ಮೈಸೂರಿನಲ್ಲಿ ಈಗ ಶಿವರಾತ್ರಿ

  ನಿರಂತರ ಫೌಂಡೇಶನ್ ಸಾಂಸ್ಕೃತಿಕ ನೆಲೆಗಟ್ಟಿಗಾಗಿ, ಸಮಾಜದ ಉನ್ನತಿಗಾಗಿ, ಶಿಕ್ಷಣದ ಪ್ರಗತಿಗಾಗಿ ಪರ್ಯಾಯಗಳನ್ನು ಹುಡುಕುವ ಮೂಲಕ ಸಮಾನತೆಯ ಮತ್ತು ಜನಪರಂಪರೆಯ ಸಮಾಜ ನಿಮರ್ಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುವುದು ನಿರಂತರ ಫೌಂಡೇಶನ್ನ ಗುರಿ ಹಾಗೂ ಉದ್ದೇಶ. ಕಳೆದ ಹಲವಾರು ವರ್ಷಗಳಿಂದ ಸ್ಪಷ್ಟವಾದ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಗಳಿಂದ ರಂಗಭೂಮಿ, ಜಾನಪದ, ಸಾಹಿತ್ಯ, ಪರಿಸರ ಮುಂತಾದ ಎಲ್ಲ ರಂಗಗಳಲ್ಲೂ ಕೆಲಸ ಮಾಡುತ್ತಿದೆ. ರಂಗಭೂಮಿ ಕುರಿತಾದ ಬೀದಿ, ಶರೀಫ, ಬಹುರೂಪಿ, ರಂಗರೂಪಕ ಪುಸ್ತಕಗಳನ್ನು ಪ್ರಕಟಿಸಿದೆ. ಮಕ್ಕಳಿಗಾಗಿ ಹಾರೋಣ ಬಾ ಎಂಬ ಸಚಿತ್ರ ಮಕ್ಕಳ ಕಾವ್ಯ ಹೊರತಂದಿದೆ. ಜನಪರ ಹೋರಾಟಗಳಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿರುವ ನಿರಂತರ, ಈ ನಿಟ್ಟಿನಲ್ಲಿ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ. ಬಾಗಲಕೊಟೆ ಜಿಲ್ಲೆಯಲ್ಲಿ ನಡೆದ ಕನರ್ಾಟಕದ ಮೊತ್ತಮೊದಲ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥ ಹಾಗೂ ಕನರ್ಾಟಕದಾದ್ಯಂತ ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲಸಂಗಮ ದೃಶ್ಯರೂಪಕದ 75 ಪ್ರದರ್ಶನಗಳನ್ನು ನೀಡಿದೆ. ಪ್ರತಿವರ್ಷ ನಿರಂತರ ರಂಗ ಉತ್ಸವ ನಾಟಕೋತ್ಸವವನ್ನು ಹಮ್ಮಿಕೊಂಡುಬರುತ್ತಿದೆ. ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ ಪ್ರಸ್ತುತಪಡಿಸಿದೆ. ಪ್ರತಿವರ್ಷ ಕಾಲೇಜು ವಿದ್ಯಾಥರ್ಿಗಳಿಗಾಗಿ ಸಹಜರಂಗ ರಂಗತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ. ಈವರೆಗೆ ಕುಸುಮಬಾಲೆ, ಬಿಂಬ, ಕಲ್ಕಿ, ಸಾಂಬಶಿವ ಪ್ರಹಸನ, ಯಾರೋ ಅಂದರು, ಜಲಗಾರ, ಶರೀಫ, ಮೆರವಣಿಗೆ, ಭೋಮ, ಟೀ ಹೌಸ್ ಮುಂತಾದ ನಾಟಕಗಳನ್ನು ಪ್ರದಶರ್ಿಸಿದೆ. ಪ್ರಸ್ತುತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಶಿವರಾತ್ರಿ ನಾಟಕವನ್ನು ಖ್ಯಾತ ರ೦ಗಕರ್ಮಿ ಚಿದಂಬರರಾವ ಜಂಬೆಯವರ ನಿರ್ದೇಶನದಲ್ಲಿ ಪ್ರಯೋಗಿಸುತ್ತಿದೆ.   ಚಿದಂಬರರಾವ್ ಜಂಬೆ : ಉಚ್ವ್ವಾಸವೂ ರಂಗಭೂಮಿ, ನಿಶ್ವಾಸವೂ ರಂಗಭೂಮಿ ಎಂಬ ಮಾತು ಯಾರಿಗಾದರೂ ಅನ್ವಯಿಸುವುದಾದರೆ ಥಟ್ ಅಂತ ನೆನಪಾಗುವ ಹೆಸರು ಚಿದಂಬರರಾವ್ ಜಂಬೆ. ಕನ್ನಡ ರಂಗಭೂಮಿಯ ಮಹತ್ವದ ನಿದರ್ೇಶಕರಾದ ಜಂಬೆಯವರು ಆಧುನಿಕ ಕನ್ನಡ ರಂಗಭೂಮಿಯ ವ್ಯಾಪ್ತಿಯನ್ನು ಹಿಗ್ಗಿಸಿದ ರಂಗನಿದರ್ೇಶಕರುಗಳಲ್ಲಿ ಪ್ರಮುಖರು. ರಂಗಕ್ರಿಯೆಯ ಮೂಲಕ ಬದುಕಿನ ಸೂಕ್ಷ್ಮತೆಗಳನ್ನು, ವಿಷಾಧಗಳನ್ನು, ಸುಖಗಳನ್ನು ಮಿಡಿಸುವ ಜಂಬೆಯವರ ಸಮರ್ಥ ನಿದರ್ೇಶನದಲ್ಲಿ ಕನ್ನಡದ ಅತ್ಯಂತ ಮಹತ್ವದ ನಾಟಕಗಳು ಜೀವತಳೆದಿವೆ. ರಾಷ್ಟ್ರೀಯ ನಾಟಕಶಾಲೆಯ ಪದವೀಧರರಾದ ಜಂಬೆಯವರು ಇಂಫಾಲ, ದೆಹಲಿ, ಲಕ್ನೋ, ಸತಾರ ಮುಂತಾದ ಕಡೆಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿರುತ್ತಾರೆ. ಜತೆಗೆ ಮಂಚಿಕೇರಿಯ ಸಿದ್ಧಿ ಜನಾಂಗದವರಿಗೆ, ಗಂಗೋಳಿ ಮೀನುಗಾರಿಕೆ ಜನಾಂಗದ ನಡುವೆಯೂ ರಂಗಭೂಮಿಯ ಕಂಪನ್ನು ಪಸರಿಸಿದ್ದಾರೆ. ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ಶಿಬಿರಗಳನ್ನು ಆಯೋಜಿಸಿ ರಂಗಭೂಮಿಯನ್ನು ಜೀವಂತಗೊಳಿಸಿದ್ದಾರೆ. ಈ ಕೆಳಗಿನವರು, ಕೆಂಪು ಕಣಗಿಲೆ, ಅಧೇ ಅಧೂರೆ, ತುಘಲಕ್, ಓ ಲಿಯರ್, ಕಾಕನಕೋಟೆ, ಅಂತಿಗೊನೆ, ಅಪ್ಸರೆ, ಲೋಕ ಶಾಕುಂತಲ, ಮೂಕಬಲಿ, ತಾಮ್ರ ಪತ್ರ, ಬೆಪ್ಪುತಕ್ಕಡಿ ಬೋಳೆಶಂಕರ, ಅಥೆನ್ಸಿನ ಅರ್ಥವಂತ. ಆ ಊರು ಈ ಊರು, ಮಹಾತ್ಮ, ಚಿರೆಬಂದಿವಾಡೆ, ಭಾಸಭಾರತ, ಚಿತ್ರಪಟ ರಾಮಾಯಣ, ಯಕ್ಷಗಾನ ಪುಂಟಿಲ, ಕತ್ತಲೆಗೆ ಹತ್ತುತಲೆ, ಕದಡಿದ ನೀರು, ಸದ್ದು ವಿಚಾರಣೆ ನಡೆಯುತ್ತಿದೆ. ಆಷಾಢದ ಒಂದು ದಿನ. ಪಂಜರ ಶಾಲೆ, ಟೀ ಹೌಸ್ ಮುಂತಾದ ನಾಟಕಗಳನ್ನು ನಿದರ್ೇಶಿಸಿದ್ದಾರೆ. ರಂಗಾಯಣ, ಸಾಣೆಹಳ್ಳಿ ರಂಗಶಾಲೆ ಹಾಗೂ ಬೆಂಗಳೂರಿನ ಎನ್.ಎಸ್.ಡಿ. ಛಾಪ್ಟರ್ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಶಿವರಾತ್ರಿ ನಾಟಕವನ್ನು ಕೈಗೆತ್ತಿಕೊಂಡಿದ್ದಾರೆ. ಶಿವರಾತ್ರಿ ಶಿವರಾತ್ರಿ ಒಂದು ರಾತ್ರಿಯಲ್ಲಿ ನಡೆವ ನಾಟಕ. 12ನೇ ಶತಮಾನದಲ್ಲಿ ನಡೆದ ಬಸವಣ್ಣನ ನೇತೃತ್ವದ ಚಳುವಳಿಯನ್ನು ಹೊಸಕಣ್ಣಿನಿಂದ ನೋಡುವ ಈ ನಾಟಕ ಬಸವಣ್ಣ ಮತ್ತು ಬಿಜ್ಜಳನ ಸಂಘರ್ಷಗಳನ್ನು ಸಾಮಾನ್ಯ ಜನವರ್ಗದ ಕಣ್ಣಿನಿಂದ ನೋಡುತ್ತದೆ. ಲಕ್ಷಾಂತರ ಬೆಲೆಬಾಳುವ ಮುತ್ತಿನಸರವನ್ನು ಅಸಹ್ಯದಂತೆ ಕಾಣುವ ಕಾಶವ್ವ, ಮುದುಕಪ್ಪ, ಸೂಳೆಸಾವಂತ್ರಿ ಒಂದಡೆಯಾದರೆ, ನಿಮ್ಮ ಕನಸಿನಲ್ಲಿ ನನಗೂ ಜಾಗ ಸಿಗುತ್ತದೆಂದು ಕಾದೆ, ಅಂಗೈಯಗಲ ಜಾಗವೂ ಸಿಗಲಿಲ್ಲ ಎನ್ನುವ ಬಿಜ್ಜಳ ಇನ್ನೊಂದಡೆ. ” ನೀವಿರುವ ಜಾಗವನ್ನು ಕೂಡಲಸಂಗಮ ಮಾಡಲು ಹೊರೆಟೆವು ಆದರೆ ನೀವು ಕತ್ತಲೆಗೆ ಒಯ್ಯುವ ಹಳೆಯ ದಾರಿಗಳಲ್ಲೇ ನಡೆಯ ಬಯಸಿದಿರಿ ” ಎನ್ನುವ ಬಸವಣ್ಣ. ಹೀಗೆ ಈ ನಾಟಕ ಕಲ್ಯಾಣದ ದುರಂತವನ್ನು ಒಂದು ರಾತ್ರಿಯಲ್ಲಿ ನಡೆವ ಘಟನೆಗಳ ಮೂಲಕ ತೆರೆದಿಡುತ್ತ ಹೋಗುತ್ತದೆ. ಡಾ.ಚಂದ್ರಶೇಖರ ಕಂಬಾರರ ಕಾವ್ಯಮಯ ಭಾಷೆಯ ಸೊಬಗು, ವಾಸ್ತವವಾಗುತ್ತಲೇ ಅತಿವಾಸ್ತವಕ್ಕೆ ಚಿಮ್ಮುವ ರೂಪಕಗಳ ಕಥಾನಕ ಇರುವ ಈ ನಾಟಕ ಕನ್ನಡದ ಮಹತ್ವದ ನಾಟಕಗಳ ಸಾಲಿಗೆ ನಿಲ್ಲಬಲ್ಲದು. ಮೈಸೂರಿನ ನಿರಂತರ ಫೌಂಡೇಶನ್ ಈ ವರ್ಷದ ಹೊಸ ನಾಟಕವಾಗಿ ಶಿವರಾತ್ರಿಯನ್ನು ಚಿದಂಬರರಾವ್ ಜಂಬೆಯವರ ನಿದರ್ೇಶನದಲ್ಲಿ ಪ್ರಯೋಗಕ್ಕೆ ಸಿದ್ದಪಡಿಸಿದೆ. ನಾಟಕಕಾರರ ಕುರಿತು ಡಾ.ಚಂದ್ರಶೇಖರ ಕಂಬಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕಂಬಾರರು ಪ್ರಸಿದ್ಧ ಕವಿ, ನಾಟಕಕಾರ, ಜಾನಪದ ತಜ್ಞ, ಚಲನಚಿತ್ರ ನಿದರ್ೇಶಕ, ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ. ಕಂಬಾರರು ಕಾವ್ಯ, ನಾಟಕ, ಕಾದಂಬರಿ ಮತ್ತು ಜಾನಪದ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ನೀಡುವುದರ ಮೂಲಕ ಆಧುನಿಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದವರಾಗಿದ್ದಾರೆ. ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಬೆಳ್ಳಿಮೀನು, ಅಕ್ಕಕ್ಕು ಹಾಡುಗಳೇ ಮೊದಲಾದ ಕವನಸಂಕಲನಗಳನ್ನೂ ಚಾಳೇಶ ಮತ್ತು ನಾಸರ್ಿಸಸ್, ಬೆಂಬತ್ತಿದ ಕಣ್ಣು, ಹುಲಿಯ ನೆರಳು, ಬೆಪ್ಪತಕ್ಕಡಿ ಬೋಳೆಶಂಕರ, ಪುಷ್ಟರಾಣಿ, ತುಕ್ರನಕನಸು, ಸಿರಿಸಂಪಿಗೆ, ಋಷ್ಯಶೃಂಗ, ಚಾಳೇಶ, ಜೋಕುಮಾರಸ್ವಾಮಿ, ಕಿಟ್ಟಿಯಕಥೆ, ಜೈಸಿದ್ಧ ನಾಯಕ, ಆಲಿಬಾಬ, ಕಾಡುಕುದುರೆ, ನಾಯೀಕಥೆ, ಖರೋಖರ, ಮತಾಂತರ (ಭಾರತಾಂಬೆ), ಹರಕೆಯಕುರಿ ಇತ್ಯಾದಿ ನಾಟಕಗಳನ್ನೂ, ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಜೀಕೆಮಾಸ್ತರ ಪ್ರಣಯ ಪ್ರಸಂಗ, ಅಣ್ಣತಂಗಿ ಎಂಬ ಕಾದಂಬರಿಗಳನ್ನೂ ಪ್ರಕಟಿಸಿದ್ದಾರೆ. ಭಾರತದ ಶ್ರೇಷ್ಠ ನಾಟಕಗಳಿಗೆ ನೀಡಲಾಗುವ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯನ್ನು ಜೋಕುಮಾರಸ್ವಾಮಿ ಪಡೆದುಕೊಂಡಿದೆ. ಜೈಸಿದ್ಧನಾಯಕ, ನಾಟಕಕ್ಕೆ ವರ್ಧಮಾನ ಪ್ರಶಸ್ತಿ ದೊರೆತಿದೆ. ಸಿರಿಸಂಪಿಗೆ ಎಂಬ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ (1991). ಇವರ ಅನೇಕ ನಾಟಕಗಳು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಿಗೂ ಅನುವಾದಗೊಂಡು ಪ್ರದಶರ್ಿಸಲ್ಪಟ್ಟಿವೆ. ಇವರ ಚಕೋರಿ ಎಂಬ ಆಧುನಿಕ ಮಹಾಕಾವ್ಯ ವಿಮಶರ್ಾವಲಯದಲ್ಲಿ ಹೆಚ್ಚು ಚಚರ್ೆಗೆ ಒಳಪಟ್ಟಿದೆ. ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ (1982-83), ಮೈಸೂರಿನ ಕನರ್ಾಟಕ ನಾಟಕ ರಂಗಾಯಣದ ಸದಸ್ಯರಾಗಿ (1987-91), ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಇವರು ಸೇವೆಸಲ್ಲಿಸಿದ್ದಾರೆ. ಇವರು ಕನರ್ಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು (1983-86). ಅಕಾಡೆಮಿಯ ರಂಗಚಳವಳಿಯನ್ನು ಗ್ರಾಮೀಣ ನೆಲೆಗೆ ಕೊಂಡೊಯ್ದರು ಹಾಗೂ ಬೆಳೆಸಿದರು. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್.ಎಸ್.ಡಿ.) ಸಂಸ್ಥೆಯ ಅಧ್ಯಕ್ಷರಾಗಿಯೂ ಕಂಬಾರರು ಸೇವೆಸಲ್ಲಿಸಿದ್ದಾರೆ. ಚಲನಚಿತ್ರ ರಂಗದಲ್ಲಿಯೂ ಇವರ ಸಾಧನೆ ಅಪಾರವಾದುದು. 5 ಚಲನಚಿತ್ರಗಳನ್ನೂ, 8 ಸಾಕ್ಷ್ಯ ಚಿತ್ರಗಳನ್ನೂ ಇವರು ಸಿದ್ಧಪಡಿಸಿದ್ದಾರೆ. ಹಲವಾರು ಚಿತ್ರಗಳಿಗೆ, ಸಾಕ್ಷ್ಯಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಇವರ ಋಷ್ಯಶೃಂಗ, ಕಾಡುಕುದುರೆ, ಹರಕೆಯ ಕುರಿ ನಾಟಕಗಳು ಚಲನಚಿತ್ರಗಳಾಗಿ ಹೆಸರಾಗಿವೆ. 1978ರಲ್ಲಿ ಕಾಡುಕುದುರೆ ಚಲನಚಿತ್ರ ಭಾರತೀಯ ಪನೋರಮಾವನ್ನು ಪ್ರವೇಶಿಸಿತು. ಉತ್ತಮ ಹಿನ್ನೆಲೆ ಗಾಯನಕ್ಕಾಗಿಯೂ ಈ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯಿತು. ಜೀಕೆ ಮಾಸ್ತರರ ಪ್ರಣಯ ಪ್ರಸಂಗ ಟೆಲಿ ಚಿತ್ರವಾಗಿ ಪ್ರಶಸ್ತಿ ಪಡೆದಿದೆ. 1981ರಲ್ಲಿ ‘ಸಂಗೀತ’ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರವೆಂದು ರಾಜ್ಯಪ್ರಶಸ್ತಿ ಬಂದಿದೆ. ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ – ಈ ಕಾದಂಬರಿಗಳು ಚಲನಚಿತ್ರಗಳಾಗಿವೆ. ಸಿಂಗಾರವ್ವ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದಿದೆ (2003).    ]]>

‍ಲೇಖಕರು G

March 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This