ಬಿಳುಮನೆ ರಾಮದಾಸ್
ಒಂದು ಕಾಲದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಂದಾಯ ಇಲಾಖೆಯ ಡಿ.ಸಿಗಳೇ ಡಿ.ಸಿಯಾಗಿರುತ್ತಿದ್ದರು. ಈಗಿನಂತೆ ಇಲಾಖೆಯ ಅಧಿಕಾರಿಗಳಿಗೆ ಬಡ್ತಿ ಕೊಟ್ಟು ಡಿ.ಸಿ ಹುದ್ದೆಗೆ ಏರಿಸಿರಲಿಲ್ಲ.
ಮೈಸೂರು ವಿಭಾಗದಲ್ಲಿ ಕಂದಾಯ ಇಲಾಖೆಯ ಡಿ.ಸಿಯೊಬ್ಬರು ಆಡಳಿತದ ಅಧಿಕಾರಿಯಾಗಿದ್ದರು. ಅವರು ಭಾರಿ ಭ್ರಷ್ಟರಾಗಿದ್ದರು. ಅವರಿಗೆ ನೌಕರರ ವರ್ಗಾವಣೆಯಲ್ಲಿ ಲಂಚವಾಗಿ ಹಣ ಕೊಡದಿದ್ದರೆ ಕೋಳಿಯನ್ನು ತಂದು ಕೊಟ್ಟರೂ ಸಾಕಿತ್ತು. ಅವರಿಗೆ ಕೋಳಿ ಸಾರು ಅಂದರೆ ಬಹಳ ಇಷ್ಟ. ಡಿ.ಸಿ.ಸಾಹೇಬರ ಕಚೇರಿಯ ಗುಮಾಸ್ತನೊಬ್ಬ ಸಾಹೇಬರಿಗೆ ಅನೇಕ ಬಾರಿ ವರ್ಗಾವಣೆಯನ್ನು ಕೇಳಿದರೂ ಸಾಹೇಬರು ಆತನಿಗೆ ವರ್ಗಾವಣೆಯನ್ನು ಕೊಟ್ಟಿರಲಿಲ್ಲ.
ಸುಮ್ಮನೆ ವರ್ಗಾವಣೆ ಕೊಡಲಾಗುತ್ತದೆಯೆ? ಸಾಹೇಬರಿಗೆ ಏನನ್ನಾದರೂ ಕೊಡುವುದಿಲ್ಲವೆ? ನೌಕರನಿಗೆ ಸಾಹೇಬರು ಏನನ್ನಾದರೂ ಕೊಡುವ ಶಕ್ತಿ ಇರಲಿಲ್ಲ. ಮತ್ತು ಡಿ.ಸಿ. ಸಾಹೇಬರ ಕಚೇರಿಯಲ್ಲಿರುವ ನೌಕರರಿಗೆ ಮೇಲಾದಾಯವೇನೂ ಇಲ್ಲದಿದ್ದರಿಂದ ಆತ ಏನನ್ನೂ ಕೊಡಲಾಗಿರಲಿಲ್ಲ. ಸಾಹೇಬರು ತನಗೆ ವರ್ಗಾವಣೆ ಕೊಡದಿದ್ದುದರಿಂದ ಆತ ಸಾಹೇಬರ ಕೆಲಸಕ್ಕೆ ಕೊಡಲಿ ಪೆಟ್ಟು ಕೊಡಲು ನೋಡಿದ.
ಸಾಹೇಬರ ಹೆಸರಿನಲ್ಲಿ ಸರ್ಕಾರಿ ಸೇವೆಗೆ ರಾಜಿನಾಮೆ ಬರೆದು ಟಪಾಲು ರಾಶಿಯ ಮಧ್ಯೆ ಇಟ್ಟ. ಆಗ ಮೈಸೂರು ವಿಭಾಗದ ಕಚೇರಿಗೆ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಸೇರಿದ್ದವು. ಸಾಹೇಬರಿಗೆ ಅಧೀನ ಕಚೇರಿಗಳ ಟಪಾಲು ನೋಡುವುದಕ್ಕೆ ಸಾಕುಬೇಕಾಗುತ್ತಿತ್ತು. ತಮ್ಮ ರಾಜಿನಾಮೆ ಪತ್ರದ ಬೆರಳಚ್ಚು ಪ್ರತಿಯನ್ನು ಓದುವ ಗೋಜಿಗೆ ಹೋಗದೆ ಅವರು ಸಹಿ ಹಾಕಿದರು. ಈಗಾಗಲೇ ಕರಡು ಪ್ರತಿಯನ್ನು ಓದಿ ಸಹಿ ಮಾಡಿದ್ದೇನೆಂದು ಅವರು ತಿಳಿದಿದ್ದರು. ಅವರ ರಾಜಿನಾಮೆ ಸರ್ಕಾರಕ್ಕೆ ಇಲಾಖೆಯ ಮುಖ್ಯಸ್ಥರಾದ ಹಿರಿಯ ಐಎ ಎಸ್ ಅಧಿಕಾರಿ ಕಮೀಷನರಿಗೆ ಹೋಯಿತು. ನಿಷ್ಕಾರಣವಾಗಿ ರಾಜಿನಾಮೆ ಕೊಟ್ಟ ಡಿ.ಸಿಯ ಬಗ್ಗೆ ಕಮೀಷನರಿಗೆ ಡಿ.ಸಿಯ ಮೇಲೆ ಅನುಕಂಪ ಬಂತು. ಅವರು ದೂರವಾಣಿ ಮೂಲಕ ಡಿ.ಸಿ. ಸಾಹೇಬರಿಗೆ ಏಕೆ ರಾಜಿನಾಮೆ ಕೊಟ್ಟಿದ್ದೀರಿ ಎಂದು ಕೇಳಿದರು. ಡಿ.ಸಿ. ಸಾಹೇಬರು ಕಕ್ಕಾಬಿಕ್ಕಿಯಾಗಿ ತಾವು ರಾಜಿನಾಮೆ ಕೊಟ್ಟಿಲ್ಲವೆಂದು ಹೇಳಿದರು. ಕಮೀಷನರು ಡಿ.ಸಿ. ಸಾಹೇಬರನ್ನು ಕರೆಸಿಕೊಂಡು ಬೆರಳಚ್ಚು ಪ್ರತಿಗೆ ಸಹಿ ಮಾಡಿದ್ದಕ್ಕೆ ಛೀಮಾರಿ ಹಾಕಿ ರಾಜಿನಾಮೆ ಪತ್ರವನ್ನು ವಾಪಸು ತೆಗೆದುಕೊಳ್ಳಲು ಹೇಳಿದರು.
ಕೋಳಿ ಸಾರು ಡಿ.ಸಿ. ಸಾಹೇಬರ ರಾಜಿನಾಮೆ ಕೊಡಿಸುವಂತೆ ಮಾಡಿತ್ತು.]]>
ರಾಜಿನಾಮೆ ಕೊಡಿಸಿದ ಕೋಳಿಸಾರು


ನಿಮಗೆ ಇವೂ ಇಷ್ಟವಾಗಬಹುದು…
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಇಂಟರ್ನೆಟ್ ಎಂಬ ವಾಸ್ತವ ಜಗತ್ತು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು....

ha ha ha
Amele Koli saru keluvudannu bittara?