ಲಾಲ್ ಬಾಗ್ ನಲ್ಲಿ ಸಾವಯವ ಮೇಳ

ಆತ್ಮೀಯರೇ

ವಾಕಿಂಗ್ ಸ್ಪಾಟ್, ಪ್ರೇಮಿಗಳ ತನ, ಸಸ್ಯ ಶಾಸ್ತ್ರೀಯ ತೋಟ ಕೆಂಪು ತೋಟ ಲಾಲ್ ಬಾಗ್ ನಲ್ಲಿ ಸೆಪ್ಟೆಂಬರ್ ೧೨ ಮತ್ತು ೧೩ ರಂದು ‘ಸಾವಯವ ಮೇಳ’ ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಸಾವಯವ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ತಂದು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಿದ್ದಾರೆ.

ಇಲ್ಲಿಯವರೆವಿಗೂ ರೈತರ ಮಟ್ಟದಲ್ಲಿ ನಡೆಯುತ್ತಿದ್ದ ಸಾವಯವ ಕೃಷಿ ಆಂದೋಲನ ಈಗ ಗ್ರಾಹಕರ ಮನೆ ಬಾಗಿಲಿಗಿಗೆ ಬಂದು ನಿಂತಿದೆ. ರೈತರು ಬೆಳೆದ ಉತ್ಪನ್ನಗಳನ್ನು ದಲ್ಲಾಳಿಗಳ ಕಿರಿಯಿಲ್ಲದೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಾರ್ಯ ಆರಂಭವಾಗಿದೆ. ಅದರ ಮೊದಲ ಪ್ರಯತ್ನವೇ ಸಾವಯವ ಆಹಾರ ಮೇಳ.

ಈ ಮೇಳವನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ಆಯೋಜಿಸಿಲ್ಲ. ಸತ್ವ ಪೂರ್ಣ ಆಹಾರ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಕಳೆದು ಹೋಗಿರುವ , ಮರೆತು ಹೋಗಿರುವ ಸಾಂಪ್ರದಾಯಿಕ ಆಹಾರವನ್ನು ಪರಿಚಯಿಸುವುದು ಅವುಗಳ ರುಚಿಯನ್ನು ಉಣಬಡಿಸುವುದು ಈ ಮೇಳದ ಉದ್ದೇಶ.

ಹಾಗಾಗಿ ಮೆಅಲಕ್ಕೆ ಭೇಟಿ ನೀಡುವವರಿಗೆ ಮಾಹಿತಿ, ಮನರಂಜನೆ ಹಾಗೂ ರುಚಿಕಟ್ಟಾದ ದೇಸಿ ಆಹಾರ ಕೂಡ ಲಭ್ಯವಾಗುತ್ತದೆ. ಜೊತೆಗೆ ತರಕಾರಿ ಬೀಜಗಳು (ನಾಟಿ), ತಾಜಾ ತರಕಾರಿಗಳು. ಸಾವಯವ ಆಹಾರ ಉತ್ಪನ್ನ, ಕೃಷಿ ಪುಸ್ತಕಗಳು, ತೋಟಗಾರಿಕೆ ಮಾಹಿತಿ ಬಿತ್ತಿ ಪತ್ರಗಳು.. ಇವೆಲ್ಲದರ ಜೊತೆಗೆ ಸಾವಯವ ಪ್ರೀತಿಯ ಗೆಳೆಯರನ್ನು ಭೇಟಿಯಾಗಬಹುದು.

ಬನ್ನಿ ಕೆಂಪು ತೋಟಕ್ಕೆ,

ಭಾಗವಹಿಸಿ ಸಾವಯವ ಆಹಾರ ಮೇಳದಲ್ಲಿ.

ಉತ್ತೇಜಿಸಿ ಸಾವಯವ ಉತ್ಪನ್ನಗಳನ್ನು !

ಪ್ರೀತಿಯಿಂದ

ಜೈವಿಕ್ ಕೃಷಿಕ್ ಸೊಸೈಟಿ ,

ಸಹಜ ಸಮೃದ್ಧ , ಅನ್ನದಾನದ ಪರವಾಗಿ….

-ಗಾಣಧಾಳು ಶ್ರೀಕಂಠ

savayava

‍ಲೇಖಕರು avadhi

September 12, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This