ರೈತರಾದ ನಾಗೇಶ್ ಹೆಗಡೆ

ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆಯವರ ‘ಫೋಟೊ ಪಾಠ’ ಬಹುತೇಕರಿಗೆ ಪರಿಚಿತ. ಅವರು ಪ್ರಜಾವಾಣಿಯ ‘ಕರ್ನಾಟಕ ದರ್ಶನ’, ಸುಧಾ ವಾರಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ, ಲೇಖನ ಕೊಡಲು ಹೋದ ಬಹುತೇಕ ಹವ್ಯಾಸಿ ಬರಹಗಾರ ಸ್ನೇಹಿತರು ಹೆಗಡೆಯವರ ಫೋಟೋ ಪಾಠ ಕೇಳೇ ಕೇಳಿರ್ತಾರೆ.

‘ನಿಮಗೇನಾದರೂ ಫೋಟೋ ತೆಗೆವ ಬಗ್ಗೆ ಮಾಹಿತಿ ಬೇಕೆನಿಸಿದರೆ ಒಂದು ಕೆಟ್ಟದಾಗಿ ತೆಗೆದ ಫೋಟೋ ವನ್ನು ಹೆಗಡೆ ರ ಸರ್ ಮುಂದೆ ಇಟ್ಟು, ಅವರ ಮುಂದೆ ಕೈಕಟ್ಟಿ ಕುಳಿತರೆ ಸಾಕು, ಹೆಗಡೆಯವರು ರಾಶಿ ರಾಶಿ ಮಾಹಿತಿ ಕೊಡುತ್ತಾರೆ ‘ ಅಂತ ಗೆಳೆಯ ಕಟ್ಟೆ ಗುರುರಾಜ್ ಆಗಾಗ್ಗೆ ಹೇಳ್ತಿದ್ದ.
ಮೊನ್ನೆ ಯಾಕೋ ಇವೆಲ್ಲ ನೆನಪಾಯಿತು. ನನ್ನ ಹೊಸ ಕ್ಯಾಮೆರಾ ತಗೊಂಡು ಹೆಗಡೆ ಸರ್  ಅವರ ‘ಮೈತ್ರಿ ಫಾರಂ’ ಗೆ ಹೋದೆ.  ಹೆಗಡೆಯವರು ಅಲ್ಲಿ ರೈತರಾಗಿದ್ದರು. ಮೈ ಕೈ ಕೆಸರು ಮಾಡಿಕೊಂಡು ಗಿಡಗಳನ್ನು ಆರೈಕೆ ಮಾಡ್ತಾ ಇದ್ರು. ನಾನು ಹೋದ ಕೂಡಲೇ, ಮನೆ ಅಂಗಳದಲ್ಲಿ ಕುಳಿತು ನನಗೊಂದಿಷ್ಟು ಪರಿಸರ ಪಾಠ ಮಾಡಿದ್ರು,  ಆಮೇಲೆ ಒಂದಷ್ಟು ತೋಟ ಸುತ್ತಾಡಿಸಿದ್ರು.  ಅಷ್ಟೊತ್ತಿಗೆ ಅವರ ಕೈಗೆ ನನ್ನ ಕ್ಯಾಮೆರಾ ಇಟ್ಟೆ. ಬಹಳ ಖುಷಿಯಾಗಿ, ಅವರ ಎಂದಿನ ಶೈಲಿಯಲ್ಲಿ ಫೋಟೋ ಸೆಷನ್ ಶುರು ಮಾಡಿದ್ರು. ಅವರು ಇಡೀ ಫಾರಂ ಸುತ್ತುತ್ತಾ ಫೋಟೋತೆಗೆಯುತ್ತಾ ಹೊರಟರು. ನಾನು ಮೊಬೈಲ್ ಕ್ಯಾಮೆರಾದಿಂದ ಅವರ ಫೋಟೋ ತೆಗೆಯುತ್ತಾ ಹಿಂಬಾಲಿಸಿದೆ. ಹೆಗಡೆಯವರು ಫೋಟೋ ತೆಗೆಯುವ ಅಪರೂಪದ ಫೋಟೋ ಫೋಸ್ ಗಳನ್ನು ನಮ್ಮ ಗೆಳೆಯರ ಬಳಗದಲ್ಲಿ ಹಂಚಿಕೊಳ್ಳಬೇಕೆನಿಸಿತು.. ಏನನ್ನಿಸಿತು ? ಹೇಳಿ.

‍ಲೇಖಕರು avadhi

August 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. shreedevi kalasad

  ನಿಜ ಶ್ರೀಕಂಠ. ‘ಕಟ್ಟೆ’ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಒಂದು ಘಟನೆ ನೆನಪಿಗೆ ಬರ್‍ತಿದೆ. ಐದು ವರ್ಷದ ಹಿಂದೆ ನಾನು ಆಗಷ್ಟೇ ಪ್ರಜಾವಾಣಿಯಲ್ಲಿ ಇಂಟರ್ನ‌ಶಿಪ್ ಗೆ ಸೇರಿದ್ದೆ. ನಾಗೇಶ್ ಹೆಗಡೆಯವ್ರು ಒಮ್ಮೆ ನನಗೊಂದು ಲೇಖನ ಬರೆಯೋದಕ್ಕೆ ಹೇಳಿದ್ರು. ಅವರು ಹೇಳಿದ್ದಿಷ್ಟೇ. ಮೈಸೂರು ರೋಡಿನಲ್ಲಿ ಒಂದು ಬೋರ್ಡಿದೆ. ಮಹಿಳಾ ಪೊಲೀಸ್ ಠಾಣೆ ಅಂತ. ಅದನ್ನು ನೋಡಿಕೊಂಡು ಬಾ. ಅಷ್ಟೇ. ನಾನು ಅಲ್ಲಿಗೆ ಹೋಗಿ ವಿಚಾರಿಸಿದೆ ಇಲ್ಲಿ ಮಹಿಳಾ ಪೊಲೀಸ್ ಠಾಣೆ ಎಲ್ಲಿದೆ ಅಂತ. ಸುಮ್ಮನೆ ಹಾಗೇ ಬೋರ್ಡ್‌ ಮಾತ್ರ ಇದೆ ಮೇಡಮ್‌ ಎಂದು (ಪುರುಷ) ಪೊಲೀಸ್ ಸಿಬ್ಬಂದಿ ಹೇಳಿ ಕಳುಹಿಸಿತು. ಬೆಂಗಳೂರಿನಲ್ಲಿ ಬಸವನಗುಡಿ ಮತ್ತು ಅಲಸೂರು ಪೊಲೀಸ್ ಸ್ಟೇಶನ್ ಮಾತ್ರ ಎಂದೂ ಆ ಸಿಬ್ಬಂದಿ ಹೇಳಿತು. ನಂತರ ನಾಗೇಶ್ ಹೆಗಡೆಯವರ ಹತ್ತಿರ ಹೋಗಿ, ಹೀಗಂತೆ ಸರ್‍ ಎಂದು ವರದಿ ಒಪ್ಪಿಸಿದೆ. ಅವರು ಸರಿ ಅಲಸೂರು, ಬಸವನಗುಡಿ ಪೊಲೀಸ್ ಸ್ಟೇಶನ್ ಗೆ ಹೋಗಿ ವಿಚಾರಿಸು. ಅಲ್ಲಿ ಬರೀ ಬೋರ್ಡ್‌ ಅಷ್ಟೇ ಯಾಕಿದೆ ಅಂತ ಅಂದ್ರು. ನಾನು ಮರುದಿನ ಅಲ್ಲಿಗೂ ಹೋಗಿ ವಿಚಾರಿಸಿದೆ. ‘ಹೌದು ಅಲ್ಲಿ ಬೋರ್ಡ್‌ ಇದೆ ಅದನ್ನ ತೆಗೆಸಬೇಕು‘ ಎಂದಷ್ಟೇ ಹೇಳಿದರು. ಮತ್ತೆ ನಾನು ಹೆಗಡೆಯವರಿಗೆ ಹೀಗಂತಂತಂತೆ. . . ಅಂತ ವರದಿ ಒಪ್ಪಿಸಿದೆ. ಅದಕ್ಕೆ ಅವರು ಬನ್ನಿ ಕೂತ್ಕೊಳ್ಳಿ. ಎರಡು ಮೂರು ದಿನಗಳಿಂದ ಅಲೆದು ಅಲೆದು ಸುಸ್ತಾಗಿದ್ದೀರ. ನಿಮಗೆ ಕತೆ ಬರೆಯೋದಕ್ಕೆ ಬರತ್ತಾ? ಕಾದಂಬರಿ ಓದ್ತೀರಾ? ಅಂತೆಲ್ಲ ಕೇಳಿದ್ರು. ನಾನು ಓದೋದಕ್ಕೆ ತುಂಬಾ ಇಷ್ಟ. ಬರೀಬೇಕೂಂತ ಆಸೆ ಇದೆ ಅಂದೆ.
  ನಂತರ ಅವರು, ‘ಈಗ ನಾನು ನಿಮಗೆ ಒಂದು ಕತೆ ಹೇಳುತ್ತೇನೆ ಕೇಳ್ತೀ’ ಎಂದರು. ಆಗ ನಾನು ಹೂಂ ಅಂದೆ. ಅವರು ಒಬ್ಬ ರಾಜ ಹಾಗೂ ಮಂತ್ರಿಯ ಕತೆ ಹೇಳಿದರು. ಅದು ನನಗೆ ಮಸಕು ಮಸಕು ನೆನಪಿದೆ. ಒಂದು ದಿನ ರಾಜ ಮಂತ್ರಿಗೆ ತನ್ನ ಆಸ್ಥಾನದಲ್ಲಿ ಎಷ್ಟು ಕುದುರೆಗಳಿವೆ ಎಂದು ಕೇಳಿದನಂತೆ. ಮಂತ್ರಿ ಇಡೀ ದಿನ ಓಡಾಡಿ ಲೆಕ್ಕ ಒಪ್ಪಿಸಿದನಂತೆ. ಮಾರನೇ ದಿನ ಎಷ್ಟು ದನ-ಕರುಗಳಿವೆ ಅಂತ ಕೇಳಿದನಂತೆ. ಮಂತ್ರಿ ಅದನ್ನೂ ಇಡೀ ದಿನ ವರದಿ ಒಪ್ಪಿಸಿದನಂತೆ. ಅದರ ಮಾರನೇದಿನ ಕುರಿಗಳೆಷ್ಟಿವೆ ಲೆಕ್ಕ ಹಾಕಿದ್ದಿಯೋ ನಮ್ಮ ರಾಜ್ಯದಲ್ಲಿ ಎಂದನಂತೆ. ಇಲ್ಲ ಪ್ರಭು ಅದನ್ನೂ ನೋಡಿಕೊಂಡು ಬರುತ್ತೇನೆ ಎಂದನಂತೆ. ಕೊನೆಗೆ ರಾಜ ಮಂತ್ರಿಯಿಂದ ಏನು ನಿರೀಕ್ಷಿಸಿದ್ದ ಎಂಬುದನ್ನು ನೀವು ಈಗಾಗಲೇ ಊಹೆ ಮಾಡಿಕೊಂಡಿರುತ್ತೀರ. ಹಾಗೆಯೇ ನಾಗೇಶ್ ಹೆಗಡೆಯವರು ನನಗೀ ಕತೆಯನ್ನು ಆಗ ಯಾಕೆ ಹೇಳಿದ್ದರು ಎಂಬುದೂ ನಿಮಗೀಗಾಗಲೇ ಅರ್ಥವಾಗಿರಬಹುದು.
  ತಕ್ಷಣಕ್ಕೆ ನೆನಪಿಗೆ ಬಂದ ಒಂದು ಘಟನೆಯ ಎಳೆಯನ್ನಷ್ಟೇ ಇಲ್ಲಿ ಹೊಸೆದಿದ್ದೇನೆ. ಹೀಗೇ ಬರೆಯಬೇಕು. ಅದನ್ನ ಹೀಗೇ ಫೋಕಸ್ ಮಾಡಬೇಕು ಎಂದು ಚೌಕಟ್ಟು ಹಾಕಿಕೊಡದೇ, ನಮ್ಮ ಸೀಮಿತ ಯೋಚನಾ ಮಟ್ಟವನ್ನು ವಿಸ್ತರಿಸುವ, ಸೃಜನಶೀಲತೆಯನ್ನು ಹರಿಬಿಡಲು ದಾರಿ ತೋರುವ ಗುರು ಮನಸ್ಸು ಹೆಗಡೆಯವರದು. ಹೀಗೆ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಖುಷಿ ಎನಿಸುತ್ತಿದೆ.
  ಪ್ರಸ್ತುತ ಮೈತ್ರಿಫಾರ್ಮ್‌ ಬದುಕಿಗೂ, ಆ ಹಿಂದಿನ ಈ ಮುಂದಿನ ಬದುಕಿಗೂ ಬೆಸೆದುಕೊಂಡ ಎರಡೇ ಶಬ್ದಗಳು ನನಗೀಗ ಹೊಳೆಯುತ್ತಿವೆ. ‘ಬೆಳೆಯುತ್ತ ಬೆಳೆ’

  ಪ್ರತಿಕ್ರಿಯೆ
 2. sidrapal

  hi, ganadhalu, its really good photos. namma ‘gurugal’ photo nodi khushi aaythu.
  -ramakrishna sidrapal

  ಪ್ರತಿಕ್ರಿಯೆ
 3. subramani

  ಪ್ರಜಾವಾಣಿ ಆಫೀಸಿಗೆ ಹಾಗಾಗ ಹೋಗುತ್ತಿದ್ದ ನನಗೆ ಮತ್ತು ರಾಘವೇಂದ್ರಗೌಡನಿಗೆ
  ಬರೆಯುವ ಅಭ್ಯಾಸ ಇದ್ದರೆ ಈ ಕಡೆ ಬನ್ನಿ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು
  ಸಿರಿಸ್ಸೆ ಆಗಿ ಮಾಡಲು ಪ್ರಯತ್ನಿಸುತ್ತಿದ್ದೆವು.ಅವರ ಹೇಳಿದ ಮಡ್ ಬಾತ್ ಕಥೆ ಕೇಳಿ
  ನಾನು ಮಣ್ಣು ಮೆತ್ತಿಕೊಂಡು,ರಾಘ ತೆಗೆದ ಫೋಟೋ ಅವರಿಗೆ ತೋರಿಸಿದ್ದೇವು.ನೋಡಿ
  ಪ್ರಯನ್ನ ಚನ್ನಾಗಿದೆ ಎಂದು ನಕ್ಕರು.ಫೋಟೋಗ್ರಾಫಿ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.
  ಹೀಗೆ ಒಂದು ದಿನ ಅವರ ಮೈತ್ರಿ ಫಾರಂಗೆ ಹೋಗಿದ್ದೇವು.ಪರಿಸರ,ನಗರೀಕರಣದ ಬಗ್ಗೆ
  ಅವರ ಮಾತಿನ ಲಹರಿ ಹರಿದಿತ್ತು.ಮಕ್ಕಳಂತೆ ಕುಳಿತು ಆಲಿಸಿದೇ ಒಂದು ಖುಷಿ.

  ಪ್ರತಿಕ್ರಿಯೆ
 4. Kirankumari

  ಶ್ರಿ. ಗಣದಾಳು ಶ್ರೀಕ೦ಠರವರೇ, ಧನ್ಯವಾದಗಳು. ಮನಸ್ಸಿಗೆ ಆಹ್ಲಾದತೆ ನೀಡಿದ ಫೋಟೋಗಳನ್ನು ನೋಡಿ ಸ೦ತೋಷವಾಯ್ತು. ನಾವು ಇನ್ನೂ ಮೈತ್ರಿ ಫಾರ೦ನಲ್ಲಿದ್ದ ಅನುಭವಾ ಮರುಕಳಿಸಿದ೦ತಾಯಿತು.
  ನಿಮ್ಮ ಅನುಭವ ಮಾತು ಅಕ್ಷರಶ: ಸತ್ಯ. ಇತ್ತೀಚೆಗೆ ಮೈತ್ರಿ ಫಾರ೦ ನಲ್ಲಿ ಸಾ೦ಸ್ಥಿಕ ತರಬೇತಿ ನಡೆಸಲು ಭೇಟಿ ನೀಡಿದ್ದೆವು. ಅದೊ೦ದು ಸು೦ದರ ಮತ್ತು ಆತ್ಮೀಯ ತೋಟ..ಬೇಲಿ..ಎಲ್ಲೆ\ಗಡಿಗಳನ್ನು ಮೀರಿದ ವಿಶ್ವಾತ್ವಕ ನೆಲೆಯ ತಾಣ ಅನ್ನಿಸಿತು. ನಮ್ಮ ಬಿಡುವಿನ ಮುಸ್ಸ ೦ಜೆ ಔಪಚಾರಿಕವಾಗಿ ಅವರೊ೦ದಿಗೆ ಹೀಗೆ ಹರಟುತ್ತಿದ್ದಾಗ ಅವರ ಜೀವ ವೈವಿಧ್ಯಗಳ ಕುರಿತಾಗಿನ ಕಾಳಜಿ , ವಿಜ್ನ್ಯಾನ..ತ೦ತ್ರಜ್ನ್ಯಾನ, ಭೂಮಿ, ತಾರಾಮ೦ಡಲ..ಜನ ಸಮುದಾಯಗಳು..ನಿಸರ್ಗ ಸ೦ಬ೦ದಿತ ವಿಸ್ಮಯಗಳು..ಎಲ್ಲದರ ಕುರಿತು ಸ೦ಕ್ಷಿಪ್ತವಾಗಿ ಮತ್ತು ಅತ್ಯ೦ತ ಸರಳವಾಗಿ ಅರ್ಥ ಮಾದಿಸಿದರು. ನಡೆದಾಡುವ
  ಜ್ನ್ಯಾನ ಕೋಶದ ಮು೦ದೆ ಕುಳಿತ೦ತೆ ಭಾಸವಾಗಿತ್ತು. ಅವರ ಚಿ೦ತನೆಯ ಪ್ರಖರತೆ ನಮ್ಮ ಮೇಲೆ ಎಷ್ಟು ಪ್ರಭಾವಿಸಿದೆಯೆ೦ದರೆ..ಮು೦ದಿನ ದಿನಗಳಲ್ಲಿ ಭೂಮಿಯಲ್ಲಿ ದುಡಿಯುವ ರೈತಬದುಕನ್ನು ಆಯ್ಕೆ ಮಾಡಿಕೊ೦ಡು ಕಾರ್ಯ ಪ್ರವೃತ್ತರಾಗಬೇಕು ಎ೦ದೆನ್ನಿಸಿತು. ಅವರ ಆಸಕ್ತಿಗೆ ಪೂರಕವಗಿ ಅವರ ಶ್ರೀಮತಿಯವರೂ ಜತೆಗೂಡಿರುವುದು ಹೆಮ್ಮೆಯ ಸ೦ಗತಿ. ಹ್ಯಾಟ್ಸ್ ಆಫ್ ಯು ಸರ್. ಕನ್ನಡದ ಪರಿಸರ -ರೈತ ವಿಜ್ಯ್ನಾನಿ ,ಸಾಹಿತಿ ತೇಜಸ್ವಿ-ಯವರನ್ನು ನೆನಪಿಸಿಕೊಳ್ಳಲು ಈ ಭೇಟಿ ಒ೦ದು ಕಾರಣವೂ ಆಯಿತು. ಧನ್ಯವಾದಗಳು..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: