ರೂಪರ್ಟ್ ಮುರ್ಡೋಕ್ ಬಿಬಿಸಿ ಮೇಲೆ ದಾಳಿ ಆರಂಬಿಸಿದ…

ಬಿ.ಬಿ.ಸಿ ಎಂಬ ಗೋಕುಲ ಮತ್ತು ವಿಸ್ಮೃತಿ

-ಟಿ ಅವಿನಾಶ್

bbc-news-channel

ಮೊನ್ನೆ ಕಾಲೇಜಿನ ಸಾಹಿತ್ಯ ಶಿಬಿರವೊಂದರಲ್ಲಿ ಕ್ರಿಕೆಟ್ನ ನೇರಪ್ರಸಾರ ಮೈದಾನದಲ್ಲ್ಲಿ ಆಡುವ ಕ್ರಿಕೆಟ್ ಆಟವನ್ನೇ ನಿಯಂತ್ರಿಸುತ್ತದೆ ಎಂಬ ಮಾತು ಬಂತು. ನಾವು ಮನೆಯಲ್ಲಿ ಕುಳಿತು ನೋಡುವ ಟಿವಿ ನೇರಪ್ರಸಾರ ಬಿಂಬವೇ ಅಥವಾ ಪ್ರತಿಬಿಂಬವೇ ಎಂಬ ಸೂಕ್ಷ್ಮ ವಿಚಾರ ಪ್ರಸ್ತಾಪವಾಯಿತು. ಸಂಪೂರ್ಣ ಕಾಪರ್ೊರೆಟ್ ಬಂಡವಾಳ ಮತ್ತು ಎಂಟರ್ಟೈನ್ಮೆಂಟ್ ಉದ್ಯಮದ ಭಾಗವಾಗಿರುವ ಇವತ್ತಿನ ಕ್ರಿಕೆಟ್ನ್ನು ಪ್ರಸಾರ ಮಾಡಲು ಟಿ.ವಿ.ವಾಹಿನಿಗಳು ತೀವ್ರ ಪೈಪೋಟಿ ನಡೆಸಿ ಕರಾಳ ವಿಷ ವತರ್ುಲವನ್ನು ಸೃಷ್ಠಿಸಿದೆ. ಇದಕ್ಕೆ ಪ್ರಾಯೋಜಕತ್ವ ಹಾಗೂ ಜಾಹಿರಾತಿನ ಮೂಲಕ ಹರಿದು ಬರುತ್ತಿರುವ ಕೋಟ್ಯಾಂತರ ಡಾಲರುಗಳೇ ಕಾರಣ. ಇವತ್ತು ಕ್ರಿಕೆಟ್ನ ನೇರ ಪ್ರಸಾರವಿಲ್ಲದಿದ್ದರೆ ಆಟವೂ ಇಲ್ಲ ಎಂಬುದು ವಾಸ್ತವ. ನಮ್ಮ ಬಹುತೇಕ ಸ್ಟಾರ್ ಆಟಗಾರರು ಬಹುರಾಷ್ಟ್ರೀಯ ಕಂಪನಿಗಳ ವಕ್ತಾರರು ಎಂಬುದೂ ಸತ್ಯವೇ. ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಈ ಕುರಿತು ಒಂದು ಸೊಗಸಾದ ಲೇಖನವನ್ನು ಬರೆದಿದ್ದಾರೆ.

ಹಿಂದೆ ಈ ಆಟ ಉದ್ಯಮದ ಸ್ವರೂಪವನ್ನು ಪಡೆಯುವ ಮೊದಲು ಪ್ರಸಾರವಾಗುತ್ತಿದ್ದುದು ರೇಡಿಯೋದ ಮೂಲಕ. ನಾನು ಸರಿಸುಮಾರು 1985ರ ಹೊತ್ತಿಗೆ ಹೈಸ್ಕೂಲ್ ವಿದ್ಯಾಥರ್ಿಯಾಗಿದ್ದಾಗ ಭಾರತದಲ್ಲಿ ಟಿವಿ ಇನ್ನೂ ತನ್ನ ಅಧಿಪತ್ಯ ಸ್ಥಾಪಿಸಿರಲಿಲ್ಲ. ಆಗ ಏನಿದ್ದರೂ ರೇಡಿಯೋ ವೀಕ್ಷಕ ವಿವರಣೆಯದ್ದೇ ಕಾರುಬಾರು. ಇದರ ಜೊತೆಗೆ ಪ್ರಜಾವಾಣಿಯಲ್ಲಿನ ಕ್ರೀಡಾಪುಟಗಳೇ ನಮ್ಮಂತಹ ಕ್ರೀಡಾಪ್ರೇಮಿಗಳ ಪಾಲಿನ ಬೈಬಲ್ ಆಗಿತ್ತು. ಆಗಿನ ಕಾಲದಲ್ಲಿ ರೇಡಿಯೋ ವೀಕ್ಷಕ ವಿವರಣೆ ನೀಡಿದ ಆಪ್ತ ಅನುಭವಗಳೇ ಬೇರೆ ಬಿಡಿ. ಕಣ್ಣಿಗೆ ಕಾಣದೇ ಇರುವ ಆಟವನ್ನು ಭಾಷೆಯಲ್ಲಿಯೇ ಸೆರೆ ಹಿಡಿದು ನಮ್ಮ ಮನಸ್ಸುಗಳಲ್ಲಿ ಚಿತ್ತಾರ ಮೂಡಿಸಿದ ಹೆಗ್ಗಳಿಕೆ ರೇಡಿಯೋದ್ದು. ಇದರೊಂದಿಗೆ ನಮ್ಮ ಕಲ್ಪನೆಗಳಿಗೆ ಯಾವುದೇ ಮೂಗುದಾಣ ಹಾಕದೇ ನಮ್ಮ ಭಾವಲೋಕವನ್ನು ವಿಸ್ತರಿಸಿದ್ದು ಕೂಡಾ ರೇಡಿಯೋ ಎಂಬುದರಲ್ಲಿ ಎಳ್ಳಷ್ಷೂ ಸಂಶಯವಿಲ್ಲ.

ನನಗೆ ನಮ್ಮದೇ ಆದ ಆಲ್ ಇಂಡಿಯಾ ರೇಡಿಯೋಕ್ಕಿಂತ ಬಿ.ಬಿ.ಸಿ ಹೆಚ್ಚು ಆಪ್ತವಾಗಿತು.್ತ (ವಿದೇಶಿ ರೇಡಿಯೋವನ್ನು ಕೇಳುವ ಖದರು!) ಆ ಕಾಲದಲ್ಲಿ ಬಿ.ಬಿ.ಸಿ ಭಾರತ ಉಪಖಂಡಕ್ಕೆ ಇಂಗ್ಲೆಂಡಿನಲ್ಲಿ ನಡೆಯುವ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ನೇರ ಪ್ರಸಾರ ಮಾಡುತಿತ್ತು. ನಾವಂತೂ `ಇದು ಬಿ.ಬಿ.ಸಿ ಟೆಸ್ಟ್ ಮ್ಯಾಚ್ ಸ್ಪೆಷಲ್. ನಿಮ್ಮನ್ನೀಗ ನೇರ ಪ್ರಸಾರಕ್ಕೆ ಆಹ್ವಾನಿಸುತಿದ್ದೇವೆ’ ಎಂಬ ನಿರೂಪಕ/ಕಿಯರ ವಿಶಿಷ್ಠ ಧ್ವನಿಗೆ ಚಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುತಿದ್ದೆವು. ಮದ್ಯಾಹ್ನದ ನಿದ್ದೆಯನ್ನು ಬಿಟ್ಟು! (ಭಾರತೀಯ ಕಾಲಮಾನ ಅಪರಾಹ್ನ 3 ಗಂಟೆಗೆ ವಿವರಣೆ ಪ್ರಾರಂಭವಾಗುತ್ತಿತ್ತು) ಆವತ್ತಿನ ಬಿ.ಬಿ.ಸಿಯಲ್ಲಿ ವೃತ್ತಿನಿರತ ವಿವರಣೆಕಾರರ ಒಂದು ಅದ್ಭುತ ತಂಡವೇ ಇತ್ತು. ಮೈದಾನದಲ್ಲಿ ನಡೆಯುವ ಆಟವನ್ನು ಹೃದಯಕ್ಕೆ ನಾಟುವಂತೆ ವಿವರಣೆ ನೀಡುವುದು ಇವರ ವಿಶೇಷ. ಯಕ್ಷಗಾನದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ಮೇಳೈಸಿದರೆ ಸಿಗುವ ಅದ್ಭುತ ಅನುಭವ ಒದಗಿಸಿದ್ದೆ ಬಿ.ಬಿ.ಸಿ. ಈ ಪರಿಣಿತರ ಧ್ವನಿಯಲ್ಲಿ ನಮ್ಮನ್ನೆಲ್ಲ ಮಂತ್ರ ಮುಗ್ಧರನ್ನಾಗಿಸುವ ಮಾಂತ್ರಿಕ ಟಚ್ ಇತ್ತು. ಆಟವನ್ನು ಅವರು ವ್ಯಾಖ್ಯಾನಿಸುವುದು ನಮ್ಮೆದಿರಿಗೆ ಒಂದು ಚಿತ್ರ ಬಿಡಿಸಿದಂತೆ ಭಾಸವಾಗುತ್ತಿತ್ತು. ಒಬ್ಬ ಜವಾಬ್ಧಾರಿಯುತ ಸಾಹಿತ್ಯದ ವಿಮರ್ಶಕ ಒಂದು ಸಾಹಿತ್ಯ ಕೃತಿಯನ್ನು ಅದರೆಲ್ಲಾ ಸಂಕೀರ್ಣತೆಯೊಂದಿಗೆ ವ್ಯಾಖ್ಯಾನಿಸಿದಂತೆ ಬಿ.ಬಿ.ಸಿ ಟೆಸ್ಟ್ ಮ್ಯಾಚ್ ಸ್ಪೆಷಲ್ ತಂಡ ಆಟವನ್ನು ವಿವರಿಸುತಿತ್ತು.

ಆಗಿನ ಬಿ.ಬಿ.ಸಿ ತಂಡದ ಕೆಲ ಸುಪ್ರಸಿದ್ಧ ಹೆಸರುಗಳನ್ನು ನೀವು ಗಮನಿಸಿ. ಕ್ರಿಸ್ ಮಾಟರ್ಿನ್ ಜೆಂಕಿನ್ಸ್, ಲೇಖಕ ಹಾಗೂ ವಾಚಾಳಿ ಬ್ರಿಯಾನ್ ಜಾನ್ಸ್ಟನ್, ಗಡಸು ದ್ವನಿಯ ಡಾನ್ ಮೋಸಿ, ಶಬ್ದಾಡಂಬರದ ಹೆನ್ರಿ ಬ್ಲೊ ಫೀಲ್ಡ್, ವಿಶೇಷ ತಜ್ಞರಾದ ಟ್ರೆವರ್ ಬೈಲಿ ಹಾಗೂ ತನ್ನ ಕಾಲದ ಅತ್ಯುತ್ತಮ ವೇಗಿಯಾಗಿದ್ದ ನೇರ ನುಡಿಯ ಫ್ರೆಡಿ ಟ್ರೂಮನ್. ಈ ಅತಿರಥರು ನಮ್ಮ ಭಾಷಾ ಸಾಧ್ಯತೆಗಳನ್ನೆ ವಿಸ್ತರಿಸಿದ ಮಹಾನುಭಾವರುಗಳು. ಇವರ ವೀಕ್ಷಕ ವಿವರಣೆ ಕೇವಲ ವಿವರಣೆಯ ಘಟ್ಟದಲ್ಲೆ ಮುಕ್ತಾಯವಾಗುತ್ತಿರಲಿಲ್ಲ. ಅಲ್ಲಿ ವ್ಯಾಖ್ಯಾನ, ಅವಲೋಕನ, ಕಟು ಟೀಕೆ, ಸ್ವತಂತ್ರ ಅಭಿಪ್ರಾಯ, ಆರೋಗ್ಯಕರ ಭಿನ್ನಾಭಿಪ್ರಾಯ, ನವಿರಾದ ಹಾಸ್ಯ, ಭಾಷೆಯ ನಾಜೂಕಾದ ಬಳಕೆ, ಹೊಸ ನುಡಿಗಟ್ಟುಗಳ ಆವಿಷ್ಕಾರ ಇತ್ಯಾದಿಗಳೆಲ್ಲ ಒಂದಕ್ಕೊಂದು ಮೇಳೈಸಿ ಒಂದು ಸಿಂಫೋನಿ ನಿಮರ್ಾಣವಾಗುತಿತ್ತು. ಹಳ್ಳಿ ಹುಡುಗರಾದ ನಮಗೆಲ್ಲಾ ಇಂಗ್ಲಿಷ್ ಭಾಷೆಯ ಬಗ್ಗೆ ಪ್ರೀತಿ ಬರುವಂತೆ ಮಾಡಿದ್ದೇ ಬಿ.ಬಿ.ಸಿ.ಕಾಮೆಂಟ್ರಿ. 1982ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಕಪಿಲ್ ದೇವ್ನ ಉತ್ಕೃಷ್ಟ ಪ್ರದರ್ಶನ ಹಾಗೂ ಇಯಾನ್ ಬಾತಮ್ ಜೊತೆಗಿನ ತೀವ್ರ ಪೈಪೋಟಿಯನ್ನು ನಾವೆಲ್ಲಾ ಬಿ.ಬಿ.ಸಿಯಲ್ಲಿ ಲೈವ್ ಆಗಿ ಕೇಳಿದ್ದೆವು. (ಇವರು ಮಾತನಾಡಿದ್ದೆವು ಸಂಪೂರ್ಣ ಅರ್ಥವಾಗದಿದ್ದರೂ ಕೂಡ!) ಇದರ ಮರುವರ್ಷ ಫ್ರುಡೆನ್ಸಿಯಲ್ ವಿಶ್ವಕಪ್ ಆನಂದಿಸಿದ್ದು ಠಟಿಛಿಜ ಚಿರಚಿಟಿ ಬಿ.ಬಿ.ಸಿಯಲ್ಲಿಯೇ. ಕಪಿಲ್ದೇವನ ಜಿಂಬಾಬ್ವೆ ವಿರುದ್ದದ 175 ರನ್ ಭಾರತಕ್ಕೆ ಹರಿದುಬಂದಿದ್ದು, ದಾಖಲಾದದ್ದು ಟಿ.ವಿ ಮೂಲಕವಲ್ಲ. ಅದು ನಮಗೆ ಲೈವ್ ಆಗಿ ಬಂದಿದ್ದು ಬಿ.ಬಿ.ಸಿ ಮೂಲಕವೇ.

ಹಾಗೆಯೇ 1984ರಲ್ಲಿ ಕ್ಲೈವ್ ಲಾಯ್ಡ್ ನ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ನ್ನು 5-0 ಯಿಂದ ಸೋಲಿಸಿ ವಾಶ್ ಔಟ್ ಮಾಡಿತ್ತು. ಆ ಸರಣಿಯಲ್ಲಿನ ಗಾರ್ಡನ್ ಗ್ರೀನಿಡ್ಸ್ ನ ಎರಡು ಸೊಗಸಾದ ದ್ವಿಶತಕ, ಬೆಂಕಿಯುಗುಳುವ ಮಾರ್ಷಲ್-ಹೋಲ್ಡಿಂಗ್ರ ಬೌಲಿಂಗ್, ವಿವ್ ರಿಚಡ್ರ್ಸನ ಸ್ಫೋಟಕ ಬ್ಯಾಟಿಂಗನ್ನು ಕಟ್ಟಿಕೊಟ್ಟಿದ್ದು ಇದೇ ವೀಕ್ಷಕ ವಿವರಣೆಯ ತಂಡವೆ, ವೆಸ್ಟ್ ಇಂಡೀಸಿನ ಕೋಗಿಲೆ ಕಂಠದ ವ್ಯಾಖ್ಯಾನಕಾರ ಟೋನಿ ಕೋಜಿಯರ್ ಮೊಟ್ಟ ಮೊದಲು ಪರಿಚಯವಾಗಿದ್ದೂ ಟೆಸ್ಟ್ ಮ್ಯಾಚ್ ಸ್ಪೆಷಲ್ ಮೂಲಕವೇ. ಮಳೆ ಬಂದು ಆಟ ನಿಂತರೂ ಗಂಟೆಗಟ್ಟಲೆ ಹರಟೆ ಹೊಡೆಯುವುದನ್ನು ಮೊದಲು ಗಮನಿಸಿದ್ದೂ ಈ ವಾಹಿನಿಯಲ್ಲೆ. ಈ ತಂಡ ಎಷ್ಟು ಕಠಿಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿತ್ತು ಎಂದರೆ ಆಗಿನ ಇಂಗ್ಲಿಷ್ ನಾಯಕ ಡೇವಿಡ್ ಗೋವರ್ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಪ್ರಸಂಗವೂ ದಾಖಲಾಗಿದೆ. ಹಾಗೆಯೇ ಒಮ್ಮೆ ಶಬ್ಧಾಡಂಬರದ ಹೆನ್ರಿ ಬ್ಲೋಫೀಲ್ಡ್ ವೆಸ್ಟ್ ಇಂಡೀಸ್ನ ವೇಗದ ಬೌಲರ್ ಬಿಗ್ ಬಡರ್್ ಗಾರ್ನರ್ನನ್ನು ಕರಿಯ ಎಂದು ಸಂಬೋಧಿಸಿದ್ದನ್ನು ತಕ್ಷಣವೇ ಟೋನಿ ಕೋಜಿಯರ್ ತೀವ್ರವಾಗಿ ಖಂಡಿಸಿದ್ದ. ತಕ್ಷಣವೇ ಹೆನ್ರಿ ಭ್ಲೋಫೀಲ್ಡ್ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ.

ಈ ಯಶಸ್ವಿ ವಿಶ್ಲೇಷಕರ ಕೆಲಸ ನಾವು ತಿಳಿದಷ್ಟು ಸುಲಭವಲ್ಲ. ಕೇವಲ ಶಬ್ದದ ಆಡಂಬರ ವಿವರಣೆಕಾರನ ತೂಕವನ್ನು ಹೆಚ್ಚಿಸುವುದಿಲ್ಲ. ಒಬ್ಬ ಯಶಸ್ವಿ ವೀಕ್ಷಕ ವಿವರಣೆಕಾರನಿಗೆ ಭಾಷೆಯ ನವಿರಾದ ಪ್ರಯೋಗ ಹಾಗೂ ನಿಯಂತ್ರಣ ತುಂಬಾ ಅಗತ್ಯ. ಇದರ ಜೊತೆಗೆ ಸಂದರ್ಭಕ್ಕೆ ತಕ್ಕ ಧ್ವನಿಯ ಏರಿಳಿತ, ಆಟವನ್ನು ತೀಕ್ಷ್ಣವಾಗಿ ವಿಶ್ಲೇಷಿಸುವ ಕ್ರಮ, ಆಟದ ಬಗೆಗಿನ ಪಾಂಡಿತ್ಯ, ಪಂದ್ಯದ ಮುನ್ನೋಟ, ತಂತ್ರಗಾರಿಕೆಯ ವಿವರಣೆ, ಜವಾಬ್ದಾರಿಯುತ ವಿಶ್ಲೇಷಣೆ ಒಬ್ಬ ಪಕ್ವ ವೀಕ್ಷಕ ವಿವರಣೆಕಾರ ರೂಢಿಸಿಕೊಳ್ಳಲೇಬೇಕಾದ ಅಂಶಗಳು. ನಮ್ಮ ನವಜ್ಯೋತ್ ಸಿದ್ದುವಿನಂತೆ ಬಿಪಿ ಏರಿಸಿಕೊಂಡು ಕೂಗಾಡಿದರೆ ಒಬ್ಬ ಜೋಕರ್ ಮಾತ್ರ ಆಗಲು ಸಾಧ್ಯ! ಬಿ.ಬಿ.ಸಿ ತಂಡದ ಕ್ರಿಯಾಶೀಲ ನಿಲುವು ಮತ್ತು ಐತಿಹಾಸಿಕ ಜ್ಞಾನ ನಮ್ಮನ್ನೆಲ್ಲ ಮೋಡಿ ಮಾಡಿತ್ತು. ಇದಕ್ಕೆ ಹೋಲಿಸಿದರೆ ನಮ್ಮ ಆಲ್ ಇಂಡಿಯಾ ರೇಡಿಯೋದಲ್ಲಿ ಚವರ್ಿತ ಚರ್ವಣದ ವಿವರಣೆಕಾರರೇ ಹೆಚ್ಚಾಗಿದ್ದರು. ಸುರೇಶ್ ಸರೈಯಾ ಹಾಗೂ ಜೆ.ಪಿ. ನಾರಾಯಣ್ರನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ಪೂರಾ ಜೊಳ್ಳುಗಳು( ಒಳ್ಳೆ ಮಾಮಾಮೂಶಿಗಳ ರೀತಿ).

1988-89ರ ಸರಿಸುಮಾರಿಗೆ ಇಂಗ್ಲೆಂಡ್ನಲ್ಲಿ ರೂಪಟರ್್ ಮಡರ್ೋಕ್ನ ಖಾಸಗಿ ಟಿ.ವಿ ಚಾನಲ್ಗಳು ಪರಂಪರಾಗತ ಬಿ.ಬಿ.ಸಿಯ ಮೇಲೆ ತನ್ನ ದಾಳಿ ಪ್ರಾರಂಭಿಸಿದ್ದವು. ಖಾಸಗೀಕರಣದ ಬಂಡವಾಳ ತನ್ನ ಕರಾಳ ಹಸ್ತವನ್ನು ಪ್ರದಶರ್ಿಸಿ ಬಿ.ಬಿ.ಸಿಯನ್ನು ಮಣಿಸತೊಡಗಿತ್ತು. ರೇಡಿಯೋಕ್ಕಿಂತ ಉನ್ನತ ತಾಂತ್ರಿಕತೆಯ ಟಿವಿ ನೇರಪ್ರಸಾರ ಜನರನ್ನು ಮಂತ್ರ ಮುಗ್ದರನ್ನಾಗಿಸುವ ಕಾಲ ಆರಂಭವಾಗಿತ್ತು. ಅದೇ ಹೊತ್ತಿಗೆ ಆಥರ್ಿಕ ದುಸ್ತಿತಿಯಿಂದ ಬಿ.ಬಿ.ಸಿ ಏಷ್ಯಾಖಂಡಕ್ಕೆ ತನ್ನ ಟೆಸ್ಟ್ ಮ್ಯಾಚ್ ಸ್ಪೆಷಲ್ ಅನ್ನು ನಿಲ್ಲಿಸಿತು. ಕೋಟ್ಯಂತರ ಜನರು ಅನುಭವ ವಂಚಿತರಾಗಿ ವಿಲಿವಿಲಿ ಒದ್ದಾಡಿದರು. ಖ್ಯಾತ ವ್ಯಾಖ್ಯಾನಕಾರ ಬ್ರಿಯಾನ್ ಜಾನ್ಸ್ಟನ್ ಇಂಗ್ಲೆಂಡ್ ಪಾಲರ್ಿಮೆಂಟಿನ ಮುಂದೆ ಉಪವಾಸ ಕುಳಿತು ತನ್ನ ಪ್ರತಿರೋಧ ದಾಖಲಿಸಿದ. ಲಕ್ಷಾಂತರ ಜನರು ಬಿ.ಬಿ.ಸಿ ಸ್ಟುಡಿಯೋಕ್ಕೆ ಪತ್ರ ಬರೆದು ಏನಾಗುತ್ತಿದೆ? ಎಂದು ವಿಚಾರಿಸಿದ್ದರು. ದುರದೃಷ್ಟವಶಾತ್ ಬಿ.ಬಿ.ಸಿ ತನ್ನ ಅನಿವಾರ್ಯ ನಿಧರ್ಾರವನ್ನು ಬದಲಿಸಲಿಲ್ಲ.

ಅಲ್ಲಿಗೆ ಒಂದು ಉನ್ನತ ಪರಂಪರೆಗೆ ಅಂತಿಮ ತೆರೆ ಬಿತ್ತು. ಜಾಗತೀಕರಣ ಹಾಗೂ ಖಾಸಗೀಕರಣದ ಒಳಸುಳಿ ಈ ರೀತಿಯಾಗಿಯೂ ನಮ್ಮನ್ನು ತಲುಪಿದ್ದು ಒಂದು ದುರಂತವೇ ಸರಿ. ಹೀಗೆ ಬಿ.ಬಿ.ಸಿ ಎಂಬ ಗೋಕುಲ ನಮ್ಮ ಭಾವ ಪ್ರಪಂಚದಿಂದ ನಿಣರ್ಾಯಕವಾಗಿ ನಿರ್ಗಮಿಸಿತು. ಈಗಲೂ ಬಿ.ಬಿ.ಸಿ ಇಂಗ್ಲೆಂಡಿನಲ್ಲಿ ತನ್ನ ವೀಕ್ಷಕ ವಿವರಣೆ ನೀಡುತ್ತದೆ. ಆದರೆ ದೃಶ್ಯ ಮಾಧ್ಯಮದ ಯಜಮಾನಿಕೆ ಎದಿರು ರೇಡಿಯೋ ಪ್ರಾಯಶಃ ತನ್ನ ಸೋಲನ್ನು ಒಪ್ಪಿಕೊಂಡಿದೆ.

ಆದರೆ, ಈಗ ದಿನ ಬೆಳಗಾದರೆ ಒಂದಲ್ಲ ಒಂದು ಪಂದ್ಯದ ನೇರ ಪ್ರಸಾರವಿರುತ್ತದೆ. ಹಾಗಾಗಿ ಒಂದು ರೀತಿಯ ಕ್ರೀಡಾ ವಿಸ್ಮೃತಿ ನಮ್ಮನ್ನೆಲ್ಲ ಆವರಿಸಿದೆ. ಹಿಂದೆ ರಣಜಿ ಪಂದ್ಯದಲ್ಲಿ ರೋಜರ್ ಬಿನ್ನಿ ಗಳಿಸಿದ್ದ ಅರ್ಧ ಶತಕ ನಮ್ಮ ಮನಸಿನಲ್ಲಿರುತಿತ್ತು. ಈಗ ಮೊನ್ನೆ ತಾನೇ ಶ್ರೀಲಂಕಾದಲ್ಲಿ ಭಾರತ ಸೋತಿದ್ದು/ಗೆದ್ದಿದ್ದು ನಮ್ಮ ಮನಸಿನಲ್ಲಿ ಉಳಿಯುವುದು ಕಷ್ಟ. ಅತ್ಯಮೋಘ ಪ್ರದರ್ಶನ ಬಿಟ್ಟರೆ ಉಳಿದಿದ್ದೆಲ್ಲ ಒಂದೆರಡು ವಾರಗಳಲ್ಲೆ ಸಂಪೂರ್ಣ ಮರೆತು ಹೋಗಿರುತ್ತದೆ. ಆಧುನಿಕ ಟಿವಿ ಚಾನಲ್ಗಳ ಇಪ್ಪತ್ತನಾಲ್ಕು ಕ್ಯಾಮರಾಗಳ ನೇರ ಪ್ರಸಾರ ಕೇವಲ ಪ್ರತಿಬಿಂಬಗಳನ್ನಷ್ಟೆ ಸೃಷ್ಠಿಸಬಲ್ಲದು. ಕಥೆಗಾರ ಶ್ರೀನಿವಾಸ ವೈದ್ಯರ ಮಾತನ್ನೇ ಬಳಸಿ ಹೇಳುವುದಾದರೆ ನಮ್ಮ ಮನಸ್ಸಿನಲ್ಲಿ ನಿಲ್ಲಬಲ್ಲ ನೆನಪುಗಳೆಂಬ ಹಣತೆಗಳು ಬಹಳ ಕಡಿಮೆ.

‍ಲೇಖಕರು avadhi

August 17, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This