ರಂಗ ಪ್ರಯೋಗದಲ್ಲಿ ನಾಳೆ ‘ಯಶೋಧರಾ’

ಯೂ ಟ್ಯೂಬ್ ನಲ್ಲೇಕೆ ನಾಟಕ ನೋಡೋದು. ಅವರ್ಯಾರೂ ನಟರಲ್ಲ. ಶಿರಸಿಯಲ್ಲಿ ಇರುವ ವೈದ್ಯರುಗಳು ವರ್ಷಕ್ಕೊಮ್ಮೆ ಒಂದು ನಾಟಕ ಆಡುತ್ತಾರೆ. ಅವರ ಜತೆ ಕೆಲ ಆಸಕ್ತ ಬೇರೆ ವೃತ್ತಿಯವರೂ ಸೇರುವುದುಂಟು. ಮಾಡೋದು ಒಂದೇ ಶೋ. ಒಂದು ತಿಂಗಳ ತಾಲೀಮು. ಆಸ್ಪತ್ರೆ, ಆಪರೇಷನ್ ಅಂತ ಕೆಲಸ ಮುಗಿಸಿ ರಾತ್ರಿ ರಿಹರ್ಸಲ್ ಗೆ ಸೇರುತ್ತಾರೆ. ಗಂಭೀರವಾಗಿ ಪ್ರಾಕ್ಟೀಸ್ ಮಾಡುತ್ತಾರೆ.

ಜಗತ್ತಿನ ಭಿನ್ನ ಪಠ್ಯಗಳ ಜೊತೆಯ ಬೌದ್ಧಿಕ ಅನುಸಂಧಾನವನ್ನೂ ಈ ತಾಲೀಮಿನ ಅವಧಿಯಲ್ಲಿ ಪಡೆಯುತ್ತಾರೆ. ದೀರ್ಘ ಚರ್ಚೆ ನಡೆಸುತ್ತಾರೆ. ಕಳೆದ 10 ವರ್ಷಗಳಿಂದ ಈ ತಂಡದೊಂದಿಗೆ ನಾಟಕ ಕಟ್ಟುತ್ತಿರುವರ ಶುದ್ಧ ಹವ್ಯಾಸ.. ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ.

ಹಾ! ಅಲ್ಲಿ ಡಾ.ಶಿವರಾಮ ಅಂತ ಇದ್ದಾರೆ ಅವರದೊಂದು ಕಣ್ಣಿನ ಆಸ್ಪತ್ರೆ ಇದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅದು. ಅಲ್ಲಿ ಮಾಳಿಗೆಯ ಮೇಲೆ ಚಿಕ್ಕ ಸ್ಟೇಜ್ ಕಟ್ಟಿದ್ದಾರೆ. 150 ಜನ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಖುರ್ಚಿ, ಮೈಕ್ ವ್ಯವಸ್ಥೆ ಎಲ್ಲವೂ ಅವರದೇ. ಸಾರ್ವಜನಿಕರಿಗಾಗಿ, ಸಾಹಿತ್ಯ ಸಂಗೀತದಂತಹ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಾರೆ. ಯಾವ ಸ್ವಾರ್ಥವೂ ಇಲ್ಲದೆ.

ಅಲ್ಲಿಯೇ ಮಕರ ಸಂಕ್ರಮಣದಂದು ಮಾಸ್ತಿಯವರ ‘ಯಶೋಧರಾ’ ನಾಟಕ ಪ್ರಯೋಗಿಸುತ್ತಿದ್ದೇವೆ. ಅವರೂ ಪಾತ್ರವಹಿಸುತ್ತಿದ್ದಾರೆ.. ಬನ್ನಿ. ದುರಿತ ಕಾಲ ದಾಟುವ ಪ್ರಯತ್ನದ ಅಂಗವಾಗಿ ರಂಗಪ್ರಯತ್ನ.

‍ಲೇಖಕರು Avadhi

January 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This