‘ಮೀಡಿಯಾ ಮಿರ್ಚಿ’ಯಲ್ಲಿ ಬರಲಿರುವ ನಾಳೆ…

ಗಂಗೂಬಾಯಿ ಹಾನಗಲ್ ಇಲ್ಲವಾದ ಸುದ್ದಿ ಹೊತ್ತ ಪತ್ರಿಕೆಗಳನ್ನ ನೋಡ್ತಾ ಇದ್ರೆ ಒಂದು ವಿಷಯ ಸ್ಪಷ್ಟ ಆಗುತ್ತೆ. ನಾಳೆ ಏನಾಗುತ್ತೆ ಅನ್ನೋದನ್ನ ಮಾಧ್ಯಮಗಳು ಯೋಚಿಸಬೇಕು ಜೊತೆಗೆ ಅದನ್ನು ಹೇಗೆ ಮಂಡಿಸಬೇಕು ಅಂತ ಗೊತ್ತಿರಬೇಕು. ಮಾಹಿತಿ ಕೈನಲ್ಲಿದ್ದೂ ಹೇಗೆ ಪ್ರೆಸೆಂಟ್ ಮಾಡಬೇಕು ಅಂತ ಗೊತ್ತಿಲ್ಲದೆ ಹೋದರೆ ಪ್ರಜಾವಾಣಿ ಕವರೇಜ್ ಥರಾ ಆಗುತ್ತೆ. ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಬೆಸ್ಟ್ ಕವರೇಜ್ ನೀಡಿದೆ. ಪ್ರಜಾವಾಣಿ ಹಳೆಯ ಚೌಕಟ್ಟಿನಿಂದ ಹೊರ ಬರುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಉದಯವಾಣಿಯಂತೂ ಸಂಪೂರ್ಣ ನೆಲ ಕಚ್ಚಿದೆ. ಸಂಯುಕ್ತ ಕರ್ನಾಟಕ ಗಂಗಜ್ಜಿಯ ತವರ ಪತ್ರಿಕೆ. ಹಾಗಾಗಿಯೇ ನಿರೀಕ್ಷೆ ಇನ್ನೊ ಹೆಚ್ಚೇ ಇತ್ತು. ಆ ನಿರೀಕ್ಷೆ ಎತ್ತರ ತಲುಪಿಲ್ಲ. ಈ ಮಧ್ಯೆ DNA ಕನ್ನಡದ ಹೆಡ್ ಲೈನ್ ನೀಡಿ ವಾಹ್! ಎನ್ನುವಂತೆ ಮಾಡಿದೆ. ಪಕ್ಕಾ ಅಮೇರಿಕನ್ ಮಾರುಕಟ್ಟೆಯಲ್ಲಿನ ಕೊತ್ತಂಬರಿ ಸೊಪ್ಪಿನ ಹಾಗೆ…

ಪೂರ್ಣ ಓದಿಗೆ: ಮೀಡಿಯಾ ಮಿರ್ಚಿ

kannadaprabha udayavani

‍ಲೇಖಕರು avadhi

July 28, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

೧ ಪ್ರತಿಕ್ರಿಯೆ

 1. Berlinder

  ’ಸರಸ್ವತಿ ಗಂಗುದೇವಿ’ ಎಂದು ನೆನೆಸಿಕೊಳ್ಳಿ!
  – ಧರೆ ತೊರೆದ ’ಗಂಗೆ’- ಶಿರನಾಮದ ಬಗ್ಗೆ ವಿವೇಚನೆ.
  ಸಾಮಾನ್ಯವಾಗಿ ’ಗಂಗೆ’ ಮಹಾನದಿ ಗಂಗೆ-ಗೆ ಸಂಪರ್ಕ ತರುವುದು ಅಥವ ಸಂಬಂಧ ತೋರುವುದು.
  ಆ ಮಾತಿಗೆ ಶತಮಾನದ ಹಿಂದೆ ಅಥವ ಶತಮಾನಗಳಿಂದ ಪರಂಪರೆಯಾಗಿ ಬಂದ ದೃಢ ನಂಬಿಕೆ ಮತ್ತು ವಾಸ್ತವಾಂಶವಾಗಿಯೂ ಕೂಡ ಗಂಗಾಜಲದಲ್ಲಿ ರೋಗಗಳನ್ನು ವಾಸಿ ಮಾಡುವ ವಿಷೇಶ ಔಷದಿ ಗುಣ ಅರ್ಥಗರ್ಬಿತ ಮತ್ತು ಗಮನಾರ್ಹವಾದ ವಿಷಯವೂ ಆಗಿತ್ತು. ಅದು ಹಳೆಯ ಕಾಲದಲ್ಲಿ ಮಾತ್ರ. ಆ ಗಂಗಾಜಲದ ವಿಶೇಷ ಪ್ರಭಾವವನ್ನು ಪ್ರಾಚೀನ ಕಾಲದ ಧಾರ್ಮಿಕರು ಹಾಗೂ ಭೋದಕರೂ ಮತ್ತು ನವ ಕಾಲದ ಈಗಿನ ಕೆಲವು ಮೂಢ ಮತವಂತರು ಆ ನೀಗೂಢ ಜಲಗುಣವನ್ನು ಹಿಮಾಲಯದಲ್ಲಿ ವಾಸಿತರಾದ ದೇವರ ದಯೆಯಿಂದ ಆಶೀರ್ವಾದವಾಗಿ ಮತ್ತು ಪ್ರಾರ್ಥನೆಗಳ ಪ್ರತಿಫಲವಾಗಿ ವರವಾಗಿ ಕೊಟ್ಟಂತ ಭಾಗ್ಯ ಅದುಇದು ಹಾಗೆಲ್ಲ ಮೂಢ ಪ್ರಚಾರ ಮಾಡಿ ಜನರನ್ನು ಮೂರ್ಕ ಅಪನಂಬಿಕೆಗೆ ಪರಿವರ್ತಿಸಿದ ಪಲಿತಾಂಶವಾಗಿ ನಡೆದು ಬಂದ ವಾಡಿಕೆಯಾಗಿತ್ತು. ಆ ಗಂಗಾಜಲದಲ್ಲಿ ಹುದುಗಿದ್ದ ನಿಜವಾದ ತಾತ್ವಿಕ ಕಾರಣ ಮತ್ತು ನಿಗೂಢತೆ ಹೀಗಿತ್ತು. ಹಿಮಾಲಯ ಪರ್ವತಗಳ ಸರಾವಳಿಯ ಮೇಲಿಂದ ಹಿಮವು ಜಲವಾಗಿ ಇಳಿದು ಸಾವಿರಾರು ಮೈಲಿ ಹರಿದು ಸಾಗುವಾಗ ದಾರಿಯುದ್ದಕ್ಕೂ ನೂರಾರು ಭೌತವಸ್ತುಗಳ ಮೂಲಾಂಶಗಳನ್ನು ಸಂಗ್ರಹಿಸಿಕೊಂಡು ಕೆಳಕ್ಕಿಳಿದು ಬಂದಷ್ಟೂ ಆರೋಗ್ಯಕರವಾದ ಔಷದಿಗಳ ಮಹೋತ್ತರ ಗುಣ ಗಳಿಸಿತ್ತು. ಬೆಟ್ಟ ಪರ್ವತಗಳ ಮೇಲಿಂದ ಸರಿದು ಕೆಳಗರಿಯುವ ಪ್ರಪಂಚದ ಎಲ್ಲಾ ನದಿಗಳ ಜಲದಲ್ಲಿ ಮತ್ತು ಭೂತಳದಲ್ಲಿ ಹರಿದು ಹೊರಚಿಮ್ಮುವ ಜಲದಂತೆಯೂ ವಿವಿಧ ರೋಗನಿವಾರಣಕ ಪಾನವಾಗಿ ಕೋಟ್ಯಾಂತರ ಜನಕ್ಕೆ ಸಾಕ್ಷಾತ್ ದೈವಜಲದಂತೆಯೂ ಪ್ರಸಿದ್ಧವಾಗಿತ್ತು.
  ದುರಾದೃಷ್ಟವಾಗಿ ಮೂಢ ಮುಂದಾಳುಗಳ ಜಡತೆ ಮತ್ತು ದೂರದೃಷ್ಟಿ ಇಲ್ಲದ ಪರಿಶೋಧನೆಯ ಗುಣಹೀನತೆ ಮತ್ತು ಅಪನಂಬಿಕೆಗಳ ಪ್ರಭಾವದ ಸುರಕ್ಷಣೆಯ ಹಿಂದೆ ನಿಂತು ಕಾಲಾಂತರ ಕಾಲಕಳೆದು ನವ ವಿಜ್ಞಾನಗಳ ದೃಷ್ಟಿಕೋಣದಲ್ಲಿ ಪರಿಶೋಧನೆ ಮಾಡಿ ಪ್ರಕೃತಿಯಲ್ಲಿ ಬಚ್ಚಿದ್ದ ನಿಗೂಢತೆಯನ್ನು ಶೋಧಿಸಿ ಪತ್ತೆಮಾಡುವ ಜ್ಞಾನತತ್ಪರತೆಯ ಸೂನ್ಯತೆಗಳ ಕಾರಣವಾಗಿ ಕಾಲ ಹಾಳಾಯಿತು. ಪಲಿತಾಂಶವಾಗಿ ಗಂಗಾನದಿಯನ್ನೇ ತಪ್ಪು ಭಾವನೆಗಳಿಂದ ತಪ್ಪರ್ಥಮಾಡಿಕೊಂಡು ತಪ್ಪಗಿ ಬಳಸುತ್ತಾ ಬಂದು ಹಾಳುಮಾಡಿ ಇಡೀ ನದಿಯ ಜಲವನ್ನು ಕ್ರಿಮಿಕೀಟಗಳ ನೆಲೆಯಾಗಿ ಪರಿವರ್ತಿಸಿ ರೋಗಗಳ ಮೂಲೋದಯವಾಗಿ ಮಾಡಿಬಿಟ್ಟಿರುವರು. ಅದಕ್ಕೆ ಮುಖ್ಯ ಕಾರಣ ಅತ್ಯಂತ ಹೆಚ್ಚಿನ ಧಾರ್ಮಿಕ ಮೂಢನಂಬಿಕೆತುಂಬಿದ ದುರ್ನಂಬಿಕೆ – ಹೆಣಗಳನ್ನು ನಿದಿಯಲ್ಲಿ ಬಿಸಾಡಿ ತಿಂಗಳು ಗಟ್ಟಲೆ ಹಳಸಿ ಆರೋಗ್ಯಶೌರಿಗಳಾದ ಕ್ರಿಮಿಗಳು ವಿಷಕಣಗಳು ಬ್ಯಾಕ್ಟೀರಿಯಗಳಿಗು ಪ್ರಸವಿಸಿ ಕೋಟಿಕೋತ್ಯಾಂತರ ವೃದ್ಧಿಯಾಗಲು ಮೂಲಸ್ಥಾನವಾಗಿ ಈಗಿನ ಗಂಗಾನದಿಯ ಮುಖ್ಯ ದಡಗಳೆಲ್ಲಾ ನಿಜವಾಗಿ ವಿಷವತ್ತಾದ ರೋಗಪಾನಜಲವಾಗಿದೆ, ನೋಡಲು ಕೂಡ ಅಸಹ್ಯ ದೃಷ್ಟಿಯನ್ನು ಬೀರುತ್ತದೆ. ಅದರ ನವ ಸತ್ಯಾಂಶ ಅನೇಕ ಬಾರಿ ದೂರದರ್ಶಗಳಲ್ಲಿ ವಿಶ್ವವೆಲ್ಲಾ ಪ್ರಚಲಿತವಾಗಿದೆ. ಆ ದರ್ಶನಗಳನ್ನು ನೋಡಿದಾಗ ಅನ್ನಿಸುವ ಭಾವನೆ ಭಾರತದಲ್ಲಿ ಎಂಥಾ ಕಡುಮೂರ್ಕರಿರುವರು ಎಂದು ಮಾತ್ರ. ಎಂದು ಯಾವಾಗ ಅ ಜನರಿಗೆ ಜ್ಞಾನೋದಯವಾಗುವುದು ಎಂಬ ವಿಷ್ಮಯದ ಪ್ರಶ್ನೆ. ಪ್ರತಿದೇಶಗಳಲ್ಲಿ ಪ್ರಮುಕ ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ಶಾಸ್ತ್ರಜ್ಞರು ಕೂಡಿ ಮೂಢನಂಬಿಕೆಗಳನ್ನು ಅಳಿಸಿ ಪ್ರಕೃತ ವೈಜ್ಞಾನಿಕ ಲೌಕಿಕ ಜ್ಞಾನ ಹರಡಿ ಜನಕ್ಕೆ ತಿಳಿವಳಿಕೆ ತರುವರೆಂದು? ಮೂರ್ಖ ಧಾರ್ಮಿಕರಿಗೆ ಮೂತಿಕಟ್ಟಿ ಬೇಕಾದರೆ ಶಾಸನಗಳನ್ನು ಚಾಲಿಸಿ ಪ್ರಬುದ್ಧ ಅಭಿವೃದ್ಧಿಯ ಮಾರ್ಗ ತೋರಿ ತರುವರೆಂದು? ಈಗಲೇ ಆ ಗಂಗಾನದಿಯನ್ನು ಪರಿಶುದ್ಧಮಾಡಲು ನೂರಾರು ಬಿಲಿಯನ್ ರೂಪಾಯಿ ಬೇಕಾಗಬಹುದು. ಅಂತಹ ಯೋಜನೆ ಕಟ್ಟಕೊನೆಗೆ ಜಾರಿಗೆ ಬರುವುದೆಂದು?
  ಹಾಳಾಗಿ ಪಾಯಕಾನೆಯ ನೀರಿನಂತೆ ಅತ್ಯಂತ ಅಸಹ್ಯ ತರುವ ಈಗಿನ ಗಂಗಾನದಿಯ ದಡಗಳನ್ನು ವೀಕ್ಷಿಸಿದಾಗ ಮಹಾಮಹಿಮೆಯಾಗಿ ಬಾಳಿದ್ದ ಸರ್ವಜನರಿಗೆ ಮನೋಹರ ಗಾನಸಂತೃಪ್ತಿ ನೀಡಿ ದೈವಸಮಾನರಾದ ಹನಗಲ್ ಗಂಗೂಬಾಯ್ ಅವರನ್ನು ’ಗಂಗೆ’ ಎಂದು ಕರೆಯಲು ನನಗೆ ಮನಸ್ಸಾಗದು. ಆದರ ಬದಲು ಅವರನ್ನು ’ಸರ್ಸ್ವತಿ ಗಂಗುದೇವಿ’ ಎಂದಾದರು ಮಾತ್ರ ನೆನಪಿನಲ್ಲಿಟ್ಟುಕೊಳ್ಳಲು ನನ್ನ ಆಕಾಂಕ್ಷೆ.
  – ವಿಜಯಶೀಲ, ಬರ್ಲಿನ್, ೨೯.೦೭.೦೯

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: