ಮುಗಿಯದ ಕಾಯುವಿಕೆ

ಆಶಾ ಜಗದೀಶ್


ಮತ್ತೊಂದಿಷ್ಟು ರಾತ್ರಿಗಳ
ಹಾಸಿಟ್ಟು ಕಾಯುತ್ತಿರುವೆ
ಇದೊಂದು ಮುಗಿಯದ ನಿರೀಕ್ಷೆ

ಈ ಜಗತ್ತಿನ ಉಸಿರ ಸದ್ದು
ಕೇಳುವಷ್ಟು ನಿಶ್ಯಬ್ಧ ತುಂಬಿದ
ಈ ರಾತ್ರಿ ಫಲಿಸಲಿದೆ

ತೆಕ್ಕೆಗಳು ತೆರೆದುಕೊಳ್ಳಲಿವೆ
ಒಂದು ಅವಿಸ್ಮರಣೀಯ ಆಲಿಂಗನಕೆ

ಹಚ್ಚಿಟ್ಟ ದೀಪ ತನ್ನನ್ನೇ
ಕಳೆದುಕೊಳ್ಳುತ್ತಾ
ಕತ್ತಲೊಂದಿಗೆ ಸೆಣೆಸುತ್ತದೆ
ಕೊನೆಗೆ ಎಣ್ಣೆ ತೀರಿ ಬತ್ತಿ ಸುಟ್ಟು
ಸೊಡರುತ್ತಾ ಕತ್ತಲೊಳಗೆ ಲೀನವಾಗುವ
ವೇಳೆಗೆ ನಮ್ಮ ಮಿಥುನದ ವಾರ್ತೆ ಮುಗಿದು
ಕತ್ತೆಲೆಯ ಕಾಣುವ ಮುನ್ನ
ನಮ್ಮ ಕಣ್ಣುಗಳು ಮುಚ್ಚಲಿವೆ…


ನಿಯತ್ತಿನ ರಸೀದಿ ಹಿಡಿದು
ಪ್ರೇಮಕ್ಕೆ ಸೆರಗೊಡ್ಡಲೆಂದು ನಿರೀಕ್ಷಿಸುವ
ಕಣ್ಣುಗಳಿಗೆ ತಮ್ಮ ಕಣ್ಣುಗಳ ಚಂಚಲತೆ
ಅದೆಷ್ಟು ಬಾರಿ ನಿಯತ್ತಿನ ಹೊಸಿಲ
ದಾಟಿ ಅಲೆದಾಡಿ ಬಂದಿರಬಹುದೆನ್ನುವುದರ
ಖಬರಿಲ್ಲ…

ಬಹುಶಃ ಆ ಚಂಚಲ ಕಣ್ಣುಗಳಿಗೆ
ರಸೀದಿಗಳ ಹಂಗಿಲ್ಲ


ಅರ್ಧ ಮಾಡಿಟ್ಟು ಬಂದ
ಅಡುಗೆಯಂತೆ
ಕಾಯುತ್ತಿವೆ ನಿನ್ನೊಂದಿಗೆ ಕಳೆದ
ಆ ಕ್ಷಣಗಳು…
ಪೂರ್ಣಗೊಳಿಸಲಿಕ್ಕಾದರೂ
ಒಮ್ಮೆ ಬರಲೇ…

ಎಂದು ಕೇಳುವುದು
ಸುಮ್ಮನೇ ಕೇಳಿಕೊಳ್ಳಲೂ
ಸಾಧ್ಯವಾಗದ ಪ್ರಶ್ನೆ

ಈ ತಲೆತಿರುಕ ಪ್ರಶ್ನೆಗಳಿಗೆ
ಸಮಯಪ್ರಜ್ಞೆ ಒಂಚೂರೂ ಇಲ್ಲ
ಪುಟ ತಿರುವಿದಷ್ಟು ಸುಲಭವಾ
ಬದುಕನ್ನು ತಿರುಗಾ ಮುರುಗಾ
ಮಾಡುವುದು…

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ಸಮಕಾಲೀನ ಗ್ರೀಕ್ ಕವನಗಳು

ಐದು ಸಮಕಾಲೀನ ಗ್ರೀಕ್ ಕವನಗಳು

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್‌ರಿಟಿ ಮೆಶರ್ಸ್ (Austerity Measures; Ed....

ಭುವನಾ ಹಿರೇಮಠ ಹೊಸ ಕವಿತೆ- ರಾತ್ರಿ ಮತ್ತು ಕನ್ನಡಿ

ಭುವನಾ ಹಿರೇಮಠ ಹೊಸ ಕವಿತೆ- ರಾತ್ರಿ ಮತ್ತು ಕನ್ನಡಿ

ಭುವನಾ ಹಿರೇಮಠ ರಾತ್ರಿ ಕನ್ನಡಿ ನೋಡಬಾರದು'ರಾತ್ರಿ'ಯೂ ಒಂದು ಹೆಣ್ಣುಕನ್ನಡಿಯೂ ಕನ್ನಡಿ ಯಾವಾಗಲೂ ನನ್ನನ್ನೇ ತೋರಿಸದುಎಷ್ಟೋ ಬಾರಿ ನನಗೆ ನಾನೇ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This