ಮಿ೦ಚು ಕಥೆಗಳು

ಹೆಸರಿಲ್ಲದಚಿಕ್ಕಚಿಕ್ಕ ಕಥೆಗಳು – ಸಿ. ವಿ. ಶೇಷಾದ್ರಿಹೊಳವನಹಳ್ಳಿ ೧ ಶೆಟ್ಟಿಕೆರೆಯ ಶೆಟ್ಟಿ ಪಟ್ಟಣದಿಂದ ಹಳ್ಳಿಗೆ ಹೊರಟಿದ್ದ. ಬುರುಡೆ ಬಾಣಲೆಯಾಗುವಂಥ ಬಿಸಿಲು. ಅಲ್ಲೊಂದು ಹಳೆ ಕಾಲದ ಮಂಟಪ. ಅಲ್ಲಿ ಮಲಗಿದ. ತಲೆ ಕೆಳಗೆ ಮೂಟೆ ಅವನ ತಲೆಯ ವಾಸನೆ, ಭಾರ ಹೊತ್ತುಚಿತ್ರ  ಹಿಂಸೆ ಅನುಭವಿಸುತಿತ್ತು. ಅದರಲ್ಲಿದ್ದ ಬೇಳೆ ಕಾಳುಗಳು, ಚಕ್ಕೆ, ಲವಂಗ, ದಾಲ್ಚಿನ್ನಿಗಳು ಅವನ ತಲೆಯ ಕೊಳೆಯನ್ನೇ ಗೊಬ್ಬರವೆಂದೂ ಮೂಟೆಯನ್ನೆ ಮಣ್ಣೆಂದೂ ತಳಿದು ಚಿಗುರೋಣವೇ? ಎಂದು ಪರಸ್ಪರ ಕೇಳಿಕೊಂಡವು. ಇದ್ದಕ್ಕಿದ್ದಂತೆಎಲ್ಲಿಂದಲೋಒಂದು ಹಾವು ಬಂದು ಮೂಟೆಯೊಳಗೆ ತೂರಿ ಮೊಟ್ಟೆಯಿಟ್ಟು ಹೊರಟು ಹೋಯ್ತು. ಶೆಟ್ಟಿಯ ಹೊರಳಾಟಕ್ಕೆ ಮೊಟ್ಟೆ ಒಡೆದು ರಸವೆಲ್ಲ ಸಿಡಿದು ಹನಿ ಹನಿಯಾಗಿ ಹನಿಯೆಲ್ಲ ಒಡೆದು ಕಾಣದ ಬಿಂದುಗಳಾಗಿ ಕಾಳು ಕಾಳುಗಳ ಕಾಯದೊಳಗೆ ,ಚಕ್ಕೆಯ ಪಕ್ಕೆಯೊಳಗೆ , ಲವಂಗದ ಲಂಗದೊಳಗೆ ತೂರಿದವು. ಶೆಟ್ಟಿಅಂಗಡಿಯಲ್ಲಿ ಈಗ ಅವನ್ನೆಲ್ಲ ಮಾರುವುದಕ್ಕಿಟ್ಟ. ಅಂಗಡಿತುಂಬ ಧವಸ ಧಾನ್ಯಗಳಲ್ಲಿ ಮರಿ ಮರಿ ಹಾವುಗಳು ಹರಿದಾಡುತ್ತಿದ್ದವು. ಆದರೆ ಕಣ್ಣಿಗೆ ಕಾಣುತ್ತಿರಲಿಲ್ಲ. ಜನ ಬಂದರು. ಕೊಂಡರು. ಉಂಡರು. ಏನಾಶ್ಚರ್ಯ! ಪ್ರತಿಯೊಬ್ಬನೂ ಹಾವು.  ಪ್ರತಿಯೊಬ್ಬನಿಗೂ ಹೆಡೆ , ಬಾಲ. ಪ್ರತಿಯೊಬ್ಬನೂ ಹುಡುಕುತ್ತಿದ್ದಾನೆ ಬಿಲ. ೨. ಸುಡುವ ಟಾರು ರಸ್ತೆ ಮೇಲೆ , ರಸ್ತೆಗಳ ಪಕ್ಕದ ಬೆಟ್ಟಗಳ ಬಂಡೆಗಳ ಮೇಲೆ, ವಿದ್ಯಾಥರ್ಿ ನಿಲಯಗಳ ಕಾಂಪೌಂಡ್ಗಳ ಮೇಲೆ, ಸಕರ್ಾರಿ ಕಟ್ಟಡಗಳ ಮೇಲೆ, ಬರಲಿದೆ..ಬರಲಿದೆಆ ಮಹಾ ಪುರುಷನ ಯುಗ , ಈ ಮಹಾ ಪುರುಷನ ಯುಗಎಂದು ಬರೆಯುತ್ತ ಹೊರಟಿತು ದಂಡೊಂದು. ಎಲ್ಲರೂ ಹಸಿದಿದ್ದರು.ನಾಯಕರುಗಡದ್ದಾಗಿಉಂಡು ಬಂದಿದ್ದರು. ಮಳೆಗಾಲ, ಚಳಿಗಾಲ ಬಂದು ಹೋಗಿ ಬೇಸಿಗೆ ಬಂದಿದೆ.ರಸ್ತೆಗಳಲ್ಲಿ ಟಾರು, ಬೆಟ್ಟಗಳಲ್ಲಿ ಬಂಡೆಗಳು, ವಿದ್ಯಾಥರ್ಿ ನಿಲಯಗಳ ಕಾಂಪೌಂಡ್ಗಳ ಹಾಗೂ ಸಕರ್ಾರಿ ಕಟ್ಟಡಗಳ ಗೋಡೆಗಳು ಹಾಗೇ ಇವೆ. ಬರಹಕಾಣುತ್ತಿಲ್ಲ.   ಅಂದಿನ ಮೆರವಣಿಗೆಯ ನಾಯಕ ಶಿರೋಮಣಿಗಳು ತಲೆ ತಪ್ಪಿಸಿಕೊಂಡಿದ್ದಾರೆ ವಿಧಾನ ಸೌಧದೊಳಗೆ.ಅನುಯಾಯಿಗಳು ಏನಾದರು?ಒಂದೇ ಹುಡುಗಿಯನ್ನು ಪ್ರೀತಿಸಿ ಹೊಡೆದಾಡಿ ಕೆಲವರುಜೈಲು ಸೇರಿದರು.(ಹುಡುಗಿಗೆ ಈಗ ಬೇರೊಬ್ಬ ನೊಡನೆ ಮದುವೆಯಾಗಿದೆ.) ಭಂಗಿ,  ಗಾಂಜಾ, ಬ್ರೌನ್ ಶುಗರ್,  ಪಾನ್ಪರಾಗ್ಗಳ ಮನೆಯನ್ನು ಕೆಲವರು ಕಾವಲು ಕಾಯಲು ಹೋದರು. ಕೆಲವರು ಬೇರೆ ಬೇರೆ ಟಾಕೀಸುಗಳಲ್ಲಿ ಗೇಟ್ಕೀಪರಾದರು. ಬರಹ ಪೂತರ್ಿ ಅಳಿಸಿಹೋಗಿದೆ.  ]]>

‍ಲೇಖಕರು G

July 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This