ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರೀನಲ್ಲೂ ಹೀಗೆ. ಪಾದ್ರಿಯೊಬ್ಬ ಸೈಕಲ್ ತಂದು ಅದನ್ನ ತುಳಿಯೋದು ಪ್ರಾಕ್ಟಿಸ್ ಮಾಡ್ತಾ ಇರ್ತಾನೆ. ಯಾಕೋ ಒಂದ್ಸಲ ಹಿಂದೆ ತಿರುಗಿ ನೋಡಿದರೆ ಇಡೀ ಊರಿಗೆ ಊರೇ ಇವನ ‘ಬೀಸೇ ಕಲ್ಲು’ ನೋಡೋದಿಕ್ಕೆ ಮುತ್ತಿಕೊಂಡಿದೆ. ಎಲ್ಲಾ ಕಣ್ಣು ಬಾಯಿ ಬಿಟ್ಕೊಂಡು ‘ಬೀಸೇ ಕಲ್ಲು’ ನೋಡ್ತಿದ್ದಾರೆ. ನಾವೂ ಅಷ್ಟೇ. ಬಿಟ್ಟ ಕಣ್ಣು ಬಿಟ್ಟ ಹಾಗೆ ಈ ಟೆಲಿವಿಷನ್ ಅನ್ನೋ ಜಾದೂಗಾರನ್ನ ನೋಡ್ತಾ ಇದ್ವಿ. ‘ಮಲ್ಲಮ್ಮನ ಪವಾಡ’ ಅಂತ ಒಂದು ಸಿನೆಮಾ ಬಂದಿತ್ತು. ಅದೇ ನಾನು ನೋಡಿದ ಫಸ್ಟ್ ಸಿನೆಮಾ. ಆದ್ರೆ ಈಗ ಅದಕ್ಕಿಂತ ಡಬ್ಬಲ್ ಆಶ್ಚರ್ಯ ಆಗಿತ್ತು. ಯಾಕಂದ್ರೆ ಈಗ ನಮಗೆ ಗೊತ್ತಿರೋರೆಲ್ಲಾ ಸ್ಕ್ರೀನ್ ಮೇಲೆ ಇದಾರೆ. ಜಿ ಆರ್ ವಿಶ್ವನಾಥ್ ಅಂದ್ರೆ ರಾಜಾಜಿನಗರದವರಿಗೆ ನಮ್ಮನೆ ಹುಡುಗ ಅನ್ನೋಷ್ಟು ಸಲೀಸು. ಯಾಕಂದ್ರೆ ಅವ್ರ ಮನೆನೂ ರಾಜಾಜಿನಗರದಲ್ಲಿತ್ತು. ಈಗ ಇದೇ ಜಿ ಆರ್ ವಿಶ್ವನಾಥ್, ನಮ್ಮ ಮುಂದೆ ಓಡಾಡೋ ವಿಶ್ವನಾಥ್ ಸ್ಕ್ರೀನ್ ಮೇಲೆ ಬ್ಯಾಟ್ ಬೀಸ್ಕೊಂಡು..!. ‘ಶಿವ ಶಿವಾ ಇದೆನಾಶ್ಚರ್ಯವೋ, ಈ ಧರೆಯೊಳ್…’ ಅನ್ನೋ ಕಂಪನಿ ನಾಟಕದ ಹಾಡು ಎದ್ದೆದ್ದು ಬರ್ತಿತ್ತು..
ತೆರೆ ಮೇಲೆ ಬರೋದೆಲ್ಲಾ ಸಿನಿಮಾನೇ, ತೆರೆ ಮೇಲೆ ಬರೋರೆಲ್ಲಾ ರಾಜ್ ಕುಮಾರೇ ಅನ್ಕೊಂಡಿದ್ದ ನಾವು ಈಗ ಕಣ್ಣು ಮಿಟುಕಿಸದೆ ಕೊತಿದ್ವಿ. ಅಷ್ಟೇ ಆಶ್ಚರ್ಯ ಮತ್ತೆ ಆಗಿದ್ದು ಅದೇ ದೂರದರ್ಶನದಿಂದ. ಇಂದಿರಾ ಗಾಂಧಿ ಏಷ್ಯನ್ ಗೇಮ್ಸ್ ತರ್ಸಿ ಡೆಲ್ಲೀನಲ್ಲಿ ಕೂರ್ಸಿದ್ರಲ್ಲಾ.. ದೇಶಕ್ಕೆ ದೇಶಾನೇ ಬದಲಾಗಿ ಹೋಯ್ತು. ಏಷ್ಯನ್ ಗೇಮ್ಸ್ ನಲ್ಲಿ ಯಾರು ಗೆದ್ರು, ಯಾರ್ ಸೋತ್ರು ಅಂತ ಲೆಕ್ಕ ಇಟ್ಟೋರು ಯಾರು. ಆದ್ರೆ ಕಪ್ಪು ಬಿಳುಪು ಇದ್ದ ಟಿ ವಿ ಸಡನ್ನಾಗಿ ಕಲರ್ ಹಾಕ್ಕೊಂಡು ನಿಂತ್ಬಿಡ್ತು ..ಆಗ ‘ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ ಹೈ’ ಅಂತಾ ಕುಣಿಯೋದಿಕ್ಕೆ ಶುರು ಮಾಡಿದಾಗ ಅನಾರ್ಕಲಿ ಸಡನ್ನಾಗಿ ಒಂದು ರೀಲು ಕಲರ್ ಆಗೋಗ್ತಾಳಲ್ಲಾ ಹಾಗೆ ಆಗಿ ಹೋಗಿತ್ತು.
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ದೂರದರ್ಶನದ ಸವಿ ನೆನಪುಗಳನ್ನು..
ನೆನಪಿಸುತ್ತ ನಮ್ಮನ್ನೂ ಆ ಲೋಕಕ್ಕೆ ಕರೆದೊಯ್ದು ಬಿಟ್ಟಿದ್ದೀರಿ..
ಚಂದವಾದ ಲೇಖನ….
ಎಂದಿನಂತೆ….