ಮಹಾಲಿಂಗ ಭಟ್ಟರ ಅಂಕಣ- ಅತ್ರಿ ಕಂಡಂತೆ

-ಜಿ ಎನ್ ಅಶೋಕವರ್ಧನ ಆರೋಹಣ ಪ್ರಜಾವಾಣಿಯ ಶನಿವಾರದ ಕರಾವಳಿ ಪುರವಣಿಯಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಕೆಲವು ಸಮಯದಿಂದ ಒಂದು ಅಂಕಣ ನಡೆಸುತ್ತಾ ಇಲ್ಲ! ಬದಲು ಅವರ ಚಿತ್ರ ಮತ್ತು ಹೆಸರು ಹೊತ್ತು ಅವರ ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ಆಸಕ್ತಿಗಳೇ ಸುಮಾರು ಕಾಲುಪುಟದ ಹರವಿನಲ್ಲಿ ಮಾತಾಡುತ್ತವೆ. ವಾಸ್ತವದಲ್ಲಿ ಈ ಅಂಕಣ ಸದಾ ಕರಾವಳಿ ಎಂಬ ಪ್ರಾದೇಶಿಕ ಮಿತಿಯನ್ನು ಮೀರಿ ಕನ್ನಡ ವಲಯದಲ್ಲೇ ಪ್ರಸಾರ ಕಾಣಬೇಕಾದ ಯೋಗ್ಯತೆಯವು ಎಂಬುದು ನನ್ನನ್ನು ಕಾಡುವ ಕೊರಗು. ನಿಮ್ಮದೇ ಒಂದು ಬ್ಲಾಗ್ ತೆರೆಯಿರಿ. ಅದರ ತಾಂತ್ರಿಕ ಕಿರಿಕಿರಿಗಳು ಬೇಡವೆಂದಾದರೆ ಕನಿಷ್ಠ ಅವಧಿ, ಕೆಂಡಸಂಪಿಗೆ, ಸಂಪದಗಳಂತ ಅಂತರ್ಜಾಲ ಪತ್ರಿಕೆಗಳಿಗಾದರೂ ದಾಟಿಸಿ ಪುಣ್ಯ ಕಟ್ಟಿಕೊಳ್ಳಿ ಎಂದದ್ದೂ ಇದೆ. ಇನ್ನೂ ಹೆಚ್ಚಿನ ನನ್ನ ಮಾತಿನ ಹೊರೆಯಲ್ಲಿ ನೀವು ಬಳಲುವ ಬದಲು ಮೊದಲು ಇದೇ ಶನಿವಾರ (೩-೭-೨೦೧೦) ಪ್ರಕಟವಾದ ಲೇಖನದ ಯಥಾ ಪ್ರತಿಯನ್ನು ನಿಮ್ಮ ಓದಿಗೆ ಪ್ರಸ್ತುತಪಡಿಸುತ್ತೇನೆ. ಈ ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆ ಕೊಟ್ಟ ಮಹಾಲಿಂಗ ಭಟ್ಟರಿಗೂ ಸಹಕರಿಸಿದ ಪ್ರಜಾವಾಣಿ ಬಳಗಕ್ಕೂ ಕೃತಜ್ಞತೆಗಳು. ದಾಖಲಾತಿ ವಿಚಾರದಲ್ಲಿ: ೧. ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಕುಶಿ ಹರಿದಾಸ ಭಟ್ಟರು, ಅವರ ಮತ್ತು ನನ್ನ ತಂದೆಯ ಸಹಪಾಠಿ, ಮಿತ್ರ, ಆಗ ವಿದೇಶದಲ್ಲಿ ಭಾರತದ ರಾಯಭಾರಿಯಾಗಿದ್ದವರು, ಖ್ಯಾತ ಕತೆಗಾರ ಬಾಗಲೋಡಿ ದೇವರಾಯರನ್ನು ನನ್ನಂಗಡಿಗೆ ಕರೆದುಕೊಂಡು ಬಂದಿದ್ದರು. ಕುಶಿಯವರು ಅವರದೇ ವರಸೆಯಲ್ಲಿ ನನ್ನ ಕಾಡುಬೆಟ್ಟ ಸುತ್ತುವ ಹುಚ್ಚನ್ನು ದೇವರಾಯರಿಗೆ ಪರಿಚಯಿಸಿದರು. ಕೂಡಲೇ ದೇವರಾಯರು ಹೇಳಿದ ಮಾತಿನ ಸಾರಾಂಶ – ‘ನಿನ್ನ ಅನುಭವವನ್ನು ಅದೆಷ್ಟೇ ಕಚ್ಚಾವಾದರೂ ಲೇಖನ ಟಿಪ್ಪಣಿಗಳಲ್ಲಿ, ಫೋಟೋಗಳಲ್ಲಿ ದಾಖಲಿಸು. ಅದು ನಿಜವಾದ ದೇಶಸೇವೆ. ವಿದೇಶಿಯರು (ಬ್ರಿಟಿಷರೋ ಮೇಲಿನ ಲೇಖನ ಪ್ರಸ್ತುತಪಡಿಸುವ ಜರ್ಮನ್ ಮಿಶನರಿಗಳೋ) ಯಾವುದೇ ಕಾರಣಕ್ಕೆ ಇದನ್ನು ಮಾಡಿರಲಿ, ಮಾಡಿದ್ದು ನಮಗಿಂದು ಅಪೂರ್ವ ಮತ್ತು ಅನುಪಮ. ನಾವದನ್ನು ಬೆಳೆಸುವುದಿರಲಿ, ಊರ್ಜಿತದಲ್ಲೂ ಇಡದೆ…’ ಮಹಾಲಿಂಗರು ಎತ್ತಿ ತೋರಿಸಿರುವ ಕೆಟಿಸಿಯ ಸಾಹಸವನ್ನು ವಿಚಾರವಂತರು, ಮುಖ್ಯವಾಗಿ ವಿದ್ಯೆಗೇ ಮೀಸಲೆನಿಸಿಕೊಳ್ಳುವ ವಿವಿನಿಲಯಾದಿ ಶಾಲೆ ಕಾಲೇಜುಗಳು, ಇನ್ನೂ ಮುಖ್ಯವಾಗಿ ದಿನ ಬೆಳಗಾದರೆ ಅಂಕಿಸಂಕಿಗಳ (ಹೆಚ್ಚಿನ ಸಮಯ ಸುಳ್ಳೇ) ಡೊಂಬರಾಟ ತೋರಿಸಿ ಸಂದ ಪ್ರಗತಿಪಥ ಬೆಳಗುವ ಅಥವಾ ಅಭಿವೃದ್ಧಿ ಆಶಯಗಳ ರೇಖೆ ಎಳೆಯುವ ಆಡಳಿತಗಾರರು (ಜನಪ್ರತಿನಿಧಿಗಳೂ ಅಧಿಕಾರಿಗಳೂ) ಗಮನಿಸಲೇಬೇಕು. ೨. ಬೆನೆಟ್ ಅಮ್ಮನ್ನ – ವೃತ್ತಿ ಮತ್ತು ಹವ್ಯಾಸಗಳ ಸಮಪ್ರಮಾಣದ ಮಿಶ್ರಣದಲ್ಲಿ ಮೂಡಿದ ವ್ಯಕ್ತಿ. ಇವರ ಬಗ್ಗೆ ಮಹಾಲಿಂಗರ ಮಾತಿನ ಮುಂದೆ ನಾನು ಹೇಳುವುದೇನೂ ಉಳಿದಿಲ್ಲ]]>

‍ಲೇಖಕರು avadhi

July 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. my pen from shrishaila

  ಆಶೋಕಭಾವ,
  ನಿನ್ನ ಅನುಭವವನ್ನು ಅದೆಷ್ಟೇ ಕಚ್ಚಾವಾದರೂ ಲೇಖನ ಟಿಪ್ಪಣಿಗಳಲ್ಲಿ, ಫೋಟೋಗಳಲ್ಲಿ ದಾಖಲಿಸು. ಅದು ನಿಜವಾದ ದೇಶಸೇವೆ. ವಿದೇಶಿಯರು (ಬ್ರಿಟಿಷರೋ ಮೇಲಿನ ಲೇಖನ ಪ್ರಸ್ತುತಪಡಿಸುವ ಜರ್ಮನ್ ಮಿಶನರಿಗಳೋ) ಯಾವುದೇ ಕಾರಣಕ್ಕೆ ಇದನ್ನು ಮಾಡಿರಲಿ, ಮಾಡಿದ್ದು ನಮಗಿಂದು ಅಪೂರ್ವ ಮತ್ತು ಅನುಪಮ.
  ನಾನೆಂದೂ ಈ ದಿಕ್ಕಿನಲ್ಲಿ ಯೋಚಿಸಿಲ್ಲ. ಇದು ನಿಜವಾಗಿಯೂ ಒಳ್ಳೆ ಸಲಹೆ ಮತ್ತು ಉಪಯೋಗಕರ.ನಾನಿದನ್ನು ಖಂಡಿತವಾಗಿಯೂ ಪ್ರಾರಂಭಿಸುತ್ತೇನೆ.ಏನಿಲ್ಲವೆಂದರೂ ನನ್ನ ಸ್ವಂತಕ್ಕಾದರೂ ಉಪಯೋಗವಾದೀತು.
  ಶೈಲ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: