ಮುತ್ತು ಬೇಕೆಂದು ಕಡಲಿಗೆ ಕೈ ಹಾಕಿದವರು ಉಪ್ಪು ನೀರು ಕುಡಿಯಲೇಬೇಕು

ಮತ್ತಷ್ಟು ದ್ವಿಪದಿಗಳು

ಲಡಾಯಿ ಬಸು

ಮುಳುಗುವ ಸೂರ್ಯನಿಗಿಂತ ದೊಡ್ಡ ಪಾಠ ಯಾವುದಿದೆ ?   ಇವು ನಿನಗಾಗಿಯೇ ಬರೆದ ಅಕ್ಷರಗಳು ಕವಿತೆ ಎನಿಸಿದರೆ ಕ್ಷಮಿಸಿ ಬಿಡು   ನಾನು ಏನಾಗಿದ್ದೇನೆ ಅನ್ನುವುದು ಅರಿವಿಗೆ ಬರುತ್ತಿಲ್ಲ ಆಗುವುದೆಲ್ಲ ನನ್ನ ಅರಿವಿಗೆ ಬರುವುದಾದರೂ ಹೇಗೆ ನಾನು ನೀನಾದ ಬಳಿಕ   ನೀ ನನ್ನ ಬಳಿ ಕಳೆದುದೆಷ್ಟು ಗಳಿಗೆ ? ಇರಲಿ ಬಿಡು, ಅಮರತ್ವವನು ಮೂರ್ಖರಷ್ಟೇ ಮಾಪನ ಮಾಡುವರು!   ನಿಮ್ಮ ಕವಿತೆಗಳಲ್ಲಿ ಬರೀ ವಿಷಾದವೇ ತುಂಬಿದೆ ಎಂದವರಿಗೇನು ಹೇಳಲಿ ? ಮುತ್ತು ಬೇಕೆಂದು ಕಡಲಿಗೆ ಕೈ ಹಾಕಿದವರು ಉಪ್ಪು ನೀರು ಕುಡಿಯಲೇಬೇಕು   ನೀ ಕೇಳಿದೆ ಕಲ್ಲಿನ ಕಥೆಯೇನು ? ಹೇಗೆ ಹೇಳುವುದು ಕಲ್ಲಾದ ಮೇಲೆ ಕಥೆ   ಮುಡಿಗೇರಿದ ಹೂವನ್ನಲ್ಲ ದೇಹಕ್ಕೇರಿದ ಹೂವನ್ನು ಕಣ್ತುಂಬಿಕೊಳ್ಳುವುದು ಇದ್ದೇ ಇದೆ… ಮೂಡುವಾಗ ಏನಿರಲಿಲ್ಲ ಎಂಬುದು ನಿಜವೇ ಮುಳುಗುವಾಗ ಹಾಗೆ ಹೇಳಲಾಗದು   ಅಂಗಳದ ಸಸಿ ಕುಂಬಿಯಲಿ ಕೂತ ಗುಬ್ಬಿ ಇವಳ ಮಡಿಲೊಳಗಿನ ಕೂಸು ಎಲ್ಲವೂ ದೊಡ್ಡವೇನಲ್ಲ ಆದರೇನು ಲೋಕವೆ ಸಣ್ಣ ಸಣ್ಣ ಸಂಗತಿಗಳು ದೊಡ್ಡ ಕನಸಿಗೆ ಜನ್ಮ ನೀಡುವುದರಲ್ಲೇ ಬದುಕಿರುವುದು   ನಿನ್ನೆಯ ಇರುಳು ಆ ಒಂದು ಪದದಿಂದಲೇ ಗಾಯಗೊಂಡಿತು ಹಗಲಿಗೆ ಎಚ್ಚರಾದ ನೀ ಆಡಿದ ಪದ ಕತ್ತರಿಸಿ ಇಲಾಜು ಮಾಡಿದರೆ ವಾಸಿಯಾಗುದೇನು ಇರುಳ ಗಾಯ ?   ಈ ದಿನ ನಿಮ್ಮ ಸಂಭ್ರಮ ನನ್ನ ವಿಷಾದ ಆಲಿಸಿ ಖೇದಗೊಳ್ಳುವುದು ಬೇಡ ಅವಳ ನೆನಪಲ್ಲಿ ಒಂದು ಮಾತು ಚಿಗುರಿಸುವ ಯುಗಾದಿ ಚಿಗುರು ನುಂಗುವದನರಿತುಕೊಂಡಿದೆ   ಮನಸೆ ಹೀಗೆ ಬದುಕಿನ ಸತ್ಯಗಳು ಸುಳ್ಳಾಗಿರಲೆಂದು ಆಶಿಸುವುದು ನೋಡು ರೆಕ್ಕೆಗಳಿಲ್ಲದ ಪತಂಗದಲಿ ದೀಪದ ಬಳಿ ಸಾಗುವಾಸೆ ಸಾಯದೆ ಬದುಕುವುದು   ಲೋಕ ಅಪಶಕುನವೆನುವ ಮುಸ್ಸಂಜೆ ಹೊತ್ತಲ್ಲಿ ನೀನು ನನ್ನ ಮನೆಯೊಳಗೆ ನಡೆದುಬಂದೆ ಯಾರಿಗೆನನ್ನಿಸಿತೊ ನನಗೆ ಇರುಳೊಳಗೇ ಬೆಳಕು ಕಾಣುವುದೆಂಬ ಮಾತು ಮತ್ತೂ ನಿಜವೆನಿಸಿತು   ಎಲ್ಲರೂ ಅಂದುಕೊಂಡರು ನೀ ಬಂದ ಮೇಲೂ ಅಂಗಳದ ಹೂ ಮನೆಯೊಳಗೆ ಬರಲಿಲ್ಲ ಹಾಗಿದ್ದರಿಂದಲೆ ಅಂಗಳದ ತುಂಬೆಲ್ಲ ನಗುವಿತ್ತು ಆ ಹೂವಿನ ಚಲುವೆಲ್ಲ ನಿನ್ನ ಕಣ್ಣೊಳಗಿತ್ತು   ನೀನು ನಿಧಾನಿಸಿದರೇನು ನಡೆಯದಿದ್ದರೂ ದಾರಿ ಕಿರಿದಾಗುತ್ತಲೇ ಹೋಗುವುದು   ನಿನ್ನಿಂದ ಈ ಅಕ್ಷರಗಳನು ಬೇರ್ಪಡಿಸಿ ನೋಡಿದರೆ…. ಏನಿಲ್ಲ ನೀರಿನಿಂದ ಬೇರ್ಪಡಿಸಿದ ಮೀನು ಸಿಕ್ಕುವುದು   ನಿನ್ನೆಯ ಬಾಕಿದಾರನಾದ ಈ ದಿನದಲಿ ಸುಖದ ಮರವು ದುಃಖದ ಬೇರಿನಲ್ಲಿದೆ ಕಾಲಿನ ಮೇಲೆ ವಿಶ್ವಾಸವಿದ್ದರೆ ಯಾರೋ ಮಾಡಿಟ್ಟ ಹಾದಿ ಇಲ್ಲದಿದ್ದರೇನೆ ಹಿತವೆನಿಸುವುದು   ನೀವು ಎನಾದರೂ ಅನ್ನಿ ಬಟ್ಟೆ ತೊಡದ ಬದುಕು ಬೆತ್ತಲೆಯೇ ಉಳಿದುಬಿಟ್ಟಿತು ಇಂದಿನ ಮೆಟ್ಟಿಲೇರಿ ಬಂದೆನಾದರೂ ನಾಳೆಯ ಇಳಿಜಾರಿನಲ್ಲಿ ನನ್ನ ಹೆಸರು ಬಿದ್ದಿತ್ತು   ನೀನು ನನ್ನ ಮೌನವನ್ನೂ ಪ್ರೀತಿಸಲಾರಂಭಿಸಿದೆ ಮೌನ ಸೋತು ಮಾತಾಗಲು ಬೇರೇನು ಬೇಕಿತ್ತು ?   ಹಸಿವೆಯನ್ನೆದುರಿಸಲು ನಾನೇ ಬರೆದ ನಿನ್ನೆಯ ಚಿತ್ರಗಳನು ಇಂದು ಅಳಿಸುವುದು ಹೇಗೆ ? ನಿನ್ನೆಯಂತೆ ಇಂದು ನನ್ನದಾಗದ ಸಂಪತ್ತು ಅದನ್ನೇ ನಾಳೆಗೂ ಸಾಲ ನೀಡತೊಡಗಿರುವೆನು   ತೆರೆದ ಇರುಳ ಬಾಗಿಲ ತೋರಣವಾಗಿ ನಿನ್ನ ಎದುರು ನೋಡುವ ನಿಗಿನಿಗಿ ಕೆಂಡ ನಿನ್ನ ಗಾಳಿಯೂ ಸೋಕದೆ ಮುಂಜಾನೆ ಸುರಿವ ಇಬ್ಬನಿಗೆ ಇದ್ದಲಾಗಿ ಹಗಲ ಕಂಡಿತು    ]]>

‍ಲೇಖಕರು G

April 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಉಂಡು ಮರೆತ ಒಡಲ ಕನಸು

ಉಂಡು ಮರೆತ ಒಡಲ ಕನಸು

ಪ್ರೊ. ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ...

ನೆನಪಿನ ಘಮಲು…

ನೆನಪಿನ ಘಮಲು…

ಸೌಜನ್ಯ ನಾಯಕ ಬೆಳಗಿರುವೆ ನಾನೊಂದುಪುಟ್ಟ ಹಣತೆಯಅಂಧಕಾರವನ್ನ ಹೊಡೆದೊಡಿಸಲುಉರಿಯುವ ದೀಪದ ಬೆಳಕಲಿಬೆಸೆಯುವ ಪ್ರೀತಿಯ ಬೆಳಗಿಸಲು… ಹಾಗೆಂದುನಾ...

ಪಿಳ್ಳೆ ನೆವ

ಪಿಳ್ಳೆ ನೆವ

ಸಂಗಮೇಶ ಸಜ್ಜನ ಅಮ್ಮ ನನ್ನ ಬಯ್ಯಬೇಡಮ್ಮ ನನ್ನದೇನು ತಪ್ಪು ಇಲ್ಲಮ್ಮ ಬೇಕು ಅಂತ ಮಾಡಿಲ್ಲ ಮನ ಬೆಕ್ಕು ಅಡ್ಡಿ ಬಂದಿತ್ತು...

೧ ಪ್ರತಿಕ್ರಿಯೆ

  1. Keshava Murthy

    ಮುಳುಗುವ ಸೂರ್ಯನಿಗಿಂತ
    ದೊಡ್ಡ ಪಾಠ ಯಾವುದಿದೆ ?
    ಉ: ಉದಯಿಸುತ್ತಿರುವ ಸೂರ್ಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: