ವಸುಧೇಂದ್ರ recommends..

ಇದೀಗ ತಾನೆ ಪುಸ್ತಕ (ನಾಗೇಶ ಹೆಗಡೆ ಅವರ ‘ಹಳ್ಳೀ ಮುಕ್ಕ’)  ಓದಿ ಮುಗಿಸಿದೆ. ತುಂಬಾ ಸಂತೋಷಪಟ್ಟೆ. ಎಷ್ಟೊಂದು ಪ್ರೀತಿಯಿಂದ ಬರೆದ ಲೇಖನಗಳಿವು! ಪರಿಸರದ ಕಾಳಜಿ, ಅದ್ಭುತ ಜ್ಙಾನ, ನವಿರಾದ ಹಾಸ್ಯ ಪ್ರಜ್ಞೆ, ಸೊಗಸಾಗಿ ಪನ್ ಮಾಡುವ ಜಾಣ್ಮೆ, ಸಾಹಿತ್ಯಕ್ಕೂ ಹೆಣಿಕೆ ಹಾಕುವ ಉತ್ಸಾಹ, ಹೊಸ ಪದಗಳ ಸೃಷ್ಟಿ, ಹಳೆಯದರ ಬಗ್ಗೆ ಮೌಢ್ಯ ಹಳಹಳಿಕೆಯಿಲ್ಲದೆ ಮತ್ತು ಹೊಸದೆಲ್ಲವನ್ನೂ ನಿರಾಕರಿಸುವ ಸಿನಿಕತೆಯಿಲ್ಲದೆ ಬರೆದ ಈ ಬರವಣಿಗೆಗಳು ನನ್ನನ್ನು ಮೋಡಿ ಮಾಡಿವೆ. ನಿಸ್ಸಂಶಯವಾಗಿ ನಾನು ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯುತ್ತಮ ಪುಸ್ತಕವಿದು. ಸಾಹಿತ್ಯಾಸಕ್ತರೆಲ್ಲರೂ ಓದಲೇ ಬೇಕಾದ ಪುಸ್ತಕವಿದು. ನಾಗೇಶ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ವಸುಧೇಂದ್ರ  ]]>

‍ಲೇಖಕರು G

April 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

೧ ಪ್ರತಿಕ್ರಿಯೆ

  1. ಪವನಜ

    ನಾಗೇಶ ಹೆಗಡೆಯವರ “ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ” ಪುಸ್ತಕ ಅದ್ಭುತವಾಗಿದೆ. ನಾಗೇಶ ಹೆಗಡೆಯವರು ಗಂಭೀರ ವಿಜ್ಞಾನ ಲೇಖನಗಳಿಗೆ ಪ್ರಖ್ಯಾತರು. ಇಲ್ಲಿ ಅವರ ಬರೆವಣಿಗೆ ಲಲಿತ ಪ್ರಬಂಧಗಳಂತಿವೆ. ವಿಜ್ಞಾನ, ಪರಿಸರ, ಇತ್ಯಾದಿಗಳು ನಿಮಗೆ ಅರಿವೇ ಇಲ್ಲದಂತೆ ಲೇಖನಗಳೊಳಗೆ ನುಸುಳಿವೆ. ಆದರೆ ಅದ್ಭುತ ಶೈಲಿಯಿಂದಾಗಿ ಅವೆಲ್ಲ ಲಲಿತ ಪ್ರಬಂಧಗಳಾಗಿವೆ. ಎಲ್ಲರೂ ಓಲೇಬೇಕಾದ ಪುಸ್ತಕ
    -ಪವನಜ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: