ವಸುಂಧರಾ ಕದಲೂರು
ಗೋಡೆ ಬಿರುಕು ಬಿಟ್ಟಿದೆ.
ಹಜಾರದಲ್ಲಿ ಬೇಕಿರಲಿಲ್ಲ
ಅದು.
ಯಾವುದೋ ಮೈಮರೆತ
ಕ್ಷಣದಲಿ ಧುತ್ತೆಂದು
ಉದ್ಭವಿಸಿ…
ಒಂದೊಂದು ಮೌನ,
ಮುನಿಸು… ಇಟ್ಟಿಗೆಗಳಾಗಿ
ರೂಪಾಂತರಿಸಿ…
ಭಿತ್ತಿಯ ಮೇಲೆ ಹುತ್ತ..!
ಒಳಗೊಂದು ಮುಲುಗುವ
ಸರ್ಪ …

ಮೈ ನಡುಗಿಸಿತು.
ಭಯ…!
ಇಷ್ಟೆಲ್ಲಾ
ಅನಾಹುತ ಯಾವಾಗ
ಆಗಿಹೋಯಿತು?
ಹಾವ ಬಡಿಯಲು
ಒಗೆದ ಕಲ್ಲು ಗೋಡೆಗೆ
ತಾಕಿತು..
ಕಲ್ಲೊಗೆದ ಗೋಡೆಯಲ್ಲೀಗ
ಬಿರುಕು
0 ಪ್ರತಿಕ್ರಿಯೆಗಳು