ಮ೦ಜುನಾಥ್ ಲತಾ ಪುಸ್ತಕಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ

ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿಯನ್ನು 2003ನೇ ಸಾಲಿನಿಂದ ಆರಂಭಿಸಲಾಗಿದೆ. ಅಯಾ ವರ್ಷ ಪ್ರಕಟವಾದ ಕಥಾಸಂಕಲಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆಮಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. 2011ನೇ ಸಾಲಿನ ಪ್ರಶಸ್ತಿಗೆ ಈ ಬಾರಿ ಉದಯೋನ್ಮುಖ ಕತೆಗಾರ ಶ್ರೀ ಮಂಜುನಾಥ್ ಲತಾ ಅವರ ‘ಕತೆ ಎಂಬ ಇರಿವ ಈ ಅಲಗು ಕಥಾಸಂಕಲನವು ಭಾಜನವಾಗಿದೆ. ಈ ವರ್ಷ ಒಟ್ಟು ಅರತ್ತಮೂರು ಕಥಾ ಸಂಕಲನಗಳು ಆಯ್ಕೆ ಸಮಿತಿಯ ಮುಂದೆ ಬಂದಿದ್ದು ಎರಡನೇ ಸುತ್ತಿನಲ್ಲಿ ಹನ್ನೊಂದು ಕಥಾಸಂಕಲನಗಳು ಆಯ್ಕೆಗೊಂಡವು. ಅಂತಿಮವಾಗಿ ಶ್ರೀ ಮಂಜುನಾಥ್ ಲತಾ ಅವರ ‘ಕತೆ ಎಂಬ ಇರಿವ ಈ ಅಲಗು’ ಕಥಾ ಸಂಕಲನವು ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಇಪ್ಪತ್ತು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ್ರವನ್ನೊಳಗೊಂಡಿರುತ್ತದೆ. ನಾಡಿನ ಕತೆಗಾರರಾದ ಡಾ. ನಟರಾಜ ಹುಳಿಯಾರ್ ಮತ್ತು ಶ್ರೀ ಕೇಶವ ಮಳಗಿ ಅವರು ಈ ಬಾರಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯ ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ದಿನಾಂಕ 17.6.2012 ರಂದು ಸಂಜೆ ನಾಲ್ಕು ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮವು ಅಂದು ಸಂಜೆ 4.00 ಗಂಟೆಗೆ ಖ್ಯಾತ ಗಾಯಕಿ ಶ್ರೀಮತಿ ಸಂಗೀತ ಕುಲಕಣರ್ ಅವರ ಭಾವಗಾಯನದೊಡನೆ ಆರಂಭವಾಗಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸಂಸ್ಕೃತಿ ಚಿಂತಕರೂ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಕರೂ ಆದ ಡಾ. ರಹಮತ್ ತರಿಕೆರೆ ಅವರು ಮುಖ್ಯ ಅತಿಥಿಗಳಾಗಿರುವರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಈ ಕಾರ್ಯಕ್ರಮದ ಜೊತೆಗೆ ಕಳೆದ ವರ್ಷ ನಿಧನರಾದ ಪ್ರತಿಭಾವಂತ ಕತೆಗಾರ ದಿವಂಗತ ಶಿವಳ್ಳಿ ಕೆಂಪೇಗೌಡ ಅವರ ಸಮಗ್ರ ಕತೆ ಮತ್ತು ಕವನ ಸಂಪುಟ – ಗೀಜಗನಗೂಡು- ಕೃತಿಯನ್ನು ಪ್ರಕಟಿಸಿ ಬಿಡುಗಡೆಮಾಡುತ್ತಿದೆ.    ]]>

‍ಲೇಖಕರು G

May 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇಶಾಂಶ ಹುಡಗಿ, ಎಂ ನಾಗಪ್ಪ, ಪಿ ಎಂ ಮಣೂರ ಸೇರಿದಂತೆ ಐವರಿಗೆ ‘ಅಮ್ಮ’ ಗೌರವ ಪುರಸ್ಕಾರ

ದೇಶಾಂಶ ಹುಡಗಿ, ಎಂ ನಾಗಪ್ಪ, ಪಿ ಎಂ ಮಣೂರ ಸೇರಿದಂತೆ ಐವರಿಗೆ ‘ಅಮ್ಮ’ ಗೌರವ ಪುರಸ್ಕಾರ

ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ʼಅಮ್ಮ ಗೌರವʼ ಪುರಸ್ಕಾರಕ್ಕೆ ಐವರು...

‘ಅಮ್ಮ ಪ್ರಶಸ್ತಿ’ ಪ್ರಕಟ: ಕಿರಣ್ ಭಟ್, ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ ಸೇರಿದಂತೆ 7 ಬರಹಗಾರರಿಗೆ ಪ್ರಶಸ್ತಿ

‘ಅಮ್ಮ ಪ್ರಶಸ್ತಿ’ ಪ್ರಕಟ: ಕಿರಣ್ ಭಟ್, ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ ಸೇರಿದಂತೆ 7 ಬರಹಗಾರರಿಗೆ ಪ್ರಶಸ್ತಿ

ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದ್ದು ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ, ಕೆ.ಎ.ದಯಾನಂದ, ಕಿರಣ್ ಭಟ್, ಶ್ರೀನಿವಾಸ...

ಬಿದಲೋಟಿ ರಂಗನಾಥ್, ಶೋಭಾ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ

ಬಿದಲೋಟಿ ರಂಗನಾಥ್, ಶೋಭಾ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ

ಪ್ರತಿಷ್ಠಿತ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಡಾ. ಶೋಭಾ ನಾಯಕ್ ಮತ್ತು ಬಿದಲೋಟಿ ರಂಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ....

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: