ಮ೦ಗಳೂರು ಸ್ಟೇ ಹೋಂ ಪ್ರಕರಣ : 100 ಎಲ್ಲಿದೆ?

ಕ್ಲಿಕ್ಕಿಸಿ).  ಆಗ ಎದ್ದ ಪ್ರಶ್ನೆಗಳಿಗೆ ಉತ್ತರವಾಗಿ ನವೀನ್ ಸೂರಿ೦ಜೆಯವರು ಬರೆದ ಲೇಖನದ ಒ೦ದು ಭಾಗವನ್ನು ಗಣೇಶ್ ಅವರು ಕಳಿಸಿದ್ದಾರೆ. ಅದು ಇಲ್ಲಿದೆ.

100 ಗೆ ಯಾಕೆ ಕರೆ ಮಾಡಿಲ್ಲ? ತುಂಬಾ ಜನ ಕೇಳುತ್ತಾರೆ. ನೀವು 100 ಗೆ ಯಾಕೆ ಕರೆ ಮಾಡಿಲ್ಲ ಎಂದು. ಪೊಲೀಸರು ಕೂಡಾ ವಿಚಾರಣೆ ವೇಳೆ ಇದನ್ನೇ ಕೇಳಿದರು. ನಾನು ನನ್ನ ಕೈಯ್ಯಲ್ಲಿ ಲ್ಯಾಂಡ್ ಫೋನ್ ಇಟ್ಟುಕೊಂಡಿಲ್ಲ. ನನ್ನ ಮೊಬೈಲ್ ಫೋನ್‌ನಿಂದ ಮಂಗಳೂರಿನಲ್ಲಿ 100 ಗೆ ಕರೆ ಮಾಡಿದರೆ “ಪ್ಲೀಸ್ ಚೆಕ್ ದ ನಂಬರ್” ಎಂದು ವಾಯ್ಸ್ ಬರುತ್ತದೆ. ಅದರರ್ಥ ಮೋಬೈಲ್‌ನಿಂದ 100 ಗೆ ಕರೆ ಕನೆಕ್ಟ್ ಆಗುವುದೇ ಇಲ್ಲ. ಬೇಕಿದ್ರೆ ಇಲ್ಲಿ ಟ್ರೈ ಮಾಡಿ. ಇಷ್ಟಕ್ಕೂ ನಾನೀಗಲೂ 100 ಗೆ ಕರೆ ಮಾಡುತ್ತಾ ಕೂರಲು ನಾನೇನು 90ರ ದಶಕದಲ್ಲಿ ಇಲ್ಲ. ನನ್ನ ಬಳಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಇಲಾಖಾ ಮೊಬೈಲ್ ನಂಬರ್ ಇದೆ. ಯಾವ ಯಾವ ಸ್ಥಳ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೆ ಎಂಬುದೂ ನನಗೆ ಸ್ಪಷ್ಟವಾಗಿ ತಿಳಿದಿದೆ. ಆದುದರಿಂದ ಘಟನೆ ಆದ ತಕ್ಷಣ ನನ್ನ ನೆನಪಿಗೆ ಬಂದಿದ್ದು ಸ್ಥಳಿಯ ಇನ್ಸ್‌ಪೆಕ್ಟರ್‌. ಅವರು ಫೋನ್ ಕರೆ ಸ್ವೀಕರಿಸಿಲ್ಲ ಮತ್ತು ಕೆಲವೇ ಸೆಕೆಂಡುಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದಾಳಿಕೋರರ ಮಧ್ಯೆ ಕಂಡು ಬರುತ್ತಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ನಾಲ್ಕು ಮಂದಿ ಪೊಲೀಸರು ಘಟನಾ ಸ್ಥಳದಲ್ಲಿ ಇರುವುದನ್ನು ಗಮನಿಸಿಯೂ ನಾನು ಬೇರೆ ಪೊಲೀಸ್ ಅಧಿಕಾರಿಗಳಿಗೆ ಅಥವಾ 100 ಗೆ ಕರೆ ಮಾಡಲು ಪ್ರಯತ್ನಿಸಬೇಕು ಎನ್ನುವವರಿಗೆ ನಾನೇನೂ ಉತ್ತರಿಸಲಾರೆ. ಚಿತ್ರ ಕೃಪೆ : ಮಂಗಳೂರು ನೀವ್ಸ್ ನಿಮ್ಮ ತಂಗಿ ಮೇಲೆ ಹಲ್ಲೆಯಾಗುತ್ತಿದ್ದರೆ ನೀವು ಶೂಟಿಂಗ್ ಮಾಡುತ್ತಿದ್ರಾ ? ಇಂತಹ ಪ್ರಶ್ನೆಯನ್ನು ಹಲವಾರು ಪ್ರಗತಿಪರ ಲೇಖಕರೂ, ಕೇಸರಿ ಬರಹಗಾರರೂ, ಸಾಮಾನ್ಯ ಜನರೆಲ್ಲರೂ ಕೇಳಿದ್ದಾರೆ. ಪೊಲೀಸರೂ ಇದೇ ಪ್ರಶ್ನೆಯನ್ನು ಕೇಳಿದ್ದರು. ಪೊಲೀಸರಿಗೆ ನಾನು ಲಿಖಿತವಾಗಿ ನೀಡಿದ ಉತ್ತರ ಹೀಗಿದೆ: “ಈ ಪ್ರಶ್ನೆಯೇ ಪತ್ರಕರ್ತನಾದ ನನಗೆ ಅಪ್ರಸ್ತುತ. ನಾನು ನನ್ನ ವೃತ್ತಿ ಜೀವನದಲ್ಲಿ ಹಲವಾರು ಆಕ್ಸಿಡೆಂಟ್‌ಗಳನ್ನು ಶೂಟಿಂಗ್ ಮಾಡಿಸಿ ಸುದ್ದಿ ಮಾಡಿದ್ದೇನೆ. ವಿಮಾನ ದುರಂತದಲ್ಲಿ 158 ಮಂದಿ ಜೀವಂತ ಸುಟ್ಟು ಕರಕಲಾಗುವ ದೃಶ್ಯ ನನ್ನ ಬಳಿ ಇದೆ. ಅವರೆಲ್ಲರೂ ನನ್ನ ಅಣ್ಣಂದಿರಾಗಿದ್ದರೆ…… ನಾನು ಶೂಟಿಂಗ್ ಮಾಡಿ ಸುದ್ದಿ ಮಾಡುತ್ತಿದ್ದೆನಾ? ನಾನು ಎಷ್ಟೋ ಕೊಲೆ ಪ್ರಕರಣಗಳನ್ನು ವರದಿ ಮಾಡಿದ್ದೇನೆ. ನಿಮ್ಮ ತಂದೆಯೇ ಕೊಲೆಯಾಗಿದ್ದರೆ ನೀವು ವರದಿ ಮಾಡುತ್ತಿದ್ರಾ ಎಂದು ನನ್ನನ್ನು ಕೇಳಿದರೆ ಹೇಗೆ? ಅತ್ಯಾಚಾರಕ್ಕೆ ಒಳಗಾದ ಎಷ್ಟೋ ಹುಡುಗಿಯರ ಹಕ್ಕು, ಬದುಕಿನ ಬಗ್ಗೆ ಸುದ್ದಿ ಮಾಡಿದ್ದೇವೆ. ನಿಮ್ಮ ತಂಗಿಯನ್ನು ಯಾರಾದರೂ ಅತ್ಯಾಚಾರ ಮಾಡಿದ್ದರೆ ಸುದ್ದಿ ಮಾಡುತ್ತಿದ್ದಿರಾ ಎಂದು ಯಾರಾದರೂ ಕೇಳಿದರೆ ಏನನ್ನಬೇಕು? ಪತ್ರಕರ್ತರಿಗೆ ಮಾತ್ರವಲ್ಲ, ಪೊಲೀಸರು ಮತ್ತು ನ್ಯಾಯಾಧೀಶರಿಗೂ ಈ ಪ್ರಶ್ನೆ ಅಪ್ರಸ್ತುತ. ಹಲ್ಲೆಯನ್ನು ನೀವು ಯಾಕೆ ತಡೆಯಲು ಹೋಗಿಲ್ಲ? ಅಷ್ಟೊಂದು ಮಂದಿ ಯುವತಿಯರನ್ನು ಹಿಡಿದು ಅಮಾನವೀಯವಾಗಿ ಹಲ್ಲೆ ಮಾಡುತ್ತಿರಬೇಕಾದರೆ ನೀವ್ಯಾಕೆ ತಡೆಯಲು ಹೋಗಿಲ್ಲ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ನಾನು ಮೊದಲಿನಿಂದಲೂ ಈ ಬಗ್ಗೆ ಹೇಳುತ್ತಲೇ ಬಂದರೂ ಉತ್ತರ ಕೆಲವರಿಗೆ ಸಮಾಧಾನ ತಂದಿಲ್ಲ. ದಾಳಿಕೋರರು ಅಂದಾಜು ಮೂವತ್ತರಿಂದ ನಲ್ವತ್ತು ಮಂದಿ ಇದ್ದಿರಬಹುದು. ಅವರೆಲ್ಲರೂ ಮದ್ಯಪಾನ ಮಾಡಿದ್ದರು. ಅವರು ಗೆಸ್ಟ್ ಹೌಸ್ ಒಳ ಪ್ರವೇಶಿಸಿದ ನಂತರ ಅವರ ಗಬ್ಬು ವಾಸನೆ ಸ್ಪಷ್ಟವಾಗಿ ಅರಿವಿಗೆ ಬರುತ್ತಿತ್ತು. ಅವರು ಎಷ್ಟೊಂದು ಕುಡಿದ ಮತ್ತಿನಲ್ಲಿದ್ದರೆಂದರೆ ಅವರು ಹುಡುಗಿಯರ ಮೇಲೆ ನಡೆಸಿದ ಅಮಾನವೀಯ ಹಲ್ಲೆಯಿಂದಲೇ ಗೊತ್ತಾಗುತ್ತದೆ. ನನ್ನ ಮುಖ ಪರಿಚಯ ಅಲ್ಲಿದ್ದ ಯಾವಾನಿಗೂ ಇರಲಿಲ್ಲ. ಮೊದಲೇ ಕುಡಿದಿದ್ದ ಅವರು ನಾನು ಹೇಳಿದ್ದನ್ನು ಕೇಳೋ ಸಾಧ್ಯತೆಗಳೇ ಇಲ್ಲ. ಒಂದು ವೇಳೆ ಅವರು ಹೊಡೆಯುತ್ತಿದ್ದ ಸಂಧರ್ಭ ನಾನು ಮಧ್ಯೆ ಹೋಗಿ ತಡೆದಿದ್ದರೆ ನನ್ನ ಮೇಲೆ ಹಲ್ಲೆಗಳಾಗುತ್ತಿತ್ತು. ಆದುದರಿಂದ ನಲ್ವತ್ತು ಮಂದಿ ಪೈಶಾಚಿಕ ಜೀವಿಗಳ ಎದುರು ನಾನು ನಿಸ್ಸಾಹಾಯಕನಾಗಿದ್ದೆ. ಇಷ್ಟಕ್ಕೂ ದಾಳಿಯ ಮಧ್ಯೆ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಕಂಡು ಬಂದಿದ್ದಾರೆ. ಅವರೇನೂ ನನ್ನಂತೆ ನಿಸ್ಸಾಹಾಯಕರಲ್ಲ. ಅವರ ಸೊಂಟದಲ್ಲಿ ರಿವಾಲ್ವರ್ ನೇತಾಡುತ್ತಿತ್ತು. ಆದರೆ ಅವರು ದಾಳಿಕೋರರ ಜೊತೆ ಸೇರಿ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಹೀಗಿರುವಾಗ ನಾನು ಯಾರನ್ನು ಹೇಗೆ ತಡೆಯಬೇಕಿತ್ತು ?]]>

‍ಲೇಖಕರು G

August 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

6 ಪ್ರತಿಕ್ರಿಯೆಗಳು

 1. Geetha b u

  Naveen sooranji avarige uttarisuvavaru yaaru?? Prashnegalannu kelidhavarige uttara bekilla. Artha maadikolluva namage ee samajaayishi bekilla.

  ಪ್ರತಿಕ್ರಿಯೆ
 2. ku.sa.madhusudan

  ಪ್ರೀತಿಯ ನವೀನ್, ನನಗೆ ನಿಮ್ಮ ವಾದವನ್ನು ಒಪ್ಪುತ್ತೇನೆ,ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿಂದ ಮಾತನಾಡಿದರೆ ನೀನು ಸಾಬರ …..ಗೆ ಹುಟ್ಟಿದವನ ಅಂತಾ ನನ್ನನ್ನು ಪ್ರಶ್ನೆ ಮಾಡಿದ ಸಂಘಪರಿವಾರದವರನ್ನು ಹತ್ತಿರದಿಂದ ಕಂಡವನು ನಾನು. ಹಾಗಾಗಿ ನೀವೆಷ್ಟು ಪ್ರಗತಿಪರವಾಗಿ ಮಾತನಾಡಿದರೂ ಅವರಿಗದು ಅರ್ಥವಾಗುವುದಿಲ್ಲ ಅಥವಾ ಅರ್ಥವಾಗದವರಂತೆ ನಟಿಸುತ್ತಾರೆ.ಆದ್ದರಿಂದ ಇಂತಹ ತರಲೆ-ಭಂಡತನದ ಪ್ರಶ್ನೆ ಅನುಮಾನಗಳಿಗೆ ನೀವು ಬಾರಿ ಬಾರಿ ಉತ್ತರ ಕೊಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಪ್ರಾಮಾಣಿಕತೆ ಬಗ್ಗೆ ನಮಗೆ ನಂಬಿಕೆಯಿದೆ.ಕ್ಯಾರಿ ಆನ್. ನಿಮ್ಮ ಸಂಗಾತಿ ಕು.ಸ.ಮಧುಸೂದನ್.

  ಪ್ರತಿಕ್ರಿಯೆ
 3. varsa sagar

  basic knowledge – you have to add std code to dial land line telephone number. as a journalist if you don’t know god alone save u!

  ಪ್ರತಿಕ್ರಿಯೆ
 4. ganesh

  vasu sagar, besic knowledge nivu beleskolli. naveen rannu mangalore na navu chennagi thilkondiddivi. avru helta irodannu poorti odi. 4 nimisha dalli obba vyakti en madbahudo adannu madiddare avru. anantra dali yalli police ru kansiddare. gatane mugida nantra nu phone madta kutkolloke agalla. naveen yaru anta omme mangalore ge bandu keli. besic knowledge bagge matado modlu yara bagge matadta iddiri anta yochisi

  ganesh
  iruvailu

  ಪ್ರತಿಕ್ರಿಯೆ
 5. varsa sagar

  mr. ganesh, i only wrote if a journalist does not know how to dial 100, he is not a journalist. if he did not know that one has to add std code to dial land line from mobile phone, then what knowledge he got? also it will take not more that 50 seconds to inform.
  you might know him, mr. Ganesh, who he is. i read his writing and commented. and do not threaten me like “yara bagge matadta iddiri anta yochisi” as if i have committed great mistake. do you think i should come to mangalore, go to kadri hills and shout loudly who is naveen? rubbish.
  as far i know he is a working in a news channel, thats all. i know my limits. do not cross the limit, please ganesh iruvailu. be polite in your writing. no more comments for your utterance.

  ಪ್ರತಿಕ್ರಿಯೆ
 6. ganesh

  varsa sagar, 100 ge std code hakbeku annodu moorkatana da paramaavadhi.. naveen tv reporter matra alla. avarobbaru social activist kooda… avra sambaladalli esto makkalu shalege hogtare anta nimgenu gottu? nive helida hage kadriyalli gobbe haki nodi. yaradru heltare naveen sir yaru anta…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: