ರಂಗಾಯಣ ತಂಡದಿಂದ
ಏನ್ ಹುಚ್ಚೂರಿ..
ದಿನಾಂಕ
ಏಪ್ರಿಲ್ 21 ಶನಿವಾರ ಸಂಜೆ 7.30ಕ್ಕೆ
ಏಪ್ರಿಲ್ 22 ಭಾನುವಾರ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ
ಸ್ಥಳ
ರಂಗಶಂಕರ, ಜೆ.ಪಿ. ನಗರ, ಬೆಂಗಳೂರು
ಪ್ರಖ್ಯಾತ ಫ್ರೆಂಚ್ ಪ್ರಹಸನಕಾರ ಮೋಲಿಯರನದ್ದೊಂದು ನಾಟಕವಿದೆ: ಜಂಟಲ್ಮನ್ ಆಗಲಿಕ್ಕೆ ಹೊರಟ ಬೂಜ್ವರ್ಾ ಎಂದು ಅದರ ಹೆಸರು. ಇಂದಿನ ಪರಿಸ್ಥಿತಿಗೆ ಹೇಳಿಮಾಡಿಸಿದ ಪ್ರಹಸನವದು. ಆ ನಾಟಕವನ್ನು, ಏನ್ ಹುಚ್ಚೂರೀ. . ಯಾಕ್ಹಿಂಗಾಡ್ತೀರಿ ಎಂದು ಕನ್ನಡಕ್ಕೆ ಅಳವಡಿಸಿ ರಂಗಾಯಣದ ನಟರಿಗಾಗಿ ನಿದರ್ೆಶಿಸಿದ್ದಾರೆ ಖ್ಯಾತ ನಿದರ್ೆಶಕ ಪ್ರಸನ್ನರವರು.
ಬದಲಾದ ಪರಿಸ್ಥಿತಿ, ಏನದು ಬದಲಾದ ಪರಿಸ್ಥಿತಿ? ವ್ಯವಹಾರ ಚುರುಕಾಗಿದೆ, ಸ್ಪದರ್ಾಗುಣ ಮೇಲೆದ್ದು ಬಂದಿದೆ. ಮುನ್ನುಗ್ಗಬೇಕು ಪ್ರತಿಸ್ಪದರ್ಿಗಳನ್ನು ಬಡಿದುರುಳಿಸಬೇಕು ರಕ್ತಹೀರಬೇಕು ಎಂಬ ಮನೋವೃತ್ತಿ ಜಾಗೃತವಾಗಿದೆ. ಸಿದ್ಧಾಂತ ಸೈದ್ಧಾಂತಿಕತೆ ಸಮಾಜವಾದ ರಾಷ್ಟ್ರಪ್ರೇಮ ತ್ಯಾಗ ವೈರಾಗ್ಯ ಅಹಿಂಸೆ ಇತ್ಯಾದಿ ಮೌಲ್ಯಗಳು ಸಪ್ಪೆಯಾಗಿ ಕಾಣತೊಡಗಿದೆ. ತನ್ನಹಕ್ಕು ತನ್ನಸವಲತ್ತು ತನ್ನಆಸ್ತಿ ಹಾಗೂ ತನಗಾಗುತ್ತಿರಬಹುದಾದ ಅನ್ಯಾಯಗಳು ಈ ಹೊಸ ಸಾವ್ಕಾರರ ಕಾಳಜಿಗಳಾಗಿವೆ. ಅಂತಸ್ತಿನ ಪ್ರಜ್ಞೆ ಅಹಂಕಾರ ಸ್ವಾಭಿಮಾನ ಹಾಗೂ ಬಾಹ್ಯಾಡಂಬರಗಳು ಇವರ ಲಕ್ಷಣಗಳಾಗಿವೆ.
ಇತ್ತ ಸಂಸ್ಕೃತಿಯೂ ಬದಲಾಗಿದೆ: ಸಂಸ್ಕೃತಿ ಎಡಬಿಡಂಗಿಯಾಗಿದೆ, ಭಾಷೆ ಎಡಬಿಡಂಗಿಯಾಗಿದೆ, ವೇಷ ಎಡಬಿಡಂಗಿಯಾಗಿದೆ, ವ್ಯವಹಾರ ಎಡಬಿಡಂಗಿಯಾಗಿದೆ. ಈ ಹೊಸ ಸಾವ್ಕಾರರಿಗೆ ಅರಿವಿನ ಗಂಭೀರ ಕೊರತೆಯಿದೆ:
ಮೋಲಿಯರನ ನಾಟಕವು ವಿಡಂಬಣೆ ಮಾಡುವುದು ಇದೇ ತಲೆಕೆಳಗುಸಭ್ಯತೆಯನ್ನು. ಇಡೀ ಪರಿಸ್ಥಿತಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿ, ತಾನೂ ನಕ್ಕು ಇತರರನ್ನೂ ನಗಿಸುತ್ತಾನೆ ಮೋಲಿಯರ್. ನಾಟಕ ಮತ್ತೇನು ಮಾಡಲು ಸಾಧ್ಯ ಹೇಳಿ? ಯಾರಮೇಲೆ ಆಕ್ರೋಶ ವ್ಯಕ್ತಪಡಿಸುತ್ತೀರಿ? ಹೊಸಸಾವ್ಕಾರರು ನಮ್ಮವರೇ ತಾನೆ? ನಮ್ಮದೇ ಊರು-ಮನೆಯವರು. ನಮ್ಮದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಫಲಗಳು.
Watched this play today,and hats off to Prasanna for such a nice direction.It’s wonderful and entertaining.