ಮೀರಾ ಗಂಗಾಧರ ಚಿತ್ತಾಲ ಇನ್ನಿಲ್ಲ..

ಕನ್ನಡದ ಮಹತ್ವದ ಕವಿ ಗಂಗಾಧರ ಚಿತ್ತಾಲ (೧೯೨೩- ೧೯೮೭) ಅವರ ಬಾಳ ಸಂಗಾತಿ ಶ್ರೀಮತಿ ಮೀರಾ ಗಂಗಾಧರ ಚಿತ್ತಾಲ ಅವರು ಮೊನ್ನೆ ೨೨-೯-೨೦೨೦ ರಂದು ಅಮೆರಿಕಾ ದ ಹ್ಯೂಸ್ಟನ್ ದಲ್ಲಿರುವ ಮಗನ ಮನೆಯಲ್ಲಿ ತಮ್ಮ ೯೧ ನೆಯ ವಯಸ್ಸಿನಲ್ಲಿ ತೀರಿಕೊಂಡರು.

ಬಹುಪಾಲು ಜೀವನವನ್ನು ಮುಂಬಯಿಯಲ್ಲಿ ಬಾಳಿದ ಅವರು ಗಂಗಾಧರ ಚಿತ್ತಾಲರ ಕಾವ್ಯ ಮತ್ತು ಜೀವನದ ಸ್ಥೈರ್ಯವಾಗಿದ್ದರು.

ಚಿತ್ತಾಲರು ಇವರ ಕುರಿತು ಬರೆದ “ಹೆಂಡತಿಗೆ” ಕವಿತೆ ( ಹರಿವ ನೀರಿದು, ೧೯೭೦) ಕಾವ್ಯಾಸಕ್ತರಿಗೆ ಪರಿಚಿತ. (ಮುಗಿಲುಗನಸುಗಳಲ್ಲೆ ತಲ್ಲೀನವಾದ ಮನ, ನಿನ್ನ ಆಗಮನಕೆ ನೆಳಕಿಳಿದು ನಲಿದಿತ್ತು, ಬೆನ್ನೆಲುಬ ಬಲವಾಯ್ತು ನಿನ್ನ ಸಹವಾಸ ..) ವಿದೇಶದಲ್ಲಿ ನೆಲೆಸಿರುವ ಮಕ್ಕಳಾದ ಉದಯ, ವಿದ್ಯಾ ಮತ್ತು ಸರಿತಾ ಜೊತೆಗೆ ಆರು ಮೊಮ್ಮಕ್ಕಳನ್ನು, ಐದು ಮರಿಮಕ್ಕಳನ್ನು ಅವರು ಅಗಲಿದ್ದಾರೆ.

ಚಿತ್ತಾಲ ಬಳಗದ ಹಿರಿಯ “ಸಂಪರ್ಕ”ವೊಂದು ಕಣ್ಮರೆಯಾದಂತಾಗಿದೆ. ಅವರಿಗೆ ಚಿತ್ತಾಲ ಓದುಗರ ಬಳಗದ ಪರವಾಗಿ ಜಯಂತ ಕಾಯ್ಕಿಣಿ ಕೊನೆಯ ನಮಸ್ಕಾರ ಸಲ್ಲಿಸಿದ್ದಾರೆ.

‍ಲೇಖಕರು avadhi

September 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This