ರವಿ ಹೆಗ್ಡೆ ಮತ್ತೆ ಶಾಲೆಗೆ ಹೋದಾಗ..

ಮೂವತ್ತು ವರ್ಷಗಳ ನ೦ತರ ಮತ್ತೆ ನಾ ಶಾಲೆಗೆ ಹೋದಾಗ..

– ರವಿ ಹೆಗ್ಡೆ

 

ನನ್ನ ಮಗಳನ್ನು ಬೆಂಗಳೂರಿನ ದೊಡ್ಡ ಪ್ರೈಮರಿ ಸ್ಕೂಲಿಗೆ ಸೇರಿಸಿದಾಗಿನಿಂದ ನನಗೆ ನನ್ನ ಮೊದಲ ಶಾಲೆಯ ನೆನಪು ಕಾಡುತ್ತಿತ್ತು. ಉತ್ತರ ಕನ್ನಡದ ಸಿದ್ದಾಪುರ ನಾನು ನನ್ನ ಬಾಲ್ಯ ಕಳೆದ ಊರು. ಈಗಲೂ ಯಾರಾದರೂ ಸಿದ್ದಾಪುರ ಅಂದರೆ ಸಾಕು, ನನ್ನ ‘ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪ’ ಕುರಿತು ವಿಚಾರಿಸಿಕೊಳ್ಳುವಷ್ಟು ತೀವ್ರ ಆತ್ಮೀಯತೆ ಆ ಶಾಲೆಯ ಬಗ್ಗೆ. ಈಗ ನಾಲ್ಕಾರು ವರ್ಷದಿಂದ ಯಾಕೋ ಅಲ್ಲಿಗೆ ಹೋಗಿಬರಬೇಕು ಅನ್ನಿಸುತ್ತಿತ್ತು. ಇತ್ತೀಚೆಗೆ ಆ ಕಡೆ ಹೋಗುವ ಪ್ರಸಂಗವೂ ಒದಗಿಬಂದಿತ್ತು. ಸೋ… ಸುಮಾರು 30 ವರ್ಷಗಳ ನಂತರ ಮತ್ತೆ ನಾನು ಆ ಶಾಲೆಗೆ ಹೋದಾಗ ರಜೆ! ಆದರೂ ಅಲ್ಲಿ ನನ್ನ ಮಗಳು, ಪತ್ನಿಯ ಜೊತೆ ಸುತ್ತಾಡಿ ಶಾಲೆಯಲ್ಲಿ ನಾನು ಎಲ್ಲೆಲ್ಲಿ, ಏನೇನು ಕಿತಾಪತಿ ಮಾಡಿದ್ದೆ ಎಂಬ ಕಥೆಯನ್ನೆಲ್ಲ ಹೇಳುತ್ತ ನನ್ನ ಬಾಲ್ಯದ ಬಗ್ಗೆ ನಾನೇ ಮುದಗೊಳ್ಳುತ್ತ ಅರ್ಧ ಗಂಟೆ ಕಳೆದು ಬಂದೆ. ಆ ಶಾಲೆ ಅಂದು ಹೇಗಿತ್ತೋ ಇಂದೂ ಹಾಗೇ ಇದೆ. ಆದರೆ, ಅಂದು ನಾನು ಪುಟಾಣಿಯಾಗಿದ್ದ ಕಾರಣವೋ ಏನೋ… ಶಾಲೆ ತುಂಬಾ ದೊಡ್ಡದಾಗಿ ಕಾಣುತ್ತಿದ್ದ ನೆನಪು. ಇಂದು ನೋಡಿದಾಗ ಇದೇನಿದು ಇಷ್ಟೇ ಚಿಕ್ಕ ಶಾಲೆಯಾ! – ಅಂತ ಅನಿಸಿತು. ಒಂದರಿಂದ ಏಳನೇ ತರಗತಿಯ ಎಲ್ಲಾ ಕೊಠಡಿಗಳ ಮುಂದೆ ನಿಂತು ನನ್ನ ಮಗಳಿಗೆ ಕಥೆ ಹೇಳುವಾಗ ನನ್ನ ನೆನಪಿನ ಶಕ್ತಿಗೆ ನಾನೇ ಬೆರಗಾಗಿದ್ದು ನಿಜ. ಮಿದುಳೊಂದು ಅದ್ಭುತ ಸಿಪಿಯು! (ಚಿತ್ರದಲ್ಲಿ – ಒಂದು ಮತ್ತು ಎರಡನೇ ತರಗತಿ ಕಲಿತ ಶಾಲಾ ಕೊಠಡಿಯ ಮುಂದೆ ನಾನು ಮತ್ತು ನನ್ನ ಡಾರ್ಲಿಂಗ್ ಡಾಟರ್.)]]>

‍ಲೇಖಕರು G

August 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. D.RAVI VARMA

    sir, nimma barhada mulaka naanu nanna shalege hogi bande.. alli shale compound godege onda maadi bisikondaddu alle shaleyalli nanna geleyana pencil kaddaddu ellavu nenapige bantu swalpa hottu attu bitte … savi nenapugalu beku saviyalii baduku… allave ……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: