ಮಿಸ್ ಆಗೋಯ್ತು 'ಆ ಭಾನುವಾರ'

ಭಾನುವಾರದ ಆ ಸಿನಿಮಾ

ಬೀನಾ ಮನೋಹರ ನಾಯಕ
ಹೊಸ್ಕೇರಿ.

ಇತ್ತೀಚೆಗೆ ಚಿತ್ರ ಬಿಡುಗಡೆಯಗುತ್ತಿರುವಾಗಲೇ ಯಾವುದೋ ಒಂದು ರೀತಿಯಲ್ಲಿ ಎಲ್ಲರ ಕೈ ಸೇರುತ್ತದೆ. ಹೀಗೆ ಸಿಕ್ಕ `ಪಿಂಕ್’ ಮತ್ತು ‘ಎಂ.ಎಸ್.ಧೋನಿ: The untold story’ ಎರಡೂ ಚಿತ್ರವನ್ನು ಮೊನ್ನೆ ಶನಿವಾರ ನೋಡಿದೆ. ಆದರೂ ಮನಸಿಗೇಕೋ ಸಮಾಧಾನ ಮನರಂಜನೆ ಸಿಗಲೇ ಇಲ್ಲ.

ನಾವು ಚಿಕ್ಕವರಿರುವಾಗ 1-2 ನೇ ಕ್ಲಾಸ್ ಗೆ ಹೋಗುವಾಗ ವಾರಕ್ಕೆ ಒಂದೇ ಸಿನಿಮಾ ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದದ್ದನ್ನು ನೋಡಲು ಹಿಂದಿನ ದಿನವಾದ ಶನಿವಾರದಂದೇ ತಯಾರಿ ನಡೆಯುತ್ತಿತ್ತು. ಶನಿವಾರದಂದು ಹೋಂ dooradarshanವರ್ಕ್ ಮುಗಿಸದಿದ್ದರೆ ನಾಳೆ ಫಿಲ್ಮ್ ನೋಡಲು ಬಿಡುವುದಿಲ್ಲವೆಂದು ಅರ್ಧ ದಿನ ರಜೆಯಲ್ಲೇ ಹೋಂ ವರ್ಕ್ ಮುಗಿಸಿಬಿಡುತ್ತಿದ್ದೆವು.

ರವಿವಾರ ಬೆಳಿಗ್ಗೆ ಶಿರಸಿಯಲ್ಲಿ ನಾವು ವಾಸವಿದ್ದ ಮನೆಯ ಓಣಿಯ ಅಕ್ಕ ಪಕ್ಕದ ಮಕ್ಕಳೊಂದಿಗೆ ಆಟವಾಡಿ, ಚಿಕನ್ ಸಾರಿನಲ್ಲಿ ಊಟ ಮಾಡಿ ಮಧ್ಯಾನ್ಹ ನಿದ್ರೆ ಮಾಡಿ, ಸರಿಯಾಗಿ 4 ಗಂಟೆಗೆ ಎದ್ದು ಅಮ್ಮ ಮಾಡಿಕೊಡುತ್ತಿದ್ದ Complan ಕುಡಿಯುತ್ತಾ (ಲೆಕ್ಕ ಮಾಡಿ 5 ft ಗೆ ಒಂದು ಸೆಂ.ಮೀ ಕೂಡ ಹೆಚ್ಚಿರದ ನಾನು `I am a complan girl’ ಎಂದು ಹೇಳಿದರೆ ತುಂಬಾ ಜನ Complan ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳಬಹುದು.)

ಮನೆ ಜನರೆಲ್ಲಾ ಒಟ್ಟಾಗಿ ಕುಳಿತು, ಮಧ್ಯೆ-ಮಧ್ಯೆ ಅಮ್ಮ ದೋಸೆ ಹಿಟ್ಟನ್ನು ಮಿಕ್ಸರ್ ಗೆ ಹಾಕುತ್ತಾ ನೋಡುತ್ತಿದ್ದ, ಬಿಡುಗಡೆಯಾಗಿ ಕನಿಷ್ಟ 5 ವರ್ಷ ಕಳೆದಿರುತ್ತಿದ್ದ ಆ ಸಿನಿಮಾ ಕೊಡುತ್ತಿದ್ದ ಮನೋರಂಜನೆ, ಇಂದು ಬಿಡುಗಡೆಯಾಗಿ 10-20 ದಿನಗಳು ಕಳೆದಿರುವ ಚಿತ್ರ ನೋಡುತ್ತಿರುವಾಗಲೂ ಸಿಗದಿರುವದೇ ಮನರಂಜನೆಯ ಬದಲು ದುಖಃದ ವಿಷಯ.

ಬದಲಾಗಿ ಅಗ ಚಿಕ್ಕವರಿರುವಾಗ ಕೇವಲ ಮನೋರಂಜನೆಗಾಗಿ ಸಿನಿಮಾ ನೋಡುತ್ತಿದ್ದು, ಈಗ ನೋಡಿದ ಸಿನಿಮಾವನ್ನೂ ತಾರ್ಕಿಕವಾಗಿ ನೋಡುತ್ತಾ ರಿಯಾಲಿಟಿ ಹುಡುಕುತ್ತಿರುವದರಿಂದಲೋ ಎನೋ ಅಷ್ಟು ಸಮಾಧಾನ ಸಿಗುತ್ತಿಲ್ಲದಿರಬಹುದು.

ಉದಾಹರಣೆಗೆ `ಎಂ.ಎಸ್.ಧೋನಿ’ ಸಿನಿಮಾ ಧೋನಿಯ ನಿಜ ಜೀವನದ ಚಿತ್ರವೆಂದಿರುವದರಿಂದ ಅದರ ಬಗ್ಗೆ ವಿಶ್ಲೇಷಣೆ ಅವರ followers ಗೆ ಇಷ್ಟವಾಗದಿರಬಹುದಾದ್ದರಿಂದ ಕಷ್ಟ ಪಟ್ಟರೆ ಜೀವನದಲ್ಲಿ ಮುಂದೆ ಬರಬಹುದೆನ್ನುವ ಒಂದು ಉತ್ತಮ ಅಂಶವನ್ನು ತೆಗೆದುಕೊಂಡು ಅದನ್ನು ಬಿಟ್ಟು ಬಿಡೋಣ.

doordarshan2ಆದರೆ ಆ ಪಿಂಕ್ ಸಿನಿಮಾದಲ್ಲಿ ಹೆಣ್ಣು ಮಕ್ಕಳು ಹೇಗೆ ಸ್ಟ್ರಾಂಗ್ ಆಗಿ ಕುಟುಂಬದವರನ್ನೂ ತಮ್ಮ ಸಮಸ್ಯೆಯಿಂದ ದೂರವಿಟ್ಟು ಬಂದ ಸಮಸ್ಯೆಯನ್ನು ಎದುರಿಸಿದರು ಎಂಬ ಒಂದು ಒಳ್ಳೆಯ ವಿಚಾರವನ್ನು ತೋರಿಸಿದ್ದಾರೆ ಎನ್ನುವದನ್ನು ಬಿಟ್ಟರೆ, ಹುಡುಗರು ಡ್ರಿಂಕ್ಸ್ ಮಾಡುವದನ್ನು ಸಮಾಜ ಒಪ್ಪಿಕೊಂಡಿದೆ ಆದರೆ ಹುಡುಗಿಯರು ಮಾಡುವದನ್ನು ಇಲ್ಲ ಎಂದು ಅಮಿತಾಬ್ ಬಚ್ಚನ್ ಚಿತ್ರದಲ್ಲಿ ಕೋರ್ಟ್ ನಲ್ಲಿ ವಾದಿಸುವ ರೀತಿ ಹುಡುಗಿಯರೂ ಡ್ರಿಂಕ್ಸ್ ಮಾಡುವದನ್ನು ಸಮಾಜ ಒಪ್ಪಿಕೊಳ್ಳಲಿ ಎಂದು ಹೇಳಿದ್ದಾರೋ? ಅಥವಾ ಇಬ್ಬರೂ ಡ್ರಿಂಕ್ಸ್ ತೆಗೆದುಕೊಳ್ಳುವದು ತಪ್ಪು ಎಂದು ಹೇಳಿದ್ದಾರೋ? ಎನ್ನುವುವದೇ ಅರ್ಥವಾಗದ ವಿಷಯ.

ಹೀಗೆ ಅನೇಕ ದ್ವಂದ್ವಾರ್ಥಗಳಿಂದ ಕೂಡಿದ ಸಿನಿಮಾಗಳೇ ಬರುವದರಿಂದಲೋ? ಅಥವಾ ಮೊದಲಿನ ರೀತಿ ಸಿನಿಮಾವನ್ನು ಸಿನಿಮಾ ತರಹ ನೋಡಿ `ವಾವ್’ ಎನ್ನದಿರುವದರಿಂದಲೋ ಏನೋ? ಭಾನುವಾರದಂದು ಮಾತ್ರ ಪ್ರಸಾರವಾಗುತ್ತಿದ್ದ ಆ ಸಿನಿಮಾ ನೀಡುತ್ತಿದ್ದ ಸಮಾಧಾನ ಮನರಂಜನೆ ಮಿಸ್ ಮಾಡಿಕೊಳ್ಳುತ್ತಿರುವದಂತೂ ಸತ್ಯ.

‍ಲೇಖಕರು Admin

October 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಂದಿನ ‘ಅಮ್ಮ’…

ಇಂದಿನ ‘ಅಮ್ಮ’…

ಇಂದು ಕಲಬುರ್ಗಿಯ ಸೇಡಂ ನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಗೌರವ ಪ್ರಶಸ್ತಿ ಹಾಗೂ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತಿದೆ. ಈ...

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: