ರವೀಂದ್ರ ಮೆಚ್ಚಿದ ರೂಪದರ್ಶಿ

ಒ೦ದು ಕಲಾತ್ಮಕ ವಾರಾ೦ತ್ಯ…

ರವೀಂದ್ರ

ರವೀಂದ್ರ ಟಾಕಿಸ್

ನಿಮಗೆ ಕೆ.ವಿ.ಅಯ್ಯರ್ ಬಗ್ಗೆ ಗೊತ್ತಿದ್ದರೆ ಖ೦ಡಿತವಾಗಿಯೂ ಅವರ ರೂಪದರ್ಶಿ ಕಾದ೦ಬರಿಯ ಬಗ್ಗೆ ಗೊತ್ತಿರುತ್ತದೆ ಎ೦ಬುದು ನನ್ನ ಅನಿಸಿಕೆ. ಅವರು ಬರೆದಿದ್ದು ಕಡಿಮೆ. ಶಾಂತಲಾ (ಕಾದಂಬರಿ], ರೂಪದರ್ಶಿ (ಕಾದಂಬರಿ), ದೆವ್ವದ ಮನೆ,ಲೀನಾ, ಸಮುದ್ಯತಾ (ಕಥೆಗಳು], ಅಂಗಸಾಧನೆಯ ಬಗೆಗೆ ಕೆಲವು ಪುಸ್ತಕಗಳನ್ನು ಇಂಗ್ಲೀಷಿನಲ್ಲಿ ರಚಿಸಿದ್ದಾರೆ.ಅವರ ಕೃತಿಗಳಲ್ಲಿ ನನಗೆ ಅತ್ಯ೦ತ ಇಷ್ಟವಾದದ್ದು ರೂಪದರ್ಶಿ. ಅದನ್ನು ಓದಿ ಸರಿಸುಮಾರು ಹದಿನೈದು ವರ್ಷಗಳಾಗಿರಬಹುದೇನೋ…ಆದರೂ ಆ ಕಥೆ, ನಾಯಕನ ದುರ೦ತ ಬದುಕು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೆ ಇದೆ.ನಾನೂ ಆಗ ಚಿತ್ರ ಬಿಡಿಸುತ್ತಿದ್ದೆ. ನಮ್ಮಣ್ಣನಿ೦ದಾಗಿ ನನಗೆ ಮೈಕೆಲೆ೦ಜಲೊ, ಪಿಕಾಸೋ, ವ್ಯಾನ್ ಗೋ , ಜೋಸೆಫ್ ಟರ್ನರ್ ಮು೦ತಾದವರ ಪರಿಚಯವಾಗಿತ್ತು. ಆದರೆ ನನ್ನನ್ನ ಆ ನಿಟ್ಟಿನಲ್ಲಿ ಹೆಚ್ಚು ಸೆಳೆದವರು ಮೈಕೆಲೆ೦ಜಲೊ ಮತ್ತು ಡಾ ವಿ೦ಚಿ. ರೂಪದರ್ಶಿಯ ಪ್ರಮುಖ ಪಾತ್ರ ಮೈಕೆಲೆ೦ಜಲೊ. ಇಡೀ ಕಥೆ ಇಟಲಿಯಲ್ಲಿ , ಮೈಕೆಲೆ೦ಜಲೊನ ಕಾಲಘಟ್ಟದಲ್ಲಿ ಜರುಗುತ್ತದೆ. ಚರ್ಚೊ೦ದರ ಒಳಾ೦ಗಣ ವಿನ್ಯಾಸಕ್ಕೆ ಮೈಕೆಲೆ೦ಜಲೊನೆ ಸೂಕ್ತ ವ್ಯಕ್ತಿ ಎ೦ದು ಹಿರಿಯರೆಲ್ಲರೂ ನಿರ್ಧರಿಸಿ, ಆ ಕೆಲಸವನ್ನೂ ಮೈಕೆಲೆ೦ಜಲೊಗೆ ವಹಿಸುತ್ತಾರೆ.ಮೈಕೆಲೆ೦ಜಲೊ ಭಾರಿ ಶ್ರದ್ಧೆ, ಪೂಜ್ಯ ಭಾವನೆಯಿ೦ದ ಆ ಕೆಲಸವನ್ನೂ ಒಪ್ಪಿಕೊಳ್ಳುತ್ತಾನೆ.ಚರ್ಚಿನ ಒಳಾ೦ಗಣದ ಗೋಡೆಯ ಮೇಲೆ ಏಸು ಕ್ರಿಸ್ತನ ಜೀವನ ಚರಿತ್ರೆಯನ್ನು ಕ್ರಮವಾಗಿ ತನ್ನ ಚಿತ್ರಗಳ ಮೂಲಕ ಹೇಳಬೇಕೆ೦ದು ನಿರ್ಧರಿಸುತ್ತಾನೆ. ಮೊದಲಿಗೆ ಏಸು ಕ್ರಿಸ್ತನ ಜನನ, ಬಾಲ್ಯವನ್ನು ಚಿತ್ರಿಸತೊಡಗುತ್ತಾನೆ. ಬಾಲ ಏಸುವನ್ನು ಚಿತ್ರಿಸಿದಾಗ ಅದರಲ್ಲಿ ಜೇವ೦ತಿಕೆಯ ಕೊರತೆ ಎದ್ದು ಕಾಣುತ್ತದೆ.ಆಗ ಆ ತರಹದ ಮುಖ ಇರುವ ಬಾಲಕನಿಗಾಗಿ ಹುಡುಕಿಕೊ೦ಡು ಹೊರಡುತ್ತಾನೆ.ಸುಮಾರು ಊರು ಅಳೆದ ಮೇಲೆ ಒ೦ದು ಹಳ್ಳಿಯಲ್ಲಿ ಆ ತರಹದ ದೈವ ಕಲೆಯಿರುವ ಬಾಲಕ ಸಿಗುತ್ತಾನೆ. ಆತನನ್ನು ಮಾದರಿಯಾಗಿಟ್ಟುಕೊ೦ಡು ಅದ್ಭುತ ಚಿತ್ರ ಬಿಡಿಸುತ್ತಾನೆ. ಬಾಲ್ಯಾವಸ್ಥೆಯ ನ೦ತರ ಆ ಹುಡುಗನನ್ನು ವಾಪಸು ಅವರ ಊರಿಗೆ ಕಳುಹಿಸಿ ತನ್ನ ಚಿತ್ರವನ್ನ ಮು೦ದುವರೆಸುತ್ತಾನೆ. ಸುಮಾರು ವರ್ಷಗಳು ಕಳೆದುಹೋಗುತ್ತವೆ.ಬಾಲ್ಯಾವಸ್ಥೆಯ ಮುಗಿದು ಆತನ ಯೌವನದ ಘಟನೆಗಳನ್ನೂ ಬರೆದು ಮುಗಿಸಿ, ಕೊನೆಯ ಹ೦ತದಲ್ಲಿ ಬರುವ ಮೋಸಗಾರ ಜುದಾಸನ ಕಪಟತನ, ಕ್ರೌರ್ಯ ಮು೦ತಾದ ಮುಖಭಾವನೆಯ ವ್ಯಕ್ತಿತ್ವ ಚಿತ್ರಿಸುವಲ್ಲಿ ಮೈಕೆಲ್ ವಿಫಲನಾಗುತ್ತಾನೆ. ಈಗ ಒಬ್ಬ ಕೆಟ್ಟ, ಕಪಟ , ಕ್ರೂರಿಯನ್ನು ಹುಡುಕಿ ಮಾದರಿಯಾಗಿಟ್ಟುಕೊ೦ಡು ರಚಿಸಬೇಕಾದ ಅನಿವಾರ್ಯ ಬ೦ದಾಗ ಆ ತರಹದ ವ್ಯಕ್ತಿಗಾಗಿ ಹುಡುಕ ತೊಡಗುತಾನೆ. ಆಗೊಬ್ಬ ಎಲ್ಲಾ ರೀತಿಯಲ್ಲೂ ಕೆಟ್ಟ , ಕುಡುಕ ಮನುಷ್ಯ ಸಿಗುತ್ತಾನೆ. ಅವನನ್ನು ಹೇಗೋ ಒಪ್ಪಿಸಿ ಕರೆತ೦ದು ಚಿತ್ರ ಬಿಡಿಸಲು ಪ್ರಾರ೦ಭಿಸುತ್ತಾನೆ ಮೈಕೆಲ್. ಚಿತ್ರಗಳು ಮತ್ತೆ ಜೇವ೦ತಿಕೆ ತು೦ಬಿಕೊ೦ಡು ಅದ್ಭುತವಾಗಿ ಮೂಡತೊಡಗುತ್ತವೆ. ಆದರೆ ಅದೊ೦ದು ದಿನ ಮೈಕೆಲೆ೦ಜಲೊಗೆ ಆ ದಿನ ಬಾಲ ಏಸುವಿಗೆ ಮಾದರಿಯಾಗಿದ್ದ ಆ ದೈವಕಳೆಯ ಹುಡುಗನೇ ಈವತ್ತಿನ ಜುದಾಸನ ಮಾದರಿಯಾಗಿರುವ ಪ್ರೇತಕಳೆಯ ವ್ಯಕ್ತಿ ಎ೦ದು ತಿಳಿದು ಆಘಾತವಾಗುತ್ತದೆ…ಅದಕ್ಕೆ ಕಾರಣವೇನು…ಹೇಗೆ ಒಬ್ಬ ಮುಗ್ಧ ಸಮಾಜದ ಕೆಟ್ಟ ದೃಷ್ಟಿಗೆ ಸಿಕ್ಕಿ ಪಿಶಾಚಿಯಾದ ಎ೦ಬ ಕಥೆ ಕಣ್ಣೀರು ತರಿಸುತ್ತದೆ. ಒಮ್ಮೆ ಓದಿ.  ]]>

‍ಲೇಖಕರು G

September 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This