ಮಲಾಭಿಷೇಕ ಯಾರಿಗೆ?


ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಸರಿಸಾಟಿಯಾದ ಬಣ್ಣ ವಾಸನೆಯುಕ್ತ ಪ್ರತಿಭಟನೆ ಇಲ್ಲಿದೆ.ಸವಣೂರಿನ ಪುರಸಭೆಯ ಆವರಣದಲ್ಲಿ ಮಂಗಳವಾರ ಮಲವನ್ನು ತಲೆಯ ಮೇಲೆ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ ಕುಟುಂಬದ ಸದಸ್ಯರು ತೀವ್ರ ಅಸಹಾಯಕ ಸ್ಥಿತಿಯ ಗರ್ಭದಲ್ಲಿರುವ ಕ್ರೋಧವನ್ನು ಹೊರಹಾಕುವ ಸಾಧನಗಳಿಗೆ ಹೊಸ ಹತಾರವನ್ನು ಸೇರಿಸಿದ್ದಾರೆ.

ಜನರೇ ಸರಕಾರವೆಂದು, ಜನ ತಮ್ಮ ಮೇಲೆಸೆದ ಚಪ್ಪಲಿ ಭಾರತಾಂಬೆಯ ಮೇಲೆ, ಪ್ರಜಾಪ್ರಭುತ್ವದ ಮೇಲೆ ಎಸೆದ ಚಪ್ಪಲಿಯೆಂದು, ಜನರ ಆಶೀರ್ವಾದ ತಮ್ಮ ತಲೆಯ ಮೇಲಿರುವುದೆಂದು ಮುಂತಾಗಿ ಗಳಹುವ ರಾಜಕಾರಣಿಗಳಿಗೆ ಇದು ಯಾರ ತಲೆಯ ಮೇಲೆ ಸುರಿದ ಮಲ ಎಂದು ತಿಳಿಯುತ್ತದೆಯೆ?

-ವಿ.ಎನ್.ಲಕ್ಷ್ಮೀನಾರಾಯಣ

‍ಲೇಖಕರು avadhi

July 22, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

5 ಪ್ರತಿಕ್ರಿಯೆಗಳು

 1. ಶೆಟ್ಟರು (Shettaru)

  “ರಾಜಕಾರಣಿಗಳಿಗೆ ಇದು ಯಾರ ತಲೆಯ ಮೇಲೆ ಸುರಿದ ಮಲ ಎಂದು ತಿಳಿಯುತ್ತದೆಯೆ?”
  ನೀಜಕ್ಕೂ ಕತ್ತಿನ ಪಟ್ಟಿ ಹಿಡಿದು ಕೇಳಲೇಬೇಕಾದ ಪ್ರಶ್ನೆಯಿದು.
  ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಪ್ರಶ್ನೆ, ನಾವೂ ಕೂಡಾ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

  ಪ್ರತಿಕ್ರಿಯೆ
 2. savitri

  Enu hosa pratibhatanegalu bandaru madhyamada vishayavagi aste uliyuttaveya? athava namma rajakeeyada kochheyannu hasanagisuva hosa peeligeyondu barabahude?

  ಪ್ರತಿಕ್ರಿಯೆ
 3. prasad Raxidi

  Sankatavayitu, navella manushyaragodu yavaga, ee asahayakete mattu novu yake nammannu becchi beelisuttilla?,”uchalya” tereditta loka namma pakkdalle ide. yarige yenadru tirugi nodada sthithi talpiddeve annisuttade.
  yako 70 ra dashaka nenapayitu, aga kanishta beedhigadru iliyuttiddevu. matomme helabekenisuttade “namage dhikkaara”….. namage dhikkaara”

  ಪ್ರತಿಕ್ರಿಯೆ
 4. kirankumari

  ಮಾನ್ಯರೆ,
  ಸ್ವತ: ಮಲಾಭಿಷೇಕ ಮಾಡಿಕೊಳ್ಳುವ ಮೂಲಕವಾದರೂ ಪ್ರಸ್ತುತ ವ್ಯವಸ್ಥೆಯಲ್ಲಿರುವ ಬ೦ಢ:ದಪ್ಪ ಚರ್ಮದ ರಾಜಕಾರಣಿಗಳನ್ನು..ಅಧಿಕಾರಶಾಹಿಗಳ ವರ್ತನೆಗೆ ತಮ್ಮ ಸ೦ಕಟವನ್ನು ಹೇಳುತ್ತಾ..ಅದರ ಮೂಲಕವೇ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿರುವ ತಳಸ್ತರ ಸಮುದಾಯದ ಈ ವಾಸ್ತವತೆ ಮತ್ತು ಅಸಹಾಯಕತೆಗೆ ಪ್ರಜ್ನ್ಯಾವ೦ತ ನಾಗರೀಕ ಸಮಾಜವೇ ಉತ್ತರಿಸಬೇಕು.
  ಸವಣೂರಿನ ಭ೦ಗಿ ಸಮುದಾಯದ ಅಹಿ೦ಸಾತ್ಮಕ ಹೋರಾಟಕ್ಕೆ ಜಯ ಹೋ…ಸವಣೂರಿನ ಭ೦ಗಿ ಸಮುದಾಯದ ಅಳಲನ್ನು ಎಲ್ಲ ಪ್ರಗತಿಪರ ವ್ಯಕ್ತಿ:ಸ೦ಘ:ಸ೦ಸ್ಥೆಗಳು ಗ೦ಭೀರವಾಗಿ ಪರಿಗಣಿಸಬೇಕು..ಮು೦ದಿನ ಹೋರಾಟದ ದಾರಿಗೆ ಸಜ್ಜಾಗಬೇಕು. ಎ೦ಬುದು ನನ್ನಕಳಕಳಿ.

  ಕಿರಣ್ ಕುಮಾರಿ.ಎಸ್.
  ರಾಮನಗರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: