ಮಾಲತಿ ಶೆಣೈ ಬರೆದ ಕಥೆ

ಕತೆ ಅಂದುಕೊಂಡು ಗೀಚಿದ್ದು

– ಮಾಲತಿ ಶೆಣೈ

ನೆನಪಿನ ಸ೦ಚಿಯಿ೦ದ

ಶ್ಯಾಮರಾಯರು ಬೇಗ ಬೇಗ ನೆ ಮನೆಗೆ ಹೆಜ್ಜೆ ಹಾಕಿದರು. ಇವತ್ತು ಕಛೇರಿಯಲ್ಲಿ ಅವರ ಕೊನೆಯ ದಿನ. ಅಲ್ಲಿ ಈಗಾಗಲೇ ಬೀಳ್ಕೊಡುಗೆ ಸಮಾರಂಭ ಮುಗಿಸಿ ಹೊರಟಿದ್ದರು. ದಾರಿಯಲ್ಲಿ ಬರುತ್ತ ತಮ್ಮ ಪತ್ನಿಗೋಸ್ಕರ ಎರಡು ಮಾರು ಮಲ್ಲಿಗೆ ಹೂ ಮತ್ತು ಅವಳ ಇಷ್ಟದ ಜಿಲೇಬಿಗಳನ್ನು ಕಟ್ಟಿಸಿಕೊಂಡಿದ್ದರು. ಪತ್ನಿಗೆ ಇದರಿಂದ ಆಗುವ ಸೋಜಿಗವನ್ನು ಊಹಿಸಿಕೊಂಡು ರಾಯರ ನಡುಗೆ ಇನ್ನಷ್ಟು ಚುರುಕಾಯಿತು. ಮನೆ ತಲುಪಿದಾಗ ಮನೆಗೆ ಬೀಗ ಹಾಕಿತ್ತು. ಪಕ್ಕದ ಮನೆಯ ಹುಡುಗಿ, ’ಆಂಟಿ ದೇವಸ್ಥಾನಕ್ಕೆ ಹೋಗಿದ್ದಾರೆ. ಬರುವುದು ತಡವಾಗುತ್ತಂತೆ’ ಅಂತ ಅವರಿಗೆ ಮನೆಯ ಬೀಗದ ಕೈ ಯನ್ನು ಕೊಟ್ಟಳು. ರಾಯರಿಗೆ ತುಂಬ ಬೇಸರ ಆಯ್ತು. ರಾತ್ರಿ ಸಾಧಾರಣ 8.30 ಸುಮಾರಿಗೆ ಸಾವಿತ್ರಮ್ಮ ಮನೆಗೆ ಮರಳಿದರು. ರಾಯರು ಆಕ್ಷೇಪ ವೆತ್ತಿದರು. ’ಇವತ್ತು ನಿನಗೋಸ್ಕರ ಬೇಗ ಬಂದೆ. ನಿನಗೊತ್ತಿತ್ತಲ್ಲವ ಇವತ್ತು ನನ್ನ ಸರ್ವಿಸ್ ನ ಕೊನೆ ದಿನ ಅಂತ..’ ಹೌದು..ನೀವು ದಿನ ನಿತ್ಯದ ಹಾಗೆ ಕಛೇರಿ ಕೆಲಸ ಮುಗಿಸಿ ಕ್ಲಬ್ ಗೆ ಹೋಗುತ್ತೀರಿ ಅಂದುಕೊಂಡೆ, ದೇವಸ್ಥಾನದಲ್ಲಿ ಇವತ್ತು ಚೆಂದದ ಹರಿಕತೆ ಹಮ್ಮಿಕೊಂಡಿದ್ದರು, ನಾನು ಕಮಲಮ್ಮ ಈ ಕಾರ್ಯಕ್ರಮಕ್ಕೆ ಹೋಗುವುದನ್ನು ಮೊದಲೇ ನಕ್ಕಿ ಮಾಡಿಕೊಂಡಿದ್ದೆವು. ” ಅಷ್ಟರೊಳಗೆ ಮಲ್ಲಿಗೆ ಹೂ ಬಾಡಿತ್ತು, ಜಲೇಬಿಗೆ ಇರುವೆಗಳು ಮುತ್ತಿಕೊಂಡಿದ್ದವು… ಮರುದಿನ ಸಾವಿತ್ರಮ್ಮನಿಗೆ ಏನೋ ಇರುಸುಮುರುಸು. ದಿನ ರಾಯರು ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ ಒಂಬತ್ತಕ್ಕೆ. ಒಂದು ದಿನ ಕೂಡ ಬೇಗ ಬಂದಿದ್ದಿಲ್ಲ. ಇದ್ದ ಒಬ್ಬನೆ ಮಗ ರಾಜೀವನ ಬಾಲ್ಯ- ಬೆಳವಣಿಗೆ, ಸ್ಕೂಲು, ಕಾಲೇಜು, ಕಾಯಿಲೆ-ಕಸಾಲೆ ಗಳೆದ್ದಕ್ಕೂ ಸಾವಿತ್ರಮ್ಮನೆ ಓಡಾಡಿದ್ದು. ಅವನೂ ಇಂಜಿನಿಯರಿಂಗ್ ಓದಿ ವಿದೇಶಕ್ಕೆ ಹಾರಿದ. ಅಲ್ಲಿಯ ಒಬ್ಬಳನ್ನೆ ಮದುವೆ ಕೂಡ ಮಾಡಿಕೊಂಡ. ಇನ್ನೂ ಅವರ ಸೊಸೆಯನ್ನು ಕಂಡಿಲ್ಲ ಸಾವಿತ್ರಮ್ಮ. ಒಂದು ಹಂತಕ್ಕೆ ಮಗನ ಜವಾಬ್ದಾರಿ ಮುಗಿದ ಮೇಲೆ ಸಾವಿತ್ರಮ್ಮ ಟಿವಿ ನೋಡುವುದು, ಅಕ್ಕ ಪಕ್ಕದವರ ಜತೆ ಹರಟೆ ಹೊಡೆಯುವುದು, ಸಂಜೆ ಅವರ ಜತೆ ಪೇಟೆ, ವಾಕ್, ದೇವಸ್ಥಾನ ಅಷ್ಟಲ್ಲದೆ ವರ್ಷಕ್ಕೊಂದು ಸಲ ಪಕ್ಕದ ತ್ರೀವೇಣಮ್ಮನ ಜತೆ ಕಂಡಕ್ಟಡ್ ಟೂರ್ ಗೆ ಒಂದು ವಾರ-ಹತ್ತು ದಿನಗಳ ಮಟ್ಟಿಗೆ ಹೋಗಿ ಬರುವುದು ಇತ್ತೀಚಿನ ಹದಿನೈದು ವರ್ಷಗಳಲ್ಲಿ ರೂಢಿ ಮಾಡಿಕೊಂಡು ಬಿಟ್ಟಿದ್ದರು. ಈಗ ರಾಯರು ಮನೆಯಲ್ಲೇ ಇರುವುದರಿಂದ ಅವರಿಗೆ ಕಿರಿಕಿರಿ ಯೆನಿಸುತ್ತಿತ್ತು. ಮೊದಲಾದರೆ ಸ್ನೇಹಿತೆಯರು ಹುಡುಕಿಕೊಂಡು ಬರುವುದು, ಇವರು ಮನೆ ಕೆಲಸ ಮಾಡುತ್ತಿದ್ದ ಹಾಗೆ ಅವರೆಲ್ಲ ಮಾತನಾಡಿಸಿ, ಕೆಲವೊಮ್ಮೆ ಇವರ ಜತೆ ಊಟ ಮಾಡಿ ಹೋಗುವುದೂ ಇತ್ತು. ರಾಯರ ಜತೆ ಏನು ಮಾತನಾಡಬೇಕೆಂದು ತಿಳಿಯುತ್ತಿರಲಿಲ್ಲ. ಉಳಿದ ದಿನ ಬಿಸಿ ನೀರು ಕಾದಿದೆ, ಕಾಫಿಗೆ ಬರುತ್ತೀರಾ, ಊಟ ಬಡಿಸಲೆ, ಸಾರು ಬಡಿಸಲೆ, ಹಾಸಿಗೆ ಹಾಕಿದೆ ಇವಷ್ಟಕ್ಕೆ ಸೀಮಿತವಾಗುತ್ತಿತ್ತು ಮಾತು. ಈಗ ದಿನ ಬೆಳಗಾದರೆ ಒಬ್ಬರಿಗೊಬ್ಬರು ಏನು ಮಾತನಾಡುವುದು ಎಂದು ತಡಕಾಡುವಂತಾಗಿದೆ ಸಾವಿತ್ರಮ್ಮನಿಗೂ ರಾಯರಿಗೂ. ಈ ದಿನ ಸಂಜೆ ಹೆಂಡತಿ ಮತ್ತು ತಾನು ವಾಕ್ ಹೋಗಬೇಕು ಅಂದುಕೊಂಡಿದ್ದರು ರಾಯರು ಆದರೆ ಸಾವಿತ್ರಮ್ಮ ಆಗಲೇ ಸ್ನೇಹಿತೆಯರ ಜತೆಗೆ ಬೇರೆಲ್ಲಿಗೋ ಹೋಗುವ ತಯಾರಿ ನಡೆಸಿದ್ದರು. ರಾಯರಿಗೆ ಸಿಟ್ಟು ಬಂತು.ಹೌದು ಇಷ್ಟು ದಿನ ನಿನಗೋಸ್ಕರ ಸಮಯ ಮೀಸಲಿಡಲಾಗಿಲ್ಲ ಆದರೆ ಈಗಲಾದರೂ ನಾವು ನಮ್ಮನ್ನು ಬದಲಾಯಿಸಿಕೊಳ್ಳಬಹುದಲ್ಲವಾ?’ ಸಾವಿತ್ರಮ್ಮ ’ಯಾಕೆ ಇವತ್ತು ಕ್ಲಬ್ ಕಡೆ ಹೋಗಲ್ಲವಾ? ಇನ್ನು ಯಾವ ಕ್ಲಬ್? ಅದು ಕಛೇರಿವತಿಯಿಂದ ಮೆಂಬರ್ ಶಿಫ್..ಈಗ ನಿವೃತ್ತಿ ಪಡೆದುಕೊಂಡ ಮೇಲೆ ನಾನಲ್ಲಿ ಸೇರುವುದು ನಾನೆ ಕೈಯಿಂದ ದುಡ್ಡು ಹಾಕಬೇಕು. ಸಿಕ್ಕಾ ಪಟ್ಟೆ ದುಬಾರಿ. “ಕ್ಷಮಿಸಿ. ಇಷ್ಟು ವರ್ಷ ನಾನೂ ಎಷ್ಟೊ ಸಲ ನಿಮಗೆ ಈ ಮಾತನ್ನು ಹೇಳಿದ್ದೇನೆ. ಕಛೇರಿ ಬಿಡಿ, ಒಂದು ದಿನವಾದರೂ ಕ್ಲಬ್ ಹೋಗೋದು ಬಿಟ್ಟು ನನಗೋಸ್ಕರ ಮನೆಗೆ ಬಂದಿದ್ದಿದೇಯೇ?? ಮದುವೆಯಾಗಿ ಈ ಮನೆಗೆ ಬಂದಾಗ ಸರಿ, ಅತ್ತೆ, ಮಾವ, ನಾದಿನಿಯರು ಇದ್ದರು. ಹೇಗೋ ನಡೆದು ಹೋಯ್ತು. ಆಮೇಲೆ ನಾನೆ ಒಂಟಿಯಾಗಿ ಈ ಮನೆಯಲ್ಲಿ ಇರುತ್ತಿರಲಿಲ್ಲವಾ? ರಾಜೀವನಿಗೆ ಆ ದಿನ ಕೆಟ್ಟ ಜ್ವರ ಬಂದು ಆಸ್ಪತ್ರೆಗೆ ನೆರೆಯವರ ಸಹಾಯದಿಂದ ಕರೆದುಕೊಂಡೆ ಹೋದೆ, ಮರುದಿನ ರಜೆ ಹಾಕಿ ಇದ್ದಿದ್ದರೆ ನನಗೆ ಸ್ವಲ್ಪ ಸಹಾಯ ಆಗುತ್ತಿರಲಿಲ್ಲವಾ??ನನಗೀಗ ಒಂಟಿಯಾಗಿರುವುದು ರೂಢಿಯಾಗಿದೆ. ದಯವಿಟ್ಟು ನೀವು ಬೇರೆ ಯಾವುದಾದರೂ ಕ್ಲಬ್ ಅಥವ ಪಾಸ್ ಟೈಮ್ ಹುಡುಕಿ. ದುಡ್ಡಿಗೇನೂ ಕೊರತೆಯಿಲ್ಲ. ನಿಮ್ಮ ಪೆನ್ ಶನ್, ಮಗನೂ ತಿಂಗಳು ತಿಂಗಳು ಬೇಡವೆಂದರೂ ದುಡ್ಡು ಕಳುಹಿಸುತ್ತಾನೆ. ಅಂದುಕೊಂಡು ಸ್ನೇಹಿತೆಯರ ಜತೆ ಹೊರಟೆ ಬಿಟ್ಟರು ರಾಯರು ಅವಾಕ್ಕಾದರು…………  ]]>

‍ಲೇಖಕರು G

May 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಾಲ್ಕು ಸಲ ಕೇಳಿದ ಒಂದು ಕಥೆ

ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ ನನ್ನಜ್ಜಿ ನನಗೊಂದು ಕಥೆ ಹೇಳಿದ್ದಳು. ಆ ಕಥೆಯನ್ನ ಅವಳು ನನಗೆ ಒಟ್ಟು ನಾಲ್ಕು ಬಾರಿ ಹೇಳಿದ್ದಳು. ಅದ್ಹೇಗೆ ಅಷ್ಟು ನಿಖರವಾಗಿ...

ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ ಬರೆದ ‘ಕೋಳಿಕಥೆ ‘

ಯಶಸ್ವಿನಿ ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ...

ಬಾಲಕೇಳಿ ವ್ಯಸನಿಗಳು

ಬಾಲಕೇಳಿ ವ್ಯಸನಿಗಳು

ಎ ಜೆ ಕ್ರೋನಿನ್ ರವರ ‘ಟು ಜೆಂಟಲ್ ಮನ್ ಆಫ್ ವೆರೋನಾ’ ಕಥೆಯ ಅನುವಾದ ಕನ್ನಡಕ್ಕೆ: ರಾಜು ಎಂ ಎಸ್ ಆಲ್ಫ್ಸ್ ಪರ್ವತ ಸಾಲಿನ ಪಾದದಗುಂಟ...

8 ಪ್ರತಿಕ್ರಿಯೆಗಳು

 1. savitri

  ಓಹೋ!! ಬೆಸ್ಟ್ ವೀಕ್ಷಣಾಧಾರಿತ ಕಥೆ! ಪಾಪ ಸಾವಿತ್ರಮ್ಮ ಸೇಡು ತೀರಿಸಿಕೊಳ್ಳಲು ಕಾದಿದ್ದವರಂತೆ ಚಿತ್ರಿತರಾಗಿದ್ದಾರೆ.:-)

  ಪ್ರತಿಕ್ರಿಯೆ
 2. suguna

  ನಿಜ ಸಮಯ ಕೊಡಬೇಕು..!! ಮಾಲತಿ ಅಕ್ಕ ಕಥೆ ಚೆನ್ನಾಗಿದೆ

  ಪ್ರತಿಕ್ರಿಯೆ
 3. malathi S

  :-)thank you Avadhi!
  thank you Savvy and Suguna sumne bere kelsa irlillaa eno ondu geechide asTe…
  malathi S

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: