ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು?!

–  ಸಂದೀಪ್ ಕಾಮತ್ “ನಮ್ಮ ಬಿಸಿನೆಸ್ ಈಗಾಗ್ಲೇ ಡಲ್ ಹೊಡೀತಾ ಇದೆ, ಇನ್ನು ನೀವು ಡಬ್ಬಿಂಗ್ ಎಲ್ಲ ತಂದು ನಮ್ಮನ್ನು ಬೀದಿಗೆ ಇಳಿಸಬೇಡ್ರಪ್ಪ” ಅನ್ನೋ ಒಂದು ವಾಕ್ಯದ ಅಜೆಂಡಾ ಈಗ ಭಾಷೆಯ ಮೇಲೆ ಆಗೋ ಆಕ್ರಮಣ, ಸಂಸ್ಕೃತಿಯ ಮೇಲಿನ ಅತ್ಯಾಚಾರ ಇತ್ಯಾದಿ ಇತ್ಯಾದಿ ಆಗಿ ಕೊನೆಗೆ ಆಮೀರ್ ಖಾನೇ ಬುರುಡೆ ಪುರಾಣದವ ಅನ್ನೋ ಮಟ್ಟಿಗೆ ತಲುಪಿದ್ದು ವಿಷಾದನೀಯ. ಹಿಂದೆ ಕಂಪ್ಯೂಟರ್ ಬಂದ್ರೆ ಯಾರಿಗೂ ಕೆಲಸವೆ ಇರಲ್ಲ ಎಲ್ಲರೂ ಬೀದಿಗೆ ಬೀಳ್ತಾರೆ ಅನ್ನೋ ಭಯ ಇತ್ತಂತೆ. ಈಗ ಅದೇ ಕಂಪ್ಯೂಟರ್ ಲಕ್ಷಾಂತರ ಜನರಿಗೆ ಕೆಲಸ ನೀಡಿದೆ. ಹಿಂದೆ ಟಿ.ವಿ ಬಂದಾಗಲೂ ಅದು ಬಂದ ಮೇಲೆ ಪೇಪರ್ ಯಾರೂ ಓದಲ್ಲ, ಪುಸ್ತಕ ಯಾರೂ ಓದಲ್ಲ ಅನ್ನೋ ಭ್ರಮೆ ಇದ್ದು ಈಗ ಬೆಳಗೆರೆ, ವಿಶ್ವೇಶ್ವರ ಭಟ್, ಜೋಗಿ ಮುಂತಾದವರ ಪುಸ್ತಕಗಳು ಬಿಸಿ ಮಸಾಲೆ ದೋಸೆಯ ಹಾಗೆ ಖರ್ಚಾಗಿ ಆ ಭ್ರಮೆಯೂ ತೊಲಗಿದೆ. ಇತ್ತೀಚೆಗೆ ‘ವಿಜಯ ವಾಣಿಯ’ ಆಗಮನದಿಂದ ಪೇಪರ್ ಬಿಸಿನೆಸ್ ಗೂ ಏನೂ ಅಪಾಯ ಇಲ್ಲ ಅನ್ನೋದೂ ಸಾಬೀತಾಗಿದೆ. ಕನ್ನಡ ಸಿನೆಮಾಗಳನ್ನು ನೋಡುವುದೇ ಒಂದು ವೃತವೆಂಬಂತೆ ಪಾಲಿಸುತ್ತಿದ್ದ ನಿಷ್ಠಾವಂತ ಯುವಕ/ಯುವತಿಯರ ದೊಡ್ಡ ಗುಂಪಿನ ಪರಿಚಯ ನನಗಿದೆ. ಆದರೆ ಆ ಗುಂಪಿನಲ್ಲಿದ್ದ ಹಲವರು ಡಬ್ಬಿಂಗ್ ಪರವಾಗಿದ್ದಕ್ಕೆ ಅವರನ್ನೇ ಕನ್ನಡ ದ್ರೋಹಿಗಳು ಅನ್ನೋ ಪಟ್ಟ ನೀಡಲಾಗ್ತಾ ಇದೆ ಅವರಿಗೆ. ಕನ್ನಡ ಚಿತ್ರರಂಗದವರು ಚಿತ್ರೋದ್ಯಮವನ್ನು ಕಲಾ ಸೇವೆ ಅನ್ನೋದಕ್ಕಿಂತ ಅದನ್ನು ಒಂದು ಬಿಸಿನೆಸ್ ಆಗಿ ನಡೆಸಿದರೆ ಅವರಿಗೆ ಒಳಿತು. ಇಂಥ ಮಾತು ಹಲವರನ್ನು ಕೆರಳಿಸುವುದರಲ್ಲೂ ಸಂಶಯ ಇಲ್ಲ. ಆದರೆ ಇದೊಂದು ಕಟು ಸತ್ಯ. ಮಲ್ಟಿಪ್ಲೆಕ್ಸ್ ಅನ್ನೋ ಒಂದು ಪಕ್ಕಾ ಬಿಸಿನೆಸ್ ಮಾಡೆಲ್ ಅನ್ನು ಮಲ್ಟಿಪ್ಲೆಕ್ಸ್ ಸಂಸ್ಕೃತಿ ಅಂತ ಲೇವಡಿ ಮಾಡೋ ಜನರು ಮಲ್ಟಿಪ್ಲೆಕ್ಸ್ ಯಾಕೆ ಅಷ್ಟೊಂದು ಜನರಿಗೆ ಇಷ್ಟ ಅಂತ ಅರ್ಥ ಮಾಡಿಕೊಳ್ಳೋದೇ ಇಲ್ಲ! ಮಲ್ಟಿಪ್ಲೆಕ್ಸ್ ಗೆ ಹೋದವನು ಒಂದು ಚಿತ್ರಕ್ಕೆ ಟಿಕೆಟ್ ಸಿಗದೇ ಇದ್ದರೆ ಇನ್ನೊಂದು ಚಿತ್ರ ನೋಡಿಕೊಂಡು ಬರ್ತಾನೆ. ಅಷ್ಟಾದಾಗ ಆ ಬಿಸಿನೆಸ್ ಮಾಡೆಲ್ ಚೆನ್ನಾಗೇ ಕೆಲಸ ಮಾಡ್ತಾ ಇದೆ ಅಂತ ಅರ್ಥ! ಪ್ರಸನ್ನ ಪ್ರಮೋದ್ ಗಳಂಥ ಥಿಯೇಟರ್ ಗೆ ಹೋದರೇ ಥಿಯೇಟರ್ ನ ಕೆಲಸದವರೇ ಬ್ಲ್ಯಾಕ್ ನಲ್ಲಿ ಟಿಕೆಟ್ ಮಾರ್ತಾ ಇರ್ತಾರೆ. ೭೦ ರೂನ ಟಿಕೆಟ್ ಅನ್ನು ಬ್ಲ್ಯಾಕ್ ನಲ್ಲಿ ೧೫೦ ಕೊಟ್ಟು ತಗೊಳ್ಳೋದಕ್ಕಿಂತ ಮಲ್ಟಿಪ್ಲೆಕ್ಸ್ ಗೆ ಹೊಗಿ ಅದೇ ರೇಟ್ ಕೊಟ್ಟು ನೋಡೋದು ವಾಸಿ ಅಲ್ಲವೆ? ನಾಗವಾರದ ಥಿಯೇಟರ್ ಒಂದರಲ್ಲಿ ಇಡೀ ಸಿನೆಮಾ ಕಾಲು ಮೇಲಿಟ್ಟುಕೊಂಡೇ ನೋಡಬೇಕಾಯ್ತು. ಅಷ್ಟೊಂದು ಇಲಿಗಳಿದ್ದವು ಅಲ್ಲಿ! ಮಲ್ಟಿಪ್ಲೆಕ್ಸ್ ಸಂಸ್ಕೃತಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸೋ ಜನರು ಒಮ್ಮೆ ಆ ಥಿಯೇಟರ್ನಲ್ಲಿ ಕಾಲು ಕೆಳಗಿಟ್ಟು ಸಿನೆಮಾ ನೋಡಿ ಪ್ಲೀಸ್…. ಕನ್ನಡ ಚಿತ್ರಗಳಿಗೆ ಥಿಯೇಟರ್ಗಳೆ ಸಿಗಲ್ಲ ಅಂತ ಕೊರಗುತ್ತಿದ್ದ ನಿರ್ಮಾಪಕ ತನ್ನದೆ ಹೆಸರಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಿಸಿದಾಗ ಅದರಲ್ಲಿ ಇರೊ ಎಲ್ಲಾ ಥಿಯೇಟರ್ ಗಳನ್ನು ಕನ್ನಡಕ್ಕೇ ಬಿಟ್ಟು ಕೊಡ್ತಾನಾ ? ಉತ್ತರ ನಿಮಗೇ ಗೊತ್ತಿದೆ. ಕನ್ನಡ ಚಿತ್ರರಂಗ ಬಹುದೊಡ್ಡ ಸಮಸ್ಯೆ ಅಂದ್ರೆ 100 Days!!! ತನ್ನ ಚಿತ್ರ ನೂರು ದಿನ ಓಡಬೆಕು ಅನ್ನೋ ದುರಾಸೆಗೆ ಕಷ್ಟಪಟ್ಟು ತಾನೇ ಹಣ ಖರ್ಚು ಮಾಡಿ ಸಿನೆಮಾ ಓಡಿಸಿ ಬೇರೆ ಸಿನೆಮಾಗಳಿಗೆ ಥಿಯೇಟರ್ ಗಳೇ ಸಿಗದ ಹಾಗೆ ಮಾಡೋದ್ರಲ್ಲಿ ನಂ ೧ ನಮ್ಮವರು. ಇನ್ನೊಂದು ಸಮಸ್ಯೆ ಫಾರಿನ್ ಲೊಕೇಶನ್! ಇಲ್ಲೇ ಕೆ.ಅರ್ ಮಾರುಕಟ್ಟೆಯಲ್ಲಿ ಶೂಟ್ ಮಾಡಬಹುದಾದ ಹಾಡೊಂದನ್ನು ಲಂಡನ್ ಗೆ ಹೋಗಿ ಅಲ್ಲಿ ಪಟ್ಟಾಪಟ್ಟಿ ಚಡ್ಡಿ ಹಾಗಿ ಕುಣಿದು ಶೂಟ್ ಮಾಡಿ ಬರುತ್ತಾರೆ. ಯಾರದೋ ದುಡ್ಡು ಯಾರದೋ ಜಾತ್ರೆ! ಇಂಥ ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡರೆ ಕನ್ನಡ ಚಿತ್ರೋದ್ಯಮ ಸುಧಾರಿಸೋದ್ರಲ್ಲಿ ಸಂಶಯವೇ ಇಲ್ಲ. ಬಂಡವಾಳಶಾಹಿಗಳ ಬಂಡವಾಳ ಬಿಚ್ಚಿಡೋ ಒಂದು ಸಿನೆಮಾ ಮಾಡ್ತೀನಿ ಅಂತ ಹೊರಟರೆ ಅದಕ್ಕೆ ಬಂಡವಾಳ ಹಾಕಲು ಬಂಡವಾಳಶಾಹಿಯೊಬ್ಬನ ಅಗತ್ಯ ನಮಗಿರುತ್ತೆ. ಇದೊಂದು ಸರಳ ಸತ್ಯ. ಸರಳವಾದ ವಿಷಯಗಳಿಗೆ ಕ್ರಾಂತಿಯ/ಭಾಷಾ ಪ್ರೇಮದ/ದೇಶಪ್ರೇಮದ ಲೇಪ ಕೊಟ್ಟು ಚರ್ಚೆ ಮಾಡೋದು ನೋಡಿದ್ರೆ ಬೇಜಾರಾಗುತ್ತೆ.  ]]>

‍ಲೇಖಕರು G

June 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

2 ಪ್ರತಿಕ್ರಿಯೆಗಳು

  1. praveen kulkarni

    ಸಂದೀಪ್ ಅವರೇ ತುಂಬಾ ಒಳ್ಳೇ ವಿಚಾರಗಳು. ಕನ್ನಡ ಸಿನಿಮಾ ನೋಡದೇ ಇರೋದಕ್ಕೆ ಮುಖ್ಯ ಕಾರಣ , ನನ್ನ ಪ್ರಕಾರ, ಹೊಸದೇನೂ ಮಾಡದೇ ಇರೋದು. ಹೊಸ ಥರ ಕಥೆಯಾಗಲೀ, ಸಂಗೀತವಾಗಲೀ ಏನು ಬರ್ತಾ ಇಲ್ಲ. ಹಳೇ ಬಾಟಲಿ , ಹಳೇ ಮದ್ಯ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: