ಬೇಂದ್ರೆ ಪದ್ಯ ಓದಿದರೆ ಕಿ ರಂ ಥರಾ ಓದಬೇಕು ಅಂತ ಕೆಲದಿನಗಳ ಹಿಂದೆ ಬಾಗೇಶ್ರೀ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರು. ಸುಚಿತ್ರಾ ಆಪ್ತ ಸಮೂಹದ ಎದುರು ಕಿ ರಂ ಬೇಂದ್ರೆಯವರನ್ನು ತೆರೆದಿಟ್ಟ ರೀತಿಗೆ ಸಂದ ಪ್ರಶಂಸೆ ಅದು. ಕಿ ರಂ ಅವರ ಕಾವ್ಯ ಪ್ರೀತಿ ಎಲ್ಲರಿಗೂ ಗೊತ್ತಿರುವಂತಹದು.
ದಶಕಗಳ ಕಾಲ ಕಾವ್ಯವನ್ನು ಒಬ್ಬ ತಪಸ್ವಿಯಂತೆ ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವವರು ಅವರು. ಲಂಕೇಶ್ ಕವಿತೆಗಳನ್ನು ಅವರು ಓದುವ ಪರಿಯೂ ಅಷ್ಟೆ. ಅವರ ಓದಿನಲ್ಲಿ ಒಂದೊಂದು ಕವಿತೆಯೂ ಪಡೆದುಕೊಳ್ಳುತ್ತಾ ಹೋಗುವ ಹೊಸ ವಿನ್ಯಾಸ, ಬಿಚ್ಚಿಡುವ ಅರ್ಥಗಳು ಹಲವು.
‘ಕಾವ್ಯಮಂಡಲ’ ಕಟ್ಟಿ ಕಾವ್ಯದ ನಾದವನ್ನು ಹಿಡಿದ ಕಿ ರಂ ಅವರು ಲಂಕೇಶ್ ಜೊತೆಗಿದ್ದ ಒಂದು ಅಪರೂಪದ ಫೋಟೋ ಇಲ್ಲಿದೆ.
aparupada photo..nodi kushi ayitu