ರೇವತಿ ಎ೦ದರೆ…..

(ಪರಸ್ಪರ ಸಾಹಿತ್ಯಿಕ ಬಳಗವು ಪ್ರತಿ ತಿಂಗಳ ಮೊದಲ ಭಾನುವಾರದಂದು ಹೊಸದಾಗಿ ಕನ್ನಡಕ್ಕೆ ಬಂದ ಕೃತಿಗಳ ಮಹಾರಾಣಿ ಕಾಲೇಜಿನ ಚನ್ನಮ್ಮಾ ಭವನದಲ್ಲಿ ಕುರಿತು ಸಂವಾದವನ್ನು ಹಮ್ಮಿಕೊಳ್ಳುತ್ತಿದೆ. ರಾಮಲಿಂಗಪ್ಪ ಟಿ.ಬೇಗೂರು, ವಿಜಯೇಂದ್ರ, ಚಿಮನಹಳ್ಳಿ ರಮೇಶ್, ಸುಜತಾ ಕುಮಟಾ, ಜಯಶಂಕರ್ ಹಲಗೂರು, ರಾಜೇಶ್, ರೇಣುಕಾ ಮುಂತಾದವರು ಭಗವಹಿಸಿದ ಆ ಸಂವಾದಲ್ಲಿ ಜು.1ರಂದು ನಡೆದ ಸಂವಾದದಲ್ಲಿ ನಾನು ರೇವತಿಯವರ ಬದುಕು ಬಯಲು ಪುಸ್ತಕದ ಕುರಿತು ಮಾತನಾಡಿದೆ. ನನ್ನ ಮಾತುಗಳಿಗೆ ಮಾಡಿಕೊಂಡ ಟಿಪ್ಪಣಿಗಳನ್ನು ಇಲ್ಲಿ ನೀಡಿದ್ದೇನೆ) – ಹಣಮ೦ತ ಹಲಿಗೇರಿ ಎಷ್ಟೋ ಜನ ಓದು ವಿವಿ ಪ್ರೊಪೆಸರಗಳು ಮತ್ತು ನಮ್ಮಂಥ ಪತ್ರಕರ್ತರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳದಿರುವಾಗ ರೇವತಿ ಅಂತ ಲೈಂಗಿಕ ಕಾರ್ಯಕತರ್ೆಯೊಬ್ಬಳು ಬರವಣಿಗೆ ಮತ್ತು ತಮ್ಮ ಸಮುದಾಯದ ಪರಿವಾಗಿ ಹೋರಾಟದಲ್ಲಿ ತೊಡಗಿಸಿಕೊಂಡು ಇಷ್ಟು ಬೃಹತ ಪುಸ್ತಕ ಬರೆದದ್ದನ್ನು ನಾವು ಮೆಚ್ಚಲೆಬೇಕು. ಸ್ಲಂನಲ್ಲಿರೋರು, ಅಲೆಮಾರಿಗಳು, ದಲಿತರು, ಅಸ್ಪಶ್ಯರು ಮುಂತಾದವರಿಗೆ ಬಹಳಷ್ಟು ಶ್ರೀಮಂತವಾದ ಅನುಭವ ಇರುತ್ತೆ. ಆದ್ರ ಅವರೆಲ್ಲರಿಗೆ ಹಳೆ ನೆನಪನ್ನು ಕೆದಕುವುದೆಂದರೆ ಮಾಯದ ಹಳೆ ಗಾಯವನ್ನು ಕೆರೆದುಕೊಂಡಂತೆ. ಅದು ನೆನಪಿಸಿಕೊಂಡಷ್ಟು ಮನಸ್ಸಿಗೆ ನೋವನ್ನು, ಹತಾಸೆಯನ್ನು ಉಂಟು ಮಾಡುತ್ತದೆ. ಹಿಂಗಾಗಿ ಬಹಳಷ್ಟು ಜನ ದಲಿತ ಸಾಧಕರು, ಲೈಂಗಿಕ ಅಲ್ಪಸಂಖ್ಯಾತರು ತಮ್ಮ ನೋವಿನ ಕಥೆಯನ್ನು ಬರೆಯುವುದಕ್ಕೆ ಹೇಳಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ. ಆದರೆ, ಇಂಥವರ ಸಾಲಿಗೆ ಸೇರದ ರೇವತಿ ತನ್ನ ಬದುಕಿನ ಗೌಪ್ಯವಾಗಿ ಉಳಿಯಬಹುದಾದ ಎಲ್ಲ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ಮನುಷ್ಯನಿಗೆ ಯಾವಾಗ ಅರಿವು ಮೂಡುತ್ತದೆಯೋ ಆಗಿನಿಂದಲೆ ತನ್ನ ನೆನಪುಗಳನ್ನು ರೇವತಿ ದಾಖಲಿಸುತ್ತಾ ಹೋಗಿದ್ದಾಳೆ. ಹುಟ್ಟುತ್ತಾ ಗಂಡು ದೇಹವನ್ನು ಹೊತ್ತುಕೊಂಡು ಬಂದ ರೇವತಿಗೆ ಸಹಜವಾಗಿಯೇ ಪಾಲಕರು ದೊರೆಸ್ವಾಮಿ ಅಂತ ಹೆಸರಿಸತಾರೆ. ಆದರೆ, ಆ ಸಣ್ಣ ವಯಸ್ಸಿನಲ್ಲಿಯೇ ತನಗರವಿಲ್ಲದೆ ರೇವತಿಗೆ ಹೆಣ್ಣು ಮಕ್ಕಳು ಮಾಡುವ ಕೆಲಸಗಳನ್ನು ಮಾಡುತ್ತಾ ತಾಯಿಗೆ ನೆರವಾಗುವ ಕೆಲಸಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡತಾಳೆ. ತನ್ನ ಊರವರ, ಮನೆಯ ಅಣ್ಣಂದಿರ, ಸಂಬಂಧಿಕರು ಮಾಡುವ ಅವಮಾನಗಳನ್ನು ಸಹಿಸಿಕೊಳ್ಳತ್ತ, ಕೆಲವೊಮ್ಮೆ ಅವುಗಳ ವಿರುದ್ಧ ತಿರುಗಿ ಬೀಳುತ್ತಾ, ಹಲವೊಮ್ಮೆ ತನ್ನಲ್ಲಿನ ಆ ವಿಭಿನ್ನತೆ ಬಗ್ಗೆ ತಳಮಳಪಟ್ಟುಕೊಳ್ಳುತ್ತಲೆ ಬೆಳೆಯುತ್ತಾಳೆ. ಅಣ್ಣಂದಿರು ಹೊಡೆಯುತ್ತಾರೆ ಎಂದು ಗೊತ್ತಿದ್ದರೂ ಸಹ ಊರ ಹಬ್ಬಗಳಲ್ಲಿ ಹೆಣ್ಣಿನ ಬಟ್ಟೆ ಧರಿಸಿಕೊಳ್ಳಲು ಅಕ್ಕನ ಸೀರೆ ತೊಟ್ಟುಕೊಳ್ಳತ್ತಲೆ ಹೆದರುವುದಿಲ್ಲ. ಬಹುಶಃ ತನ್ನ ಅಣ್ಣಂದಿರು ಹೊಡೆದದ್ದನ್ನೆ ನೆಪ ಮಾಡಿಕೊಂಡು ತನ್ನ ಜೊತೆಗಾತಿಯರ ಸಹಾಯ ಪಡೆದುಕೊಂಡು ದೆಹಲಿಗೆ ಹೋಗುತ್ತಾಳೆ. ಅಲ್ಲಿಂದಾಚೆ ಆಕೆಯ ಹೆಣ್ಣುತನದ ಭವ ಮತ್ತು ಪ್ರಭಲವಾಗುತ್ತಾ ಹೋಗುತ್ತದೆ. ಬಹುಶಃ ಊರು ಬಿಟ್ಟ ನಂತರವೇ ಆಕೆಯ ಹೆಣ್ಣಾಗುವ ಅವಕಾಶಗಳು ಹೆಚ್ಚು ಸಿಗುತ್ತವೆ. ಮೊದಮೊದಲಿಗೆ ಕೇವಲ ಅಂಗಡಿ ಕೇಳುವುದಕ್ಕೆ ಹೋಗುತ್ತಿದ್ದ ರೇವತಿ ತನ್ನಲ್ಲಿನ ಲೈಂಗಿಕ ಆಶೆಗಳನ್ನು ಈಡೇರಿಸುವುದಕ್ಕಾಗಿಯೆ ತನ್ನ ಗುರುಬಾಯಿಯನ್ನು ಬದಲಾಯಿಸಿ ಲೈಂಗಿಕ ದಂದಾಮಾಡುವ ಮನೆಗೆ ವಗರ್ಾಯಿಸಿಕೊಳ್ಳುತ್ತಾಳೆ. ಇಲ್ಲಿನ ಅನುಭವಗಳಂತೂ ಅನನ್ಯ. ಹೀಗೆ ದಂದಾ ಮಾಡುತ್ತಾ ಹಲವಾರು ಶೋಷಣೆಗಳಿಗೆ ಒಳಗಾಗುತ್ತಾಳೆ. ಆಕೆ ಆಥರ್ಿಕವಾಗಿ ಚನ್ನಾಗಿ ಆಗುತ್ತಾ ಹೋದರೂ ಸಹ ತನ್ನ ಮನೆಯ ಸಂಬಂಧಿಕರನ್ನು ಮರೆಯದಿರುವುದು ವಿಶೇಷ. ಸಮಾಜದ ದೃಷ್ಟಿಯಿಂದ ಎಲ್ಲ ಸರಿಯಿರುವ ಗಂಡುಮಕ್ಕಳು ದುಡ್ಡಿನ ಆಸೆಗಾಗಿ ತಂದೆ ತಾಯಿಯನ್ನು ತೊರೆದು ಮನೆಯಿಂದ ಕುಟುಂಬ ಸಮೇತ ಬೇರೆಯಾಗುತ್ತಾರೆ. ಆಸ್ತಿ ಪಾಲಿಗಾಗಿ ಪಾಲಕರನ್ನು ಪೀಡಿಸುತ್ತಾರೆ. ವೃದ್ದ ತಂದೆ ತಾಯಿಯರು ಅನಾಥರಂತಿರುವಾಗ ರೇವತಿಯೇ ಅವರ ನೆರವಿಗೆ ನಿಲ್ಲುತ್ತಾಳೆ. ತಂದೆ ಮನೆ ಕಟ್ಟಿಸುವಾಗ ನೆರವಾಗುತ್ತಾಳೆ. ತಂದೆಯೂ ಸಹ ರೇವತಿಯನ್ನು ಇದ್ದಂತೆ ಒಪ್ಪಿಕೊಂಡು ಸಹಜವಾಗುತ್ತಾರೆ. ರೇವತಿಯ ಬದುಕು ಹೀಗೆ ಕೊನೆಯಾಗಬೇಕೆ ಎಂದು ನಮ್ಮಂಥ ಓದುಗರು ಆತಂಕಪಡುತ್ತಿರುವಾಗಲೆ ಆಕೆ ಬೆಂಗಳೂರಿನ ಹಮಾಮ್ ಮನೆಗೆ ಸ್ಥಳಾಂತರಗೊಂಡು ಹೊಸ ಚೇಲಾಗಳು ಸಿಕ್ಕು ಅವರಿಂದ ಬದುಕು ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ರೇವತಿಗೆ ಇಲ್ಲಿಯವರೆಗೂ ತನ್ನದೆ ತಪ್ಪು ಎಂದು ಸಮಾಜ ಒಪ್ಪಿಕೊಳ್ಳುವಂತೆ ಮಾಡಿರುತ್ತದೆ. ಆದರೆ ಇಲ್ಲಿ ಸಂಗಮ ಎಂಬ ಸ್ವಯಂ ಸಂಸ್ಥೆಯ ಸಂಪರ್ಕಕ್ಕೆ ಬಂದು ರೇವತಿ ಬದುಕು ನಿಜಕ್ಕೂ ಸುಗಮ ದಾರಿಯನ್ನು ಹಿಡಿಯುವಂತಾಗುತ್ತದೆ. ಅಲ್ಲಿಂದಾಚೆ ತನ್ನ ಬದುಕನ್ನು ತನ್ನ ಸಂಗಾತಿಗಳ ಹಕ್ಕುಗಳ ಪರವಾಗಿ ಹೋರಾಟಕ್ಕೆ ಮೀಸಲಿಡುತ್ತಾಳೆ. ಸಂಸ್ಥೆಯ ಮುಖ್ಯಸ್ಥನೊಂದಿಗೆ ಮದುವೆಯೂ ಆಗುತ್ತದೆ. ಮದುವೆಯಾಗುವಾಗ ಇರುವ ಉತ್ಸಾಹ, ಆಕರ್ಷನೆಗಳು ನಿಧಾನಕ್ಕೆ ಮಾಯವಾಗಿ ಕೆಲವು ಮದುವೆಗಳು ಮುರಿದು ಬೀಳುವಂತೆ ಇದು ಕೂಡ ಮರಿದು ಬೀಳುತ್ತದೆ. ಆದರೆ, ರೇವತಿಯಂಥವ ಬದುಕಿನಲ್ಲಿ ಮದುವೆ ಸಾಧ್ಯವಾಗಿದೆಯಲ್ಲ ಎನ್ನುವುದೆ ಖುಷಿಯ ವಿಚಾರ. ಇನ್ನು ಈ ಪುಸ್ತಕದ ವಿಶೇಷಗಳ ಬಗ್ಗೆ ಹೇಳುವುದೆಂದರೆ ಕನ್ನಡಕ್ಕೆ ಈ ಪುಸ್ತಕವೇ ಒಂದು ದೊಡ್ಡ ವಿಶೇಷ. ಇದಕ್ಕೂ ಮೊದಲು ವಿದ್ಯಾಳ ಆತ್ಮಕತೆ ಬಂದಿದೆಯಾದರೂ ಅದರಲ್ಲಿ ರೇವತಿಯಾಗಿ ಹಾಗೆ ವಿದ್ಯಾಅಷ್ಟೊಂದು ಬಿಚ್ಚಿಕೊಂಡು ಬರೆದುಕೊಂಡಿಲ್ಲ ಎಂದು ನನಗನಿಸುತ್ತದೆ. ಅದರಲ್ಲಿ ಆಕೆ ತಾನೆಲ್ಲೂ ಲೈಂಗಿಕ ಕಾರ್ಯಕತರ್ೆಯಾಗಿದ್ದೆ ಎಂದು ದಾಖಲಿಸಿಕೊಂಡಿಲ್ಲ. ತನ್ನ ಲೈಫ್ ಪಾಟರ್್ನರ್ ಬಗ್ಗೆಯೂ ಸಹ. ಆಕೆಗೆ ಮನುಷ್ಯ ಸಹಜವಾದ ಲೈಂಗಿಕ ಬಯಕೆಗಳು ಇದ್ದವೋ ಇಲ್ಲವೋ ಎಂದು ಆನುಮಾನ ಬರುತ್ತದೆ. ತನ್ನ ವಿದ್ಯಾಭ್ಯಸ, ಉದ್ಯೋಕ್ಕಾಗಿ ಓಡಾಟ, ರಂಗಭೂಮಿ, ಸಾಂಸ್ಕೃತಿಕ ಬದುಕುಗಳನ್ನೆ ಬಯಲುಗೊಳಿಸಿದ್ದಾಳೆ. ಕನರ್ಾಟಕದಲ್ಲಿ ಸಾವಿರಾರು ಲೈಂಗಿಕ ಕಾರ್ಯಕತರ್ೆಯರು ಇದ್ದಾರೆ ಎಂದರೂ ಯಾರೂ ಕೂಡ ಇದುವರೆಗೆ ತಮ್ಮ ಆತ್ಮಕತೆ ಬರೆಯುವ ಹುಂಬ ಸಾಹಸಕ್ಕೆ ಮುಂದಾಗಿಲ್ಲ. ಮತ್ತೊಂದು ವಿಶೇಷವೆಂದರೆ ರೇವತಿಯ ಈ ಬದುಕಿನ ಪುಸ್ತಕದಲ್ಲಿ ಬರುವ ಹೆಣ್ಣು ಪಾತ್ರಗಳೆಲ್ಲವೂ ಹಿಜ್ಡಾಗಳನ್ನು ಬೇಗ ಅರ್ಥ ಮಾಡಿಕೊಂಡು ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ವಿದ್ಯಾಳ ಆತ್ಮಕತೆಯಲ್ಲೂ ಸಹ. ಆದರೆ ಒಂದೆ ಗುಕ್ಕಿನಲ್ಲೆ ಅಥವಾ ಒಂದೆ ಸಿಟ್ಟಿಂಗ್ನಲ್ಲಿ ಓದಿಸಿಕೊಂಡು ಹೋಗಲಿಕ್ಕೆ ಸಾಧ್ಯವಾಗಲಿಕ್ಕಿಲ್ಲ. ಆದರೆ, ಆಗಾಗ ಮಧ್ಯೆ ಪುಸ್ತಕ ಮುಚ್ಚಿಟ್ಟು ವಿಚಾರಕ್ಕೆ ಹಚ್ಚುವ ತಳಮಳವನ್ನುಂಟು ಮಾಡುವ ಕೆಲಸವನ್ನು ಕೃತಿ ಮಾಡುತ್ತದೆ. ರೇವತಿ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಕೆಲವೊಂದು ಆಚರಣೆಗಳನ್ನು ಇನ್ನಷ್ಟು ವಿವರಿಸಬೇಕಾಗಿತ್ತು ಅಂತ ನನಗೆ ಅನಿಸತದ. ಅವರು ವರ್ಷಕ್ಕೊಮ್ಮೆ ಸೇರುವುದು, ದಿನದ ಆಚರಣೆಗಳು ಮುಂತಾದವುಗಳನ್ನು ಇನ್ನಷ್ಟು ವಿವರಿಸಬೇಕಿತ್ತು. ಇಲ್ಲಿರುವ ಕೆಲವು ಸಂಸ್ಕೃತಿ, ಆಚರಣೆಗಳು, ಎಲ್ಲವೂ ಹೊಸ ಅನುಭವ ಕೊಡುತ್ತವೆ. ಕನ್ನಡಕ್ಕೆ ಬಹಳಷ್ಟು ಆಪ್ತವಾಗಿ ದು.ಸರಸ್ವತಿಯವರು ಅನುವಾದ ಮಾಡಿದ್ದಾರೆ. ಈ ಪುಸ್ತಕದಲ್ಲಿ ಅನುವಾದಕಿಯ ಮಾತುಗಳನ್ನು ಓದಿಕೊಂಡು ಈ ಪುಸ್ತಕವನ್ನು ಪ್ರವೇಶಿಸಿದರೆ ಚನ್ನಾಗಿರುತ್ತದೆ ಎನಿಸುತ್ತದೆ. ಯಾರೆ ಒಬ್ಬ ವ್ಯಕ್ತಿ ಪರಿಪೂರ್ಣ ಗಂಡಸು ಅಥವಾ ಪರಿಪೂರ್ಣ ಹೆಂಗಸು ಎಂದು ಹೇಳಲು ಸಾಧ್ಯವಿಲ. ಎಲ್ಲರಲ್ಲೂ ಹೆಂಗಸರ ಗುಣಗಳು ಮತ್ತು ಗಂಡಸರ ಗುಣಗಳು ಇರುತ್ತವೆ. ಕೇವಲ ದೈಹಿಕ ಲಕ್ಷಣಗಳನ್ನು ಆಧರಿಸಿ ಹೆಣ್ಣು ಅಥವಾ ಗಂಡು ಎಂದು ಪರಿಗಣಿಸುವುದು ಸರಿಯಲ್ಲ. ಕೆಲವರಲ್ಲಿ ಹೆಣ್ಣುಗಳಲ್ಲಿ ಗಂಡಸರು ಗುಣಗಳು ಹೆಚ್ಚಾಗಿಯೂ ಕೆಲವು ಗಂಡಸರಲ್ಲಿ ಹೆಂಗಸರ ಗುಣಗಳು ಹೆಚ್ಚಾಗಿಯೂ ಇರಬಹುದು. ಅದನ್ನು ಅಸಹಜ ಎನ್ನುವುದು ಸರಿಯಲ್ಲ ಎಂದು ಅನುವಾದಕಿ ತಮ್ಮ ಮಾತುಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಯಾವ ತಪ್ಪನ್ನು ಮಾಡದ ಹುಟ್ಟಿನಿಂದ ಅಸ್ಪಶ್ಯರಾಗಿರುವ ದಲಿತರಿಗೂ ಮತ್ತು ಇವರಿಗೂ ಅಷ್ಟೊಂದು ವ್ಯತ್ಯಾಸವಿಲ್ಲ. ಹುಟ್ಟಿನಿಂದ ಯಾವ ತಪ್ಪನ್ನು ಮಾಡದ ಇವರಿಗೆ ಬದುಕುವ ಎಲ್ಲ ಅವಕಾಶಗಳನ್ನು ಕಸಿದುಕೊಂಡು ಯಾವ ಕೆಲಸ ಮಾಡಲು ಬಿಡುವುದಿಲ್ಲ. ಅನಿವಾರ್ಯವಾಗಿ ಬಿಕ್ಷಾಟನೆ ಅಥವಾ ವೇಶ್ಯಾವೃತ್ತಿಗೆ ಇಳಿಸಿದರೆ ಅದನ್ನು ಅಪರಾಧ ಎಂದು ದೂಷಿಸಲಾಗುತ್ತದೆ. ನಾನು ಸುಮ್ಮನೆ ಟ್ರಾನ್ಸಜೆಂಡರ್ ಎಂದು ಗೂಗಲ್ನಲ್ಲಿ ಮಾಹಿತಿ ಹುಡುಕಿದೆ ಸಾವಿರಾರು ಲಿಂಕ್ಗಳು ಸಿಗುತ್ತವೆ. ಅದರಲ್ಲೆಲ್ಲ ಲಿಂಗ ಬದಲಾವಣೆಯನ್ನು ಮಾಡಿಕೊಳ್ಳ ಬಯಸುವವರುಹೇಗೆ ಮಾನಸಿಕವಾಗಿ ತಯಾರಾಗಬೇಕು, ದೈಹಿಕವಾಗಿ ಹೇಗೆ ತಯಾರಾಗಬೇಕು ಅಂತ ಎಲ್ಲ ಮಾಹಿತಿ ಸಿಗತದೆ. ಮೊನ್ನೆ ನಡೆದ ಸಮಾವೇಶದಲ್ಲಿ ಹೆಂಗಸರ ದೇಹದಲ್ಲಿರುವ ಗಂಡಗಳು ಕಾಣಿಸಿಕೊಂಡರು. ಅವರನ್ನು ನೋಡಿದರೆ ನಿಜವಾದ ಗಂಡಸರೆ ಅನಿಸಿಬೀಡುತ್ತಾರೆ. ಕೊನೆಯದಾಗಿ, ಮೊನ್ನೆ ನಾನು ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶಕ್ಕೆ ಹೋಗಿದ್ದೆ. ಕಾರ್ಯಕ್ರಮ ಮುಗಿದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಅವುಗಳ ಬಗ್ಗೆ ಹಾಗೆ ನೋಡಿದೆ. ನನಗನಿಸತದ ಅವರಂಥ ನೃತ್ಯಪಟುಗಳು, ನಟರು ಹಾಡುಗಾರರು ಮತ್ತೊಬ್ಬರನ್ನು ನಾನು ಇದುವರೆಗೂ ನೋಡಿಲ್ಲ. ನೀವು ಸುಮ್ಮನೆ ಗಮನಸಿ ಅವರು ನಡೆಯುವಾಗಿನ ವಯ್ಯಾರ, ಮಾತಾಡುವಾಗಿನ ಹಾವಭವ ಎಲ್ಲವನ್ನು. ದೇಹದ ಎಲ್ಲ ಅವಯಯಗಳನ್ನು ಬಲಸಿಕೊಂಡು ಅರ್ಥಗರ್ಭಿತವಾಗಿ ಮಾತಾಡತಾರೆ.    ]]>

‍ಲೇಖಕರು G

July 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. ಜಿ.ಎನ್.ಅಶೋಕವರ್ಧನ

    ಹೆಗ್ಗೋಡಿನ ಜನಮನದಾಟ (ಮರುತಿರುಗಾಟ) ಇದೇ ಕಥನವನ್ನು ಸುಮಾರು ಒಂದೂವರೆಗಂಟೆಯ ರಂಗ ಪ್ರಸ್ತುತಿಯಾಗಿ, ನಡುವೆ ಸುಳಿವಾತ್ಮನ ಬದುಕು ಬಯಲು ಎಂಬ ಹೆಸರಿನಲ್ಲಿ ಮೊನ್ನೆ ತಾನೇ ಇಲ್ಲಿ ಕೊಟ್ಟದ್ದನ್ನು ನೋಡಿದೆ. ಪುಸ್ತಕದಲ್ಲಿ ಧಾರಾಳ ಬರುವ ನಾಟಕೀಯ ಅಂಶಗಳನ್ನು ನಿರ್ದೇಶಕ ಗಣೇಶ್ ತುಂಬ ಸಮರ್ಥವಾಗಿ ಮತ್ತು ಅಭಿನಂದನೀಯವಾಗಿ ಬಳಸಿಕೊಂಡಿದ್ದಾರೆ. ನೀನಾಸಂ ಮುದ್ರೆಗೆ ಯಾವ ಕೊರತೆಯೂ ಬಾರದಂತೆ ಕಲಾವಿದರು ಕಟ್ಟಿಯೂ ಕೊಡುತ್ತಾರೆ. ಜಾಲದಲ್ಲಿ (ಯೂ ಟ್ಯೂಬ್) ಚಿತ್ರದುರ್ಗದ ಬಳಿ ಮಂಗಳಮುಖಿಯರೇ ನಡೆಸುತ್ತಿರುವ ದಾಬಾದ ಬಗ್ಗೆ ಹೆಚ್ಚಿನ ಆಶಾದಾಯಕ ಚಿತ್ರಣವನ್ನೂ ಕಾಣಬಹುದು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಜಿ.ಎನ್.ಅಶೋಕವರ್ಧನCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: