ಮಹಾ ಸಂಶೋಧಕ ವೆಂಕಟರಾಜ ಪುಣಿಂಚಿತ್ತಾಯರು

– ಪುರುಷೋತ್ತಮ ಬಿಳಿಮಲೆ

 

ಮಹಾ ಸಂಶೋಧಕ ವೆಂಕಟರಾಜ ಪುಣಿಂಚಿತ್ತಾಯರು ಇನ್ನಿಲ್ಲ

ಕಳಚಿದ ಭಾಷಾ ಬಾಂಧವ್ಯಗಳ ಬೆಸುಗೆ

ಕನರ್ಾಟಕದ ಕರಾವಳಿ ಭಾಗದಲ್ಲಿಚಾರಿತ್ರಿಕಕಾರಣವಾಗಿಅತ್ಯಂತ ಮಹತ್ವದ ಅನೇಕ ಸಂಶೋಧಕರು ಆಗಿ ಹೋಗಿದ್ದಾರೆ. ಮಂಜೇಶ್ವರಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್, ಮುಳಿಯ ತಿಮ್ಮಪ್ಪಯ್ಯ , ಬಿ ಎ. ಸಾಲೆತ್ತೋರು, ಕಡವ ಶಂಭು ಶರ್ಮ, ಮೊದಲಾದ ಹಿರಿಯ ಸಂಶೋಧಕರುಕನರ್ಾಟಕ ಸಂಶೋಧನೆಗೆ ನೀಡಿದಕೊಡುಗೆಚಾರಿತ್ರಿಕವಾದುದು . ಇಂದು ನಾವು ಮುಂದುವರೆಸುತ್ತಿರುವ ಅನೇಕ ಸಂಶೋಧನೆಗಳು ಈ ಮಹನೀಯರು ಹಾಕಿಕೊಟ್ಟ ಹಾದಿಯಲ್ಲಿ ಮುಂದುವರೆಯುತ್ತಿವೆ. ಈ ಮಹನೀಯರ ಸಾಲಿನ ಕೊನೆಯಕುಡಿ ಶ್ರೀ ವೆಂಕಟರಾಜ ಪುಣಿಂಚಿತ್ತಾಯರು.ಕಾಸರಗೋಡಿನಎಡನೀರಿನಂತಒಂದು ಹಳ್ಳಿಯಲ್ಲಿ ವಾಸವಾಗಿದ್ದಅವರುಗೋವಿಂದ ಪೈಗಳ ಹಾಗೆ, ಸ್ವಂತ ಪ್ರಯತ್ನದಿಂದ ಸಾಧಿಸಿಕೊಂಡ ಪಾಂಡಿತ್ಯಅಸಾಧಾರಣವಾದುದು. ಅವರುಕನ್ನಡ, ಮಲೆಯಾಳ ಮತ್ತು ತುಳುವಿನ ಬಗೆಗ ನಡೆಸಿದ ಸಂಶೋಧನೆಗಳು, ಹೇಳಿದ ಮಾತುಗಳು, ಪ್ರಕಟಿಸಿದ ಪುಸ್ತಗಳು ಮತ್ತು ಲೇಖನಗಳು ಅಸಾಮಾನ್ಯವಾದುವು. ತುಳುವಿನಲ್ಲಿ ಲಿಖಿತ ಸಾಹಿತ್ಯವಿಲ್ಲ ಎಂದುಎಲ್ಲರೂ ಭಾವಿಸಿದ್ದಾಗ ಶ್ರೀ ಪುಣಿಂಚಿತ್ತಾಯರು, ವಿಷ್ಣು ತುಂಗನ ತುಳು ಭಾಗವತೊ ಪ್ರಕಟಿಸಿ ಆ ಕೊರತೆಯನ್ನು ಇಲ್ಲವಾಗಿಸಿದ್ದಲ್ಲದೆ ಮುಂದೆ ಮತ್ತೆ ಕೆಲವು ತುಳು ಕೃತಿಗಳನ್ನು ಸಂಶೋಧಿಸಿ ಪ್ರಕಟಿಸಿದರು.ತುಳುವಿಗೊಂದು ಲಿಪಿಯಿತ್ತುಎಂಬುದನ್ನು ಸಾದರ ಪಡಿಸಿದರು.ಮಾತ್ರವಲ್ಲ ತುಳು ಲಿಪಿಯಲ್ಲಿ ಪತ್ರಗಳನ್ನು ಬರೆದುಅದನ್ನು ಪ್ರಚುರ ಪಡಿಸಿದರು.ನೂರಾರುಯಕ್ಷಗಾನ ಹಸ್ತ ಪ್ರತಿಗಳನ್ನು ಸಂಗ್ರಹಿಸಿ, ಅವು ಪ್ರಕಟವಾಗುವಂತೆ ನೋಡಿಕೊಂಡರು.ಇದಕ್ಕಾಗಿಅವರು ಪ್ರಾಚೀನ ತುಳುನಾಡಿನ ಅನೇಕ ಪುರಾತನ ಮನೆಗಳಿಗೆ, ಮಾಯಿಪ್ಪಾಡಿಯಂತಹ ಅನೇಕ ಅರಮನೆಗಳಿಗೆ ಭೇಟಿಕೊಟ್ಟಿದ್ದರು, ಸಹಸ್ರಾರು ಓಲೆಗರಿಗಳನ್ನು ಪರಾಮಶರ್ಿಸಿದ್ದರು. ದೇವರಕೋಣೆಯಲ್ಲಿಎಣ್ಣೆತಿನ್ನುತ್ತಿದ್ದ, ಪೆಟ್ಟಿಗೆಗಳಲ್ಲಿ ಧೂಳು ತಿನ್ನುತ್ತಿದ್ದ, ಅಟ್ಟದಲ್ಲಿಗೆದ್ದಲುತಿನ್ನುತ್ತಿದ್ದ ತುಳು ಹಸ್ತಪ್ರತಿಗಳ ಬಗ್ಗೆ ಅವುಗಳ ಒಡೆಯರಲ್ಲಿ ತಿಳುವಳಿಕೆ ಮೂಡಿಸಿ, ಅವುಗಳನ್ನು ಸಂರಕ್ಷಸಿದ ಕೀತರ್ಿ ದಿವಂಗತ ಪುಣಿಂತ್ತಾಯರಿಗೆ ಸಲ್ಲುತ್ತದೆ. ಭಾಷಾವಾರು ಪ್ರಾಂತ್ಯರಚನೆಯಾದಮೇಲೆ ಕುಂಬಳೆಯಿಂದ ದಕ್ಷಿಣದಚಂದ್ರಗಿರಿ ನದಿಯವರೆಗಣ ತುಳುನಾಡು ಅನ್ಯಾಯವಾಗಿ ಕೇರಳಕ್ಕೆ ಸೇರಿಹೋಯಿತು.ಕಾರಣಕನ್ನಡಿಗರೂ ನಿಧಾನವಾಗಿ ತುಳುನಾಡಿನ ಈ ಸತ್ವಶಾಲೀ ಭಾಗವನ್ನು ಮರೆಯಲಾರಂಭಿಸಿದರು.ಆದರೆ ಈ ಭಾಗದಲ್ಲಿ ನೆಲೆಸಿದ್ದ, ಶ್ರೀ ವೆಂಕಟರಾಜ ಪುಣಿಂಚಿತ್ತಾಯರುಅಲ್ಲಿನ ಪ್ರಾಚೀನ ಸಂಸ್ಕೃತಿಯ ಬಗೆಗೆ ಆಳವಾದ ಸಂಶೋಧನೆ ಸಡೆಸುತ್ತಾ, ಕನ್ನಡ, ಮಲೆಯಾಳ ಮತ್ತು ತುಳು ಭಾಷೆಗಳ ಬಗೆಗೆ ಅಪೂರ್ವ ಬಾಂಧವ್ಯ ಬೆಸೆದರು.ಅವರ ವಿದ್ವತ್ತನ್ನು ಕೇರಳ ಸರಕಾರಕೂಡಾ ಗೌರವಿಸಿತ್ತು.ಅವರ ನಿಧನದಿಂದ ಈ ಬಾಂಧವ್ಯದ ಬೆಸುಗೆಯೊಂದು ಕಳಚಿಕೊಂಡಿತು. ಶ್ರೀ ಪುಣಿಂಚಿತ್ತಾಯರು ಸಂಶೋಧನೆಯಲ್ಲೆ ಎಷ್ಟು ದೊಡ್ಡವರೋ ವೈಯಕ್ತಿಕಜೀವನದಲ್ಲೂ ಅಷ್ಟೇ ದೊಡ್ಡವರಾಗಿದ್ದರು.ಕಳೆದ ಸುಮಾರು 30 ವರ್ಷಗಳಿಂದ ನಾನು ಅವರನ್ನುಅತ್ಯಂತ ಹತ್ತಿರದಿಂದಕಂಡಿದ್ದೇನೆ. ಅತ್ಯಂತ ಸಾಂಪ್ರದಾಯಿಕಕುಟುಂಬದಲ್ಲಿಅವರು ಜನಿಸಿದ್ದರೂ ಅವರುಯಾವುದೇ ಸಂಪ್ರದಾಯಗಳಿಗೆ ಕಟುವಾಗಿಅಂಟಿಕೊಂಡಿರಲಿಲ್ಲ. ಅವರ ನಿರಂತರ ಚಲನೆ, ಸಂಶೋಧನೆ, ಭಾಷೆಯ ಬಗೆಗಣ ಮೋಹ ಅವರನ್ನುಜಾತೀಯ ಗಡಿಗಳಾಚೆಗೆ ಕೊಂಡೊಯ್ದಿತ್ತು. ನಾನು ನನ್ನಜೀವಿತಾವಧಿಯಲ್ಲಿಕಂಡಅತ್ಯಂತದೊಡ್ಡ ಮತ್ತು ಸರಳ ವ್ಯಕ್ತಿತ್ವದ ಶ್ರೀ ವೆಂಕಟರಾಜ ಪುಣಿಂಚಿತ್ತಾಯರ ನಿಧನಕ್ಕೆ ನಾನು ಗಾಢವಾದ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ  ]]>

‍ಲೇಖಕರು G

July 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This