ಯುಗಾದಿ

 3265463209_e3a84fca82-ಅಕ್ಷತಾ.ಕೆ
ಚಿತ್ರ: ಬಾಲು ಮಂದರ್ತಿ
——————————————–
ಬೆಳಿಗ್ಗೆ ನಾವೇಳುವುದಕ್ಕೆ ಮುಂಚೆಯೇ
 ಚಿತ್ತಾರದ ಪರದೆ ಎದುರು
 ಕಂಪ್ಯೂಟರ್ ಕೀಲಿ ಒತ್ತುತ್ತ ಜ್ಯೋತಿಷಿ
 ವರ್ಷ ಭವಿಷ್ಯದ ಶುಭಾಶುಭದಲ್ಲಿ ಮುಳುಗಿದ್ದರು
 ಎದುರಿಗೆ ನಳನಳಿಸುತಿದ್ದ
 ರಂಗೋಲಿಯ ಎಳೆ ಮಾವಿನ ತೋರಣ
 ಯುಗಾದಿಗೆ ಕಳೆ ತಂದಿತ್ತು 
 ನಡುವೆ ಮಿಂಚಿನಂತೆ ತೂರಿಬಂದ
 ಟೂತ್ ಪೇಸ್ಟ್ ಜಾಹಿರಾತು ನಮಗೆ 
 ಬಚ್ಚಲು ಮನೆಯ ದಾರಿ ತೋರಿಸಿತ್ತು
  
 ಅಭ್ಯಂಜನದ ಆಸೆಯಾಗುವ ಮೊದಲೇ
 ದೇವಸ್ಥಾನದ ಎದುರು
 ನೀರುಜಡೆಯ ಸುಂದರಿ 
 ವಿಶೇಷ ಪೂಜೆಯ ವರದಿ ನೀಡುತಿದ್ದಳು 
 ಮುಂದೆ ಹೋಗಿ ಎಂದು ದೂಡುವವರು 
 ಇಲ್ಲದ್ದರಿಂದ
 ಅಜ್ಜಿ ಸೋಫಾದ ಮೇಲೆ ಕಾಲು ಚಾಚಿ 
 ಗಂಟೆ ಗಟ್ಟಲೆ ವೆಂಕಟರಮಣನನ್ನು 
 ಕಣ್ತುಂಬಿಕೊಳ್ಳುತಿದ್ದಳು
 ಅಲ್ಲಿ ದೇವರನ್ನೆ ಮರೆತ ಭಕ್ತಗಣ 
 ಮೈಕ್ ಹಿಡಿದ ಸುಂದರಿಯ ಸುತ್ತ ನೆರೆದಿತ್ತು
ಹಬ್ಬಕ್ಕಾಗಿ ಮಾಡಿದ ಪಕ್ವಾನ್ನಗಳ
ರೆಸಿಪಿ ನೋಟ್ ಮಾಡಿಕೊಳ್ಳುವ ಭರದಲ್ಲಿ
ಅಡುಗೆ ಮಾಡಲು ಪುರಸೊತ್ತಾಗದೆ  
ಫ್ರಿಜ್ನಲ್ಲಿದ್ದ ಸಾರು ಬಳಕೆಗೆ ಬಂತು
ಇನ್ನೇನು ಕಣ್ಣೆಳೆಯುತಿದೆ ಅಂತನ್ನಿಸುವಷ್ಟರಲ್ಲಿ
ಜರತಾರಿ ಸೀರೆಯುಟ್ಟ ಹೆಣ್ಣು 
ಬಂಗಾರದ ಬೇಟೆ ಪ್ರಾರಂಭಿಸಿ 
ನಮ್ಮಗಳ ಕಣ್ಣರಳಿಸಿದಳು
ಮಕ್ಕಳಿಗೆ ಬೇವು ಬೆಲ್ಲ ಹಂಚಿ ಬನ್ನಿರೋ
ಎಂದು ಬೇಡಿದರೆ  ಹಬ್ಬಕ್ಕಾಗಿಯೇ 
ಹಿಟ್ ಸಿನಿಮಾ ಹಾಕಿದಾರೆ  
ನೋಡಿ ಎಂಜಾಯ್ ಮಾಡಿ
ಎಂದು ಒಟ್ಟಿಗೆ ಬೊಬ್ಬಿಟ್ಟವು
 
ಚಂದಿರನ ನೋಡಲು 
ಹೊರಹೋಗಬೇಕು ಎಂದುಕೊಳ್ಳುವಷ್ಟರಲ್ಲಿ 
ಚೆಂದದ ಚಂದ್ರಮ
ಮಧುರ ಗೀತೆಯೊಂದಿಗೆ ಮೂಡಿಬಂದು
ಕುಳಿತಲ್ಲೆ ದರ್ಶನ ಭಾಗ್ಯ ಒದಗಿಸಿ ಧನ್ಯರಾಗಿಸಿದ
ಬಾಳೆ ಕಂಬ, ಮಾವಿನ ಚಿಗುರು
ಹೊಸ ಪತ್ತಲ, ಕೋಗಿಲೆ ಗಾನ,
ಬೇವಿನ ಕಹಿ, ಬೆಲ್ಲದ ಸವಿ
ಕೊನೆಗೆ ಪಂಚಾಂಗ ಶ್ರವಣ
ಚಂದ್ರದರ್ಶನದವರೆಗೆ ಎಲ್ಲ
ಲಭಿಸಿ ಯುಗಾದಿ ಸಮಾಪ್ತಿ
 ಪ್ರತಿಬಿಂಬದೊಳಗೇ ಬಿಂಬ ಪಡೆದ ನಮಗೆ
 ಯುಗಾದಿ ಯುಗದ ಆದಿಯೇ?
 ಅಂತ್ಯವೇ? 
 ಮಧ್ಯಂತರ ವಿರಾಮವೇ?

‍ಲೇಖಕರು avadhi

March 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

6 ಪ್ರತಿಕ್ರಿಯೆಗಳು

 1. shivu.k

  ವಾಹ್ ! ಮಾಡ್ರನ್ ಯುಗಾದಿಯ ಸುಂದರ ಪ್ರತಿಬಿಂಬ ಕವನದ ಮುಖಾಂತರ..
  ಕವನ ಯಾರದು…ಬಾಲುಮಂದರ್ತಿಯದೋ…ಅಥವ ಆಕ್ಷತಾಳದೋ…
  ಅಥವ ಚಿತ್ರ ಯಾರದು….ಅಕ್ಷತಾಳದೋ…ಅಥವ ಬಾಲು ಮಂದರ್ತಿಯದೋ…
  ಒಟ್ಟಾರೆ ಕವನ ಮತ್ತು ಚಿತ್ರ ಎರಡು ಸಿಕ್ಕಾಪಟ್ಟೇ ಸೂಪರ್…..
  ಇಬ್ಬರಿಗೂ ಯುಗಾದಿಯ ಶುಭಾಶಯಗಳು…

  ಪ್ರತಿಕ್ರಿಯೆ
 2. ಡಿ,ಎಸ್.ರಾಮಸ್ವಾಮಿ

  ಇವತ್ತು ದೂರದರ್ಶನ ಕವಿಗೋಷ್ಠಿಯಲ್ಲಿ ಇದೇ ಪದ್ಯ ನೀವು ಓದುತ್ತಿದ್ದಾಗ ಎಲ್ಲೋ ಓದಿದ್ದಲ್ಲ ಅನ್ನಿಸ್ತು. ಆಮೇಲೆ ನಿಮ್ಮ message ನೆನಪಾಯ್ತು. ಪದ್ಯ ಚೆನ್ನಾಗಿದೆ. ವಿರೋಧೀ ಸಂವತ್ಸರದ ಶುಭಾಷಯಗಳು

  ಪ್ರತಿಕ್ರಿಯೆ
 3. Kirankumari

  dear Akshatha…nimma E kavanavannu Ugadi dina DD chandana-chanel nalli kElisikonde. thumba chennagide. stree ananyatheya prashneyannu..Yugada Adi, anthya,madhyantharada virama..da mulaka haakikoLLuva prashne..prasthutha Patriarchy system-ge dodda savalu.
  thanks..nimagoo ugadi-wishes

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: