ಮುಕ್ತವೂ ಹೌದು.. ಉಚಿತವೂ ಹೌದು..

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

|ಕಳೆದ ಸಂಚಿಕೆಯಿಂದ|

‍ಮುಕ್ತಕಣವನ್ನು ಬರೆಯಲು ಆಲೋಚಿಸಿದ ದಿನದಿಂದ ಈ ಎರಡು ಪದಗಳ ಅರ್ಥವನ್ನು ಬಿಡಿಸಿ ಹೇಳಲು ಸಾಹಸ ಪಡುವುದನ್ನು ಮುಂದುವರಿಸಬೇಕು ಎಂದು ನಿರ್ಧರಿಸಿ ಬಿಟ್ಟಿದ್ದೆ. ಒಂದಷ್ಟು ಉದಾಹರಣೆ ಕೊಟ್ಟು, ನಮ್ಮ ಕೆಲಸಗಳ ಮಾಹಿತಿಯನ್ನೂ ಇಲ್ಲಿ ಹಂಚಿಕೊಂಡಿದ್ದೆ. ಬಹುಶಃ ನಾವು ‘ಸಂಚಿ ಫೌಂಡೇಶನ್’ ಹಾಗೂ ‘ಸಂಚಯದ’ ಮೂಲಕ ಕಾಪಿರೈಟ್ ಹೊರತಾದ ಅಥವಾ ಜನರಿಗೆ ಮುಕ್ತ ಜ್ಞಾನದ ಆಕರವಾಗಿ ಪುಸ್ತಕಗಳನ್ನು ನೀಡಲು ಇಚ್ಛಿಸುವ ಲೇಖಕರು ಅಥವಾ ಪ್ರಕಾಶಕರ ಮೂಲಕ ಒಂದಷ್ಟು (ಸದ್ಯಕ್ಕೆ ಸುಮಾರು ೨ ಸಾವಿರದಷ್ಟು) ಕನ್ನಡ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತಂದು ಜನರಿಗೆ ತಲುಪಿಸುತ್ತಿರುವುದನ್ನು ನೀವಾಗಲೇ ನೋಡಿರಬಹುದು.

ಬಹುಶಃ ಒಂದಲ್ಲ ಒಂದು ರೂಪದಲ್ಲಿ ಅವು ನಿಮಗೆ ತಲುಪಿರಲೂಬಹುದು. ಹೌದು, ಈ ಕೆಲಸವನ್ನು ಸಮುದಾಯದ ಕೆಲಸಗಳಾಗಿ ತೆಗೆದುಕೊಂಡು ಒಂದೂವರೆ ವರ್ಷದಲ್ಲಿ ಬಹಳಷ್ಟು ಸಾಧ್ಯತೆಗಳನ್ನು ಕಂಡುಕೊಂಡಿದ್ದೇವೆ. ಪುಸ್ತಕದ ಪ್ರೀತಿ ಇಲ್ಲಿಯವರೆಗೂ ಕರೆತಂದಿದೆ. ಮೊನ್ನೆ ಡಾ. ಕೃಷ್ಣಾನಂದ ಕಾಮತರ ಹಾಗೂ ಡಾ. ಜೋತ್ಸ್ನಾ ಕಾಮತರ ಪುಸ್ತಕಗಳನ್ನೂ ಜನರಿಗೆ ದೊರೆಯುವಂತೆ ಮಾಡಿದ್ದೆವೆ. ಇವೆಲ್ಲವುಗಳನ್ನು ಸುಲಭವಾಗಿ ಗೂಗಲ್ ಮೂಲಕ ಹುಡುಕಿನಲ್ಲಿ ಸಿಗುವಂತೆ, ನಮ್ಮ ಪುಸ್ತಕ ಸಂಚಯದ ಮೂಲಕ, ಜೊತೆಗೆ https://digital.sanchaya.net ಮೂಲಕ ಸಿಗುವಂತೆ ಮಾಡಿದ್ದೇವೆ.

ಕಾಮತರ ಪುಸ್ತಕಗಳು ಕಾಮತರ ವೆಬ್‌ಸೈಟ್‌ನ ಒಂದು ಮುಖ್ಯ ಭಾಗವಾಗಿಯೂ ಇಲ್ಲಿ ರಾರಾಜಿಸುತ್ತಿವೆ – https://books.kamat.com – ಈ ಕೆಲಸಗಳ ಮುಖ್ಯ ಉದ್ದೇಶ, ಕನ್ನಡದ ಬಹುಮುಖ್ಯ ಜ್ಞಾನದ ಆಗರಗಳನ್ನು ಮುಂದಿನ ಜನಾಂಗಕ್ಕೂ ಸಿಗುವಂತೆ ಕಾಪಿಡುವುದೇ ಆಗಿದೆ. ಇವುಗಳಿಗೆ ಬೆಂಬಲವಾಗಿ ಒಪ್ಪಿಗೆ ಸೂಚಿಸಿದ ಲೇಖಕರಿಗೂ, ಪ್ರಕಾಶಕರಿಗೂ ಮತ್ತು ಅವರ ಮನೆಮಂದಿಗೆಲ್ಲ ನಾವು ಚಿರ‍ಋ‍ಣಿ. ಈ ಕೆಲಸಗಳು ಮುಂದಿನ ವರ್ಷವೂ ಇಷ್ಟೇ ಬಲವಾಗಿ ನಡೆಯುವ ಎಲ್ಲಾ ಸಾಧ್ಯತೆಗಳೂ ಇವೆ.

ಮುಕ್ತ ಜ್ಞಾನದ ಅವಶ್ಯಕತೆ, ಅವುಗಳನ್ನು ಸಕ್ಷಮವಾಗಿ ಅವಶ್ಯ ಪರವಾನಗಿಗಳನ್ನು ಬಳಸುವ ಉದ್ದೇಶ (ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್) ಮತ್ತು ಅವುಗಳನ್ನು ಉಳಿಸಲು ಆಯ್ದುಕೊಳ್ಳುವ ಮಾರ್ಗಗಳನ್ನು ವಿವರಿಸಲು, ಮತ್ತು ಅನುಸರಿಸಲು ಇವರೆಲ್ಲರೂ ಸಹಕರಿಸಿದ ರೀತಿ ಕನ್ನಡದ ಡಿಜಿಟಲೀಕರಣದ ನನ್ನ ಹೋರಾಟಕ್ಕೆ ಹೊಸ ಭರವಸೆಯನ್ನು ನೀಡಿದೆ. ‍

ಇದರ ನಡುವೆ ಡಾ. ಕಿರಣ್ ವಿ ಎಸ್ ಅವರ ಈ ಎರಡು ಪುಸ್ತಕಗಳಿಗೆ ಮುಕ್ತ ತಾಂತ್ರಿಕ ನೆರವು ನೀಡುವ ಅವಕಾಶ ಒದಗಿಬಂತು. 

ಸೆರೆಂಡಿಪಿಟಿ & ನಿರಾಮಯ – ಕನ್ನಡ ಪುಸ್ತಕ ಲೋಕದ ಹೊಸ ಪ್ರಯೋಗಗಳು

ನಮ್ಮ ಚರ್ಚೆ ಶುರುವಾದದ್ದು, ಅವರು ಪುಸ್ತಕದಲ್ಲಿ ಬಳಸಿದ ಪರವಾನಗಿಯ ಹಾಗು ಇ ಪುಸ್ತಕ ವಿನ್ಯಾಸದ ಬಗ್ಗೆ ನನಗಿದ್ದ expectation ಗಳನ್ನು ವಿವರಿಸುವ ಮೂಲಕ. ನೀವು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ಬಳಸುತ್ತಿದ್ದೀರಿ ಖುಷಿಯಾಯ್ತು, ಅಲ್ಲಿನ ಚಿತ್ರಗಳ ಪರವಾನಗಿ ಬಗ್ಗೆ ಕೂಡ ತಿಳಿಸಿ – ಕೇವಲ ವಿಕಿಪೀಡಿಯಾ ಎಂದು ಹಾಕಿದರೆ ಸರಿಯಾಗುವುದಿಲ್ಲ, ನಿಮ್ಮ ಯುನಿಕೋಡ್ ಪಠ್ಯ ಕೊಡಬಹುದೇ – ಇಲ್ಲೇನೋ ಸರಿಪಡಿಸಬೇಕು ಎನ್ನಿಸುತ್ತಿದೆ. – ಡಾ. ಕಿರಣ್ ಕೂಡ ಸ್ವಲ್ಪವೂ ಬೇಸರಿಸದೆ ಎಲ್ಲ ವಿಷಯಕ್ಕೂ ಪ್ರತಿಕ್ರಿಯಿಸಿ ಅಲ್ಲಿನ ಎಲ್ಲಾ ಧನಾತ್ಮಕ ಅಂಶಗಳನ್ನು ತಕ್ಷಣ ಅಳವಡಿಸಿಕೊಳ್ಳಲು ಮುಂದೆ ಬಂದರು. 

ವಾಣಿಜ್ಯ ಉದ್ದೇಶವೇ ಇಲ್ಲದ ಯೋಜನೆ – ಜೊತೆಗೆ ಆಗ ತಾನೇ ಕನ್ನಡದಲ್ಲಿ ಇ ಪುಸ್ತಕ ಮಾಡುವವರಿಗೆ ವಾಣಿಜ್ಯ ಉದ್ದೇಶದ ಸೇವಾ ಸಂಸ್ಥೆ ಪ್ರಾರಂಭಿಸಿದ್ದ ನನಗೆ ಚಿತ್ರಗಳು, ಫೂಟ್ ನೋಟ್, ಉಲ್ಲೇಖಗಳು, ಪರವಾನಗಿ ಇತ್ಯಾದಿಗಳ ಪ್ರಯೋಗಗಳಿಗೆ ಸರಿಸಾಟಿ ಎಂಬ ಪ್ರಶ್ನೆಗಳನ್ನು ಒಡ್ಡಿದ್ದು ಸೆರೆಂಡಿಪಿಟಿ ಪುಸ್ತಕ.

ಅದರ ಮುಖಪುಟದ ರಚನೆಯಿಂದ ಹಿಡಿದು, ಪುಟಗಳಲ್ಲಿನ ಚಿತ್ರಗಳ ಅಳವಡಿಕೆಗೆ ವ್ಯಯಿಸಿದ ಸಮಯ – ಪ್ರಿಂಟ್ ರೂಪದಲ್ಲಿ ಇಂತಹ ಪುಸ್ತಕವೊಂದನ್ನು ಹೊರತರಬೇಕಾದರೆ ಇರುವ ತೊಂದರೆಗಳನ್ನು ತಿಳಿದು ಸರಿಪಡಿಸಲು, ಅದನ್ನು ಸಾಮಾನ್ಯನಿಗೂ self-service ಆಗಬಹುದಾದ ವ್ಯವಸ್ಥೆ ರೂಪಿಸುವ ಸಾಧ್ಯತೆಗಳನ್ನು ಕಂಡುಕೊಳ್ಳವ ಮುಖ್ಯ ಬಂಡವಾಳವಾಯ್ತು.

ಇಷ್ಟರಲ್ಲಾಗಲೇ ಒಂದಷ್ಟು ಇ ಪುಸ್ತಕ ನಮ್ಮ ಸಂಸ್ಥೆಯಿಂದ ಹೊರಬಂದಿದ್ದರೂ ಸೆರಂಡಿಪಿಟಿಗೆ ಅದರದ್ದೇ ಪ್ರಾಮುಖ್ಯತೆ ಇದೆ – ಜೊತೆಗೆ ನಿರಾಮಯವೂ ಸೇರಿಕೊಂಡಿತು. ಸೆರೆಂಡಿಪಿಟಿಯ ಪ್ರಿಂಟ್ ಆವೃತ್ತಿಯ ಮಾರಾಟ – ಕನ್ನಡದ ಮುಕ್ತ ತಂತ್ರಜ್ಞಾನ ಬೆಳವಣಿಗೆಗೆ ತನ್ನ ಕಿರುಕಾಣಿಕೆಯನ್ನೂ ನೀಡಲಿದೆ. ಈ ಎರಡು ಪುಸ್ತಕಗಳ ಬಗ್ಗೆ ಪ್ರತ್ಯೇಕ ಪೋಸ್ಟುಗಳನ್ನು ಬರೆಯುವಷ್ಟು ವಿಷಯಗಳಿವೆ. ‍


ಕಾರಣ
ಇಂತಿದೆ:

೧. ಮುಕ್ತವಾಗಿ ಪುಸ್ತಕಗಳನ್ನು ಕನ್ನಡಿಗರಿಗೆ ನೀಡಿದ್ದು

೨. ಪುಸ್ತಕಗಳ ರೂಪ (ವಿನ್ಯಾಸ, ಮಾದರಿಯ ಆಯ್ಕೆ) 

೩. ತಾಂತ್ರಿಕ ರೂಪುರೇಷೆಗಳು ಮತ್ತು ಹಿಂದಿನ ತಂತ್ರಾಂಶದ ಬೆಂಬಲ

೪. ಇ ಪುಸ್ತಕವಾಗಿ ನಿಲ್ಲದೆ – ಪ್ರಿಂಟ್ ಆನ್ ಡಿಮ್ಯಾಂಡ್ ಮೂಲಕ ದೊರಕುತ್ತಿರುವ ಸೆರಂಡಿಪಿಟಿಯ ಕಥೆ

೫. ಪ್ರಿಂಟ್ ಗೆ ರೆಡಿಯಾದ – ಯುನಿಕೋಡ್ ಪಠ್ಯ – ಫಾಂಟುಗಳು – ತೊಂದರೆಗಳು ಇತ್ಯಾದಿ

೬. ಜನರಿಗೆ ತಲಿಪಿಸಿದ ರೀತಿ ಮತ್ತು ಜನರ ಪ್ರತಿಕ್ರಿಯೆ

ಎಲ್ಲಕ್ಕಿಂತ ಮುಖ್ಯವಾಗಿ ಚರ್ಚಿಸಬೇಕಾದ ವಿಷಯಗಳು

. ಪುಸ್ತಕದಲ್ಲಿನ ಮಾಹಿತಿಯ ಮೂಲ

. ಪುಸ್ತಕದಲ್ಲಿನ ಚಿತ್ರ ಇತ್ಯಾದಿಗಳ ಪರವಾನಗಿ, ಮರುಬಳಕೆ

೯. ಮೂಡಿ ಬಂದ ಪುಸ್ತಕಗಳ ಸದ್ಯದ ಕಾಪಿರೈಟ್ ಹಾಗೂ ಪರವಾನಗಿಯ ಆಯ್ಕೆ

೧೦. ಸೆರೆಂಡಿಪಿಟಿ – ಪ್ರಿಂಟ್ ಉದ್ದೇಶ ಹಾಗೂ ಮುಂದಿನ ಸವಾಲುಗಳು 

 ಇತ್ಯಾದಿ…

‍ಈ ಎಲ್ಲಾ ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಮುನ್ನ ಇವನ್ನು ಓದಿ ಬನ್ನಿ. 

ಸೆರೆಂಡಿಪಿಟಿ ಹಾಗೂ ನಿರಾಮಯ – ಗೂಗಲ್ ಪ್ಲೇ ಬುಕ್ಸ್ ನಲ್ಲೂ, archive.org ಯಲ್ಲೂ ಲಭ್ಯ. ‍

ಸೆರೆಂಡಿಪಿಟಿ:   https://play.google.com/store/books/details?id=3trxDwAAQBAJ

ನಿರಾಮಯ: https://play.google.com/store/books/details?id=SLALEAAAQBAJ

ಒಂದು ಮನವಿ: ಪಿಡಿಎಫ್ – ಇ ಪುಸ್ತಕವಲ್ಲ… – ePub ಆವೃತ್ತಿಯಲ್ಲಿ ಡಿಜಿಟಲ್ ಪುಸ್ತಕಗಳನ್ನು ತಯಾರಿಸೋಣ, ಬಳಸೋಣ. ಕನ್ನಡದ ಡಿಜಿಟಲೀಕರಣದ ನಾಳೆಗಳಿಗೆ ಸರಿಯಾದ ಶಿಷ್ಠತೆಗಳನ್ನು (standards) ಬಳಸೋಣ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಓಂಶಿವಪ್ರಕಾಶ್

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This