆ ಬಗ್ಗೆ ಬರೆದಿತ್ತು . ಈಗ ಬಸವರಾಜು ಅವರು ಜೂನ್ ತಿಂಗಳ ಮಯೂರವನ್ನು ಲಂಕೇಶ್ ವಿಶೇಷವಾಗಿ  ರೂಪಿಸಿದ್ದಾರೆ. ಉರಿದ ಉಲ್ಕೆ ಲಂಕೇಶ್ ಸಂಚಿಕೆ ಎಲ್ಲರ ಬಳಿ ಇರಲೇಬೇಕು ಎನ್ನುವಷ್ಟು ಮಾಹಿತಿಪೂರ್ಣವಾಗಿ ರೂಪುಗೊಂಡಿದೆ.

ಇಂದಿರಾ ಲಂಕೇಶ್ ‘ಸ್ಕೂಟರ್ ದಿನಗಳ’ನ್ನು ನೆನಸಿಕೊಂಡಿದ್ದಾರೆ. ಗೌರಿ ವಿಶ್ವವೇ ಆಗಿದ್ದ ಅಪ್ಪನನ್ನು ಸ್ಮರಿಸಿದ್ದಾರೆ.ಲಂಕೇಶ್ ಮತ್ತು ಸ್ತ್ರೀವಾದಿ ಚಿಂತನೆ ಕುರಿತು ಎಂ ಎಸ್ ಆಶಾದೇವಿ ಬರೆದಿದ್ದಾರೆ. ಡಿ ಎಸ್ ನಾಗಭೂಷಣ್, ಎಚ್ ಎಲ್ ಕೇಶವಮೂರ್ತಿ, ಬಿ ಟಿ ಜಾಹ್ನವಿ, ಕೃಷ್ಣ ಮಾಸಡಿ, ಸುಜಾತಾ ಕುಮಟಾ ತಾವು ಕಂಡ ಲಂಕೇಶ್ ರನ್ನು ಕಡೆದಿಟ್ಟಿದ್ದಾರೆ.

ಅತ್ಯಂತ ಅಪರೂಪದ ಫೋಟೋಗಳು ಮಯೂರದ ನಾಟ್ಯವನ್ನು ಇನ್ನಷ್ಟು ಚಂದ ಮಾಡಿದೆ.

‍ಲೇಖಕರು avadhi

May 28, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

5 ಪ್ರತಿಕ್ರಿಯೆಗಳು

 1. Tina

  ಅವಧಿ,
  ಮಯೂರ ಬರೆ ಈ ಸಾರೆಯದು ಮಾತ್ರವಲ್ಲ, ಪ್ರತಿ ಸಂಚಿಕೆಯೂ ಸಂಗ್ರಹಯೋಗ್ಯ.
  ಮಯೂರವನ್ನ ಪ್ರೊಮೋಟ್ ಮಾಡುತ್ತ ಇರುವುದಕ್ಕೆ ಧನ್ಯವಾದಗಳು!!
  -ಟೀನಾ

  ಪ್ರತಿಕ್ರಿಯೆ
 2. ಸುಶ್ರುತ

  ನಿಜ. ನಮ್ಮ ಮನೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಯೂರ ಸಹ ಇದೆ. ಇತ್ತೀಚೆಗಂತೂ ಮಯೂರ ಮುದ್ದಾಡುವಷ್ಟು ಚೆನ್ನಾಗಿ ಬರುತ್ತಿದೆ.

  ಪ್ರತಿಕ್ರಿಯೆ
 3. nitin

  ಈಗೀಗ ಮಾಯುೂರ ತುಂಬಾ ಚೆನ್ನಾಗಿ ಚೆನ್ನಾಗಿ ಬರುತ್ತಿದೆ

  ಪ್ರತಿಕ್ರಿಯೆ
 4. Bapu Devarahatti

  avadhi, nija. mayura tumba sogasagide.
  b chandregowdara lekhana odalebeku. hage B T Jahnavi
  avara lekhana…
  avara nenapige anta ellaru avarannu hogali attakkerisuva
  kelasa madilla. ade ee sanchike vishesha.
  g p basavaraju avarige bahuparaku helalebeku…
  – Satish Shile

  ಪ್ರತಿಕ್ರಿಯೆ
 5. chetana chaitanya

  ಮಯೂರ ನನ್ನ ಪಾಲಿಗೆ ಟೆಕ್ಸ್ಟ್ ಬುಕ್. ಅದನ್ನ ಶಾಲಾದಿನಗಳಿಂದಲೂ ಓದುತ್ತಲೇ ಬಂದಿದ್ದೇನೆ, ಈಗಲೂ ಓದುತ್ತಲೇ ಇದ್ದೇನೆ.
  ನೀವು ಹೇಳಿದ ಹಾಗೆ ಈ ಬಾರಿಯ ಲಂಕೇಶ್ ಸ್ಪೆಶಲ್ ಬಹಳ ಉಪಯುಕ್ತ, ಸಂಗ್ರಹಯೋಗ್ಯ ಕೃತಿ.
  ಅಂದಹಾಗೆ, ಲಂಕೇಶರ ’ಅವ್ವ’ ಕವಿತೆಯನ್ನ ಮೊದಲ ಸಾರ್ತಿ ಓದಿದ್ದು ಮಯೂರದಲ್ಲೇ. ನರಹಳ್ಳಿ ಬಾಲಸುಬ್ರಹ್ಮಣ್ಯರು ವಿಮರ್ಶೆ ಮಾಡಿದ್ದರು. ಆಮೇಲೆ ‘ಅಮ್ಮ’ನ ಪರಿಕಲ್ಪನೆಯೇ, ನೋಡುವ ನೋಟವೇ ಬದಲಾಗಿಹೋಯ್ತು. ಅಲ್ಲಿಂದ ಮುಂದೆ ಆ ಸಾಲುಗಳು ಅದೆಷ್ಟು ಭಾಷಣಗಳ್ಅಲ್ಲಿ ಬಳಕೆಯಾದವೋ?
  ಇಂಥಹ ಪಾಠಗಳನ್ನು ‘ಮಯೂರ’ ಸಾಕಷ್ಟು ಕಲಿಸಿಕೊಟ್ಟಿದೆ.
  – ಚೇತನಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: