ಮೋಡವೊಂದು ಹನಿಯಾಗಲು ನಿರಾಕರಿಸಿದಂತೆ

ಆವಿಗಣ್ಣಿಂದ..

– ರ೦ಜಿತ್ ಅಡಿಗ

ನೀಲಿ ಹೂವು ಆವಿಗಣ್ಣಿಂದ ಮೋಡವೊಂದು ಹನಿಯಾಗಲು ನಿರಾಕರಿಸಿದಂತೆ ಒಂದು ದುಃಖ ಹಾಗೇ ನಿಂತಿತು ಎದೆಯ ಹೊಸ್ತಿಲಲ್ಲ ಕಂಬನಿಯಾಗದೇ ಅವ್ವ ಆದರೆ ಈರುಳ್ಳಿ ಹಚ್ಚುತ್ತಾಳೆ ಚಿಟ್ಟೆ ರೆಕ್ಕೆ ಬಡಿಯುತ್ತೆ ಹುಚ್ಚುಚ್ಚಾಗಿ ಮೇಷ್ಟರಿಗೆ ಮೇಜು ಕಲಹಪ್ರಿಯರಿಗೆ ಗಾಜು ಒಡೆವುದೇ ಮೋಜು ಇಂಥ ಸಮಯದಲ್ಲಿ ಮಾತು ಅಸಹ್ಯ ಮೌನ ಅಸಹನೀಯ ಧ್ಯಾನ ಅಂದರೆ ಕೊಂಚ ಕೊಂಚವಾಗಿ ನಶಿಸುವುದು ಕವಿತೆ ಬರೆವುದು ಆತ್ಮಹತ್ಯೆ. ಕವಿ ಅಂದಂತೆ ಆಕಾಶ ಮಡಚಿ ಜೇಬಿನಲ್ಲಿ ಇಟ್ಟುಕೊಳ್ತಾನಾದರೆ ನಾನೂ ಹಸನ್ಮುಖಿಯಾಗುವೆ ನನ್ನ ಹುಡುಗಿ ಹಸೆಯೇರುವಾಗ ಇಷ್ಟಕ್ಕೆಲ್ಲಾ ಅಳ್ತಾರೇನೋ ಗಂಡಸಾಗಿ ಅಂದಾಗ ಮಾತ್ರ ಅವಳ ಸಾಂತ್ವನಕ್ಕೆ ಬರೆ ಕೊಡುವಂತೆ ಆವಿಗಣ್ಣಲ್ಲಿ ಆಕೆಯನ್ನೇ ನೋಡುತ್ತೇನೆ..]]>

‍ಲೇಖಕರು G

April 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

ಚೈತ್ರಚೇತನ ಕೊನರಿ…

ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ...

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This