ಮೊಬೈಲ್ ಹಾಡು ….

-ಬಿ.ಎಂ.ಬಷೀರ್ ಗುಜರಿ ಅಂಗಡಿ ಮತ್ತೆ ಮೊಬೈಲ್ ಕಂಪಿಸುತ್ತಿದೆ… ಇನ್‌ಬಾಕ್ಸ್ ತೆರೆದು ನೋಡಿದರೆ ಅವನೇ…ನಗುತ್ತಿದ್ದಾನೆ! ‘ಯಾರು?’ ಎಂಬ ನನ್ನ ಎರಡಕ್ಷರದ ಮೆಸೇಜಿಗೆ ‘ಹುಡುಕು’ ಎಂಬ ಮೂರಕ್ಷರದ ರಿಪ್ಲೆ ಕಳುಹಿಸುತ್ತಾನೆ… ‘ಸಾಯಿ’ ಎಂದು ಕಳುಹಿಸಿದರೆ ‘ಬದುಕು’ ಎಂದು ಮರಳಿಸಿದ ಸಿಟ್ಟಿನಿಂದ ಮೆಸೇಜನ್ನೆಲ್ಲ ಅಳಿಸಿದರೆ ಎದೆಯೊಳಗೇ ‘ಸೇವ್’ ಆಗಿ ನಗುತ್ತಿದ್ದ ಅಳಿಸಿದರೆ…ತುಂಬಿಕೊಳ್ಳುತ್ತಿದ್ದ! ನಂಬರ್‌ಗೆ ಕರೆ ಮಾಡಿದರೆ ಉತ್ತರವಿಲ್ಲ ಯಾಕೆ ಈ ಪ್ರಯಾಸ ಎಂದು ನೇರ ಸೆಂಟರಿಗೆ ನಡೆದು ಸಂಖ್ಯೆ ತೋರಿಸಿದರೆ ಅಲ್ಲೊಂದು ನಕಲಿ ವಿಳಾಸ! ನಗಿಸುತ್ತಿದ್ದ ಅಳಿಸುತ್ತಿದ್ದ ಕಾಡುತ್ತಿದ್ದ ಹಾಡುತ್ತಿದ್ದ ಆಕಾಶದಷ್ಟು ದೂರದಲ್ಲಿದ್ದರೂ ಕೊರಳ ನೀಳ ನರದಷ್ಟು ಹತ್ತಿರದಲ್ಲಿ ನನ್ನ ನೋಡುತ್ತಿದ್ದ ಯಾರಿರಬಹುದು? ತೋರು ಬೆರಳು ಹಿಡಿದು ನಡೆಸಿದ ನನ್ನ ತಂದೆಯೆ? ಚಹಾ ಹೀರುತ್ತಾ ನನ್ನ ಮುಂದೆಯೇ ತುಂಟ ನಗು ಬೀರುತ್ತಿರುವ ಒಲವೆ? ಅಥವಾ…ಮಾತು ಬಿಟ್ಟ ಗೆಳೆಯ? ನನ್ನ ಜನ್ಮಾಂತರದ ಶತ್ರು? ಅಥವಾ..ನೀನೊಬ್ಬನೇ ಇಲ್ಲಿ ಸಾಯಿ ಎಂದು ಸತ್ತು ಹೋದ ಅಣ್ಣ? ಇನ್ನೂ ಹೆರಿಗೆ ನೋವಿನ ತೆರಿಗೆ ಕಟ್ಟುತ್ತಿರುವ ಅಮ್ಮ? ಅಥವಾ… ನನಗೆ ಹುಟ್ಟಲೇ ಇಲ್ಲದ ನನ್ನ ಮುದ್ದಿನ ತಮ್ಮ!? ಒಂದು ಹಿತವಾದ ಗಾಯದಂತಿರುವ ಈತ ಬರೇ ಸಂಖ್ಯೆಯೇ ಆಗಿದ್ದರೆ ಕಳೆದುಳಿದ ಬದುಕಿನ ಒಟ್ಟು ಮೊತ್ತದಿಂದ ಅದನ್ನೂ ಕಳೆದು ಬಿಡುತ್ತಿದ್ದೆ ಅಕ್ಷರವೇ ಆಗಿದ್ದರೆ ಒಂದೇ ಏಟಿಗೆ ಒರೆಸಿ ಹಾಕಿ ಬಿಡುತ್ತಿದ್ದೆ ಭಯವಾಗುತ್ತಿದೆ ನನಗೆ… ಅವನ ಉಸಿರಾಟ ಕೇಳಿಸುತ್ತಿದೆ ಪರಿಮಳ ನನ್ನನ್ನು ಆವರಿಸಿದೆ ಅವನ ರುಚಿ, ಸ್ಪರ್ಶವೂ ದಕ್ಕುತ್ತಿದೆ ಆದರೂ ದೃಷ್ಟಿಗೆ ಸಿಗುತ್ತಿಲ್ಲ…. ಯಾರಿರಬಹುದು ಇವನು? ಹುಡುಕುತ್ತಾ ಹುಡುಕುತ್ತಾ ಮೊಬೈಲ್ ಕರೆನ್ಸಿ ಕರಗುತ್ತಿದೆ ರೀಚಾರ್ಜ್ ಮಾಡಲು ಕೈ ಬರಿದಾಗಿದೆ ಕರೆನ್ಸಿ ಮುಗಿಯುವ ಮುನ್ನ ನನ್ನ ಹುಡುಕಾಟ ಮುಗಿಯಬೇಕಿದೆ ಭಯವಾಗುತ್ತಿದೆ… ಅಗೋ..ಮತ್ತೆ ಮೊಬೈಲ್ ಕಂಪಿಸುತ್ತಿದೆ…!]]>

‍ಲೇಖಕರು avadhi

October 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. ಶಾನಿ

  ನೀನೊಬ್ಬನೇ ಇಲ್ಲಿ ಸಾಯಿ ಎಂದು
  ಸತ್ತು ಹೋದ ಅಣ್ಣ?
  ಇನ್ನೂ ಹೆರಿಗೆ ನೋವಿನ ತೆರಿಗೆ
  ಕಟ್ಟುತ್ತಿರುವ ಅಮ್ಮ?-
  ಎದೆಯನ್ನೇ ಕಂಪಿಸಿದ ಸಾಲುಗಳು

  ಪ್ರತಿಕ್ರಿಯೆ
 2. jahnavi butty

  hridaya tallanisuta chadapadisuttade
  mobile kampisuttide!
  Too good Bashir.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ jahnavi buttyCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: