ರ೦ಗಾಯಣ ಎ೦ದರೆ..

ನಟರಾಜ ಹೊನ್ನವಳ್ಳಿ

  24 ವರ್ಷಗಳ ಮೈಸೂರು ರಂಗಾಯಣಕ್ಕೆ ದೀರ್ಘ ಕಾಲದ ಸ್ಮೃತಿ ಇದೆ. ಅಲ್ಲಿನ ಸಾಹಿತ್ಯ, ರಂಗಭೂಮಿ, ಅಲ್ಲಿನ ಪ್ರೇಕ್ಷಕರು ಮತ್ತು ಕಲಾವಿದರ ಜೊತೆ ಬೆರೆತು ಜಗಳ, ಪ್ರೀತಿ, ಸಂಭ್ರಮ, ಸಂಸಾರ ಮಾಡಿಕೊಂಡಿರವ ಕಲಾವಿದರು ರಂಗಾಯಣದ ಜೊತೆ 25 ವರ್ಷ ಹೆಜ್ಜೆ ಹಾಕಿದ್ದಾರೆ. ಕನ್ನಡದ ಕೆಲಸಗಳನ್ನು ರಂಗಭೂಮಿಯ ಮೂಲಕ ಸಮರ್ಥವಾಗಿ ಮಾಡಿದ್ದಾರೆ ಮತ್ತು ಮಾಡುತ್ತಲೂ ಇದ್ದಾರೆ. ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ರಂಗಕ್ಕೆ ತಂದ ಹೆಗ್ಗಳಿಕೆ ಇವರದ್ದು. ಮಹಾದೇವರ ‘ಕುಸುಮಬಾಲೆ’, ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಮುಂತಾದ ರಂಗಕೃತಿಗಳು ಇನ್ನು ನಿನ್ನೆ ಮೊನ್ನೆಯ ನೆನಪುಗಳ ಹಾಗೆ ಇದೆ. ಅಂಥ ನಟ-ನಟಿಯರಿಗೆ ದಣಿವಾದಾಗ ಸಾಂತ್ವನ ಮತ್ತು ಚಿಕಿತ್ಸೆಯನ್ನ ರಂಗ ಸಮಾಜ ಸೃಜನಶೀಲವಾಗಿ ಮಾಡುವುದು ಕರ್ತವ್ಯ. ಅದನ್ನು ಬಿಟ್ಟು ಅವರೆಲ್ಲ ಅಭದ್ರತೆಯಿಂದ ನರಳುವ ಹಾಗೆ ಮಾಡುವುದು ಅವಿವೇಕದ ಕೆಲಸ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಮನೆ, ಭೂಮಿ, ನೆನಪು ಸಂಬಂಧ, ನೆಲೆ ಕಳೆದುಕೊಳ್ಳುತ್ತಿರುವ ಅಪಾರ ಜನ ಸಮುದಾಯಗಳ ಜೊತೆಯೇ ಇದನ್ನೂ ಹೋಲಿಸಬಹುದು.

ರಂಗಾಯಣದ ಕಲಾವಿದರನ್ನು ಆರಾರು ಜನರಾಗಿ ಒಡೆದು ಬೇರೆಕಡೆ ಸ್ಥಳಾಂತರ ಮಾಡುತ್ತಿರುವ ಅಧಿಕಾರಶಾಹಿ ಮತ್ತು ರಂಗ ಸಮಾಜದ ನೀತಿ ಪ್ರಜ್ಞಾವಂತಿಕೆಯಿಂದ ಕೂಡಿಲ್ಲ. ಆ ಎಲ್ಲಾ ಕಲಾವಿದರಿಗೆ ರಜೆ ಕೊಟ್ಟು ಈ ರೀತಿ ಮಾಡುತ್ತಿರುವ ರಂಗ ಸಮಾಜದ ಆಡಳಿತದ ನೀತಿಯನ್ನು ಪ್ರಶ್ನಿಸಬೇಕಾಗಿದೆ. ರಂಗ ಸಮಾಜ ತನ್ನ ಕಾಲಾವಧಿಯನ್ನು ಮುಗಿಸಿ ಹೋಗುತ್ತಿರುವ ತುದಿಯಲ್ಲಿ 6 ಜನ ಕಲಾವಿದರುಗಳನ್ನು ಶಿವಮೊಗ್ಗ, ಧಾರವಾಡದ ರಂಗಾಯಣಗಳಿಗೆ ಕಳುಹಿಸುತ್ತಿರುವುದು ಆತುರದ ನಿಧರ್ಾರ. ಇದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿದೆ. ಕಲಾವಿದರನ್ನು ಬೇರೆ ಕಡೆಗೆ ವಗರ್ಾಯಿಸುವಂಥಹ ಮಹತ್ವದ ನಿಧರ್ಾರಗಳನ್ನು ಮುಂಬರುವ ಹೊಸ ರಂಗಸಮಾಜಕ್ಕೆ ಬಿಡುವುದು ಒಳಿತು ಮತ್ತು ಕನರ್ಾಟಕದ ಪ್ರಜ್ಞಾವಂತ ರಂಗಕಮರ್ಿಗಳನ್ನು ಗಮನದಲ್ಲಿರಿಸಿಕೊಂಡು ಮಾಡಬೇಕಾಗಿದೆ.

ರಂಗ ಸಮಾಜ ಕಾಲ-ಕಾಲಕ್ಕೆ ಕನಿಷ್ಟ ಇಷ್ಟಾದರೂ ಕೆಲಸ ಮಾಡಬೇಕಾಗಿತ್ತು. ನಟ-ನಟಿಯರು ಕೆಲಸ ಮಾಡಲು ಸರಿಯಾದ ಫೋರ್ಗಳು Actors Guildಗಳ ಮೂಲಕ ದೇಶ-ವಿದೇಶದ ನಟ-ನಟಿಯರ ಜೊತೆ ಸಂವಾದ ಮತ್ತು ವಿನಿಮಯ ಗ್ರಂಥಾಲಯದ ಸಮರ್ಥ ಬಳಕೆ ದೇಶದ ರಂಗ ಸಂನ್ಮೂಲ ವ್ಯಕ್ತಿಗಳ ಜೊತೆ ನಿರಂತರ ಒಡನಾಟ. ಧ್ವನಿ, ದೇಹದ ಥೆರಪಿಗೆ ಬೇಕಾದ ಲ್ಯಾಬ್ಗಳು. ನಾಟಕ ಪ್ರೇಕ್ಷಕರ ಜೊತೆಗಿನ ಸಂಬಂಧದ ನವೀಕರಣ. ರಂಗಾಯಣ ನಡೆಸುತ್ತಿರುವ ರಂಗಶಾಲೆಗೆ ಸೌಲಭ್ಯಗಳು. ತಾಲ್ಲೂಕು ಕಛೇರಿಗಳು ನಡೆಯುವ ಹಾಗೆ ನಡೆಯುತ್ತಿರುವ ನಡಾವಳಿಗಳ ಪರಾಮಶರ್ೆ ರಂಗಾಯಣದ ನಟ-ನಟಿಯರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬೇರೆ ಬೇರೆ ಕಡೆ ಕಳುಹಿಸಿ ಅವರ ಅನುಭವವನ್ನು ಬಳಸಿಕೊಳ್ಳುವುದು. ರಂಗಾಯಣಕ್ಕೆ 24 ವರ್ಷ ಮುಗಿದು ಇದು 25ನೇ ‘ರಜತ ವರ್ಷ’. ಈ ವರ್ಷದಲ್ಲಿ ಕಲಾವಿದರನ್ನು ಎತ್ತಂಗಡಿ ಮಾಡುತ್ತಿರುವುದನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾಗಿದೆ. ಈ ವರ್ಷ ಅವರು ತಮ್ಮ ಹಳೆಯ ರಂಗಕೃತಿಗಳನ್ನು ಪ್ರಸ್ತುತ ಪಡಿಸಬೇಕಾಗಿದೆ. ಇಂಥ ಭಾವನಾತ್ಮಕ ವರ್ಷದಲ್ಲಿ ಅನುಸರಿಸುತ್ತಿರುವ ಈ ಕ್ರಮ ಸವರ್ಾಧಿಕಾರಿ ರೀತಿಯದ್ದಾಗಿದೆ. ‘ರಂಗ ಸಮಾಜ’ ಮೂರ್ಖರ ಮತ್ತು ಸಮಯ ಸಾಧಕರ, ಪಕ್ಷ ಪುಡಾರಿಗಳ ಗುಂಪಾಗಿ ಪರಿವತರ್ಿತವಾಗಿರುವುದು ಬೇಸರದ ಸಂಗತಿ. ರಂಗ ಉತ್ಸವಗಳನ್ನು ನಡೆಸಿ ಪ್ರಭುತ್ವವನ್ನು ತೃಪ್ತಿ ಪಡಿಸುವ ಕೆಲಸಗಳಾಗಿದೆಯೇ ವಿನಃ ಯಾವುದೇ ಸೃಜನಶೀಲ ಕೆಲಸಗಳಾಗಿಲ್ಲ.   ಧಾರವಾಡದ ರಂಗಾಯಣ, ಶಿವಮೊಗ್ಗ ರಂಗಾಯಣ ಎಂದು ಪ್ರಾರಂಭಿಸಿರುವುದೇ ಸರಿಯಾದ ಕ್ರಮವಲ್ಲ. ಆಯಾಯ ಸ್ಥಳಿಯ ರುಚಿ, ಸಂಸ್ಕೃತಿಗಳ ಮೂಲಕ ಹೆಸರು ಮತ್ತು ಕೆಲಸದ ವಿಧಾನಗಳನ್ನು ರೂಪಿಸಬೇಕೇ ಹೊರತು, ಮೈಸೂರಿನ ರಂಗಾಯಣದ ಮಾಡಲ್ನ್ನು ವಿಸ್ತರಿಸುವುದಲ್ಲ. ಬೇರೆ ಬೇರೆ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ರಂಗ ಸಂಸ್ಕೃತಿ ರೂಪಿತವಾಗುವ ಹಾಗೆ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ರಂಗಾಯಣ-ಸಕರ್ಾರ ಮಾಡಬೇಕು. ಅದನ್ನು ಬಿಟ್ಟು ಸಂಸ್ಕೃತಿ ಮಳಿಗೆಗಳನ್ನು ತೆರೆಯುತ್ತಾ ಹೋಗುವುದಲ್ಲ. ನಾಲ್ಕು ಪೂಣರ್ಾವಧಿ ಶಾಲೆಗಳಿರುವ ಈ ಕನರ್ಾಟಕದಲ್ಲಿ ಹೆಗ್ಗೋಡಿನ ನೀನಾಸಮ್ ತಿರುಗಾಟ, ಸಾಣೇಹಳ್ಳಿಯ ಶಿವಸಂಚಾರ, ರಂಗಾಯಣ ಮುಂತಾದ ರೆಪರ್ಟರಿಗಳ ಸಹಾಯದಿಂದ ಹೊಸ ಹೊಸ ರೆಪರ್ಟರಿಗಳನ್ನು ಪ್ರಾರಂಭಿಸುದರ ಬಗ್ಗೆ ಮಾತುಕತೆ ನಡೆಸಬೇಕು. ಆಧಿಕಾರಿಗಳು ಮತ್ತು ಅಧಿಕಾರಶಾಹಿಗಳು ಸಾಂಸ್ಕೃತಿಕ ನೀತಿಗಳನ್ನು ರೂಪಿಸುವುದನ್ನು ಸಕರ್ಾರ ಬಿಡಬೇಕು. ಶಿವಮೊಗ್ಗ, ಧಾರವಾಡದ ರಂಗಾಯಣಗಳು ತಮ್ಮ ಸಂಪನ್ಮೂಲಗಳನ್ನು ಸ್ಥಳೀಯವಾಗಿ, ತಮ್ಮ ಸಂಸ್ಕೃತಿ, ಸಮುದಾಯಗಳಿಂದಲೇ ರೂಪಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಕಲಾವಿದರನ್ನು ನೇಮಿಸಿಕೊಳ್ಳಲು ‘ಏಜನ್ಸಿ’ ಮೂಲಕ ಹೋಗಬಾರದು. ಸಕರ್ಾರ ಅಥವಾ ಸಂಸ್ಕೃತಿ ಇಲಾಖೆ ಏಜನ್ಸಿಗಳ ಮೂಲಕ ಕಲಾವಿದರ ನೇಮಕಾತಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು. ಶಿವಮೊಗ್ಗ, ಧಾರವಾಡದ ರಂಗಾಯಣಗಳು ತಮಗೆ ಬೇಕಾದ ಕಲಾವಿದರನ್ನು ತಾವೇ ನೇಮಿಸಿಕೊಳ್ಳಬೇಕು. ಹಾಗೆ ನೇಮಿಸಿ ಕೊಳ್ಳಲು ಹಲವಾರು ರಂಗ ಶಾಲೆಗಳಿಂದ ಬಂದ ರಂಗ ವಿದ್ಯಾಥರ್ಿಗಳು ಒಂದು ದೊಡ್ಡ ಗುಂಪೇ ಕನರ್ಾಟಕದಲ್ಲದೆ. ಪೂಣರ್ಾವಧಿ ರಂಗ ಶಾಲೆಯಲ್ಲಿ ಓದಿದ ಅನುಭವವಿರು ವಿದ್ಯಾಥರ್ಿಗಳಿಗೆ ಈ ಏಜನ್ಸಿಗಳು ಮಾರಕವಾಗಿ ಪರಿಣಮಿಸಲಿದೆ. ಸಂಸ್ಕೃತಿ ಸಕರ್ಾರಗಳು ಅಥವಾ ಹಣ ಹೇಳಿದ ಹಾಗೆ ರೂಪಗೊಳ್ಳುವುದಿಲ್ಲ. ಅದು ಜನಮಾನಸದ ‘ಸಂಬಂಜ ಅನ್ನುವುದು ದೊಡ್ದು ಕನಾ’ ರೀತಿಯದು. ಸಂಸ್ಕೃತಿ ಇಲಾಖೆ ಸಕರ್ಾರ ಮತ್ತು ಸಂಸ್ಕೃತಿ ಸಚಿವರು ಈ ಕೂಡಲೇ ಗಮನಹರಿಸಬೇಕು.]]>

‍ಲೇಖಕರು G

May 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

2 ಪ್ರತಿಕ್ರಿಯೆಗಳು

 1. prasad raxidi

  ಶಿವಮೊಗ್ಗೆಯಲ್ಲಿ ರಂಗಾಯಣ (ಅಥವಾ ರಂಗ ಸಂಸ್ಥೆ) ಸ್ಥಾಪಿಸುವ ಬದಲಿಗೆ ಗುಲಬರ್ಗಾ ಹೆಚ್ಚು ಸರಿಯಾದ ಆಯ್ಕೆಯಾಗುತ್ತಿತ್ತು. ಅಕ್ಕ-ಪಕ್ಕಗಳಲ್ಲಿರುವ ನೀನಾಸಂ ಮತ್ತು ಸಾಣೇಹಳ್ಳಿ ಈಗಾಗಲೇ ಕೆಲಸ ಮಾಡುತ್ತಿದೆ. ಈಗ ಇರುವ ಮೈಸೂರು ರಂಗಾಯಣವನ್ನು ಒಡೆಯುವ ಕೆಲಸ ದುರುದ್ದೇಶದ್ದೆಂದೇ ತೋರುತ್ತದೆ.ರಂಗಾಯಣವನ್ನು ಒಡೆಯದೆ ಅಲ್ಲಿನ ಹಿರಿಕಲಾವಿದ ಅನುಭವ ನಾಡಿಗೆ ಸಿಗುವ ವ್ಯವಸ್ಥೆ ಮಾಡಬೇಕು. ಸರಕಾರಕ್ಕೆ ಕಾಳಜಿಯಿದ್ದರೆ ಜಿಲ್ಲೆ- ತಾಲ್ಲೂಕು ಕೇಂದ್ರಗಳಲ್ಲಿ ಸರಳವಾದ ಎಲ್ಲ ಅನುಕೂಲವಿರುವ ರಂಗಮಂದಿರಗಳನ್ನು ಕಟ್ಟಿ ಹವ್ಯಾಸಿಗಳಿಗೆ ಸುಲಭ ದರದಲ್ಲಿ ಬಾಡಿಗಗೆ ಕೊಡಲಿ ಸಾಕು. ತಮಗೆ ಬೇಕಾದ ರಂಗಭೂಮಿಯನ್ನು ಜನ ಕಟ್ಟಿಕೊಳ್ಳುತ್ತಾರೆ.
  -ಪ್ರಸಾದ್ ರಕ್ಷಿದಿ

  ಪ್ರತಿಕ್ರಿಯೆ
 2. mahadev

  ವ್ಯವಸ್ಥಿತ ಹಿತಾಸಕ್ತಿಯನ್ನು ಹಾಗೇ ಉಳಿಸಿಕೊಳ್ಳುವ ಅಗತ್ಯವೇನಿದೆ ? ನನಗಿದು ಅರ್ಥವೇ ಆಗುತ್ತಿಲ್ಲ… ಆ ಕಲಾವಿದರ ಭಾವನಾತ್ಮಕ ಸಂಬಂಧ ಮಯಸೂರಿನಲ್ಲಿ ಬೀಡು ಬಿಟ್ಟಿರುವ ತೀರ ವಯಯಕ್ತಿಕ ಕೆಲಸಗಳನ್ನು ನಿರ್ವಹಿಸಲಿಕ್ಕಾಗಿ ಏನೋ… ಅವರನ್ನು ಮೂರು ರಂಗಾಯಣಗಳಿಗೆ ಬದಲಾಯಿಸುವುದು ಅಗತ್ಯ ಆಗಬೇಕು. ಯಾಕಂದ್ರೆ ಆ ಸ್ಥಳಿಯ ಜನರೊಂದಿಗೆ ಬೆರೆತು ಹೊಸರೂಪವನ್ನು ಧಾರವಾಡ ಮೈಸೂರು ರಂಗಾಯಣಗಳಿಗೆ ಕೊಡಲೇಬೇಕು. ಸ್ಥಳಿಯ ಸಂಪನ್ಮೂಲಗಳ ಮಹತ್ವ ಸ್ಥಳಿಯರಿಗಿಂತ ಹೊರಗಿನವರಿಗೆ ಹೆಚ್ಚು ರುಚಿಸುತ್ತವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: