ಮೋಟುಗೋಡೆ ಕಥೆ ಗೊತ್ತಾ?

ನುಷ್ಯನಿಗೆ ಇರೋ ಚಟಗಳು ಏನಾದರೂ ಇದ್ದುಕೊಂಡು ಹೋಗಲಿ. ಆದರೆ ಈ ತರಲೆ ಮನಸ್ಸು ಇದೆಯಲ್ಲ, ಅದರ ಹಣಿಕಿಕ್ಕೋ ಚಟ ಮಾತ್ರ ಅದರಪ್ಪನಷ್ಟು ತರಲೆ. ಇದ್ದಬದ್ದ ವಿಚಾರಗಳಿಗೆಲ್ಲಾ ಅದು ಕಿವಿಯಾಗುತ್ತೆ. ಬಲು ಕುತೂಹಲ ಅದಕ್ಕೆ. ಎಲ್ಲರ ಗುಟ್ಟುಗಳನ್ನೂ ಗೊತ್ತು ಮಾಡ್ಕೋಬೇಕು ಅಂತಾ ಆಸೆ. ತನ್ನ ಗುಟ್ಟುಗಳನ್ನು ಬಿಟ್ಟು ಕೊಡಬಾರದು ಅಂತಲೂ ಹುನ್ನಾರು ಮಾಡೋ ಅದ್ಭುತ ಪಾಲಿಟಿಷಿಯನ್ನೂ ಹೌದು. ಇಂಥ ಮನಸ್ಸು ಸೆಕ್ಸ್ ಬಗ್ಗೆ ಕೂಡ ಒಳಗೊಳಗೆ ಮಂಡಿಗೆ ತಿನ್ನೋ ಪೋಲಿ. ಪಬ್ಲಿಕ್ ಆಗಿ ಮಾತಾಡೋಕೆ ಎಲ್ಲರೂ ಹಿಂಜರಿಯುವ ಸೆಕ್ಸ್ ಬಗ್ಗೆ ತನ್ನಷ್ಟಕ್ಕೇ ನಾಚುತ್ತಾ ನೀರಾಗುತ್ತಾ ನಿಮಿರುತ್ತಾ ಓ… ಭಲೇ ಫೀಲ್ ಮಾಡ್ಕೊಳ್ಳುತ್ತೆ.

chitra212.jpgಮನಸ್ಸಿನ ಇಂಥ ಸದ್ದಿಲ್ಲದ ಫೀಲಿಂಗಿಗೆ ಕೊಂಚ ಮಾತು ಹಚ್ಚೋಕೆ ಅಂತಲೇ ಒಂದು ಬ್ಲಾಗ್ ಇದೆ. “ಮೋಟುಗೋಡೆಯಾಚೆ ಇಣುಕಿ” ಅನ್ನೋ ರಸಗವಳದಂಥ ಹೆಸರಿನ ಈ ಬ್ಲಾಗ್ “ಅಶ್ಲೀಲತೆಯೆಂಬ ಮೋಟುಗೋಡೆಯನ್ನು ಹತ್ತಿ ಆಚೆಗಿಣುಕುವ ಯತ್ನದಲ್ಲಿ…” ತೊಡಗಿದೆ. ಈ ಬ್ಲಾಗ್ ಹಿಂದೆ ನಿಂತು ಇಷ್ಟೆಲ್ಲಾ ಜಾದೂ ಮಾಡ್ತಿರೋರು ಸುಶ್ರುತ ದೊಡ್ಡೇರಿ, ಶ್ರೀನಿಧಿ ಡಿ ಎಸ್, ಸಂದೀಪ ನಡಹಳ್ಳಿ ಮತ್ತು ಹರ್ಷ ಎಂಬ ಮಿತ್ರರು. ಇವರ ಈ ಬ್ಲಾಗ್ ಹೊಕ್ಕರೆ ಆರೋಗ್ಯಕರ ಸೆಕ್ಸ್ ಬಗ್ಗೆ ಅಷ್ಟೇ ಆರೋಗ್ಯಕರವಾಗಿ ಸಂಕೋಚದ ಹದ್ದು ಮೀರಿ ಹೇಗೆಲ್ಲಾ ಮಾತಾಡಬಹುದು, ನಾಲಿಗೆ ಚಪ್ಪರಿಸಬಹುದು ಅನ್ನೋದರ ದರ್ಶನವಾಗುತ್ತೆ.

ಎಷ್ಟೋ ಪೋಲಿ ಜೋಕುಗಳು, ಅನಂಗನ ಮಂಗಾಟಗಳನ್ನು ನಿರೂಪಿಸುವಂಥ ರಸಮಯ ಪ್ರಸಂಗಗಳು ಈ ಬ್ಲಾಗಿನ ಜಗುಲಿಯಲ್ಲಿ ಓಡಾಡಿಕೊಂಡಿವೆ. ಬಹುತೇಕ ಪ್ರಸಂಗಗಳಿಗೆ ಮಲೆನಾಡಿನ ಹಿನ್ನೆಲೆ ಇದೆ. ಕುತೂಹಲಕ್ಕೆ ವಿಸಿಟ್ ಕೊಟ್ಟೋರನ್ನು ಬನ್ನಿ ಬನ್ನಿ ಅಂತ ಮಲೆನಾಡಿನೋರ ಆಪ್ಯಾಯಮಾನಕರ ರೀತಿಯಲ್ಲೇ ಸ್ವಾಗತಿಸಿ ಕೂರಿಸಿಕೊಳ್ಳುತ್ತೆ. ಚಹಗಿಹ ಕೊಟ್ಟು ಉಪಚರಿಸೋ ರೀತಿಯಲ್ಲೇ ನೀವೆಂದೂ ಮರೆಯಲಾಗದಂತ ಕಚಗುಳಿ ಉಪಚಾರವನ್ನೂ ಮಾಡುತ್ತೆ. ದಿನನಿತ್ಯದ ಆಡುಮಾತಿನಲ್ಲಿ ಬರೋ ದ್ವಂದ್ವಾರ್ಥದ ಸ್ವಾರಸ್ಯವನ್ನಂತೂ ಬಲು ಸೊಗಸಾಗಿ ಹೇಳುತ್ತೆ. 

ಇಷ್ಟಕ್ಕೇ ಇದರ ಲೋಕ ಮುಗಿದುಬಿಡೋದಿಲ್ಲ. ಕಾಮದ ಕುರಿತು ಕನ್ನಡ ಸಾಹಿತ್ಯದ ಗಂಗೆಯಲ್ಲಿರೋ ಜುಳುಜುಳು ನಿನಾದಗಳೆಲ್ಲ ಇಲ್ಲಿ ಕೂತರೆ ಕೇಳಿಸೋ ಹಾಗೆ ಮಾಡುವ ಡೈಮೆನ್ಷನ್ನೂ ಇದಕ್ಕಿದೆ. ಗಂಗಾಧರ ಚಿತ್ತಾಲರ “ಕಾಮಸೂತ್ರ”ದಿಂದ ಹಿಡಿದು ಡುಂಡಿರಾಜ್ ಅವರ ಒಗ್ಗರಣೆಯಂಥ “ಹನಿ”ಗಳವರೆಗೆ ಕಾವ್ಯದಲ್ಲಿ ದಾಖಲಾಗಿರುವ ಕಾಮನ ಹೆಜ್ಜೆಗಳ ಗುರುತನ್ನು ಇದು ಒಟ್ಟಿಗೇ ಇಟ್ಟಿರುತ್ತೆ. ಕಾಮದ ಸೆಳಕು ಬಳುಕು ಝಳಕನ್ನು ಹೀಗೆ ಹಿಡಿದುಕೊಂಡು, ಬಂದವರಿಗೆ ಬೊಗಸೆ ತುಂಬಾ ಮೊಗೆದುಕೊಡುತ್ತಾ ಮತ್ತೆ ಭರ್ತಿಯಾಗುತ್ತಾ ವಿಶಿಷ್ಟ ರುಚಿಯನ್ನು ಉಳಿಸಿಬಿಡುತ್ತೆ. (ಇದರ ರುಚಿ ಎಂಥದು ಎಂದು ತಿಳಿಸೋಕ್ಕೆ ಅಂತಲೇ ಇದರಲ್ಲಿ ಪ್ರಕಟವಾಗಿರೋ ಡುಂಡಿರಾಜ್ ಸಂಶೋಧಿಸಿದ ಕೆಲವು “ವಯಾಗ್ರ” -ಇದನ್ನು “ಶಯ್ಯಾಗೃಹ” ಎಂದು ಓದಿಕೊಂಡರೂ ಅಂಥ ವ್ಯತ್ಯಾಸವೇನೂ ಆಗೋಲ್ಲ- ಮಾತ್ರೆಗಳನ್ನು ಕೊಡಲಾಗಿದೆ, “ಪೋಲಿ ಡ್ರಾಪ್ಸ್” ಅನ್ನೋ ಹೆಸರಲ್ಲಿ).

lovely.jpgಸೆಕ್ಸ್ ಬಗ್ಗೆ ಇಷ್ಟೊಂದು ನಿರಾಳವಾಗಿ ಮಾತು ಹಂಚೋ ಈ ಬ್ಲಾಗ್, ಮಂಡಿಗೆ ತಿನ್ನೋ ಮನಸ್ಸಿನ ಭಾರ ಇಳಿಸಬಲ್ಲ ಹಾಗಿದೆ. ನೀವೂ ಭಾರ ಇಳಿಸಿಕೊಳ್ಳಬೇಕೇ? ಒಂದು ಸಲ ಮೋಟುಗೋಡೆಯಾಚೆ ಇಣುಕಿಯಲ್ಲ. ಪಕ್ಕದ ಲಿಂಕ್ಸ್ ನಲ್ಲಿ ಕಣ್ಣಾಡಿಸಿದರೆ “ಮೋಟುಗೋಡೆ”ಯ ಪಿಸುದನಿ ತಾನೇ ನಿಮ್ಮನ್ನು ಹುಡುಕಿಕೊಂಡು ಬಂದು ಢಿಕ್ಕಿ ಹೊಡೆಯುತ್ತೆ.

‍ಲೇಖಕರು avadhi

July 12, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. ವಿಕಾಸ್

  ನಮಸ್ಕಾರ,

  ಈ ಲೇಖನದ ಜೊತೆಗೆ ಆ ಬ್ಲಾಗ್ ನ ಲಿಂಕ್ ಕೂಡ ಹಾಕಿದ್ರೆ ಓದುಗರಿಗೆ ಅನುಕೂಲ ಆಗ್ತಿತ್ತೆನೋ .
  ಇನ್ನೊಂದು ವಿಷಯವೆಂದರೆ ಆ ಬ್ಲಾಗ್ ‘ಸೆಕ್ಸ್’ ಬಗ್ಗೆ ಖಂಡಿತ ಅಲ್ಲ. ಒಂದು ವರ್ಗದ ಓದುಗರು ಈ ಸೆಕ್ಸ್ ಅಂದಾಕ್ಷಣ ದೂರ ಉಳಿಯುವುದು ಸಹಜ. ಆದ್ದರಿಂದ ಈ ಸ್ಪಷ್ಟೀಕರಣ. ಆಸಕ್ತರು ಯಾವುದಕ್ಕೂ ಒಮ್ಮೆ ಭೇಟಿ ಕೊಟ್ಟು ತೀರ್ಮಾನಿಸಲಿ. ಲಿಂಕ್ ಹೀಗಿದೆ http://www.motugode.blogspot.com

  ನಮ್ಮ ಮಿತ್ರರ ಪ್ರಯತ್ನವನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

  ಪ್ರತಿಕ್ರಿಯೆ
 2. ಮೋಟುಗೋಡೆ ಬಳಗ.

  ನಮಸ್ತೇ,
  ನಮ್ಮ ಪ್ರಯತ್ನವನ್ನ ಗುರುತಿಸಿ ಪ್ರೋತ್ಸಾಹಿಸಿರುವುದಕ್ಕೆ ನಾವು ನಿಮಗೆ ಕೃತಜ್ಞರು.ನೀವು ಬಂದು ಇಣುಕಿ, ಬರೆದಿದ್ದು ಸಂತಸ ತಂದಿತು.
  ಇತೀ,
  ಶ್ರೀನಿಧಿ, ಸುಶ್ರುತ, ಹರ್ಷ, ಸಂದೀಪ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: