ಮಾರ್ಕ್ ಟ್ವೇನ್ ಉಪನ್ಯಾಸಕ್ಕೆ…

ಮಾರ್ಕ್ ಟ್ವೇನ್ ಒಮ್ಮೆ ಪುಟ್ಟದೊಂದು ಊರಲ್ಲಿ ಉಪನ್ಯಾಸ ನೀಡಬೇಕಾಗಿತ್ತು. ತಮ್ಮ ಗಡ್ಡವನ್ನು ಶೇವ್ ಮಾಡಿಸಲು marktwain.jpgಹತ್ತಿರದ ಸಲೂನಿಗೆ ನುಗ್ಗಿದರು.

“ಸಾಹೇಬ್ರು ಊರಿಗೆ ಹೊಸಬ್ರೂಂತ ಕಾಣುತ್ತೆ” ಸಲೂನಿನವ ಕೇಳಿದ.

“ಹೌದು”

“ನೋಡಿದ್ರಾ! ನಿಮ್ಮ ಮುಖ ನೋಡಿದ ತಕ್ಷಣ ಗೊತ್ತಾಯ್ತು ನಂಗೆ… ಅಂದಹಾಗೆ ಇವತ್ತು ಸಂಜೆ ಫೇಮಸ್ ರೈಟರ್ ಮಾರ್ಕ್ ಟ್ವೇನ್ ಉಪನ್ಯಾಸ ಇದೆ. ಆಸಾಮಿ ಸಖತ್ ಮಜವಾಗೇ ಮಾತಾಡ್ತಾರೆ… ನೀವೂ ಹೋಗ್ತಿದೀರಾ?”

“ಹೋಗ್ಬೇಕು ಅಂತಲೇ ಇದೆ…” ಮಾರ್ಕ್ ಟ್ವೇನ್ ಉಸುರಿದರು.

“ಮತ್ತೆ ಟಿಕೆಟ್ ತಗೊಂಡ್ರಾ?”

“ಇಲ್ಲ ಕಣ್ರೀ”

“ಹಾಗಾದ್ರೆ ನಿಮ್ಗೆ ಸೀಟ್ ಸಿಕ್ಕಲ್ಲ. ನಿಂತ್ಕೊಂಡೇ ಕೇಳ್ಬೇಕಾಗುತ್ತೆ. ಬ್ಯಾಡ್ ಲಕ್!”

“ಅಯ್ಯೋ… ಅದೇನೋ ಪ್ರತಿ ಸಲ ಮಾರ್ಕ್ ಟ್ವೇನ್ ಉಪನ್ಯಾಸಕ್ಕೆ ಹೋದ್ರೂ ನಾನು ನಿಂತೇ ಕೇಳಿಸಿಕೊಳ್ಬೇಕಾಗುತ್ತೆ, ಬ್ಯಾಡ್ ಲಕ್” ಎಂದರು ಮಾರ್ಕ್ ಟ್ವೇನ್.

‍ಲೇಖಕರು avadhi

October 15, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This