– ಪ್ರವರ ಕೊಟ್ಟೂರ್

ಕರೆಂಟು ಹೋಗಿ ಅರ್ಧ ಗಂಟೆಯಾಗಿತ್ತು
ಸೊಳ್ಳೆಗಳ ಕಾಟಕ್ಕೆ ಹೆದರಿ ಮನೆ ಹೊರಗಡೆ
ಅಪ್ಪ ನಾನು ಕಟ್ಟೆ ಮೇಲೆ….
ಮಾತು ಬರದ ಮಳ್ಳಿಗನಂತೆ ನಾನು,
ಮಗ ಮಾತಾಡಲಿ ಎಂದು ಅಪ್ಪ,
ಸೊಳ್ಳೆ ಮಾತ್ರ ಗುಯ್ ಗುಟ್ಟುತಲಿತ್ತು
ಮೌನದ ಮೇಲೆ ಬರೆಯಿಟ್ಟಂತೆ
ಅಮ್ಮ “ರೀ ದೋಸೆ ರೆಡಿ ಮಗನ್ನ ಕರ್ಕೊಂಡ್ ಬನ್ನಿ”
ದೋಸೆ ತಿನ್ನಲು ಶಕ್ತಿ ಕಾಯ್ದಿಟ್ಟುಕೊಂಡವನಂತೆ
ಮೆಲ್ಲಗೆ ಅಡಿಗೆ ಮನೆಗೆ ನುಸುಳಿದೆ…
ಅಪ್ಪ ಅಲ್ಲೇ ಕೂತಿದ್ದರು, ಕೇಳಲಾಗದ ನಾನು
ಹೇಳಲಾಗದ ಅವರೂ,
ನಡುವೆ ಕಿವಿಯಲ್ಲಿ ಸೊಳ್ಳೆ….
]]>
good one
ನನ್ನ ಮತ್ತು ನನ್ನಪ್ಪನ ನಡುವೆಯೂ ಮೌನ ಇರುತ್ತಿತ್ತು ಮಧ್ಯ ಸೊಳ್ಳೆಯ ಗುಂಜಾರವು ಇಲ್ಲದಂಥದು. ಆದರೆ ಆ ಮೌನ ದಲ್ಲಿಯೂ ನಾವು ಮಾತನಾದುತಿದ್ದೆವು.ಗಮನಾರ್ಹ ಪುಟ್ಟ ಕವನ.