‘ಮುತ್ತು ಕಣ್ಣಿನಲ್ಲಿ ಹುಟ್ಟಿ..’ – ಶಾ೦ತಿ ಕವಿತೆ

ತಾಕಿದ್ದು – ತಾಕದ್ದು

ಶಾಂತಿ ಕೆ ಎ.

 

ಹುಡುಗಾ ,

ನನ್ನ ತಾಕಿದ್ದು

ಕೇವಲ ನಿನ್ನ ಒರಟು ತುಟಿಗಳು..

ಉಳಿದದ್ದು ನಿನ್ನ ಲೋಳೆ ಎಂಜಲು….

ನಿನ್ನ ಆವೇಶದ ಹಿಡಿತಕ್ಕೆ…

ತೋಳು ನಲುಗಿ,

ಕೊರಳು ಬಾಗಿದ್ದು ನಿಜವೇ…

ಆದರೆ ಆತ್ಮ ತಣ್ಣಗುಳಿಯಿತು..

ನಿನ್ನ ಅವಸರದ ಮುತ್ತು..

ಬಸವನಹುಳುವಿನ ನುಣುಪಿನಂತೆ..

ಮೆತ್ತಗೆ ಜಾರಿಬಿತ್ತು…

ಮುಖದ ಗೆರೆಗಳು ಕದಲಿದವು..

ಬೇಡದ ಏನೋ…ಮೈಮೇಲೇ ಬಿದ್ದಂತೆ!!

ಜೀವ ಮಿಸುಕದೆ ಸುಮ್ಮನಿತ್ತು..

ಕಣ್ಣಂಚಲ್ಲಿ ಕೇವಲ ಅಸಡ್ಡೆ!!

ನಿನ್ನ ತೋಳಬಲಕ್ಕೆ ..ನನ್ನ ಕೋಮಲ ದೇಹ

ಸೋತಿರಬಹುದು..

ಆದರೆ ಆಸೆ ಸಣ್ಣಗೆ ಅಲುಗಲೂ ಇಲ್ಲ…

ಹುಡುಗಾ…

ಮುತ್ತು ಕಣ್ಣಿನಲ್ಲಿ ಹುಟ್ಟಿ …ಕಿವಿಯಂಚನು..ತಾಕಿ..

ಎದೆಬಡಿತದಲಿ..ಜೀಕಿ..ತುಟಿಯಲ್ಲಿ ಸಮಾಪ್ತಿಯಾಗಬೇಕು….

ಮಾತು ಮರೆತ ತುಟಿಗಳಲಿ…ದಿವ್ಯ ಸಂಗೀತ..

ಮೊಳಗಬೇಕು…

ದೇಹವಿಡೀ ನಾದದಲಿ ಝೇಂಕರಿಸಬೇಕು..

ಹಾಗೆ ಆತ್ಮವನು ತಾಕಬೇಕು..

ಹುಡುಗಾ ಈಗ ಹೇಳು ಸೋತಿದ್ದು ಯಾರು?

 

 

 

 

‍ಲೇಖಕರು G

August 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅರ್ಥವಾಗಲು ಬೆಳಕೇ ಬೇಕು!

ಅರ್ಥವಾಗಲು ಬೆಳಕೇ ಬೇಕು!

ನಾಗರಾಜ್ ಹರಪನಹಳ್ಳಿ ಖಾಲಿ‌ ಕೋಣೆಖಾಲಿ ಖಾಲಿಯಾಗಿಲ್ಲಶೋನುಅಲ್ಲಿ ಪಿಸುಮಾತುಗಳುಜೀವಂತವಾಗಿವೆ ಮುಗಿಲು ನೆಲಈಗ ಒಬ್ಬರನ್ನೊಬ್ಬರು...

ಕೈಗಳೆರಡೂ ಬೆಸೆದು…

ಕೈಗಳೆರಡೂ ಬೆಸೆದು…

ಡಾ. ಪ್ರೀತಿ ಕೆ ಎ ನಿನ್ನ ಒಲವ ದೀಪವೊಂದುಸದಾ ಉರಿದಿದೆಬದುಕು ಪೂರ್ತಿ ನನ್ನನ್ನುಬಿಡದೆ ಪೊರೆದಿದೆ ಪ್ರೀತಿ, ಪ್ರಣಯ, ಪ್ರೇಮ,...

ನೀನೆಂದರೆ ನೀ ಅಷ್ಟೇ

ನೀನೆಂದರೆ ನೀ ಅಷ್ಟೇ

ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ...

5 ಪ್ರತಿಕ್ರಿಯೆಗಳು

 1. D.RAVI VARMA

  ಹುಡುಗಾ…
  ಮುತ್ತು ಕಣ್ಣಿನಲ್ಲಿ ಹುಟ್ಟಿ …ಕಿವಿಯಂಚನು..ತಾಕಿ..
  ಎದೆಬಡಿತದಲಿ..ಜೀಕಿ..ತುಟಿಯಲ್ಲಿ ಸಮಾಪ್ತಿಯಾಗಬೇಕು….
  ಮಾತು ಮರೆತ ತುಟಿಗಳಲಿ…ದಿವ್ಯ ಸಂಗೀತ..
  ಮೊಳಗಬೇಕು…
  ದೇಹವಿಡೀ ನಾದದಲಿ ಝೇಂಕರಿಸಬೇಕು..
  ಹಾಗೆ ಆತ್ಮವನು ತಾಕಬೇಕು..
  ಹುಡುಗಾ ಈಗ ಹೇಳು ಸೋತಿದ್ದು ಯಾರು?
  ಹಿಂದೊಮ್ಮೆ ಲಂಕೇಶ್ ಅವರು ಕಾವ್ಯ ಕನ್ನಿಕೆಯ ತೊಡೆಯ ಮೇಲೆ ಮಲಗಿ ನಿದ್ರಿಸಬೇಕು ಎಂದು ಬರೆದಿದ್ದರು. ಬಹುಷಃ ನೀವು ಬರೆದ ಕಾವ್ಯ ಕನ್ನಿಕೆಯೇ ಅವರಿಗೆ ಕಾಡಿರಬೇಕು ..ಇದು ಆತ್ಮ ಸಂಗಾತಿಯ ಹುಡುಕಾಟ .ದೈಹಿಕ ಸಂಭಂದ ಗಳಚೆಗಿನ ತೀವ್ರತೆ
  ಮತ್ತು ಅನನ್ಯ ಸಂಭಂದದ ಆಶಯ ,ಹಾಗೆ ನೋಡಿದ್ರೆ ಇಲ್ಲಿ ಮೀರಾ,ಅಕ್ಕಮಹಾದೇವಿಯವರ ಆಶಯವೂ ಇದೆ ..ಅಸ್ತೆ ಅಲ್ಲದೆ ಇಡೀ ಬದುಕಿನ ವಾಸ್ತವ ನೆಲೆಗಟ್ಟಿನಲ್ಲಿ ಹೆಣ್ಣು ಜೀವ ದ ಅತ್ಮದೊಳಗಿನ ಆಶಯಗಳು, ಹೃದಯ ತುಂಬಿದ ಬಯಕೆಗಳು, ಕನಸುಗಳು ಇಲ್ಲಿ heppugattive … ಇದು ನಿರಂತರ hudukaatavaste … ಆ ಹುಡುಕಾಟದ ಹಳಹಳಿಕೆಯಲ್ಲೇ…ನಾವು ಈ ಕಾಲದ ಜೊತೆ ಕಾಲವಶರಾಗಿಬಿದುತ್ತೆವೇನೋ …..

  ನಿಮ್ಮ ಕವನ….ಏನೆಂದು ಬಣ್ಣಿಸಲಿ… ಬಣ್ಣಿಸಲು ನಾನು ಕವಿಯು ಅಲ್ಲ , ಕಾವ್ಯವು ನನಗೆ ಗೊತ್ತಿಲ್ಲ …. ಆದರೆ ಇದು ನನ್ನ ಒಳ ಮನಸ್ಸನ್ನು ತಾಕಿ .. ಕಾಡಿತು .. ಕಾಡುತ್ತಲೇ ಇದೆ …..
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Manjula NarayanaraoCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: