ರ೦ಗಭೂಮಿ – ಬದಲಾದ ವೇದಿಕೆಯಲ್ಲಿ

ಅವೇಳೆಯಲ್ಲಿ

– ಅಮಾಸ

ಇವತ್ತಿನ ರಂಗಭೂಮಿಯ ಚಲನೆ ಸಣ್ಣ-ಪುಟ್ಟ ತಂಡಗಳಲ್ಲಿ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಆನೆ ಒಂಟೆ ಹಸು ನವಿಲುಗಳೊಂದಿಗೆ ಭಾರಿ ರಂಗಸಜ್ಜಿಕೆಯ ಆವರಣದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳನ್ನು ಮತ್ತು ರಂಗತಂತ್ರಗಳಲ್ಲಿ ಮಿಂದ ನಾಟಕೀಯತೆಯನ್ನ ಕಂಡವರು ಇವತ್ತಿನ ಈ ಸರಳತೆಯನ್ನ ಕಂಡು ಬೆರಗಾಗಿದ್ದಾರೆ. ಎರಡೋ ಮೂರು ಬೆಳಕಿನ ಸಾಧನ, ಬೆಕೆನಿಸಿದಷ್ಟು ಪರಿಕರ, ಅಗತ್ಯವೆಷ್ಠೋ ಅಷ್ಟೆ ಬಳಸಿಕೊಳ್ಳುವ ರಂಗ ವಿನ್ಯಾಸದ ಹೊರತಾಗಿ ಮತ್ತೇನನ್ನು ತರಲಾರದೆ, ಸಣ್ಣಕತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಈ ಗುಂಪುಗಳ ಚಾಕಚಕ್ಯತೆ ಬಹು ಜನರನ್ನು ತಲುಪುತ್ತಿವೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಆದರೆ, ಈ ಸಾಧ್ಯತೆಯನ್ನ ಹೆಚ್ಚಾಗಿ ಅವಲಂಬಿಸುತ್ತಿರುವ ಯುವಕರು ಕಲಾಮಾರ್ಗದ ಯಾವ ದಿಕ್ಕಿನಲ್ಲಿದ್ದಾರೆನ್ನುವುದ ಮುಖ್ಯಪ್ರಶ್ನೆಯಾಗಿದೆ. ವರ್ಷವೊಂದರಲ್ಲಿ ನಾಲ್ಕಾರು ತಂಡಗಳು ಒಟ್ಟೊಟ್ಟಾಗಿ ಪ್ರದರ್ಶನಕ್ಕೆ ಸಜ್ಜಾಗಿ ಪ್ರವಾಸ ಮಾಡುವುದು ಕಂಡರೆ ವೃತ್ತಿಯ ವ್ಯವಧಾನ ಗಲಿಬಿಲಿಗೊಂಡದ್ದು ಖಾತ್ರಿಯಾಗುತ್ತದೆ. ಚುಟುಕು ಸಮಯದಲ್ಲಿ ಚುರುಕಾಗಿ ಜನರನ್ನು ತಲುಪುವ ಹಂಬಲ ರಂಗಭೂಮಿಗೆ ಬಂದಿರುವುದೆ ವೃತ್ತಿಯನ್ನು ಅನುಮಾನಿಸಲು ಕಾರಣ ಎನ್ನಬಹುದು. ಅಷ್ಟು ಸುಲಭದಲ್ಲಿ ನಾಟಕ ದೊರೆಯುವಂತಾದಾಗ ಶಾಸ್ತ್ರ ರಿತ್ಯಾ ಅಭ್ಯಸಿಸುವ ಮತ್ತು ಪ್ರದರ್ಶನ ಗುಣಮಟ್ಟ ಕಾಯ್ದುಕೊಳ್ಳುವ ತಂಡಗಳ ಬೇಡಿಕೆ ತನ್ನ ತಾನೆ ಕಡಿಮೆ ಆಗುತ್ತದೆ. ಆದರೆ ಈ ದೊಡ್ಡ ರೆಪರ್ಟರಿಗಳು ಸಣ್ಣ-ಪುಟ್ಟ ತಂಡಗಳಂತೆ ದಿಢಿರ ಬದಲಾಗುವ ಅವಶ್ಯಕತೆ ಬರುವುದಿಲ್ಲ. ಯಾಕಂದರೆ ಕಲಾತ್ಮಕತೆಯ ಮೌಲ್ಯಗಳು ಸರಳತೆಯೊಂದಿಗಿದ್ದರೂ ಕ್ರಿಯಾಶಿಲವಾಗಿರುತ್ತವೆ. ಆ ಸೃಜನತೆಯ ಹುಡುಕಾಟ ದೇಶಿಯ ಕಲೆಗಳೊಂದಿಗೆ ಮಾಡಿಕೊಳ್ಳುವ ಅನುಸಂಧಾನದಿಂದ ಸಿಕ್ಕುತ್ತದೆ.ಆ ನಿಟ್ಟಿನಲ್ಲಿ ಕೆಲಸ ಮಾಡುವ ಕಸುಬುಗಾರಿಕೆಯನ್ನ ನುಂಗುತ್ತಿರುವ ಜಾಗತಿಕ ಸಂಸ್ಕರಣದ ಜೊತೆ ಸಂಘಟನ ಶಕ್ತಿಯಾದ ನಾಟಕ ಹೊಡೆದಾಡುತ್ತಿರುತ್ತದೆ. ಹಾಗಾಗಿ ಈ ಚುಟುಕು ತಂಡಗಳು ರಂಜನೋದ್ಯಮದ ಎಲ್ಲ ಗುಣಗಳನ್ನು ಅಳವಡಿಸಿಕೊಂಡಿವೆ ಹೊರತು ವೃತ್ತಿನಿಷ್ಠ ಕಲಾತ್ಮಕತೆಯನ್ನಲ್ಲ. ಶ್ರೀರಂಗರು ಕತ್ತಲೆ ಬೆಳಕು ನಾಟಕ ಬರೆಯುವಾಗ ಕನ್ನಡ ರಂಗಭೂಮಿಯ ಒಂದು ಮಜಲಾಗಿದ್ದ ರಂಜನೆ, ರಸಾಯಣಗಳೊಂದಿಗೆ ವೈಭವಯುತವಾಗಿ ಮೆರೆಯುತ್ತಿದ್ದ ಕಂಪನಿ ನಾಟಕಗಳು ಹೆಚ್ಚು ಪ್ರಸಾರದಲ್ಲಿ ಇದ್ದವು. ಸಮಾಜವನ್ನು ಕಲೆ ಗಂಭಿರವಾಗಿ ಪರಿಗಣಿಸದಿದ್ದ ಕಾಲದಲ್ಲಿ ಮಾನವೀಯತೆ, ನೈತಿಕತೆಗಿಂತ ಮನಸೋಲ್ಲಾಸದ ಮತ್ತು ಮೈ ನವಿರೇಳಿಸುವ ಕಲೆಗಳ ಆರಾಧನೆಯ ಜಪ ನಿರಂತರವಾಗಿ ನಡೆಯುತ್ತದೆ. ರಂಗಭೂಮಿಯ ಜಾಗತಿಕ ಇತಿಹಾಸವೂ ಆಶ್ರಯದ ಅವಶ್ಯಕತೆಗೆ ತಕ್ಕಂತೆ ತನ್ನ ದಿಕ್ಕನ್ನು ಬದಲಿಸಿರುವುದು ಕಾಣುತ್ತದೆ. ಒಂದು ಅಭಿವ್ಯಕ್ತಿ ಹೀಗೆ ಬಲವುಳ್ಳವರ ನೆರಳಾಗಿ, ತನ್ನ ಸಮಾಜಮುಖಿ ಆಶೋತ್ತರಗಳನ್ನು ಕೆಲವೆ ಜನರ ಹಿತಾಸಕ್ತಿಗೆ ಅನ್ವಯಿಸಿಕೊಂಡು ಬದುಕುಳಿಯುವ ದರ್ದು ಯಾಕಾಗಿ ಎದುರಾಯಿತು ಅನ್ನುವುದು ಸಂಶೋಧನೆಯ ವಸ್ತುವಾಗಿದೆ. ಅದನ್ನು ಎಷ್ಟು ಕೆಣಕಿದರೂ ದಕ್ಕುವುದು ಕಲಾಕಾರನ ಸೋತ ಬದುಕು ಮಾತ್ರ… ಹಾಗೆ ಸೋಲನ್ನೊಪ್ಪಿಕೊಂಡವನು ಧರ್ಮದೊಂದಿಗೆ,ಪಟ್ಟಭದ್ರರ ಹಿತಾಸಕ್ತಿಯೊಂದಿಗೆ ತಾನು ತನ್ನ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿರುತ್ತಾನೆ. ಹಾಗೇಯೇ ಪಾಪ! ಎನ್ನುವ ಜನಮಾನಸದ ಕರುಣೆಯ ಉಸಿರನ್ನ ಸೊಲ್ಲಾಗಿಸಿಕೊಂಡು ಕ್ಷುದ್ರನಾಗಿ ಬದುಕಿಕೊಳ್ಳುವ ವಿಚಿತ್ರ ಹಪಹಪಿಯ ಲಾಬಿಗಳಲ್ಲಿ ಮುಳುಗೇಳುತ್ತಾನೆ. ಕಲಾವಿದನ ಚರಿತ್ರೆ ಏನೆ ಇರಲಿ ಸಹೃದಯನ ಬೇಡಿಕೆ ಕೊಂಚ ದಿಗಿಲಾಗಿಸುತ್ತದೆ. ಯಾಕೆಂದರೆ ಇವತ್ತು ಕನ್ನಡ ರಂಗಭೂಮಿಯ ಒಟ್ಟೋಟದ ನಡೆಯನ್ನ ಗಮನಿಸುವುದಾದರೆ ಜನಪ್ರಿಯ ಕಲೋಪಾಸಕ ಪ್ರೇಕ್ಷಕ ಸಮೂಹ ದೊಡ್ಡದಾಗಿ ಸಿಗುತ್ತದೆ. ಅತಿ ರಂಜನೀಯವಾಗಿರುವ ಸಣ್ಣಕತೆಗಳ ಪ್ರಸ್ತುತಿಯನ್ನ ಮತ್ತು ಸಿನಿಮೀಯ ತೆರನಾದ ನಾಟಕೀಯತೆಯನ್ನ ಬಯಸುತ್ತಿರುವುದು ಕಳೆದೆರಡು ವರ್ಷಗಳ ನಾಟಕ ರಂಗವನ್ನು ಹತ್ತಿರದಿಂದ ಗಮನಿಸಿದವರು ಗುರುತಿಸಬಲ್ಲರು. ಅತಿ ರಂಜಿತ ಮಾದರಿಯಲ್ಲಿ ಪ್ರದರ್ಶಿತವಾಗುವ ಈ ಸಣ್ಣ ಕತೆ ನಿರೂಪಣಾ ಶೈಲಿ ಅಂಬೋದು ಬರಿ ಜನಪ್ರಿಯ ಗೀಳಿನ ವ್ಯಾಪಾರ ಬುದ್ಧಿಯ ಕಸಬು ಮಾತ್ರ ಆಗದೆ, ಸಾಂಸ್ಕ್ರತಿಕ ಚಹರೆಯಲ್ಲಿ ಕ್ರಾಂತಿಕಾರಕ ಮನೋಭಾವದ ಸತ್ಯವನ್ನು ಕಂಡುಕೊಳ್ಲಬೇಕಾದ ಅನಿವಾರ್ಯತೆ ಇರುತ್ತದೆ. ಅದೊಂದು ಶೈಲಿಯಂದು ಒಪ್ಪಿಕೊಂಡು ಅದಕ್ಕೆ ಒಗ್ಗಿಕೊಂಡಿರುವ ಪ್ರೇಕ್ಷಕರು ಸರಳತೆಯ ಸಾಧ್ಯತೆಯನ್ನು ಕೇಳುವುದಿಲ್ಲ, ಅಂದ ಮಾತ್ರಕ್ಕೆ ಕತೆಯೊಳಗಿನ ಪ್ರತಿಮೆಯನ್ನ ಬೇಕಾಬಿಟ್ಟಿ ಒಡೆದು ಮರುಸೃಷ್ಟಿಸುವಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯವಾಗಿರುತ್ತದೆ. ಅಂಥ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ವ್ಯಾಪಾರಿ ಮನೋಭಾವ ಕತೆಯ ಕಲಾತ್ಮಕತೆಯನ್ನು ಕೊಂದುಹಾಕುತ್ತದೆ. ಆಗ ತಂಡದ ಶಿಸ್ತು ಕತೆ ಆಯ್ಕೆಯಿಂದ ಹಿಡಿದು ಆರಂಭವಾಗಬೇಕು. ಕೆಲವರು ಸಮಾನ ಮನಸ್ಕರು ಒಣ ಸಿದ್ಧಾಂತಗಳ ಬೊಂಬಡಾ ಹೊಡೆದು ತಾವು ರಂಗಭೂಮಿಗೆ ಬದ್ಧರಾಗಿರುವುವೆಂದು ಹೇಳಿಕೊಳ್ಳುತ್ತ ಹೊಂದಾಣಿಕೆಗೆ ತೊಡಗಿ ಕಲಾಮಾರ್ಗದ ನಿಖರತೆಯನ್ನು ಹಾಳುಗೆಡುವುತ್ತಿದ್ದಾರೆನ್ನುವುದು ಕೆಲ ಹಿರಿಯ ರಂಗಕರ್ಮಿಗಳ ಗೊಣಗಾಟವಾಗಿದೆ. ಹೌದು ಅವರು ಆ ಕಾಲದ ಸಂಗಡ ಹೊಡೆದಾದಾಡಿದ್ದರು, ಈಗ ಇವರು ಈ ಕಾಲದ ಸಂಗಡ ತಮ್ಮ ಅಸ್ತಿತ್ವ ಹುಡುಕಿಕೊಳ್ಳುತ್ತಿದ್ದಾರೆ.]]>

‍ಲೇಖಕರು G

March 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ರಮಾಕಾಂತ್‌ ಆರ್ಯನ್‌ ತುಂಬ ಜನ ನಿಮ್ಮನ್ನ ಅಣಕಿಸಿದ್ದರೆ, ಸುಖಾ ಸುಮ್ಮನೆ ನಕ್ಕಿದ್ದರೆ, ಬೇಡದ ವಿಷಯ ತೆಗೆದು ಮೂದಲಿಸಿದ್ದರೆ, ಜೀವನದಲ್ಲಿ ನೀನು...

ಇದು ಕಾಡುವ ಪ್ರವಾಸ ಕಥನ…

ಇದು ಕಾಡುವ ಪ್ರವಾಸ ಕಥನ…

ಬಿ ವಿ ಭಾರತಿ ಅವರ ಕಾಡುವ ಪ್ರವಾಸ ಕಥನ 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ..' ಈಗ ಮಾರುಕಟ್ಟೆಯಲ್ಲಿದೆ. ಪೋಲೆಂಡ್ ದೇಶದಲ್ಲಿ ನಾಜಿಗಳು ನಡೆಸಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This