ಮಾಲ್ಗುಡಿ ಡೇಸ್ ಕನ್ನಡದಲ್ಲಿ

ಮಾನ್ಯರೇ, ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿ ವಾಹಿನಿ ಜನಶ್ರೀಯಲ್ಲಿ ನಟ ಶಂಕರ್ ನಾಗ್ ಅವರ ನಿರ್ದೇಶನದ “ಮಾಲ್ಗುಡಿ ಡೇಸ್” ಧಾರಾವಾಹಿ ಜೂನ್ 16 2012 ರಿಂದ ಪ್ರಸಾರವಾಗುವ ಸುದ್ದಿ ಕನ್ನಡಿಗರೆಲ್ಲರಿಗೂ ನಲಿವು ತಂದಿದೆ. ಹಿಂದಿಯಲ್ಲಿರುವ ಈ ಧಾರಾವಾಹಿಯನ್ನು ಕನ್ನಡ ಸಬ್ ಟೈಟಲ್ ಜೊತೆ ಜನಶ್ರೀ ವಾಹಿನಿ ಪ್ರಸಾರ ಮಾಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕನ್ನಡದ ನಟರೇ ಅಭಿನಯಿಸಿರುವ, ಕನ್ನಡ ಸಂಸ್ಕೃತಿಯನ್ನೇ ಬಿಂಬಿಸುವ ಈ ಧಾರಾವಾಹಿಯನ್ನು ಕೇವಲ ಕನ್ನಡ ಸಬ್ ಟೈಟಲ್ ಜೊತೆ ಪ್ರಸಾರ ಮಾಡದೇ ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಬೇಕೆಂದು ಕೋರುತ್ತ ಜಾಗೃತ ಕನ್ನಡ ಗ್ರಾಹಕರಾದ ನಾವು ಈ “ಮಿಂಬಲೆ ಮನವಿ” (ONLINE PETITION)ಯನ್ನು ಸಲ್ಲಿಸುತ್ತಿದ್ದೇವೆ. ಕನ್ನಡದ ಕಲಾವಿದರು ಅಭಿನಯಿಸಿರುವ, ಕನ್ನಡಿಗರೇ ನಿರ್ದೇಶಿಸಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲ್ಪಟ್ಟ, ಕನ್ನಡ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಿದ ಅಪರೂಪದ ಧಾರಾವಾಹಿ “ಮಾಲ್ಗುಡಿ ಡೇಸ್” ಆಗಿದ್ದು, ಅದನ್ನು ಕನ್ನಡ ವಾಹಿನಿಯೊಂದರಲ್ಲಿ ಹಿಂದಿಯಲ್ಲಿ ಪ್ರಸಾರ ಮಾಡುವುದು ಕನ್ನಡದ ನೋಡುಗರನ್ನು ಪರಿಣಾಮಕಾರಿಯಾಗಿ ತಲುಪುವ ಮಾರ್ಗವಾಗಿಲ್ಲ ಆದ್ದರಿಂದ ಈ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಬೇಕೆಂದು ಮನವಿ ಮಾಡುತ್ತೇವೆ. ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯಲ್ಲಿ ಮನವಿ ಮಾಡುತ್ತೇವೆ. ಜನಶ್ರೀ ವಾಹಿನಿ ಕನ್ನಡದ ನೋಡುಗರ ಈ ಬೇಡಿಕೆಗೆ ಮನ್ನಣೆ ನೀಡಿ ಕನ್ನಡದಲ್ಲೇ ಈ ಧಾರಾವಾಹಿಯನ್ನು ಪ್ರಸಾರ ಮಾಡುವ ಮೂಲಕ ಒಂದು ಅಪರೂಪದ ಕಾರ್ಯಕ್ರಮವನ್ನು ಹೆಚ್ಚಿನ ಕನ್ನಡಿಗರಿಗೆ ತಲುಪಿಸಲು ಮುಂದಾಗಲಿ ಎಂದು ಈ ಸಂದರ್ಭದಲ್ಲಿ ಆಗ್ರಹಪೂರ್ವಕ ಮನವಿ ಮಾಡುತ್ತೇವೆ. https://www.change.org/petitions/janashree-news-telecast-kannada-version-of-malgudi-days — ಇಂತಿ ರಾಘವೇಂದ್ರ [email protected]  ]]>

‍ಲೇಖಕರು G

June 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

33 ಪ್ರತಿಕ್ರಿಯೆಗಳು

 1. Pramod ambekar

  Tumba shreshtha Kelasa, Idu Bahale late agide, Igadaru sadhy vagiddakkae dahnayavadaglu.
  Ambekar
  9844039532

  ಪ್ರತಿಕ್ರಿಯೆ
 2. SUDHESH KRISHNA

  ಡಬ್ಬಿಂಗ್ ಪರವಾಗಿರುವವರು ತಮ್ಮ ಎಂಜಲನ್ನು ಯಾವ ಯಾವ ರೂಪದಲ್ಲಿ ತರಲು ಯತ್ನಿಸುತ್ತಿದ್ದಾರೆ ನೋಡುತ್ತಿರಿ. ಶಂಕರನಾಗ್ ಹೆಸರಲ್ಲಿ ಈಗ ಡಬ್ಬಿಂಗ್ ಶುರುಮಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಜನಶ್ರೀ ಚಾನಲ್ ಮುಖ್ಯಸ್ಥ ಶ್ರೀ ರಾಮುಲು ಜೊತೆ ಈಗಾಗಲೇ ಮಾತುಕತೆ ನಡೆದಿದೆ. ಮಾಲ್ಗುಡಿ ಡೇಸ್ ಸಬ್ ಟೈಟಲ್ ಜೊತೆಗೂ ಪ್ರಸಾರ ಆಗುವುದಿಲ್ಲ. ಹಾಗೊಂದು ವೇಳೆ ಒತ್ತಾಯಿಸಿದರೆ, ಅದು ಪ್ರಸಾರವೇ ಆಗುವುದಿಲ್ಲ. ನೆನಪಿರಲಿ. ಚಾನಲ್ಲು ಕನ್ನಡಿಗರನ್ನು ಮರೆತು ಪ್ರಸಾರ ಮಾಡುವುದಾದರೆ ಅದಕ್ಕೆ ಉಳಿಗಾಲ ಇರುವುದಿಲ್ಲ.
  ಶಂಕರ್ ನಾಗ್ ಇಲ್ಲಿ ನೆಪ ಮಾತ್ರ ಅಷ್ಟೇ. ಇದೊಂದು ಹತ್ತೋ ಹನ್ನೆರಡೋ ಎಪಿಸೋಡು ಪ್ರಸಾರ ಮಾಡಿದ ನಂತರ ಝೀ ರಾಣಿ ಝಾನ್ಸಿ ರಾಣಿಯನ್ನು, ಸುವರ್ಣ ಸ್ಟಾರ್ ಪ್ಲಸ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತದೆ. ಇದು ಒಂದು ಚಿಲ್ಲರೆ ಉಪಾಯ ಅನ್ನೋದನ್ನು ಮರೆಯದಿರಿ.

  ಪ್ರತಿಕ್ರಿಯೆ
 3. har.sri.ga

  ರಾಜಕುಮಾರ್ ಮಾತು ಇತರ ಸಾಹಿತಿಗಳ ಹೆಸರು ಹೇಳಿ ಕೊಂದು ಡಬ್ಬಿಂಗ್ ಬೇಡ ಅಂದ್ರೆ , ತಾವು ಶ್ರೇಷ್ಠ ಕನ್ನಡಿಗರು..
  ಈಥರ ಹೇಳೋ ಜನರು , ತಮ್ಮ award function ನಲ್ಲಿ ಹಿಂದಿ ಹಾಡುಗಳಿಗೆ ನೃತ್ಯ ಮಾಡೋದು.. ಮತ್ತೆ, ಇಂಗ್ಲಿಷ್ ಸಂಭಾಷಣೆ ನಲ್ಲಿ ಅಲ್ಲಿ ಇಲ್ಲಿ ಕನ್ನಡ ಉಪಯೋಗ ಮಾಡೋದು.
  ಈ ಕಿವಿ ಮೇಲೆ cauliflower ಇಡೋದು ಸಾಕು. ಡಬ್ಬಿಂಗ್ ಮೇಲೆ ಇರೋ ನಿಷೇದ ತೆಗೆದು ಹಾಕಿ.

  ಪ್ರತಿಕ್ರಿಯೆ
 4. Amar

  ಇದೆಂತಹ ಪಾಲೆಗಾರಿಕೆ ಸ್ವಾಮೀ. ನೋಡಲು ಇಷ್ಟ ಇರುವ ಕನ್ನಡಿಗರು ಇದ್ದರೆ. ನೋಡಲು ಇಷ್ಟವಿಲ್ಲದ ಕನ್ನಡಿಗರು ಇದ್ದರೆ ಅಂತ ಭಾವಿಸೋಣ.
  ಬೇಕಾದವರು ನೋಡಿಕೊಳ್ಳಲಿ. ಬೇಡದವರು ಬಿಡಲಿ.
  ಈ ಗೂಂಡಾಗಿರಿಗೆ ಕೊನೆ ಎಂದು?

  ಪ್ರತಿಕ್ರಿಯೆ
 5. ರಾವ್

  ಮಾಲ್ಗುಡಿ ಡೇಸ್ ಹಿಂದೀಲಿ ಪ್ರಸಾರವಾದ್ರೆ ಬಿಡ್ತೀವಿ, ಆದರೆ ಕನ್ನಡದಲ್ಲಿ ಮಾತ್ರ ಬಿಡೋದೇ ಇಲ್ಲ ಅನ್ನೋ ಅಂತಹ ವಿಕೃತ ಮನಸ್ಸಿನವರು. ಇಂತಹವರು ಇರೋದೆ ಕನ್ನಡಿಗರ ದೌರ್ಭಾಗ್ಯ. ಇವರಿಗೆ ಕನ್ನಡದಲ್ಲಿ ನೋಡೋದು ಎಂಜಲಂತೆ, ಆದರೆ ಇವರಿಗೆ ಹಿಂದೀ ವಾಂತಿ ಬಹಳ ಇಷ್ಟ ಅಂತೆ, ಅದಕ್ಕೆ ಕನ್ನಡಿಗರೆಲ್ಲ ಅದನ್ನ ತಿನ್ನಬೇಕಂತೆ. ಸ್ವಾಮಿ ನಮಗೇನು ಕರ್ಮ ಅವರಿವರ ವಾಂತಿ ತಿನ್ನೋಕೆ, ನಿಮಗೆ ಚಪಲ ಇದ್ರೆ ತಿನ್ಕೋಳಿ. ಈ ರೀತಿ ದುಂಡಾವರ್ತಿ ಬಹಳ ಕಾಲ ನಡೆಯಲ್ಲ.
  – ರಾವ್

  ಪ್ರತಿಕ್ರಿಯೆ
 6. ಜಯಂತ

  ದುಬ್ಬಿಂಗ್ ವಿರೋಧಿಗಳು ಮನಸ್ಥಿತಿ ಎಂತಹುದು ಅಂತ ಮೇಲಗಡೆ ಒಬ್ಬ ಮಹುನುಭವ ಬರೆದಿರುವ ಧಾಟಿಯಿಂದಲೇ ಗೊತ್ತಾಗುತ್ತೆ..ಅಣ್ಣಾವ್ರು ದುಡ್ಡು ಕೊಟ್ಟು ಸಿನೆಮ ನೋಡುತ್ತಿದ್ದ ಗ್ರಾಹಕರನ್ನು “ಅಭಿಮಾನಿ ದೇವರುಗಳು” ಎಂದು ಕರೆದರು….ಸ್ವಾಮಿ ಹಾಗೆ ನೋಡಿದ್ರೆ ರೀಮೇಕ್ ಅನ್ನೋ ಎಂಜಲನ್ನ ಅದೇ “ಅಭಿಮಾನಿ ದೇವರುಗಳಿಗೆ” ಉಣ ಬಡಿಸುತ್ತಿದ್ದಿರಲ್ಲ..ಇದಕ್ಕಿಂತ ಚಿಲ್ಲರೆ ಕೆಲಸ ಇನ್ನೊಂದಿಲ್ಲ..ನಮಗೆ ಎಲ್ಲ ಕಾರ್ಯಕ್ರಮಗಳು ಕನ್ನಡದಲ್ಲೇ ನೋಡುವ ಆಸೆ ನಮಗೆ ಮತ್ತೆ ಅದೇ ಎಲ್ಲ ಕನ್ನಡಿಗರ ಹಕ್ಕು ಕೂಡ..ಇದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ..!!

  ಪ್ರತಿಕ್ರಿಯೆ
 7. ಗಿರೀಶ್ ಕಾರ್ಗದ್ದೆ

  ಡಬ್ಬಿಂಗ್ ಎಂಜಲು ಹಾಗಾದರೆ ರಿಮೇಕ್ ಏನು ‘ಪ್ರಸಾದ’ನಾ?

  ಪ್ರತಿಕ್ರಿಯೆ
 8. Hariprasad Holla

  ಡಬ್ಬಿಂಗ್ ವಿರೋಧಿಗಳು ರೀಮೇಕ್ ರೈಟ್ಸ್ಗಾಗಿ ಯಾರ್ಯಾರ ಎಂಜಿಲು ನೆಕ್ಕ್ತಾರೋ? ಡಬ್ಬಿಂಗ್ ಬೇಕು ಅಂತ ಕೇಳ್ತಾ ಇರೋದು ಕನ್ನಡಿಗರೇ, ಇದು ಒಬ್ಬ ಸಾಮಾನ್ಯ ಕನ್ನಡಿಗನಿಗೂ ಅನ್ವ್ಯಾಯ ಆಗೋ ವಿಚಾರ, ಡಬ್ಬ್ ಮಾಡೋದರಿಂದ ಜನಶ್ರೀ ಕನ್ನಡಿಗರಿಗೆ ಇನ್ನೂ ಹತ್ತಿರವಾಗ್ತಾರೆ. ಮೇಲೆ ಗೀಚಿರೋ ಪಾಳೆಗಾರರು ಅರ್ಥ ಮಾಡ್ಕೊಬೇಕಾದದ್ದು ಒಂದು ಇದೆ, ನಿಮ್ಮನ್ನ ಎದುರು ಹಾಕೊಳೋದು ಬಿಡಿ, ಅವರ್ನ (ಮೀಡಿಯಾದವರನ್ನ) ಎದುರು ಹಾಕೊಂಡ ವಕೀಲರಿಗೆ, ಈಗ ನಿಥ್ಯನಂದಂಗೆ ಏನಾಗ್ತಿದೆ ಅಂತ ಸ್ವಲ್ಪ ಅವಲೋಕಿಸಬೇಕು. ಬೆರೆಳೆನಿಕೆಯಸ್ಟು ಜನರ ಸ್ವಾರ್ಥಕ್ಕೆ ಆರು ಕೋಟಿ ಕನ್ನಡಿಗರ ಹಕ್ಕನ್ನ ಕಿತ್ಕೊಳ್ಳಲಾಗ್ತಿದೆ. ಈ ಗೂಂಡಾಗಿರಿ ನಿಲ್ಲಲಿ, ಭಾಷೆ ಉಳಿಯುವಂತಾಗಲಿ!!

  ಪ್ರತಿಕ್ರಿಯೆ
 9. SUDHESH KRISHNA

  ದುಬ್ಬಿಂಗ್ ವಿರೋಧಿಗಳು ಮನಸ್ಥಿತಿ ಎಂತಹುದು ಅಂತ ಮೇಲಗಡೆ ಒಬ್ಬ ಮಹುನುಭವ ಬರೆದಿರುವ ಧಾಟಿಯಿಂದಲೇ ಗೊತ್ತಾಗುತ್ತೆ..ಅಣ್ಣಾವ್ರು ದುಡ್ಡು ಕೊಟ್ಟು ಸಿನೆಮ ನೋಡುತ್ತಿದ್ದ ಗ್ರಾಹಕರನ್ನು “ಅಭಿಮಾನಿ ದೇವರುಗಳು” ಎಂದು ಕರೆದರು….ಸ್ವಾಮಿ ಹಾಗೆ ನೋಡಿದ್ರೆ ರೀಮೇಕ್ ಅನ್ನೋ ಎಂಜಲನ್ನ ಅದೇ “ಅಭಿಮಾನಿ ದೇವರುಗಳಿಗೆ” ಉಣ ಬಡಿಸುತ್ತಿದ್ದಿರಲ್ಲ..ಇದಕ್ಕಿಂತ ಚಿಲ್ಲರೆ ಕೆಲಸ ಇನ್ನೊಂದಿಲ್ಲ..ನಮಗೆ ಎಲ್ಲ ಕಾರ್ಯಕ್ರಮಗಳು ಕನ್ನಡದಲ್ಲೇ ನೋಡುವ ಆಸೆ ನಮಗೆ ಮತ್ತೆ ಅದೇ ಎಲ್ಲ ಕನ್ನಡಿಗರ ಹಕ್ಕು ಕೂಡ..ಇದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ..!!
  – ಡಬ್ಬಿಂಗ್ ಬೇಕು ಅನ್ನೋ ನೀವೆಲ್ಲ ಯಾವ ಸೀಮೆ ಅಭಿಮಾನಿ ದೇವರುಗಳು. ಕನ್ನಡದ ಮೇಲೆ ಪ್ರೀತಿ ಇಲ್ಲದ, ಎಂಜಲು ತಿನ್ನೋದಕ್ಕೆ ಆಸೆ ಪಡೋರು ಅಭಿಮಾನಿಗಳಾದೇ ಇದ್ರೇನೇ ಒಳ್ಳೇದು. ಅದು ಹೇಗೆ ಡಬ್ ಮಾಡಿ ಪ್ರಸಾರ ಮಡ್ತಾರೋ ನಾವೂ ನೋಡ್ತೀವಿ. ಒಳ್ಳೇ ಮಾತಲ್ಲಿ ಹೇಳಿದರೆ ಕೇಳಬೇಕ್ರಪ್ಪಾ.. ಬೀದೀಗೆ ಇಳೀತಾರಾ ಬನ್ನಿ. ರಕ್ತ ಕೊಟ್ಟೇವು ಆದ್ರೆ ಡಬ್ಬಿಂಗ್ ಪ್ರಸಾರ ಬಿಡೆವು. ಎಲ್ಲೋ ಏಅಡಗಿ ಕೂತು ಮಾತೋಡೋರು ಬನ್ರಪ್ಪಾ ನೋಡೇಬೀಡೋಣ

  ಪ್ರತಿಕ್ರಿಯೆ
  • ರಾವ್

   ರಕ್ತ ಕೋಟ್ಟಿರೋ ಬಹಳ ಜನರನ್ನ ನೋಡಿ ಆಗಿದೆ.

   ಪ್ರತಿಕ್ರಿಯೆ
  • Arun

   @SUDHESH KRISHNA <>
   ಡಬ್ಬಿಂಗ್ ಬೇಡ ಎನ್ನುವ ನೀವುಗಳು ಯಾವ ಸೀಮೆಯ ಕನ್ನಡದ ಅಭಿಮಾನಿಗಳು? ಮನೊರಂಜನೆ ಯಾರಪ್ಪನ ಸ್ವತ್ತಲ್ಲ…ಇಲ್ಲಿ ಯಾರೂ ಅಡಗಿ ಕೂತೂ ಇಲ್ಲ ತಮ್ಮ ಗೊಡ್ಡು ಬೆದರಿಕೆಗೆ ಹೆದರಿಯೂ ಇಲ್ಲ. ಇದು ಪ್ರಜಾಪ್ರಬುತ್ವ ಸ್ವಾಮಿ, ಸದ್ಯದಲ್ಲೇ ಡಬ್ಬಿಂಗ್ ವಿರೋದಿಗಳ ಗುಂಡಾಗಿರಿಗೆ ಅಂತ್ಯ ಕಾಣುತ್ತದೆ ನೋಡುತ್ತಿರಿ….(ಈಗಾಗಲೆ ತಾವು ಸೇರಿದಂತೆ ಇತರೇ ಡಬ್ಬಿಂಗ್ ವಿರೋದಿ ನಾಯಕರುಗಳು ನೀಡುತ್ತಿರುವ ಹೇಳಿಕೆ ನೋಡಿದ್ರೆ ತಮಗೂ ಅದು ತಿಳಿದಿದೆ ಅದಕ್ಕಾಗಿಯೇ ಈ ರೋಶ/ ಆವೇಶ ಇರಬೇಕು ಅನ್ನಿಸುತ್ತಿದೆ) ತಾವು ಹೀಗೆ ರಕ್ತ ಕೊಟ್ಟೇವು…. ರಕ್ತ ಕೊಟ್ಟೇವು…. ಎನ್ನುವವರು ಹೋಗಿ, ರಕ್ತದ ಕೊರತೆಯಿದೆ ಎಂದು ಉದಯವಾಣಿಯಲ್ಲಿ ಇಂದು ವರದಿಯೋಂದು ಬಂದಿದೆ, ಯಾವುದಾದರೂ ರಕ್ತ ಬ್ಯಾಂಕ್ ಗಳಲ್ಲಿ ಅಲ್ಲಿ ಹೋಗಿ ರಕ್ತ ನೀಡಿ.. ಅದರಿಂದ ಜನರಿಗಾದರೂ ಉಪಯೋಗವಾಗಲಿ….

   ಪ್ರತಿಕ್ರಿಯೆ
  • ಜಯಂತ

   ಸ್ವಾಮಿ ನಿಮ್ಮ ರಕ್ತ ಇಟ್ಕೊಂಡು ನಮಗೇನ ಆಗಬೇಕಿದೆ ಮಣ್ಣು..ರಕ್ತಧಾನ ಶಿಭಿರ ಆಯೋಜಿಸಿದರೆ ನಿಮ್ಮೊಂತೋರು ನೂರಾರು ಜನ ಬರ್ತಾರೆ ರಕ್ತ ಕೊಡೋಕೆ….ಅದನ್ನ ಬಿಟ್ಟು ಸ್ವಲ್ಪ ಬೆವರು ಸುರಿಸಿ ಬೇರೆ ಭಾಷೆಯ ಚಿತ್ರಗಳನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಪ್ರದರ್ಶನಕ್ಕೆ ಬಿಡೋದನ್ನ…ಅಥವಾ ಕನ್ನಡ ಟಿವಿ ವಾಹಿನಿಗಳಲ್ಲಿ ಬೇರೆ ಭಾಷೆಯ ಚಿತ್ರಗಳ ಪ್ರಚಾರ ಕೊಡುವ ಬಗ್ಗೆ ಪ್ರತಿಬಟಿಸಿಬನ್ನಿ..

   ಪ್ರತಿಕ್ರಿಯೆ
 10. jayateerth

  ಡಬ್ಬಿಂಗ್ ಬೇಡ ಅನ್ನೋರು ಸುಮ್ಮನೆ ಡಾ.ರಾಜ್ ಮತ್ತು ಶಂಕರ ನಾಗ ರಂಥ ಇತರೆ ಹಿರಿಯರ ಹೆಸರು ಹೇಳಿ ಅವೈಜ್ಞಾನಿಕ ಬ್ಯಾನ್ ಮುಂದು ವರೆಸಿಕೊಂಡು ಹೋದ್ರೆ ಕನ್ನಡಕ್ಕೆ ಚೊಂಬು ಗ್ಯಾರಂಟೀ. ತಮಿಳ್, ತೆಲುಗು,ಮಲೆಯಾಳಂ,ಹಿಂದಿ ಅದು ಸಾಲದಕ್ಕೆ ಮೊನ್ನೆ ಓರಿಯ ಭಾಷೆ ಸಿನಿಮಾ ಕೂಡ ರಾಜ್ಯದಲ್ಲಿ ಬಿಡುಗಡೆ ಗೊಂದು ಕನ್ನಡದ ಜನ ಆಯ ಬಾಶೆ ಸಿನೆಮಾಗಳನ್ನ ಅದೇ ಬಾಷೆಲಿ ನೋಡಿದ್ರೆ ಯಾರಿಗೆ ಹಾನಿ ಅನ್ನುವುದನ್ನ ನಮ್ಮ ಹಿರಿಯರು, ವಿದ್ವಾಂಸರು ಜನತೆಗೆ ಹೇಳಬೇಕು? ಮೊದಲೇ ಚಿಕ್ಕ ಮಾರುಕಟ್ಟೆ ಅದರಮೇಲೆ ಪರಭಾಷಾ ಸಿನೆಮಾಗಳ ನಿರಂತರ ಒತ್ತಡ ಈ ನಡುವೆ ಸ್ಯಾಂಡಲ್ ವುಡ್ ಉದ್ಯಮದ ಮಂದಿ ಕನ್ನಡಿಗರ ಹಿತಾಸಕ್ತಿಗೆ ಕೊಳ್ಳಿ ಇಟ್ಟಿದ್ದಾರೆ!! ತಮ್ಮ ಬೇಳೆ ಬೇಯಿಸಿ ಕೊಳ್ಳಲು ಕನ್ನಡದ ಮುಂದಿನ ಪೀಳಿಗೆ ಕನ್ನಡ ಮರೆತು ಹಿಂದಿ,ತಮಿಳ್ ತೆಲಂಗು ಮಾಲೆಯಾಳ ,ಓರಿಯ ಗುಜರಾತಿ ಕಲಿಯುವಂತೆ ಮಾಡಲಾಗುತ್ತಿದೆ. ಡಬ್ಬಿಂಗ್ ಕನ್ನಡಕ್ಕೆ ಬಂದ್ರೆ ಬಹಳನೇ ಒಳ್ಳೆಯದು.ಸದ್ಯಕ್ಕೆ ಕನ್ನಡ ಉಳಿಸಲು ಇದರ ಅವಶ್ಯಕತೆ ಇದೆ.
  ನಮಗೂ ರಾಜಣ್ಣ,ಶಂಕ್ರಣ್ಣ ಇವರೆಲ್ಲರ ಬಗ್ಗೆ ಅಪಾರ ಪ್ರೀತಿ ಇದೆ.ಇವರ ಕನ್ನಡ ಉಳಿಸಿ ಬೆಳಿಸಿದ ಹಾಗೆ ನಾವು ಕನ್ನಡ ಉಳಿಸೋಣ

  ಪ್ರತಿಕ್ರಿಯೆ
 11. Rajshekara

  ಮಾಲ್ಗುಡಿ ಡೇಸ್ ಬಂದು ಎಷ್ಟು ವರ್ಷಗಳಾದವು. ಅದನ್ನು ಆಗ ಅದು ಪ್ರಸಾರವಾಗುತ್ತಿದ್ದ ಕಾಲಕ್ಕೆ ಹಿಂದಿಯಲ್ಲೇ ನೋಡಿ, ಅನಂತರ ಅದರ ಕಲೆಕ್ಷನ್ ಸಿಕ್ಕಾಗ ಇಟ್ಟುಕೊಂಡು ನೋಡುತ್ತಿದ್ದರು. ಶಂಕರ್ ನಾಗ್ ಇಷ್ಟ ಅಂದರೆ ಹಿಂದಿಯಲ್ಲೇ ನೋಡುತ್ತಾರೆ. ಅದೊಂದು ಒಳ್ಳೆ ಕೃತಿ ಅಂತಾದರೆ ಅಲ್ಲೇ ನೋಡಿಕೊಂಡು ಸುಮ್ಮನಾಗುತ್ತಾರೆ. ಇದನ್ನು ಡಬ್ಬಿಂಗ್ ಮಾಡಿ ಜಗತ್ತಿಗೆಲ್ಲಾ ತೋರಿಸಿದರೇ ನಮಗೆ ಶಂಕರ್ ನಾಗ್ ಬಗ್ಗೆ ಭಕ್ತಿ, ಗೌರವ, ಪ್ರೀತಿ ವ್ಯಕ್ತವಾದ ಹಾಗಲ್ಲ. ಶಂಕರ್ ನಾಗ್ ಮಾಡಿದ ಅದ್ಭುತ ಕೃತಿ ಕನ್ನಡದಲ್ಲಿ ಬೇಕು ಎನ್ನುವುದು ಬರೀ ಡಬ್ಬಿಂಗ್ ಬೆಬಂಲಿಸಲು ಕುಂಟುನೆಪ ಅಷ್ಟೇ.
  ಡಬ್ಬಿಂಗ್ ಬರಬೇಕು ಎನ್ನುವ ಹುನ್ನಾರ ನಡೆಸುವ, ಪಟ್ಟು ಹಿಡಿದು ಕುಳಿತಿರುವ ಕೆಲವರ ವ್ಯವಸ್ಥಿತ ಪಿಟೀಷನ್ ಇದು, ಬೇರೇನೂ ಅಲ್ಲ. ದಿಕ್ಕಾರವಿರಲಿ!
  -ರಾಜಶೇಖರ

  ಪ್ರತಿಕ್ರಿಯೆ
 12. Rajesh Gowda

  ಸುದೇಶ್ ಕೃಷ್ಣ ಅವರೇ,
  ದಯವಿಟ್ಟು ನಮಗೆ ಹೆದರಿಸಬೇಡಿ. ತುಂಬಾ ಭಯ ಆಗುತ್ತೆ. ಬೀದಿಗೆ ಬನ್ನಿ, ರಕ್ತ ಚೆಲ್ಲುತ್ತೀವಿ, ಬುಲ್ಡೆ ವೊಡಿತೀವಿ ಅಂತೆಲ್ಲ ನೀವು ಗೂಂಡಾಗಿರಿ ಮಾತುಗಳನ್ನು ಆಡಿದ್ರೆ, ನಮ್ಮಂತೆ ಭಯಸ್ತ, ನ್ಯಾಯ, ನೀತಿ, ಕಾನೂನು ವ್ಯವಸ್ಥೆಗಳನ್ನು ನಂಬಿರೋ ನಮ್ಮಂತಹ ಸಾಮಾನ್ಯ ಜನ ಏನ್ ಮಾಡಬೇಕು ಸಾರ್.
  ನಿಮಗೆ ಇಂತಹ ರೌಡಿಯಿಸಂ ಅಭ್ಯಾಸ ಇರಬಹುದು. ಬಹಳ ವರ್ಷಗಳಿಂದ ಚಿತ್ರರಂಗದಲ್ಲಿ ನಿಮ್ಮ ಹೀಡಿತ ಸಾಧಿಸಲೂ ಇಂತಹ ಅಸ್ತ್ರಗಳನ್ನ ನೀವು ಬಳಸುತ್ತಿರಬಹುದು..ಆದರೆ ನನಗೆ ಇದೆಲ್ಲ ಸರಿ ಹೋಗಲ್ಲ.
  ಸಭ್ಯತೆ ಇಂದ ಚರ್ಚೆ ಮಾಡೋಣ. ನಾವೆಲ್ಲ ವಿದ್ಯವಂತರು. ಅನಾಗರೀಕರಂತೆ ಮಾತನಾಡೋಡು ಬೇಡ.

  ಪ್ರತಿಕ್ರಿಯೆ
 13. ಗಣೇಶ

  Sudesh krishna ಅವರ ಕಮೆಂಟ್ ನೋಡಿದರೆ ಅವರ ಗೂಂಡಾ ಮನಸ್ಥಿತಿ ಅರ್ಥ ಆಗತ್ತೆ. ಇಂತವರಿಗೆ ನ್ಯಾಯಾಲಯಗಳೇ ಸರಿಯಾಗಿ ಚೀಮಾರಿ ಹಾಕಬೇಕು. ಆ ಕಾಲ ಹತ್ತಿರದಲ್ಲೇ ಬರಲಿದೆ ಎಂದು ಎಲ್ಲರು ಆಶಿಸೋಣ.

  ಪ್ರತಿಕ್ರಿಯೆ
 14. raghu

  ಡಬ್ಬಿಂಗ್ ಬೇಕೆ ಬೇಕು.ಯಾರೊ ಮೇಲ್ಗಡೆ ‘ಬನ್ನಿ ನೋಡೆಬಿಡೋಣ’ ಅಂತೆಲ್ಲಾ ಹೇಳಿದ್ದಾರೆ.ಈ ಪರಿಯ ಮನಸ್ತಿತಿ ಸರ್ವಾದಿಕಾರಿ ದೋರಣೆಯನ್ನು ತೋರಿಸುತ್ತದೆ.ಜಗತ್ತಿನ ಎಲ್ಲಾ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡುವುದು ಕನ್ನಡಿಗನ ಹಕ್ಕು.ಮೂಲಬೂತ ಬೇಡಿಕೆಗಳಾದ ಮನರಂಜನೆ ಮತ್ತು ವೈಗ್ನಾನಿಕ ಕಾರ್ಯಕ್ರಮಗಳನ್ನು ಕನ್ನಡ ನೋಡುಗರಿಂದ ಕಸಿದುಕೊಂಡಿರುವುದು ಮಾನವ ಹಕ್ಕು ಉಲ್ಲಂಗನೆಯೇ ಸರಿ.ಮಾಲ್ಗುಡಿ ಡೇಸ್ ಅನ್ನು ಅರ್ತಾವಾಗದ ಹಿಂದಿ ಬಾಶೆಯಲ್ಲಿ ಯಾಕೆ ನೋಡಬೇಕು ? ಈ ಡಬ್ಬಿಂಗ್ ಕಡಿವಾಣದಿಂದಾಗಿಯೆ ಇಂದು ಕನ್ನಡಿಗರು ಬಾವಿ ಕಪ್ಪೆಗಳಾಗಿ ಇರುವುದು.ಬೇರೆ ಬಾಶೆಗಳನ್ನು ಕಲಿತು ಅದರಲ್ಲಿಯೆ ಮಾತನಾಡಿ ಬೆಂಗಳೂರಿನ ಕನ್ನಡ ವಾತಾವರಣವನ್ನು ಕುಗ್ಗಿಸುತ್ತಿದ್ದಾರೆ.ಡಬ್ಬಿಂಗ್ ಬಂದರೆ ಪೈಪೋಟಿ ಹೆಚ್ಚುತ್ತೆ.ಕನ್ನಡದ ಮಾರುಕಟ್ಟೆ ಹರಡುತ್ತದೆ.ದುಡ್ಡು ಹೆಚ್ಚು ವ್ಯವಹಾರ ಆಗುತ್ತೆ.ಆಗಲೇ ಪ್ರತಿಬಾವಂತ ಯುವಕರು ಕನ್ನಡ ಮನರಂಜನೆಯ ಕಡೆ ಮುಕ ಮಾಡುತ್ತಾರೆ.ಇದನ್ನು ಅರ್ತ ಮಾಡಿಕೊಳ್ಳೋದು ಬಿಟ್ಟು ತಲಹರಟೆಗಳ ಹಾಗೆ – ”ಒಳ್ಳೆ ಮಾತಲ್ಲಿ ಕೇಳ್ಬೇಕಪ್ಪ” ಅಂತೆಲ್ಲಾ ಹೇಳಿದರೆ ಅಸಹ್ಯ ಆಗುತ್ತೆ.

  ಪ್ರತಿಕ್ರಿಯೆ
 15. ರವಿ

  ದಬ್ಬಿಂಗ್ ಬೇಡ ಎನ್ನುವವರು ಸಲ್ಲದ ಪಾಳೆಗಾರಿಗೆ ಮಾಡಿಕೊಂಡು ಕನ್ನಡಿಗರಿಗೆ ಕನ್ನಡದ ಮನೋರಂಜನೆಯಿಂದ ವಂಚಿತರನ್ನಾಗಿಸುತ್ತಿದ್ದಾರೆ. ಕನ್ನಡಿಗರು ಹಿಂದಿಯಲ್ಲೊ ಇನ್ಯಾವುದೋ ಭಾಷೆಯಲ್ಲಿ ನೋಡಿದರೆ ಇವರಿಗೆ ಹಾಲು ಕುಡಿದಂತಾಗುತ್ತದೇನೊ. ಇವರ ಕನ್ನಡ ಪರತೆ ಅವರೆ ಮೆಚ್ಚಿಕೊಳ್ಳಬೇಕು
  ಮಾಲ್ಗುಡಿ ಡೇಸ್ ಕನ್ನಡದಲ್ಲಿ ಆದಷ್ಟೂ ಬೇಗ ಬರುವಂತಾಗಲಿ.

  ಪ್ರತಿಕ್ರಿಯೆ
 16. har.sri.ga

  ಕನ್ನಡ ಮೇಲೆ ಅಭಿಮಾನ ಇರೋದಕ್ಕೆ ಎಲ್ಲ ಸಿನಿಮಾ ಕನ್ನಡ ಭಾಷೆ ನಲ್ಲಿ ಲಭ್ಯವಾಗಲಿ ಅಂತ ಹೇಳುತಾ ಇರೋದು.
  ಬೇರೆ ಉರು ಇಂದ ಹಳಿಸಿದ ಅನ್ನ ತಂದು ಇಲ್ಲಿ , ಇದೆ ಒಳ್ಳೇದು ಅಂತ ಮಾರಾಟ ಮಾಡ್ತಾ ಇರೋದು ಯಾರು?
  ಬೇರೆ ಅವರು , ತಮಿಳ್ ಸಿನಿಮಾ ನೋಡಿದೆ, ತೆಲುಗು ಸಿನಿಮಾ ಸಮಾರಂಭ ದಲ್ಲಿ ಅವರನು ಹೊಗೊಳೋದು ಮಾಡಿಲ್ಲ..
  ನಾವು ಕನ್ನಡ ಬೇಕು ಅಂತ ಇದಿವಿ, ಅವರು ಅವರ ಭಾಷೆ ನಲ್ಲಿ ಅವರ ಸಿನಿಮಾ ನೋಡಿ ಅಂತ ಇದಾರೆ. ಇಲ್ಲಿ ಯಾರು ಕನ್ನಡಿಗರು ಅಂತ ಎಲ್ಲರಿಗೂ ಗೊತು?

  ಪ್ರತಿಕ್ರಿಯೆ
 17. ratheesha

  ಕನ್ನಡ ವಾಹಿನಿಯಲ್ಲಿ ‘ಹಿಂದಿ’ ನುಡಿಯಲ್ಲಿ ಧಾರಾವಾಹಿ ಪ್ರಸಾರ ಆದರು ಪರವಾಗಿಲ್ಲ, ಆದರೆ ಕನ್ನಡದಲ್ಲಿ ಮಾತ್ರ ಪ್ರಸಾರ ಮಾಡಲು ಬಿಡುವುದಿಲ್ಲ ಎಂದು ಕೂಗಿ ಕೊಳ್ಳೋ ಕೆಲವರ ಮೇಲೆ ನನಗೆ ಯಾಕೋ ಅನುಮಾನ. ಹಿಂದಿಯನ್ನು ನಮ್ಮ ಮೇಲೆ ಹೇರಲು ಕೇಂದ್ರ ಸರ್ಕಾರ ಅಥವಾ ಯಾವುದಾದರು ಹಿಂದಿ ಪ್ರಚಾರ ಸಮಿತಿಯ ಗುಪ್ತ ಸದಸ್ಯರು ಇರ ಬಹುದು ಎಂದು ನನಗೆ ಅನುಮಾನ ಬರುತ್ತದೆ. ತನ್ನ ನೆಲದಲ್ಲಿ ತನ್ನ ನುಡಿಯನ್ನು ವಿರೋಧಿಸುವನಿಗೆ ಒಂದು ಸೋಗಸಾಗಿರೋ ಕೆಟ್ಟ ಮಾತಿದೆ, ಅದೆಲ್ಲ ಇಲ್ಲಿ ಬೇಡ ಬಿಡಿ. ಏಕೆಂದರೆ ನಾನು ಆ ಮಾತನ್ನು ಆಡಿದರೆ ಕನ್ನಡಿಗನಾದ ನನಗು ಗೂಂಡಾಗಿರಿ ಮಾಡುವ ಅವರಿಗೂ ಯಾವ ವ್ಯತ್ಯಾಸ
  ಇರುವುದಿಲ್ಲ.
  “ಒಳ್ಳೇ ಮಾತಲ್ಲಿ ಹೇಳಿದರೆ ಕೇಳಬೇಕ್ರಪ್ಪಾ.. ಬೀದೀಗೆ ಇಳೀತಾರಾ ಬನ್ನಿ. ರಕ್ತ ಕೊಟ್ಟೇವು ಆದ್ರೆ ಡಬ್ಬಿಂಗ್ ಪ್ರಸಾರ ಬಿಡೆವು. ಎಲ್ಲೋ ಏಅಡಗಿ ಕೂತು ಮಾತೋಡೋರು ಬನ್ರಪ್ಪಾ ನೋಡೇಬೀಡೋಣ” ಎಂದು ಹೇಳೋ ಮಾಡಲು ಒಂದು ವಿಚಾರ ನೆನಪಿಡಬೇಕು, ನನ್ನ ಮನೆಗೆ ನಾನು ದುಡಿದ ದುಡ್ಡಿಂದ ಟಿವಿ ತಂದಿರುವೆ, ತಿಂಗಳ ಕೊನೆಯಲ್ಲಿ ಕೇಬಲ್ ಹಣವನ್ನು ನಾನೇ ಕಟ್ಟುತ್ತಿರುವೆ, ನನಗೆ ಬೇಕಾದ ಕಾರ್ಯಕ್ರಮ ನಾನು ನೋಡುವ ಹಕ್ಕು ಇದೆ. ನೀನು ಇದನ್ನ ನೋಡ ಬೇಡ ಅದನ್ನು ನೋಡು ಎಂದು ಹೇಳೋ ಹಕ್ಕು ಯಾವ ದೊಣ್ಣೆ ನಾಯಕನಿಗೂ ಇಲ್ಲ. ಅಷ್ಟಕ್ಕೂ ನಾನು ಯಾರಪ್ಪನ ಮನೆ ದುಡ್ಡನ್ನು ಬಳಸುತ್ತಿಲ್ಲ, ನನ್ನ ದುಡ್ಡು, ನನ್ನ ಇಷ್ಟ.
  ನಾವು ಎಲ್ಲೂ ಅಡಗಿ ಕೂತಿಲ್ಲ ನೋಡೋ ಆಸೆ ಇದ್ದರೆ ಹೇಳಿ ನಾವೇ ನಿಮ್ಮನ್ನು ಹುಡುಕಿಕೊಂಡು ಬರ್ತಿವಿ.
  ಈ ಡಬ್ಬಿಂಗ್ ಬೇಡ ಅನ್ನೋರೆಲ್ಲ ಬರಿ ರೌಡಿಗಳು ಅಂತ ಈಗ ಗೊತ್ತಾಯ್ತು. ಡಬ್ಬಿಂಗ್ ಕನ್ನಡಕ್ಕೆ ಏಕೆ ಬೇಡ ಎಂದು ತರ್ಕ ಬದ್ದವಾಗಿ ತಾಳ್ಮೆಯಿಂದ ಚರ್ಚೆ ಮಾಡುವ ಕಿಮ್ಮತ್ತು ಯಾವನಿಗೂ ಇಲ್ಲ. ಎಲ್ಲರದು ಒಂದೇ ಡೈಲಾಗ್ ‘ ಡಬ್ಬಿಂಗ್ ಬೇಕು ಅನ್ನೋರ್ನ ಭೂಮಿ ಮೇಲೆ ಉಳಿಸಲ್ಲ, ಬನ್ರೋ ನೋಡೋಣ ಒಂದು ಕೈ ನೋಡೇ ಬಿಡ್ತಿವಿ ಅಂತ’. ಥೂ…

  ಪ್ರತಿಕ್ರಿಯೆ
 18. Priyank

  ಈ ಡಬ್ಬಿಂಗ್ ವಿರೋಧಿದಳಿಂದಲೇ ಇವತ್ತು ರಾಮ್ ಚರಣ್ ತೇಜ ಅವರ ತೆಲುಗು ಸಿನೆಮಾ ಬೆಂಗಳೂರಲ್ಲಿ 50 ದಿನ ಓಡೋದು. ಎಷ್ಟೋ ಜನ ಕನ್ನಡಿಗರು, ತೆಲುಗು/ತಮಿಳು ಸಿನೆಮಾ ನೋಡುವಂತಾಗಲು ಇವರುಗಳೇ ಕಾರಣ. ಇದೆಂತಾ ಕನ್ನಡಪರ-ತನ? ಕನ್ನಡಿಗರನ್ನ ಕನ್ನಡ ಭಾಷೆಯಿಂದ ದೂರ ತಳ್ಳೋದು ಕನ್ನಡದ ಮೇಲಿನ ಅಭಿಮಾನನಾ?
  ಕನ್ನಡ ನಾಡಿನ ಸಿನೆಮಾ ಮಾರುಕಟ್ಟೆಯನ್ನ ಗೆದ್ದ ಜಯಭೇರಿ ಮಹೋತ್ಸವದಲ್ಲಿ ಪಾಲ್ಗೊಂಡು, ಅವರ ತೆಲುಗು ಸಿನೆಮಾ ಕನ್ನಡ ನಾಡಲ್ಲಿ ನೂರು ದಿನ ಪೂರೈಸಲಿ ಎಂದು ಹಾರೈಸೋದು ಕನ್ನಡ ಪರಾನ?

  ಪ್ರತಿಕ್ರಿಯೆ
 19. Arun

  ಅವದಿ ಮಾಡರೇಡರ್ ದಯವಿಟ್ಟು ಈ SUDHESH KRISHNA ಎನ್ನುವ ವ್ಯಕ್ತಿಯನ್ನು ಬ್ಯಾನ್ ಮಾಡಿ. ಇವರು ಪ್ರಜಾಪ್ರಬುತ್ವವನ್ನು ಗೌರವಿಸದ ವ್ಯಕ್ತಿಯೆನ್ನುವುದನ್ನು ತಮ್ಮ ಕಮೆಂಟ್ ಮೂಲಕ ನಿರೂಪಿಸಿದ್ದಾರೆ. ಡಬ್ಬಿಂಗ್ ಯಾಕೆ ಬೇಡ ಎನ್ನುವುದನ್ನು ಸರಿಯಾದ ರೀತಿಯಲ್ಲಿ ತಿಳಿಸಲಿ ಅದನ್ನು ಬಿಟ್ಟು ಮುಂದೆ ಬನ್ನಿ ನೋಡಿಕೊಳ್ಳುತ್ತೆವೆಂಬ ದಮಿಕಿಗಳನ್ನು ಹಾಕಲು ನಿಮ್ಮ ವೆಬ್ ಸೈಟ್ ಅನ್ನು ಬಳಸಿಕೊಂಡಂತಿದೆ. ಇಂತಹ ರೌಡಿ ಮನಸ್ಸಿನ ಜನರು ಅವದಿಯಂತಹಾ ಪ್ರಜಾಪ್ರಬುತ್ವವಾದಿ ತಾಣದಿಂದ ದೂರವಿದ್ದರೇ ಒಳ್ಳೆಯದೇನೋ…

  ಪ್ರತಿಕ್ರಿಯೆ
 20. Lakshmeesha

  Comments Interesting ಆಗಿದೆ. ಮಾತು ಆಡೋದು ಸುಲಭ. ಅವರನ್ನು ಬ್ಯಾನ್ ಮಾಡಿ, ಇದನ್ನು ದೂರ ಇಡಿ ಅಂತ ಹೇಳೋದು ಸುಲಭ. ಹೀಗೆ ಹೇಳುತ್ತಿರುವವರು ಯಾರೂ ಡಬ್ಬಿಂಗ್ ಮಾಡೋರಲ್ಲ. ಹೀಗೆ ಡಬ್ಬಿಂಗ್ ಬೇಕು ಅಂತ ಬೊಂಬಡ ಬಜಾಯಿಸೋರು ತಾಕತ್ತಿದ್ದರೆ ಒಂದು ಸಿನಿಮಾ ಡಬ್ಬಿಂಗ್ ಮಾಡಿ ತೋರಿಸಲಿ ನೋಡೋಣ. ಕಾನೂನಿದೆ, ಸಂವಿಧಾನ ಇದೆ ಅಂತ ಹೇಳೋರು ಡಬ್ಬಿಂಗ್ ಪ್ರದರ್ಶನ ಮಾಡಲಿ ನೋಡೋಣ. ಡಬ್ಬಿಂಗ್ ಬೇಕು ಅಂತ ಹೇಳೋರೇ ಅದಕ್ಕೆ ಮಾದರಿ ಆಗಲಿ. ಫ್ರೀ ನೆಟ್ಟು, ಫ್ರೀ ಸೈಟು ಇದ್ದರೆ ಯಾರು ಬೇಕಿದ್ದರೂ ಬಾಯಿ ಬಡ್ಕೋಬಹುದು. ಆದರೆ ಒಂದು ಉದ್ಯಮ ಕಟ್ಟೋದಕ್ಕೆ ಕೋಟ್ಯಂತರ ರುಪಾಯಿ ಕಳಕೊಂಡ ನಿರ್ಮಾಪಕರಿದ್ದಾರೆ, ಇವತ್ತು ನಮ್ಮ ಹಿರಿಯ ನಿರ್ದೇಶಕರೆಲ್ಲ ಬೀದಿಗೆ ಬಿದ್ದಿದ್ದಾರೆ. ಗೀತಪ್ರಿಯ ಕಷ್ಟದಲ್ಲಿದ್ದಾರೆ. ಸಿದ್ಧಲಿಂಗಯ್ಯ ಬಡತನದಲ್ಲಿದ್ದಾರೆ. ಅವರ ಬಗ್ಗೆ ಕಾಳಜಿಯೂ ಇಲ್ಲದ ಪ್ರೀತಿಯೂ ಇಲ್ಲದ ಮಂದಿ, ನಮಗೆ ಪರಭಾಷಾ ಸಿನಿಮಾಗಳು ಕನ್ನಡದಲ್ಲಿ ಬೇಕು ಅಂತ ಕೇಳ್ತಿರೋದು ಯಾರಿಗೂ ಅಮಾನವೀಯ ಅನ್ನಿಸೋದಿಲ್ವಾ. ನಾನು ದುಡ್ಡು ಕೊಟ್ಟು ಟೀವಿ ತಂದಿದ್ದೀನಿ, ನನಗೆ ಬ್ಲೂ ಫಿಲ್ಮ್ ತೋರಿಸಿ ಅಂತ ಕೇಳಿದಷ್ಟೇ ನಾಚಿಕೆಗೇಡಿನಿಂದ ಡಬ್ಬಿಂಗ್ ತೋರಿಸಿ ಅಂತ ಕೇಳ್ತಿದ್ದಾರಲ್ಲ, ಇವರಿಗೆ ನಾಚಿಕೆ ಎಂಬುದೇ ಇಲ್ಲವಾ. ಒಂದು ಉದ್ಯಮವನ್ನು ಸಾಯಿಸೋಕೆ ಹೊರಟಿದ್ದಾರೆ ಇವರು. ಉಳಿಸೋ ಮಾತಾಡಿದರೆ ಅವರನ್ನು ಗೂಂಡಾಗಳು ಅಂತ ಕರೀತಾರೆ. ಯೋಚನೆ ಮಾಡಿ ನೋಡಿ, ಇವರಲ್ಲವೇ ನೆಟ್ ಗೂಂಡಾಗಳು, ಇದನ್ನೆ ಅಲ್ಲವೇ ವರ್ಚುಯಲ್ ಗೂಂಡಾಯಿಸಮ್ ಅಂತ ಕರೀಬೇಕಾಗಿರೋದು. ಇಲ್ಲಿ ಕಮೆಂಟಿಸುವ, ನೆಟ್ಟು ಬಳಸುವ ಮಂದಿಗೆ ಬೇರೆ ಭಾಷೆ ಬರುತ್ತೆ ಅಂತ ನನಗೆ ಗೊತ್ತಿದೆ. ಅವರು ಅದೇ ಭಾಷೇಲಿ ಆ ಸಿನಿಮಾ ನೋಡುತ್ತಾರೆ. ಕೇವಲ ಉದ್ಯಮ, ಕಾರ್ಮಿಕರ ಹೊಟ್ಟೆಪಾಡು ಹಾಳು ಮಾಡಿ, ನೂರಾರು ಸಂಸಾರಗಳನ್ನು ಬೀದಿಗೆ ತರೋದಕ್ಕೆ ಇವರು ಡಬ್ಬಿಂಗ್ ಬೇಕು ಅಂತಾರೆ. ಒಂದಂತೂ ನೆನಪಿಡಿ. ನಿಮ್ಮ ಆಸೆಯಂತೆ ಡಬ್ಬಿಂಗ್ ಬರಬಹುದು. ಆದರೆ ಹಸಿವಿನಿಂದ ಸಾಯೋ ಕಾರ್ಮಿಕರ ಶಾಪ ನಿಮ್ಮನ್ನು ನಾಶ ಮಾಡದೇ ಇರದು. ಕೆಲಸ ಕಿತ್ಕೊಳ್ಳೋದಕ್ಕಿಂತ ಹೀನಾಯವಾದ ವೃತ್ತಿ ಮತ್ತೊಂದಿಲ್ಲ. ಅದು ಸಹಜವಾಗಿಯೇ ಆದಾಗ ಏನೂ ಮಾಡಲಾಗುವುದಿಲ್ಲ. ಆದರೆ ಒಂದು ವರ್ಗದ ಮಂದಿ, ಯಾರದೋ ಎಂಜಲು ಕಾಸಿಗೆ ಬಲಿಬಿದ್ದು, ಸಾವಿರಾರು ಮಂದಿಯ ಉದ್ಯೋಗ ಕಳೀತೀನಿ ಅನ್ನೋದಿದೆ ನೋಡಿ, ಅದು ಕ್ರೌರ್ಯ. ನಾನು ಕನ್ನಡ ಸಿನಿಮಾ ನೋಡಲ್ಲ, ಪರಭಾಷೆ ಸಿನಿಮಾ ನೋಡಲ್ಲ. ನನಗೆ ದುಡಿದು ಬದುಕಿದರೆ ಸಾಕಾಗಿದೆ. ನಿಮ್ಮ ಹಾಗೆ ಷೋಕಿ ಮಾಡಿಕೊಂಡು ಪರಭಾಷೆ ಸಿನಿಮಾ ಡಬ್ಬಿಂಗ್ ಮಾಡಿ ಅನ್ನುವ ನಿಮ್ಮ ವರ್ತನೆಯ ಬಗ್ಗೆ ಅನುಕಂಪವಿದೆ. ಅಸಹ್ಯವಿದೆ. ಇದನ್ನು ಓದುವ ತಾಳ್ನೆಯೂ ನಿಮಗಿಲ್ಲ ಎಂದು ಗೊತ್ತಿದೆ. ನಾಳೆ ನನ್ನ ಮೇಲೂ ನೆಟ್ ಹಲ್ಲೆ ಶುರು ಆಗುತ್ತದೆ. ಆದರೂ ಪರವಾಗಿಲ್ಲ ಎಂದು ಹೇಳಬೇಕಾದ್ದನ್ನು ಹೇಳಿದ್ದೇನೆ. ನೀವು ಕೊಲ್ಲುತ್ತಿರುವುದು ಪರಭಾಷೆಯನ್ನಲ್ಲ, ಕನ್ನಡ ಕಾರ್ಮಿಕರನ್ನು ಅನ್ನುವುದು ನಿಮಗೆ ನೆನಪಿರಲಿ ಗೆಳೆಯರೇ.
  -ಲಕ್ಷ್ಮೀಶ, ಅಸಿಸ್ಟೆಂಟ್ ಡೈರೆಕ್ಟರ್. ನನ್ನ ತಿಂಗಳ ಆದಾಯ ಮೂರೂವರೆ ಸಾವಿರ ರುಪಾಯಿ. (ಸರಾಸರಿ) ಓದಿದ್ದು ಕನ್ನಡ ಎಂಎಂ. (ಜಾನಪದ)

  ಪ್ರತಿಕ್ರಿಯೆ
  • Sharana Kumara A.R

   SUDHESH KRISHNA and Lakshmeesha ರೀ..ಸ್ವಾಮಿ, ಅಲೆ ೨೦೦ ಸಿನಿಮಾಗಳು ಡಬ್ಬಿ೦ಗ್ ಮಾಡಿ ಪ್ರದರ್ಶನಕ್ಕೆ ಸಿದ್ಧವಗಿವೆ. ಆದರೆ ಈ ಗು೦ಡಾಗಳೆ ಹೆದರಿಸಿ ಪ್ರದರ್ಶನಕ್ಕೆ ಬಿಡುತ್ತಿಲ್ಲವಲ್ಲ. ರೀ ಇದು ಸ್ಪರ್ಧಾಯುಗ, ಶಕ್ತಿ ಇರುವವರು ಸ್ಪರ್ಧೆ ಮಾಡುತ್ತಾರೆ. ಆ ೨೦೦ ಚಿತ್ರಗಳು ಬಿಡುಗಡೆ ಆಗಲಿ, ಅವುಗಳಲ್ಲಿ ಒಳ್ಳೆಯ ಚಿತ್ರಗಳು ಪ್ರದರ್ಶಿಸುತ್ತವೆ ಇಲ್ಲವಾದರೆ ಗ೦ಟುಮೂಟೆ ಕಟ್ಟುತ್ತವೆ. ಅದರಲ್ಲೂ ನಾವು ಡಬ್ ಮಾಡಿ ಅ೦ತ ಹೇಳುತ್ತಿರುವುದು ಒಳ್ಳೆಯ, ಸದಭಿರುಚಿಯ ಕಾರ್ಯಕ್ರಮಗಳು ಮತ್ತು ಸಿನಿಮಾಗಳನ್ನು. ಇದಕ್ಕೂ ನಿಮ್ಮವರಿ೦ದ ಅಡ್ಡಗಾಲು ಮತ್ತು ಧಮಕಿ. ನಮ್ಮ ಕರ್ಮಕ್ಕೆ ‘ಅವತಾರ್’ ಸಿನಿಮಾವನ್ನು ತೆಲುಗಿನಲ್ಲಿ ನೋಡುವ೦ತಾಯಿತು:(. ಇದಕ್ಕೆ ನಿಮ್ಮಲ್ಲಿ ಉತ್ತರ ಇಲ್ಲ. Sharana Kumara A.R, mob:-9481114402, [email protected]

   ಪ್ರತಿಕ್ರಿಯೆ
  • ರಾವ್

   ಆತ್ಮೀಯ ಲಕ್ಷ್ಮೀಶ ಅವರೆ,
   ನಿಮ್ಮ ತಿಂಗಳ ಆದಾಯ ಕೇಳಿ ಬೇಜಾರು ಮತ್ತು ಆಶ್ಚರ್ಯ ಎರಡೂ ಆಯಿತು. ಈಗಿನ ದಿನಗಳಲ್ಲಿ ಒಬ್ಬ ಕಾರ್ ಡ್ರೈವರ್, ಆಫೀಸ್ ಬಾಯ್ ಕೂಡ ೮ ರಿಂದ ೧೦ ಸಾವಿರ ತಿಂಗಳ ಸಂಬಳ ದುಡೀತಾರೆ. ನಿಮ್ಮ ಹೀರೋಗಳು ಕೋಟಿ, ಕೋಟಿ ಪಡೀತಾರೆ. ಯಾವುದೋ ಊರಿಂದ, ಯಾವುದೋ ದೇಶದಿಂದ, ನಟಿಯರನ್ನ ಕರೆಸಿ, ಬಾಗಿನ ಕೊಟ್ಟು ಲಕ್ಷ ಲಕ್ಷ ಹಣ ಕೊಡ್ತಾರೆ. ಟೀವಿಗಳಲ್ಲಿ ಕನ್ನಡದ ಬಗ್ಗೆ, ಕನ್ನಡ ಕಾರ್ಮಿಕರ ಬಗ್ಗೆ ಪುಂಕಾನುಪುಂಕವಾಗಿ ಮಾತಾಡೋರು, ಈ ಹುಡ್ಗೀರ ಪಕ್ಕ ಫೊಟೋಗೆ ಹಲ್ಲು ಹಲ್ಲು ಬಿಟ್ಟು ಕೊಂಡು ಕಾಯ್ತ ಇರ್ತಾರೆ. ಇಂತಹವರು ನಿಮ್ಮನ್ನು ಯಾವತ್ತು ಉದ್ದಾರ ಮಾಡಲ್ಲ. ಅವರ ಖಯಾಲಿಗಳಿಗೆ ನಿಮ್ಮಂತ ಪಾಪದವರನ್ನ ಬಳಸ್ಕೋತಾ ಇದಾರೆ, ಸ್ವಲ್ಪ ಹುಷಾರಾಗಿರಿ. ಹುಟ್ಟಿದ ಹಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ ಲಕ್ಷಗಟ್ಟಲೆ ಹಣ ಖರ್ಚು ಮಾಡ್ತಾರೆ, ನಿಮ್ಮಂತೋರಿಗೆ ಮೂರುವರೆ ಸಾವಿರ ಸಂಬಳ ಕೋಡ್ತಾರೆ, ಅವರಿಗೆ ನಾಚಿಕೆ ಆಗ್ಬೇಕು.
   ಬದಲಾವಣೆ ಅನಿವಾರ್ಯ. ಜಟಕಾ ಬಂದಾಗ ಎತ್ತಿನ ಬಂಡಿಯವರು, ಆಟೋ ಬಂದಾಗ ಜಟಕಾದವರು, ಮೊಬೈಲ್ ಬಂದಾಗ ಟೆಲಿಫೋನ್ ಬೂತ್ ಗಳವ್ರು ಇದಕ್ಕಿಂತ ಹೆಚ್ಚು ಕಷ್ಟ ಅನುಭವಿಸಿದ್ದರು, ಆದರೆ ನಿಮ್ಮ ಆಸರೆಗೆ ಕೋಟಿಗಟ್ಟಳೆ ದುಡಿಯೋ ನಾಯಕರಿದ್ದಾರೆ, ಅವರು ನಿಮ್ಮನ್ನ ಖಂಡಿತಾ ಕೈ ಬಿಡಲ್ಲ. ಆದರೂ ನಿಮ್ಮ ವಿಳಾಸ ಕೊಡಿ, ನೀವು ಕೇವಲ ಹಣಕ್ಕಾಗಿ ಆ ಕೆಲ್ಸ ಮಾಡ್ತಾ ಇದ್ದರೆ, ನಾನೇ ಬಂದು ನಿಮಗೆ ಹೆಚ್ಚಿನ ಆದಾಯ ಬರೋ ಕೆಲ್ಸ ಕೊಡಿಸ್ತೇನೆ,
   ಕನ್ನಡ ಚಿತ್ರಗಳನ್ನೆಲ್ಲಾ ಬೇರೆ ಭಾಷೆಗೆ ಡಬ್ ಮಾಡಿಸ್ತಾ ಇದ್ದೀರಲ್ಲಾ, ಅವರೆಲ್ಲ ಅದನ್ನ ಬ್ಲೂ ಫಿಲ್ಮ್ ತರ ನೋಡ್ತಾ ಇದ್ದಾರಾ? ಮೊದಲು ಕನ್ನಡ ಉಳಿಸಿ ಆಮೇಲೆ ಚಿತ್ರರಂಗ ಉಳಿದೇ ಉಳಿಯುತ್ತೆ, ಕೊನೆ ಪಕ್ಷ ಉಳಿಸೋ ಪ್ರಯತ್ನಾನಾದ್ರೂ ಮಾಡಬಹುದು.
   ಡಬ್ಬಿಂಗ್ ವಿಷಯ ಬಂದಾಗ ಮಾತ್ರ ಅಮ್ಮ ಬಂದಂಗೆ ಆಡ್ತೀರಲ್ಲ, ಬೇರೆ ವಿಷಯಕ್ಕೆ ಅದೇ ಆವೇಶ ಯಾಕೆ ಇರಲ್ಲ. ಸರ್ಕಾರನೇ ಕನ್ನಡ ಶಾಲೇನ ಮುಚ್ತಾ ಇದೆ, ಇಲ್ಲಿರೋ ಕನ್ನಡ ಶಿಕ್ಷಕರ ಕೆಲಸ ಹೋಗ್ತಾ ಇದೆ, ಜೊತೆಗೆ ಕನ್ನಡಾನೆ ಹೋಗ್ತಾ ಇದೆ, ನಿಮ್ಮವರು ಯಾರಾರು ಸ್ವಲ್ಪನಾದ್ರೂ ತಲೆ ಕೆಡಿಸಿಕೊಂಡೀದ್ದಾರಾ? ನಿಮ್ಮ ರಂಗದವರಿಗೆ ಹೇಳಿ, ಅವರಿಗೆ ನಿಜವಾಗಿ ಕನ್ನಡಿಗರ ಬಗ್ಗೆ ಆಸಕ್ತಿ ಇದ್ದರೆ ಬೇಕಾದಷ್ಟು ಕೆಲಸ ಇದೆ. ಕನ್ನಡ ಭದ್ರವಾಗಿದ್ದರೆ ತಾನೆ ನಿಮ್ಮ ಚಿತ್ರರಂಗ ಉಳಿಯೋದು, ಮೊದಲು ಆ ಕೆಲ್ಸ ಮಾಡೋಣ.
   ಸಮಾಧಾನ ಮಾಡ್ಕೊಳ್ಳಿ, ಯಾರದ್ದೋ ತಾಳಕ್ಕೆ ಕುಣಿಯಕ್ಕೆ ಹೋಗಬೇಡಿ. ಡಬ್ಬಿಂಗ್ ಬೇಕು ಅಂದ ಮಾತ್ರಕ್ಕೆ ನಾವೇನೂ ನಿಮ್ಮ ವಿರೋಧಿಗಳಲ್ಲ. ನೀವಂದುಕೊಂಡಿರೋ ತರ ನಮಗೆ ಬೇರೆ ಭಾಷೇನೂ ಬರಲ್ಲ.
   -ರಾವ್

   ಪ್ರತಿಕ್ರಿಯೆ
 21. ರವಿಮುರ್ನಾಡು,ಕ್ಯಾಮರೂನ್.

  ಅವಧಿ ಸಂಪಾದಕರಲ್ಲಿ ಮನವಿ.
  ಪ್ರತಿಕ್ರಿಯೆ ಕೊಡುವವರ ಹೆಸರು,ಇ-ಮೇಲ್ ವಿಳಾಸ ಮತ್ತು ವೆಬ್ ಸೈಟ್ ದಾಖಲಿಸುವುದರ ಜೊತೆಗೆ ಪ್ರತಿಕ್ರಿಯೇದಾರರ ದೂರವಾಣಿ ಸಂಖ್ಯೆ ಒಕ್ಕಣಿಸಿದಲ್ಲಿ ಮಾತ್ರ ಪ್ರತಿಕ್ರಿಯೆಗೆ ಅನುಮೋದನೆ ಕೊಡಬೇಕಾಗಿ ವಿನಂತಿ.
  ದೂರವಾಣಿ ಸಂಖ್ಯೆ ಮತ್ತು ತಮ್ಮ ಊರಿನ ಹೆಸರು ನಮೂದಿಸದ ಯಾವುದೇ ಪ್ರತಿಕ್ರಿಯೆಗೆ ಅವಕಾಶ ಕೊಡಬೇಡಿ.ಸಾಧ್ಯವಾದರೆ ಕ೦ಪ್ಯೂಟರ್ IP ವಿಳಾಸ ಸ್ವಯಂ ಚಾಲಿತವಾಗಿ ದಾಖಲಾಗುವ ತ೦ತ್ರಜ್ಜಾನದ ವಿನ್ಯಾಸವನ್ನು ಅಭಿವೃದ್ಧಿಗೊಳಿಸಬೇಕಾಗಿ ವಿನಂತಿ.

  ಪ್ರತಿಕ್ರಿಯೆ
 22. ಗಿರೀಶ್

  ಮೇಲೆ ಯಾರೋ ಮಹಾನುಬವರು ಹೇಳಿದ್ರು “ಮಾಲ್ಗುಡಿ ಡೇಸ್ “” ಹಿಂದಿಯಲ್ಲೇ ಬಂದಿದೆ ಅದನ್ನೇ ನೋಡಿ ಸಂತೋಷ ಪಡಿ ಅಂತ
  ಸಾರ್ ತಮಗೇನೂ ಹಿಂದಿ ಲೀಲಾ ಜಾಲವಾಗಿ ಬರುತ್ತೆ ಅನ್ಸುತ್ತೆ ಅದಕ್ಕೆ ಮಾಲ್ಗುಡಿ ದಿನಗಳನ್ನು ಹಿಂದಿಯಲ್ಲೇ ನೋಡಿ ಸಂತೋಷ ಪಟ್ಟಿದೀರ. ನನ್ನಂತ ಸಾಮಾನ್ಯ ಕನ್ನಡಿಗ ಏನು ಮಾಡಬೇಕು, ನಾನು ಹಿಂದಿ ಕಲಿತುಕೊಂಡೇ ನೋಡಬೇಕ? ನಾನೇನೋ ಕಲಿಯುತ್ತೇನೆ ವಯಸ್ಸಿದೆ. ಆದರೆ ನನ್ನ ಅಜ್ಜ ಅಜ್ಜಿ ಗು ನಾನು ಹಿಂದಿ/ಇಂಗ್ಲಿಷ್ ಕಲಿತುಕೊಳ್ಳಿ ಪ್ರಪಚ ಜ್ಞಾನ ಪಡಿಯಲಿಕ್ಕೆ ಅಂತ ಹೇಳಬೇಕ? ಜಗತ್ತಿನ ಎಲ್ಲ ಅತ್ಯುಥಮವಾದದ್ದು ಕನ್ನಡಕ್ಕೆ ಬರಲಿ ಬಿಡಿ ಸಾರ್. ಅವರವರಿಗೆ ಇಷ್ಟ ವಾದದನ್ನು ಅರ್ಥವಾಗೋ/ಮಾತ್ರು ಭಾಷೆಯಲ್ಲಿ ನೋಡಿ ಅನಂದಿಸಲಿ. ಈ globalization ನಲ್ಲಿ ಯಾವುದನ್ನು ಯಾರು ರಕ್ತ ಚೆಲ್ಲಿಬಿಟ್ಟು, ಬೀದಿಗೆ ಬಂದು, ಮುಗಿಸಿಬಿಡ್ತ್ಹೆವೆ ಎಂದು ಹೇಳಿ ತಡೆ ಹಿಡಿಯೋಕಗಲ್ಲ. ಕಾಲಕ್ಕೆ ತಕ್ಕಂತೆ ಕುಣಿಯಬೇಕು.
  ಗಿರೀಶ್

  ಪ್ರತಿಕ್ರಿಯೆ
 23. Arun

  ಮೊಬೈಲ್ ಪೋನ್ ಬಂದಂದಿನಿಂದ STD ಬೂತ್ ಬಳಸುವ ಜನರ ಸಂಕ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಹೀಗೆ STD ಬೂತ್ ನಡೆಸುತ್ತಿದ್ದವರು ಹೆಚ್ಚಿನವರು ಅಂಗವಿಕಲರು ಅವರ್ಯಾರು ಮೊಬೈಲ್ ಪೋನ್ ಬ್ಯಾನ್ ಮಾಡಿ ಇಲ್ಲವಾದರೆ ನಮ್ಮ ಕುಟುಂಬ ಬೀದಿಗೆ ಬೀಳುತ್ತೆ ಅಂತ ಹೇಳಲಿಲ್ಲ. ಅತವಾ ಮೊಬೈಲ್ ಕೊಳ್ಳುವವರಿಗೆ ಮಾನವೀಯತೆ ಇಲ್ಲ ಅಂತ ಹೇಳಲಿಲ್ಲ.

  ಪ್ರತಿಕ್ರಿಯೆ
 24. Amar

  ಪ್ರೀತಿಯ ಲಕ್ಷ್ಮೀಶ ಅವರೇ,
  ನೀವು ಕನ್ನಡ ಎಂ.ಎ ಮಾಡಿ ಇವತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತೀದ್ದೀರಿ. ಸಂತೋಷ. ನಿಮ್ಮ ತಿಂಗಳ ಆದಾಯ ಕೇವಲ ೩೫೦೦ ಅಂತ ಕೇಳಿ ಬಹಳ ಬೇಸರವಾಯಿತು. ನೀವು ಚಿತ್ರರಂಗದಲ್ಲಿ ಬರೀ Passion ಗೋಸ್ಕರ ಕೆಲಸ ಮಾಡುತ್ತಿದ್ದರೆ, ನಿಮ್ಮ ಸಂಬಳದ ಬಗ್ಗೆ ನಿಮಗೆ ಬೇಸರವಿರಬಾರದು. ದುಡಿಮೆಗೋಸ್ಕರ ನೀವು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೆ, ಬಹುಶ ನೀವು ಇರುವ ಸ್ಥಳವೇ ಸರಿಯಾದದ್ದಲ್ಲ. ಕನ್ನಡದಲ್ಲಿ ಎಂ.ಎ ಪಡೆದ ನೀವು ಶಾಲೆಯಲ್ಲೋ ಅಥವಾ ಕಾಲೇಜಿನಲ್ಲೋ ಶಿಕ್ಷಕರಾಗಿರಬೇಕಿತ್ತು.ಆಗ ನಿಮಗೆ ಸುಮಾರು ೮೦೦೦-೧೦೦೦೦ ಅಷ್ಟು ಸಂಬಳ ಬರುತಿತ್ತು. ಇರಲಿ ಅದು ನಿಮ್ಮ ವಯಕ್ತಿಕ ವಿಚಾರ.
  ನಿಮ್ಮ ಮಾತಿನಲ್ಲಿ ಬಹಳ ಕೀಳರಿಮೆ ಇದೆ. ಮೊದಲಿಗೆ ಪರಭಾಷೆಯ ಸರಕು ಕನ್ನಡದಕ್ಕೆ ಡಬ್ ಆದ್ರೆ, ಕನ್ನಡದಲ್ಲಿ ಸ್ವಂತವೆಲ್ಲವೂ ನಿಂತುಹೋಗುತ್ತದೆ ಅನ್ನುವ ಭ್ರಮೆಯಿಂದ ಹೊರಗೆ ಬನ್ನಿ. ನಿಮ್ಮ ಮಾತಿನುದ್ದಕ್ಕೂ ಇತರರನ್ನು ನಿಂದಿಸುವ ಧಾಟಿಯೇ ಇದೆ. ಸ್ಪರ್ದಿಸಲು ನಿಮಗೆ ತಾಕತ್ತಿಲ್ಲವೇ? ಅದ್ಯಾಕೆ ಅಷ್ಟೊಂದು ಅಂಜಿಕೆ? ಡಬ್ಬಿಂಗ್ ಬಂದ ಮಾತ್ರಕ್ಕೆ ಎಲ್ಲವೂ ಕೊಚ್ಚಿಹೋಗುತ್ತದೆ, ಕಾರ್ಮಿಕರ ಕೆಲಸ ಹೋಗುತ್ತೆ ಅನ್ನೋ ಭ್ರಮೆಯಿಂದ ಹೊರಗೆ ಬನ್ನಿ. ಅದನೆಲ್ಲಾ ಮಾರುಕಟ್ಟೆ ತೀರ್ಮಾನ ಮಾಡುತ್ತದೆ. ಸರಾಯಿ, ಲಾಟರಿ ಟಿಕೆಟ್ಟು ನಿಷೇಧ ಆದಮೇಲೆ ಲಕ್ಷಾಂತರ ಜನಕ್ಕೆ ಕೆಲಸ ಹೋಯಿತು. ಆದರೆ ಅವರೇನ್ ಪ್ರಾಣ ಕಳೆದುಕೊಂಡಿಲ್ಲ.
  ಸಮಾಜವನ್ನು ನೋಡುವ ರೀತಿಯನ್ನೇ ನೀವು ಬದಲಿಸಿಕೊಳ್ಳಬೇಕು. ಡಬ್ಬಿಂಗ್ ಬೇಡ ಅಂತ ನಿಮ್ಮ ಚಿತ್ರರಂಗದಲ್ಲಿ ನಿಮಗೆ ಗಿಣಿ ಪಾಠ ಮಾಡಿರುವ ದಿಗ್ಗಜರು ಇಂಪೋರ್ಟೆಡ್ ಕಾರುಗಳನ್ನು ಇಟ್ಟುಕೊಂಡು ಝಂ ಅಂತಿದ್ದಾರೆ. ನೀವು ಅವರುಗಳ ಮಾತಿಗೆ ಮರುಳಾಗಿ ಭಾವನಾತ್ಮಕವಾಗಿ ಮಾತನಾಡುತ್ತೀದ್ದೀರಿ.

  ಪ್ರತಿಕ್ರಿಯೆ
 25. Ramesh Rao

  ಹೊಟ್ಟೇಪಾಡು ಅಂತಾರೆ, ಸಂಸ್ಕೃತಿ ಅಂತಾರೆ, ಲಿಪ್ ಸಿಂಕ್ ಅಂತಾರೆ, ಅಪಬ್ರಂಶ ಅಂತ್ಲು ಅಂತಾರೆ ಆಮೇಲೆ ಮುಂದುವರಿದು ಒಳ್ಳೇ ಮಾತಿನಲ್ಲಿ ಹೇಳಿದರೆ ಕೇಳ್ಬೇಕಪ್ಪ ಅಂತಾರೆ ಕೊನೇಗೆ ತೊಡೆ ತಟ್ಟಿ ಬನ್ನಿ ಒಂದ್ ಕೈ ನೋಡ್ಕೊತಿವಿ ಅಂತಾರೆ.
  ಹೊಟ್ಟೇಪಾಡಿಗೆ; ಟೆಲಿಫೋನ್ ಭೂತ್ ಎತ್ತುಗೆ ಕೊಟ್ಟರೆ, ಸಂಸ್ಕೃತಿ.
  ಸಂಸ್ಕೃತಿಗೆ; ರವಿಕೆಯಲ್ಲಿ ಮೀನು, ಹೊಕ್ಕಳಿಗೆ ದ್ರಾಕ್ಷಿ ಎತ್ತುಗೆ ಕೊಟ್ಟರೆ ಲಿಪ್ ಸಿಂಕ್.
  ಲಿಪ್ ಸಿಂಕ್ ಗೆ; ಕನ್ನಡದಲ್ಲಿ ಬಹುತೇಕ ನಟಿಯರು, ವಿಲನ್ ಗಳು ಹೊರಗಿನವರು ಅವರಿಗೆ ಲಿಪ್ ಸಿಂಕ್ ಆಗುತ್ತೆ ಆದರೆ ಡಬ್ ಆದ್ರೆ ಆಗೋಲ್ವಾ? ಅಂದರೇ ಅಪಬ್ರಂಶ.
  ಅಪಬ್ರಂಶ ಕ್ಕೆ; ಜನರ ಮುಂದಿಡಿ ಅವರೆ ನಿರ್ದರಿಸ್ತಾರೆ ಅಂದರೆ ಬೀದಿಗೆ ಬನ್ನಿ ನೋಡ್ಕೊತಿವಿ ಅಂತಾರೆ.
  ಮುಂದಿನದೇನೋ?

  ಪ್ರತಿಕ್ರಿಯೆ
 26. jagadeesha dasappa

  ಕನ್ನಡ ಭಾಷೆಯ ದೊಡ್ಡ ದುರಂತ ಅಂದರೆ ಕೆಲವು ವ್ಯಕ್ತಿಗಳು ಭಾಷೆಯನ್ನು ಗುತ್ತಿಗೆ ತೆಗೆದು ಕೊಂಡಿರುವುದು. ನಾವು ಏನು ನೋಡಬೇಕು ಅಂತ ಅವರಿಂದ ಹೇಳಿಸಿಕೊಳ್ಳ ಬೇಕಾಗಿರೋದು. ಕನ್ನಡ ನ ಇವರು ಉದ್ದಾರ ಮಾಡೋಲ್ಲ. ಮೊದಲು ಭಾಷೆ ಮೇಲೆ ಪ್ರೀತಿಯಿಂದ ಇತ್ತ ಗಮನ ಹರಿಸಲಿ ಅದು ಬಿಟ್ಟು ಬೇರೆ ಕಾರಣ ಹೇಳಬೇಡಿ. ಡಬ್ಬಿಂಗ್ ಗೆ ಅವಕಾಶ ಕೊಡಲಿ ನಂತರ ನಿಮ್ಮ ಸಮಸೈ ಯನ್ನು ಅಳಿಸೋಣ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: