ರವೀಂದ್ರ ಮಾವಖಂಡ recommends 'ದೇವೂಳ್'

ಒಳ್ಳೆಯ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ ನನಗಾದರೂ ಎಲ್ಲಿಯ ಸಮಾಧಾನ ? ಹೀಗಾಗಿ ಈಗಷ್ಟೇ ನೋಡಿದ ಒಂದು ಮರಾಠಿ ಸಿನಿಮಾ ಬಗ್ಗೆ ಎರಡು ಸಾಲು ಬರೆಯಲೇಬೇಕು. ಮೊನ್ನೆ ಮೊನ್ನೆ ಬ್ಯಾರಿ ಸಿನಿಮಾದ ಜತೆಗೆ ಸ್ವರ್ಣಕಮಲ ಪ್ರಶಸ್ತಿಯನ್ನು ಹಂಚಿಕೊಂಡ ಚಿತ್ರ ಮರಾಠಿಯ ‘ದೇವೂಳ್’ (ದೇವಸ್ಥಾನ). ಮುಗ್ಧನೊಬ್ಬನಿಗೆ ಕನಸಿನಲ್ಲಿ ದೇವರು ಕಂಡಿದ್ದು, ಹೇಗೆ ಮಂದಿರವಾಗಿ, ಒಂದು ವ್ಯವಸ್ಥೆಯಾಗಿ ಬದಲಾಗುತ್ತದೆ, ರಾಜಕಾರಣಿಗಳು, ಪುಡಾರಿಗಳು, ಪತ್ರಕರ್ತರು ಇಂಥವುಗಳನ್ನೆಲ್ಲ ಹೇಗೆ ತಮಗೆ ಅನುಕೂಲ ಆಗುವ ಹಾಗೆ ಬಳಸಿಕೊಳ್ಳುತ್ತಾರೆ, ಅದರಿಂದ ಎಂಥೆಂಥ ನೆಗೆಟಿವ್ ಬದಲಾವಣೆಗಳು ಸಂಭವಿಸುತ್ತವೆ ಎಂಬುದು ಇದರ ಒಟ್ಟು ಸಾರ ಎನ್ನಬಹುದೇನೋ ? ಇದರಲ್ಲಿ ಮುಗ್ಧನ ಪಾತ್ರ ನಿರ್ವಹಿಸಿ, ಸಿನಿಮಾಕ್ಕೆ ಕಥೆ ಹಾಗೂ ಸಂಭಾಷಣೆ ಬರೆದವರು ಗಿರೀಶ್ ಕುಲಕರ್ಣಿ. ಅವರಿಗೆ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಸಂಭಾಷಣೆಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಈ ಚಿತ್ರವನ್ನು ನೋಡಿ, ಅನುಭವಿಸಿದರೇ ಚೆಂದ. ನನ್ನ ನೆಚ್ಚಿನ ನಟರಾದ ನಾನಾ ಪಾಟೇಕರ್ ಹಾಗೂ ನಾಸಿರುದ್ದೀನ್ ಷಾ ಈ ಚಿತ್ರದಲ್ಲಿದ್ದಾರೆ. ಸಂಗೀತ ಮನ ಮುಟ್ಟುವಂತಿದೆ. ಈ ಸಿನಿಮಾವನ್ನು ನೋಡಲೇಬೇಕು ಎಂದು ಒತ್ತಾಯಿಸಿದ ಅಕ್ಕ Smita Kaikini ಅವರಿಗೆ ಹಾಗೂ ಇದರ ಪ್ರತಿಯನ್ನು ಕೊಟ್ಟ Aravinda Navada ಅವರಿಗೆ ಕೃತಜ್ಞ.]]>

‍ಲೇಖಕರು G

March 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. malathi S

  Ravindra Mavakhanda!!
  thank you. me too looking forward to watch this movie..
  malathi S

  ಪ್ರತಿಕ್ರಿಯೆ
 2. D.RAVI VARMA

  thank u ,a eegiga avadhiyalli halavu atiuttma cinemagalannu nodalu tilisuttiddare, really it is very good,kelavomme aa cinemagalu namage sigalikkilla, but we will make a note of it,munde nodalu kaayuttirutteve, thanks avadhi and ravindra maavakanda

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: