ಮುಖ ಕ್ಷೌರ ಮಾಡಿಸಿಕೊಳ್ಳದೆ ಸಮ್ಮೇಳನಕ್ಕೆ ಬಂದಿದೀರಾ?

ಸ್ವಾಮಿ ಸಾಹಿತಿಗಳೇ ಮುಖ ಕ್ಷೌರ ಮಾಡಿಸಿಕೊಳ್ಳದೆ ಸಮ್ಮೇಳನಕ್ಕೆ ಬಂದಿದೀರಾ? ಅಯ್ಯೋ.. ಪತ್ರಕರ್ತರೇ ನಿಮಗೇನ್ ಸ್ವಾಮಿ ಆಗಿತ್ತು…ನೀವು ಗಡ್ಡ ಬಿಟ್ಕೊಂಡೆ ಬಂದಿದೀರಾ.. ಅಂತ ಪ್ರತಿಯೊಬ್ಬರನ್ನೂ ನಿಲ್ಲಿಸಿಕೊಂಡು ಕೇಳ್ತಾ ಇರೋರು ಇನ್ಯಾರೂ ಅಲ್ಲ- ಮುತ್ತುರಾಜ್.

ಯಾರು ಈ ಮುತ್ತುರಾಜ್? ಕನ್ನಡದ ಎಲ್ಲಾ ಸಾಹಿತಿಗಳಿಗೆ ಒಂದು ಬಾರಿ ಕಟ್ಟಿಂಗ್ ಮಾಡ್ಲೇಬೇಕು ಅಂತ ಆಸೆ ಪಟ್ಟು ಕೆಲವರ ಮನೆಗೋಗಿ, ಕೆಲವರನ್ನ ತಮ್ಮ ಅಂಗಡಿಗೆ ಕರೆಸಿ ಕಟ್ಟಿಂಗ್ ಮಾಡಿದವರು.

ಅದಿರಲಿ ಮಂಡೇಲಾ ಅಂಬೋ ಮಂಡೇಲಾ ದಕ್ಷಿಣ ಆಫ್ರಿಕಾಗೆ ಬೆಳಕಾಗಿದ್ದನ್ನು ಕಂಡು ಪ್ರತೀ ವರ್ಷ ಮಂಡೇಲಾ ಹುಟ್ಟಿದ ಹಬ್ಬವನ್ನ ಕೊಳೆಗೇರಿಗಳಲ್ಲಿ ಉಚಿತ ಕ್ಷೌರ ಮಾಡೋದರ ಮೂಲಕ ಕಲೀತಾ ಇರುವವರು.

ಅಷ್ಟಲ್ಲದೆ ಟಿ ವಿ ದಾರಾವಾಹಿಗಳಲ್ಲಿ ಹಾಸ್ಯ ನಟನೆಗೆ ಹೆಸರಾದವರು. ಈ ಮುತ್ತುರಾಜ್ ಈಗ ಚಿತ್ರದುರ್ಗ ದಲ್ಲಿ ಬೀಡು ಬಿಟ್ಟಿದ್ದಾರೆ. ಸ್ಥಳೀಯ ಸಂಘಟನೆಯ ಜೊತೆ ಕೈಗೂಡಿಸಿ ಸಾಹಿತಿಗಳ ಹಾಗೂ ಪತ್ರಕರ್ತರ ಗಡ್ಡ ಹಿಡಿದು ನಿಂತಿದ್ದಾರೆ.

ಅರೆ, ಲೇಟ್ ಆಗೋಯ್ತು ಅಂತೀರಾ. ಯೋಚನೆ ಮಾಡ್ಬೇಡಿ.. ಗಡ್ಡ ಸಮ್ಮೇಳನದಲ್ಲೇ ಮಾಡಿಸ್ಕೊಳ್ಲುವಿರಂತೆ.


img_8650

img_8652

‍ಲೇಖಕರು avadhi

February 5, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This