ಲವ್ ಇನ್ ದ ಟೈಮ್ಸ್ of No sms and No email!

– ಎನ್ ಸ೦ಧ್ಯಾ ರಾಣಿ

ಕೃಪೆ : ವಿಜಯ ಕರ್ನಾಟಕ

  ಹೊಸ್ತಿಲಲ್ಲಿ ನಿ೦ತಿದ್ದ ನಾನು ಸರಿಯಾಗಿ ಚಪ್ಪಲಿ ಬಿಡಲೂ ಅವಕಾಶ ಕೊಡದೆ ಕೈ ಹಿಡಿದು ಒಳಗೆ ಕರೆದವಳ ಅ೦ಗೈ ಬೆವರಿತ್ತು, ಹಣೆ ಮೇಲೆ, ಮೂಗಿನ ಕೆಳಗೆ ಬೆವರ ಹನಿಗಳು. ನಸುಗಪ್ಪಿನ ಅವಳು ಅದನ್ನು ಮರೆಸಲೋ ಎ೦ಬ೦ತೆ ಪೌಡರ್ ಒತ್ತಿ, ಒತ್ತಿ ಬಳಿಯುತ್ತಿದ್ದಳು. ಅವಳ ಬೆವರ ಒರತೆಗೆ ಪೌಡರ್ ಅಲ್ಲಲ್ಲಿ ಕರಗಿ ಬೂದು ಬಣ್ಣ ಪಟ್ಟೆ ಪಟ್ಟೆಯಾಗಿ ಕಾಣುತ್ತಿತ್ತು. ಸರ ಸರ ರೂಮಿನೊಳಕ್ಕೆ ಕರೆದೊಯ್ದ ಅವಳು ಬಾಗಿಲು ಮು೦ದೆ ಮಾಡಿ, ಆಲೇ ಹಾಸಿಗೆ ಮೇಲೆ ಕೂರಲು ಹೋದ ನನ್ನ ತಡೆದು ನೆಲದ ಮೇಲೆ ಕೂರಲು ಸನ್ನೆ ಮಾಡಿದಳು. ನಾನು ಕಕ್ಕಾಬಿಕ್ಕಿ. ಮೆಲ್ಲನೆ ಹಾಸಿಗೆಯ ಒ೦ದು ತುದಿ ಮೇಲೆತ್ತಿದಳು.. ನಾನೂ ನೋಡೇ ನೋಡಿದೆ, ಸುಮಾರು ಒ೦ದೂವರೆ, ಎರಡು ಇ೦ಚಿನಷ್ಟು ಯಾರೋ ಕತ್ತರಿಸಿದ೦ತೆ ಹಾಸಿಗೆಯ ಬಟ್ಟೆ ಹರಿದಿತ್ತು. ಇವಳು ಅದರೊಳ್ಗೆ ಎರಡು ಬೆರಳು ತೂರಿಸಿದಳು.. ನನಗೆ ಯಾಕೋ ಅನುಮಾನ ಶುರುವಾಗಿತ್ತು…ಯಾವುದಕ್ಕೂ ಇರಲಿ ಅ೦ತ ನಾನು ಕೂತಿದ್ದ ಜಾಗದಿ೦ದ ಬಾಗಿಲು ಎಷ್ಟು ದೂರ ಇದೆ ಅಂತ ಲೆಕ್ಕ ಹಾಕಿದೆ! ಶಾಲಾ ದಿನಗಳಿ೦ದಲೂ ಸ್ವಲ್ಪ ಗುಂಡು ಗುಂಡಾಗಿಯೇ ಇದ್ದ ನನಗೆ ಬೇಗ ಓಡುವುದಕ್ಕೆ ಬೇರೆ ಆಗುತ್ತಿರಲಿಲ್ಲ! ಅಷ್ಟರಲ್ಲಿ ಮಾಂತ್ರಿಕ ಯಾರದೋ ಕಿಸೆಯಿ೦ದ ಗುಲಾಬಿ ಹೂ ತೆಗೆದ ಹಾಗೆ ಅವಳು ಮೆಲ್ಲನೆ ಬೆರಳು ಹೊರತೆಗೆದಳು. ಬೆರಳುಗಳ ನಡುವೆ ಒ೦ದು ಮಡಿಸಿದ್ದ, ಬೆವರಲ್ಲಿ ನೆ೦ದು, ಅಕ್ಷರಗಳು ಕಲೆಸಿದ್ದ ಒ೦ದು ಹಾಳೆ! ನನ್ನ ಕೈಲಿಟ್ಟಳು. ’ಏನು’ ಅನ್ನುವ೦ತೆ ನೋಡಿದೆ, ’ಪರವಾಗಿಲ್ಲ ಓದು’ ಅ೦ದವಳ ಮು೦ದೆ ಶ್ರೀದೇವಿಯನ್ನು ನಿವಾಳಿಸಿ ಒಗೆಯಬೇಕು! ಏನು ಅ೦ತ ನೋಡಿದೆ, ಅದು ಅವಳ ಅವನು ಅವಳಿಗೆ ಬರೆದ ಪ್ರೇಮ ಪತ್ರ! ನನಗೆ ಪತ್ರದಲ್ಲಿ ಏನಿದೆ, ಬರೆದವರು ಯಾರು ಅನ್ನುವುದಕ್ಕಿ೦ತ ಅದು ಅವಳ ಕೈ ಹೇಗೆ ಸೇರಿತು ಅನ್ನುವುದರ ಬಗ್ಗೆ ಇನ್ನಿಲ್ಲದ ಕುತೂಹಲ! ಇಬ್ಬರು ಮಹಾ ಸ್ಟ್ರಿಕ್ಟ್ ಅಣ್ಣ೦ದಿರು, ಡೈರೆಕ್ಟ್ ಆಗಿ ಹತ್ತೊ೦ಬತ್ತನೆಯ ಶತಮಾನದಿ೦ದ ಇಳಿದ೦ತಹ ತ೦ದೆ! ಇವಳು ಮನೆಯಿ೦ದ ಒ೦ದು ಸಲ ಎಡವಿ, ಒ೦ದು ಲಾ೦ಗ್ ಜ೦ಪ್ ಮಾಡಿದರೆ ಕಾಲೇಜ್ ಗೇಟು. ಅಣ್ಣ೦ದಿರಿಬ್ಬರೂ ಅದೇ ಕಾಲೇಜು, ಮನೇಲಿ ಅವಳ ಅಮ್ಮನ ತವರಿನಿ೦ದ ಕಾಗದ ಬ೦ದರೂ ಅದನ್ನು ಅವಳ ಅಪ್ಪ ಓದಿದ ಮೇಲೆಯೇ ಅಮ್ಮ ಮುಟ್ಟಬೇಕು. ಹೀಗಿರುವಾಗ ಅದ್ಯಾವ ಮಾಯದಲ್ಲಿ ಅವನು ಇವಳಿಗೆ ಪತ್ರ ಕೊಟ್ಟಿರಬೇಕು?! ಅವಳನ್ನು ಕೇಳಿದರೆ ಗೌರಿ ಮೆಲ್ಲಗೆ ಬಾಯ್ಬಿಟ್ಟಳು! ಇವಳಿಗೆ ಒಳ್ಳೇ ಅತ್ತೆಮನೆ, ಗ೦ಡ ಸಿಗಲಿ ಅ೦ತ ಪ್ರತಿ ಮ೦ಗಳವಾರ ಗಣೇಶನ ದೇವಸ್ಥಾನದಲ್ಲಿ ಹೆಜ್ಜೆ ನಮಸ್ಕಾರ ಹಾಕು ಅ೦ತ ಅವರ ಸೋದರತ್ತೆ ಹೇಳಿದ್ದರ೦ತೆ. ಹೆಜ್ಜೆಗೊಮ್ಮೆ ಬಗ್ಗಿ, ಬಗ್ಗಿ, ನಮಸ್ಕಾರ ಮಾಡಿ ಮಾಡಿ ದೇವಸ್ಥಾನದ ಪೌಳಿಯ ಚಪ್ಪಡಿ ಕಲ್ಲುಗಳು, ಸ೦ದಿ ಗೊ೦ದಿಗಳು, ಹಳ್ಳ ದಿಣ್ಣೆಗಳೂ ಇವಳಿಗೆ ಕರತಲಾಮಲಕ! ದೇವಸ್ಥಾನದ ಹಿ೦ಬಾಗಿಲ ಹತ್ತಿರ, ನಾಗರಕಲ್ಲುಗಳ ಪಕ್ಕ ಒ೦ದು ಮರ, ನೆಲಕ್ಕೆ ಅರ್ಧ ಅಡಿ ಎತ್ತರದಲ್ಲಿ ಅದರಲ್ಲಿ ಒ೦ದು ಪೊಟರೆ, ಅದು ಇವರ ಪ್ರೈವೇಟ್ ಮೇಲ್ ಬಾಕ್ಸ್! ಅದ್ಯಾವ ಮಾಯದಲ್ಲಿ ಇವಳಿಗೆ ಲವ್ ಆಗಿತ್ತೋ ಏನೋ, ಅವನು ಮ೦ಗಳವಾರ ಮು೦ಜಾನೆಯೇ ಈ ಪೊಟರೆಯಲ್ಲಿ ಪತ್ರ ಇಡುತ್ತಿದ್ದ, ನಮಸ್ಕಾರ ಮಾಡುತ್ತಾ, ಮಾಡುತ್ತಾ ಇವಳು ಮೆಲ್ಲನೆ ಅದನ್ನೆಳೆದುಕೊ೦ಡು ಬ್ಲೌಸ್ ಒಳಗೆ ಸೇರಿಸಿದರೆ ’ಮೇಲ್ ಡೆಲಿವರ್ಡ್’! ಅದನ್ನು ಅವಳು ಯಾವಾಗಲೋ ಸ್ನಾನ ಮಾಡುವಾಗ ಬಚ್ಚಲು ಮನೆ ಮಬ್ಬು ಬೆಳಕಲ್ಲಿ ಓದಿ, ಕಾಲೇಜಲ್ಲಿ ಪಾಠ ಕೇಳುತ್ತಾ ಉತ್ತರ ಬರೆದು, ಮತ್ತೆ ಮು೦ದಿನ ಮ೦ಗಳವಾರ ಅದೇ ಪೊಟರೆಗೆ ಸೇರಿಸಿದರೆ ಅವನಿಗೆ ’ಯು ಹ್ಯಾವ್ ಗಾಟ್ ಮೇಲ್’! ಈ ಮಧ್ಯೆ ಆ ಪತ್ರ ಇವರಮ್ಮನಿಗೆ ಸಿಕ್ಕಿ, ರಾಣ ರ೦ಪ ಆಗಿ ಕೊನೆಗೆ ಅದೇ ಹುಡಗನೊಟ್ಟಿಗೆ ಇವಳ ಮದುವೆ ಆಗಿತ್ತು! ಗಣಪತಿ ಅವಳ ಹರಕೆಯನ್ನು ಫಟಾ ಫಟ್ ಅ೦ತ ಫೈಸಲ್ ಮಾಡಿ ಹಾಕಿದ್ದ!! ಅದು ಅ೦ದಿನ ಕಾಲ! ಪತ್ರ ಬರೆಯಬೇಕು, ಅದನ್ನು ಕಾಯಬೇಕು, ಕಣ್ತಪ್ಪಿಸಬೇಕು, ಕಾಪಿಡಬೇಕು. ಆದರೂ ಅದು ಹೇಗೋ ಅದು ಸಿಗಬಾರದವರ ಕೈಗೇ ಸಿಕ್ಕಿಬಿಡುತ್ತಿತ್ತು!! ಈಗ ನೋಡಿ ಕ೦ಪ್ಯೂಟರಿನ ಕೆನ್ನೆ ತಟ್ಟಿದರೆ ಫ಼ೇಸ್ ಬುಕ್ ಕಣ್ಣು ಮಿಟುಕಿಸುತ್ತದೆ! ಚಾಟ್ ಗೆ೦ದು ಹಲವಾರು ಕಿಟಕಿಗಳು ಬಾಗಿಲು ತೆರೆಯುತ್ತವೆ!! ಈ ಮೇಲ್ ಚಿಟಕೆ ಹೊಡೆಯುವುದರೊಳಗೆ ಸೇರಬೇಕಾದ ಕಡೆಗೇ ಸೇರುತ್ತದೆ! ನನ್ನ ಫ಼್ರೆ೦ಡ್ ರಿಕ್ವೆಸ್ಟ್ ಗೆ ಓಕೆ ಮಾಡಿದ್ದ ಗೆಳತಿಯ ಮಗಳು ಇದ್ದಕ್ಕಿದ್ದ೦ತೇ ನನ್ನ ಫ಼ೇಸ್ ಬುಕ್ ಪರದೆಯಿ೦ದ ಮಾಯ! ’ಯಾಕೆ ಹುಡುಗಿ’ ಅ೦ತ ಕೇಳಿದರೆ, ’ಅರ್ಥ ಮಾಡ್ಕೋಳಿ ಆ೦ಟಿ’ ಅ೦ತಾಳೆ! ಗೊತ್ತಾಯಿತು ಹುಡುಗಿಗೆ ಈಗ ಒ೦ದು ಪುಟ್ಟ ಏಕಾ೦ತ ಬೇಕಾಗಿದೆ! ಎದುರಿಗೇ ಕೂತಿದ್ದ ಹುಡುಗ, ಕೈಯನ್ನು ಟೇಬಲ್ ಮೇಲೆ ಇಡದೆ ಕೆಳಗಿಟ್ಟು, ನಮ್ಮ ಮುಖ ನೋಡುತ್ತಾ, ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ, ಮುಖದ ಮೇಲೆ ಬುದ್ಧನ ನಗು ಪೇಸ್ಟ್ ಮಾಡಿಕೊ೦ಡು ಕೂತ ಅ೦ದರೆ ಅರ್ಥ, ಟೇಬಲ್ ಕೆಳಗೆ ಮೊಬೈಲ್ನಲ್ಲಿ ಎಸ್ ಎಮ್ ಎಸ್ ವಿಶ್ವ ದಾಖಲೆ ಮಾಡ್ತಾ ಇದೆ ಅ೦ತ!! ಒ೦ದು ಸ್ನೇಹ, ಒಡನಾಟ, ಪ್ರೇಮ ಎಲ್ಲವೂ ಈಗ ಎಷ್ಟು ವೈಯಕ್ತಿಕ… ಆದರೆ ಈ ಎಲ್ಲಾ ಬೆಳವಣಿಗೆಗಳೂ ತ೦ದಿರುವ ಒ೦ದು ಪಾಸಿಟಿವ್ ಗುಣ ಎ೦ದರೆ ಅದು ಈ ಜನರೇಶನ್ ಹುಡುಗ ಹುಡುಗಿಯರಲ್ಲಿ ತ೦ದಿರುವ ಒ೦ದು ಮೆಚೂರಿಟಿ. ಹೌದು ನಿಸ್ಸ೦ದೇಹವಾಗಿ ಇವರೆಲ್ಲರೂ ನಾವು ಇವರ ವಯಸ್ಸಿನಲ್ಲಿದ್ದದ್ದಕ್ಕಿ೦ತಲೂ ಹೆಚ್ಚು ಪ್ರಬುದ್ಧತೆ ಹೊ೦ದಿದ್ದಾರೆ, ಬದುಕನ್ನು ಭಾವುಕತೆಯಿ೦ದ ಪ್ರತ್ಯೇಕಿಸಿ ನೋಡುವುದು ಇವರಿಗೆ ಗೊತ್ತು, ತಮ್ಮ ತಮ್ಮ ವೃತ್ತಿ ಬದುಕಿನ ಬಗ್ಗೆ, ಆರ್ಥಿಕ ಭದ್ರತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಇವರಿಗೆ ಗೊತ್ತು. ಒ೦ದು ಹುಡುಗನ ಜೊತೆ ಆತ್ಮೀಯವಾಗಿ ಮಾತನಾಡಿದರೆ ಅದಕ್ಕೆ ಒ೦ದು ತಾರ್ಕಿಕ ಅ೦ತ್ಯ ಪ್ರೇಮ ಆಗಬೇಕಿಲ್ಲ ಅ೦ತಲೂ ಇವರಿಗೆ ಗೊತ್ತು. ಈ ಮಕ್ಕಳನ್ನು ಕಟ್ಟುಪಾಡಿನಲ್ಲಿಟ್ಟು ಬೆಳೆಸುವುದಕ್ಕಿ೦ತಾ ಜೊತೆಜೊತೆಯಾಗಿ ಅವರ ವಸ೦ತವನ್ನು ಹ೦ಚಿಕೊಳ್ಳುತ್ತಾ, ಅವರು ತಡವರಿಸಿದಾಗ ಅವರು ಒರಗಲು ಹೆಗಲು ಕೊಡುವುದೇ ನನಗಿಷ್ಟ. ಮೊಬೈಲ್ ಎರಡನೇ ಪ್ರಾಣ ಎನ್ನುವ೦ತೆ ಜೋಪಾನ ಮಾಡುವ ತ೦ಗಿಯ ಮಗನನ್ನು ನೋಡಿ ಇವೆಲ್ಲಾ ನೆನಪಾಯ್ತು!]]>

‍ಲೇಖಕರು G

August 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

11 ಪ್ರತಿಕ್ರಿಯೆಗಳು

 1. rekha

  ತುಂಬಾನೇ ಚೆನ್ನಾಗಿದೆ ಮೇಡಂ. ನಿಮ್ಮ ಬರವಣಿಗೆ ಶೈಲಿ ಇಷ್ಟ ಆಯಿತು.

  ಪ್ರತಿಕ್ರಿಯೆ
 2. Kumara Raitha

  ಸರಿದ ಕಾಲಘಟ್ಟ..ಪ್ರಸ್ತುತದ ವಿಭಿನ್ನತೆ ನಿಮ್ಮ ಬರಹದಲ್ಲಿ ಪ್ರತಿಫಲಿತ…. ಪ್ರತಿ ಹಂತಕ್ಕೂ ಅದರದೆ ಸೊಗಸು ಇರುತ್ತದೆ… ಇಂದಿನ ಜಮಾನದದವರ ಪ್ರವೃತ್ತಿಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದೀರಿ…. “ಈ ಮಕ್ಕಳನ್ನು ಕಟ್ಟುಪಾಡಿನಲ್ಲಿಟ್ಟು ಬೆಳೆಸುವುದಕ್ಕಿ೦ತಾ ಜೊತೆಜೊತೆಯಾಗಿ ಅವರ ವಸ೦ತವನ್ನು ಹ೦ಚಿಕೊಳ್ಳುತ್ತಾ, ಅವರು ತಡವರಿಸಿದಾಗ ಅವರು ಒರಗಲು ಹೆಗಲು ಕೊಡುವುದೇ ನನಗಿಷ್ಟ” ಎನ್ನುವ ಮೂಲಕ ಪೋಷಕರು ಹೇಗಿರಬೇಕು ಎಂದು ಹೇಳಿದ್ದೀರಿ…ಗ್ರೇಟ್ …ಬರಹ ಇಷ್ಟವಾಯ್ತು…. 🙂

  ಪ್ರತಿಕ್ರಿಯೆ
 3. Sharadhi

  I usually don’t like many of the articles, however, I liked this one. You got good style, wit and attention to details.

  ಪ್ರತಿಕ್ರಿಯೆ
 4. D.RAVI VARMA

  ಓಲ್ಡ್ ಇಸ್ ಗೋಲ್ಡ್, ಅದರಲ್ಲಿದ್ದ ಮುಗ್ದತನ, ಭಾವುಕತೆ ,ಇಂದು ಎಲ್ಲೋ ಕಳೆದು ಹೋಗಿದೆಯಾ ಅನ್ನಿಸುತ್ತೆ, ಆದರೆ ಇಂದಿನ ಈ ಅತಿ ವೇಗದ ಬದುಕಿನಲ್ಲಿ, ಹಲವೊಮ್ಮೆ ಈ ಮೊಬೈಲ್, ಮೇಲ್ ,ಕೆಲವು ಪೇಚಿನ ಪ್ರಸಂಗ ತರುತ್ತಿರುವುದು ಸತ್ಯ.
  ನಿಮ್ಮ ಬರಹದ ಪಿಸುಮಾತು,ಅಪ್ಯಯಮನವಗಿದೆ, ನನಗೆ ತುಂಬಾ ಇಸ್ತವಾಯ್ತು .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 5. sandhya

  ನನ್ನ ಬರಹವನ್ನು ಓದಿ ಪ್ರತಿಕ್ರಯಿಸಿದ, ಮೆಚ್ಚಿಕೊ೦ಡ ನಿಮಗೆಲ್ಲರಿಗೂ ಧನ್ಯವಾದಗಳು! ನಿಮ್ಮ ಅನಿಸಿಕೆಗಳನ್ನು ಓದಿ ಮನಸ್ಸು ಫ಼ುಲ್ ಖುಷ್!!

  ಪ್ರತಿಕ್ರಿಯೆ
 6. Anuradha.rao

  ಅಂದು -ಇಂದು …ಪರಿವರ್ತನೆಯನ್ನು ಒಪ್ಪಿಕೊಳ್ಳುವ ,ಹೆಗಲು ಕೊಡುವ ಮನಸ್ಸು ಹಿರಿಯರದ್ದಾಗಬೇಕು ಎಂಬುದನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ .ನಿಮ್ಮ ಪರಿಚಯ ,ಸ್ನೇಹ ಇರುವುದೊಂದು ಹೆಮ್ಮೆ .ಅಭಿನಂದನೆಗಳು .

  ಪ್ರತಿಕ್ರಿಯೆ
 7. shama, nandibetta

  “ಈ ಮಕ್ಕಳನ್ನು ಕಟ್ಟುಪಾಡಿನಲ್ಲಿಟ್ಟು ಬೆಳೆಸುವುದಕ್ಕಿ೦ತಾ ಜೊತೆಜೊತೆಯಾಗಿ ಅವರ ವಸ೦ತವನ್ನು ಹ೦ಚಿಕೊಳ್ಳುತ್ತಾ, ಅವರು ತಡವರಿಸಿದಾಗ ಅವರು ಒರಗಲು ಹೆಗಲು ಕೊಡುವುದೇ ನನಗಿಷ್ಟ.” great lines 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: