‘ಯಾಮಿನಿ’ ಎಂಬ ಕಾದಂಬರಿಗೆ ಕಾವು

ಜೋಗಿ ಈಗ ‘ಯಾಮಿನಿ’ ಎಂಬ ಕಾದಂಬರಿಗೆ ಕಾವು ನೀಡುತ್ತಿದ್ದಾರೆ. ಅವರು ಇತ್ತೀಚೆಗೆ ಬರೆದ ‘ನದಿಯ ನೆನಪಿನ ಹಂಗು’ ವಿನಂತೆ ಯಾಮಿನಿ ಸಹಾ ಓದುಗರ ಎದೆಯಾಳಕ್ಕೆ ಇಳಿಯಲಿದೆ. ಜೋಗಿ ‘ಅವಧಿ’ಯ ಅಂಗಳಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರ ನದಿಯ ನೆನಪಿನ ಹಂಗು ಬಗ್ಗೆ ಮಹೇಶ್ ಎಸ್ ಎಲ್ ಅವರು ತಮ್ಮ manassu ಮನಸಿನ್ಯಾಗೊಂದು ಮನಸು ಬ್ಲಾಗ್ನಲ್ಲಿ ಬರೆದ ನೋಟವನ್ನು ನೀಡುತ್ತಿದ್ದೇವೆ. ಪ್ರತಿಗಳಿಗಾಗಿ ಸಂಪರ್ಕಿಸಿ: [email protected]
ನದಿಗೆ ನೆನಪಿನ ಹಂಗು ಕಾದಂಬರಿಯಾ, ಕಥೆಯಾ, ಅಥವಾ ನಮ್ಮಂತೆ ನಮ್ಮೊಳಗಿನೊಬ್ಬನ ಆತ್ಮಕಥೆಯಾ . ಇಲ್ಲಾ ಅದು ಇಂತಹದೆ ಎಂದು ಮಾತಿನಲ್ಲಿ ಹೇಳುವುದಕ್ಕೆ ಸಾದ್ಯವಿಲ್ಲ ಅನ್ನ್ಸುತ್ತೆ. ಪರಿಸರ ಅದನ್ನು ಉಳಿಸುವುದಕ್ಕೆ ಹೋರಾಡುವ ಹೋರಾಡುತ್ತಲೇ ಜ್ಞಾನೋದಯವಾದವನ ಹಾಗೆ ಮಾತನಾಡುತ್ತ ತನ್ನನ್ನು ತಾನೆ ಪ್ರಶ್ನಿಸಿಕೊಳ್ಳವ ಪತ್ರಕರ್ತ ಆನಂದ ನಮ್ಮೆಲ್ಲರಲ್ಲೂ ಇರಬಹುದಾ ಅಂತ ಒಂದು ಕ್ಷಣ ಅನ್ನಿಸದೆ ಇರುವುದಿಲ್ಲ.
ಕಾದಂಬರಿ ಓದುತ್ತಾ ಸಾಗಿದ ಹಾಗೆ ಸೋಮಯಾಜಿಗಳು ಅವರ ಮಗ ಆನಂದ ಆನಂದನ ಪ್ರೇಯಸಿ ಸುಗಂಧಿ…… ಈ ಮೂರು ಪಾತ್ರಗಳು ಅದೆಷ್ಟು ಕಾಡುತ್ತವೆ . ಸುಗಂಧಿ ಆನಂದರ ಸಂಬಂಧವನ್ನು ಮುಗಿಸಲು ಸೋಮಯಾಜಿಗಳು ಕೊಡುವ ಕಾರಣಗಳು ಹೂಡುವ ತಂತ್ರಗಳು, ಸುಗಂಧಿ ಆತ್ಮಹತ್ಯ ಮಾಡಿಕೋಂಡ ನಂತರ ತಮ್ಮನ್ನು ತಾವೆ ಸಂತೈಸಿಕೊಳ್ಳುವ ರೀತಿ ಅಸಹಾಯಕ ತಂದೆಯ ಹತಾಶ್ ಪ್ರಯತ್ನಗಳಂತೆ ಕಾಣುತ್ತವೆ. ಕಾದಂಬರಿಯ ಮೊದಲಿಗೆ ಬರುವ ಸದಾನಂದ ರೈ ಮಗಳು ವಿಣಾಸರಸ್ವತಿ ಅವಳ ಗಂಡ ನಾಗೇಶ್ ಮಯ್ಯ ನಿರಂಜನನ್ನು ಕೊಲ್ಲಿಸಿದ್ದಾರೆ ಎನ್ನುವ ಗಾಂಪರ ಗುಂಪು ಅದಕ್ಕಾಗಿ ಒಂದು ಹೋರಾಟವೆಂಬ ಹಾರಾಟ ಎಲ್ಲಾ ವಿಚಿತ್ರವಾಗಿ ಕಾಣುತ್ತವೆ. ನಾನಿಲ್ಲಿ ಕಾದಂಬರಿಯ ವಿಶ್ಲೆಷಣೆ ಮಾಡುತ್ತಿಲ್ಲ ಆ ತರಹದ ಘಟನೆಗಳು ನಿಜ ಜೀವನದಲ್ಲಿ ನಡೆಯುತ್ತಲೆ ಇರುತ್ತವೆ ಜೋಗಿಯವರು ಅದನ್ನೆ ಹೇಳುತ್ತಾರೆ ಆದರೆ ಕೇಳೊರು ಯಾರು? ರವಿ ಬೆಳಗೆರೆಯವರು ತಮ್ಮ ಒಂದು ಬರಹದಲ್ಲಿ ಕಾದಂಬರಿಕಾರನಾಗುವವನಿಗೆ ಏನು ಬರದಿದ್ದರು ಸ್ವಲ್ಪ ಸುಳ್ಳು ಹೇಳುವುದಕ್ಕೆ ಬರಬೇಕು ಎಂಬರ್ಥದಲ್ಲಿ ಬರೆಯುತ್ತಾರೆ ಇಲ್ಲಿ ಜೋಗಿಯಯರು ಆ ಮಾತನ್ನು ಸುಳ್ಳು ಮಾಡಿದ್ದಾರೆ.
ಇದು ಅವರ ಕನಸೊ ಕಲ್ಪನೆಯೊ ಅಥವಾ ನಾನು ಅದನ್ನು ಹೀಗೆ ಅರ್ಥೈಸಿಕೊಳ್ಳುತ್ತಿದೆನಾ? ಗೊತ್ತಿಲ್ಲ ಅವರು ಪರಿಸರ ಉಳಿಸಿ ಅಂತ ಆನಂದ ಮೂಲಕ ಹೇಳುತ್ತಾರೆ. ನಾವು ಧರ್ಮ ಜಾತಿಗಳನ್ನು ಬಿಟ್ಟು ಬರಲಾರದಷ್ಟು ದೂರ ಸಾಗಿದ್ದೆವೆ ಎಂದು ಗೋಪಾಲಕೃಷ್ಣ ತೋಳ್ಪಡಿತ್ತಾಯರ ಮುಖಾಂತರ ಹೇಲಲು ಪ್ರಯತ್ನಿಸುತ್ತಾ ಸಾಗುತ್ತಾರೆ. ಇನ್ನೂ ಸ್ವಾಮಿಗಳು ಅವರ ಕರ್ಮಕಾಂಡಗಳನ್ನ ಮತ್ತು ಅವರು ಮನುಷ್ಯರೇ ಎಂಬುದನ್ನ ವಿದ್ಯಾನಂದರ ಮುಖೆನ ಹೇಳುವ ಪ್ರಯತ್ನ ಪಟ್ಟಿದ್ದಾರೆ. ರಘುನಂದನ ನರ್ಮದೆ ಅವರ ನಡುವಿನ ಪ್ರೇಮಕಹಾನಿ. ನರ್ಮದೆ ತನ್ನ ತಂದೆ ಗೋಪಾಲಕೃಷ್ಣ ಸೋಮಯಾಜಿಯ ಸಾವಿನಿಂದ ತನ್ನ ಸ್ಥಿಮಿತ ಕಳೆದುಕೊಳ್ಳುವುದು . ರಘು ನರ್ಮದೆಯನ್ನು ಮದುವೆಯಾಗಿ ಎರಡುವರೆ ತಿಂಗಳಿಗೆ ಅವಳಿಗೆ ನಾಲ್ಕು ತಿಂಗಳು ಅಂತ ಗೊತ್ತಾದಾಗ ಆ ಮಗು ನನ್ನದಲ್ಲ ನರ್ಮದೆ ನನ್ನ ಜೊತೆ ನಾಟಕವಾಡುತ್ತಿದ್ದಾಳಾ ಹೀಗೆಲ್ಲ ಯೋಚನೆ ಮಾಡುತ್ತಾನೆ. ಆದರೆ ಓದುವು ಮನಸ್ಸಿಗೆ ಒಂದು ಹೊಲಸು ಅನ್ನಬಹುದಾದಂತಹ ಯೋಚನೆ ಬರುತ್ತದೆ. ಗೋಪಾಲಕೃಷ್ಣ ಸೋಮಯಾಜಿ ಮಗಳನ್ನು ಮೋಹಿಸಿ ಆತ್ಮಹತ್ಯ ಮಾಡಿಕೊಂಡನೆ? ಅದರಿಂದಾಗಿಯೆ ನರ್ಮದೆ ತನ್ನ ಸ್ಥಿಮಿತ ಕಳೆದುಕೊಂಡಳೆ? ಈ ಥರ ನನಗೆ ಗೊತ್ತು ಇದು ತೀರ ಕೀಳುಮಟ್ಟದ ಯೊಚನೆ ಎಂದು ಆದರೂ ತಳ್ಳಿ ಹಾಕುವಂತಿಲ್ಲವಲ್ಲ.
ಒಟ್ನಲ್ಲಿ ಕಾದಂಬರಿ ಕಾಡುತ್ತದೆ, ಮನಸ್ಸಿನಲ್ಲಿ ನದಿಯಂತೆ ಭೋರ್ಗರೆಯುತ್ತದೆ ವರ್ಷಕ್ಕೊ ಎರಡು ವರ್ಷಕ್ಕೊ ಒಮ್ಮೆ ಶ್ರಾವಣ ಮಾಸದ ಸೋಮವಾರದಂದು ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟು ನೇತ್ರಾವತಿಯಲ್ಲಿ ಮಿಂದು ಧನ್ಯರಾಗುವವರು, ಸಮಾಜ ಸುಧಾರಣೆಯೇ ನಮ್ಮ ಜನ್ಮಸಿದ್ದ ಹಕ್ಕು (ಹಾಗಂತ ಅಂದು ಕೊಂಡಿರುವ ಜನ)ಎಲ್ಲರೂ ಓದಬಹುದಾದಂತಹ ಕಾದಂಬರಿಯ ತರಹದಂತಹ ಬರಹ ನದಿಯ ನೆನಪಿನ ಹಂಗು . ಇಲ್ಲಿ ಪುಸ್ತಕದ ಬಗ್ಗೆ ನನಗನಿಸಿದ್ದನು ಗೀಚಿದ್ದೆನೆ . ಮತ್ತೊಬ್ಬರಿಗೆ ಬೇರೆ ರೀತಿ ಅರ್ಥವಾಗಬಾರದು ಅಂತ ನಿಯಮವೆನಿಲ್ಲ ಅಲ್ವಾ? ಪುಸ್ತಕ ಓದಿ ದಕ್ಷಿಣ ಕನ್ನಡದ ಯಾತ್ರೆ ಮಾಡಿ ಬಂದಂತಾಗುತ್ತೆ ಜೋಗಿಯವರಿಂದ ಇನ್ನಷ್ಟು ಇಂತಹ ಬರಹಗಳನ್ನು ನೀರಿಕ್ಷಿಸುತ್ತಾ-
 
-ಮಹೇಶ್ ಎಸ್ ಎಲ್

‍ಲೇಖಕರು avadhi

April 28, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This