ವಿಜಯನಗರ ಬಿ೦ಬದಿ೦ದ ರಂಗಭೂಮಿ ಕೋರ್ಸುಗಳು

ರಂಗಭೂಮಿ ಎಲ್ಲರಿಗಾಗಿ – ವಿಜಯನಗರ ಬಿಂಬ ರಂಗಭೂಮಿ ಹಲವಾರು ಕಲೆಗಳನ್ನು ತನ್ನಲ್ಲಿ ಹೊತ್ತುಕೊಂಡಿರುವ ಒಂದು ಸಂಕೀರ್ಣ ಕಲೆ. ನಟನೆ, ನಿರ್ದೇಶನ, ರಂಗ ಸಂಗೀತ, ಚಿತ್ರಕಲೆ, ನೃತ್ಯ, ಆಂಗಚಲನೆ ಮುಂತಾದ ಹಲವಾರು ಕಲಾನದಿಗಳ ಸಂಗಮ ರಂಗಭೂಮಿ ಎಂಬ ಸಾಗರ. ವೃತ್ತಿ , ಹವ್ಯಾಸಿ ಮುಂತಾದ ಹಲವಾರು ಮಜಲುಗಳು ಈ ಸಾಂಸ್ಕೃತಿಕ ಕ್ಷೇತ್ರಕ್ಕೆ ಇದೆ. ರಂಗಭೂಮಿ ಎನ್ನುವುದು ಪ್ರದರ್ಶಕ ಕಲೆಯೂ ಹೌದು, ಸಾಂಸ್ಕೃತಿಕ ಕ್ಷೇತ್ರವೂ ಹೌದು. ಅದರ ಆವರಣ ಹಿರಿದಾದದ್ದು. ಇಂದು ರಂಗಭೂಮಿ ಬರೀ “ಪ್ರದರ್ಶಕ ಕಲೆ” ಯಾಗಿ ಉಳಿದಿಲ್ಲ. ಅದು ಪ್ರದರ್ಶಕ ಕಲೆಯೂ ಹೌದು, ಅದಕ್ಕಿಂತಾ ಹಿರಿದಾದದ್ದೂ ಹೌದು. ಹವ್ಯಾಸೀ ರಂಗ ಭೂಮಿಯಲ್ಲೂ ವೃತ್ತಿಪರತೆ ಎದ್ದು ಕಾಣುತ್ತದೆ. ವೃತ್ತಿ ಕಂಪನಿಗಳು ಒಂದು ಕಡೆಗಾದರೆ, ಹಲವಾರು ಯುವಕರು ರಂಗಭೂಮಿಯನ್ನೇ ತಮ್ಮ “ವೃತ್ತಿ”ಯಾಗಿ ಸ್ವೀಕರಿಸುತ್ತಿದ್ದಾರೆ ಎನ್ನುವ ಸತ್ಯ ಇನ್ನೊಂದು ಕಡೆ. ಹೊಸಹೊಸ ಕಾರ್ಯ ಕ್ಷೇತ್ರಗಳಲ್ಲಿ ರಂಗಭೂಮಿ ಹೊಸ ಹೊಸ ಆಯಾಮಗಳನ್ನು ಹೊಂದುತ್ತಿದೆ. ಕಾಪರ್ೊರೇಟ್ ಜಗತ್ತಿನಲ್ಲಿ ರಂಗಭೂಮಿ ತನ್ನದೆ ಮಾನ್ಯತೆ ಪಡೆದುಕೊಂಡಿದೆ. ಶಿಕ್ಷಣಕ್ಷೇತ್ರದಲ್ಲಿ ರಂಗಭೂಮಿಯ ಅಳವಡಿಕೆ ಹಲವಾರು ಹೊಸ ಆಳ ಅಗಲಗಳನ್ನು ಸೃಷ್ಟಿಸಿದೆ. ಇಂತಹ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಎಲ್ಲರಿಗೂ ಸಂತಸ. ಆಬಾಲವೃದ್ಧರಾದಿಯಾಗಿ ಎಲ್ಲರೂ ರಂಗಭೂಮಿಯಿಂದ ಆಕರ್ಷಿತರಾದವರೇ. ಆದರೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಬದ್ಧತೆಬೇಕು. ದುರಾದೃಷ್ಟವಷಾತ್ ಇಂದಿನ ವೇಗದ ಬದುಕಿನಲ್ಲಿ ಎಲ್ಲರಿಗೂ ಸಮಯದ ಅಭಾವ ಕಾಡುತ್ತದೆ. ಬದ್ಧರಾಗಿರಬೇಕು ಎಂಬ ಮನೋಭಾವಕ್ಕೆ ಈ ಸಮಯದ ಅಭಾವ ಅಡ್ಡಿಪಡಿಸುತ್ತದೆ. ಈ ಸಂಕ್ರಮಣ ಕಾಲದಲ್ಲಿ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ರಂಗಾಸಕ್ತರಿಗಾಗಿ ಹೊಸ ಹೆಜ್ಜೆಯನ್ನು ಇಟ್ಟಿದೆ. ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ ಇದೀಗ ರಂಗಾಸಕ್ತರಿಗೆ ರಂಗಭೂಮಿ ಯನ್ನು ಅಭ್ಯಸಿಸಲು, ಕನರ್ಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು ಇವರ ಸಹಭಾಗಿತ್ವದಲ್ಲಿ ಒಂದು ವರ್ಷದ ಡಿಪ್ಲೊಮಾವನ್ನು ( ವಿಷಯ : ರಂಗಭೂಮಿ.) ( ದೂರಸಂಪರ್ಕ ಕಲಿಕೆಯ ಮೂಲಕ )ಅರ್ಪಿಸುತ್ತಿದೆ. ಈ ಡಿಪ್ಲೊಮಾಗೆ ವಿಶ್ವ ವಿದ್ಯಾನಿಲಯದ ಸಹಭಾಗಿತ್ವ ದೊರೆತಿರುವುದರಿಂದ ಈ ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ದೊರೆಯುವುದು. ರಂಗ ಶಿಕ್ಷಣಕ್ಕೆ ಅಧಿಕೃತತೆ ಬರುತ್ತದೆ. ರಂಗಭೂಮಿ ಡಿಪ್ಲೊಮಾ ವಿನ್ಯಾಸ – ನವಂಬರ್ 1, 2012 ರಿಂದ ಆರಂಭವಾಗುವ ಈ ಡಿಪ್ಲೊಮಾದಲ್ಲಿ ವಾರಾಂತ್ಯ ತರಗತಿಗಳು ನಡೆಯುವುದು. ನವಂಬರ್ 17 ರಿಂದ ಡಿಸೆಂಬರ್ 22, 2012 ರವರೆಗಿನ ಆರು ವಾರಾಂತ್ಯಗಳಲ್ಲಿ ಅಂದರೆ ಪ್ರತಿ ಶನಿವಾರ ಮತ್ತು ಭಾನುವಾರ ತರಗತಿಗಳು ಇರುತ್ತವೆ. ಶನಿವಾರ ಸಂಜೆ 7ರಿಂದ 9 ರ ತನಕ ತರಗತಿಗಳು ನಡೆದರೆ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ನಡೆಯುತ್ತವೆ. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ರಂಗತಜ್ಞರಿಂದ ಪಾಠಗಳನ್ನು ಏರ್ಪಡಿಸಲಾಗುವುದು. ಡಿಪ್ಲೊಮಾದ ಪಠ್ಯವಸ್ತುಗಳನ್ನು ನೀಡಲಾಗುವುದು. ಈ ಆರು ವಾರಾಂತ್ಯಗಳಗಳ ನಂತರ ವಿದ್ಯಾರ್ಥಿಗಳಿಂದಲೇ ರಂಗ ಪ್ರಯೋಗವನ್ನು ಏರ್ಪಡಿಸಲಾಗುವುದು. ಮಾರ್ಚ್-ಏಪ್ರಿಲ್ ನಲ್ಲಿ ನಡೆಯುವ ಪರೀಕ್ಷೆಗಳನ್ನು ಏರ್ಪಡಿಸಲಾಗುವುದು. ತೇರ್ಗಡೆಯಾದ ವಿದ್ಯಾರ್ಥಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ವಿಜಯನಗರ ಬಿಂಬ ದಿಂದ ಪ್ರಮಾಣ ಪತ್ರ ದೊರೆಯುತ್ತದೆ. ಈಗಾಗಲೆ ಪರಿಚಯ ಪತ್ರಿಕೆ ( Prospectus ) ಗಳನ್ನು ಖರೀದಿಸಬಹುದಾಗಿದೆ. ಪಠ್ಯಗಳನ್ನು ತರಗತಿಗಳು ನಡೆಯುವ ಸಮಯಕ್ಕೆ ನೀಡಲಾಗುವುದು. ತುಂಬಿದ ಅರ್ಜಿ ಯನ್ನು ನೀಡಲು ಕಡೆಯ ದಿನಾಂಕ ಸೆಪ್ಟೆಂಬರ್ 31, 2012. ರಂಗಭೂಮಿ ಡಿಪ್ಲೊಮಾ ವಿಶೇಷಗಳು – 1. ಕನಿಷ್ಟ ವಯೋಮಿತಿ 16 ವರ್ಷ, ಗರಿಷ್ಟ ವಯೋಮಿತಿ ಇಲ್ಲ. 2. ಎಸ್.ಎಸ್.ಎಲ್.ಸಿ / ಹತ್ತನೆ ತರಗತಿ ತೇರ್ಗಡೆಯಾದ ಯಾರು ಬೇಕಾದರು ಈ ಡಿಪ್ಲೊಮಾ ಮಾಡಬಹುದು. 3. ಎಲ್ಲರ ಕೈಗೆಟುಕುವ ಶುಲ್ಕ. 4. ದೂರ ಶಿಕ್ಷಣದ ಸೌಲಭ್ಯತೆಯ ಜೊತೆಗೆ ರಂಗ ಕಲಿಕೆ. 5. ಕೊನೆಯಲ್ಲಿ ವಿದ್ಯಾರ್ಥಿಗಳಿಂದಲೇ ಪ್ರದರ್ಶನ. ರಂಗಭೂಮಿ ಒಂದು ಮನೋಭಾವ, ಅದನ್ನು ಬೆಳೆಸೋಣ. ರಂಗಭೂಮಿ ಉಳಿಸಿ ಬೆಳಸಿ ವಿಳಾಸ : ವಿಜಯನಗರ ಬಿಂಬ(ರಿ) ರಂಗ ಶಿಕ್ಷಣ ಕೇಂದ್ರ, 195, 5 ಎ ಮುಖ್ಯರಸ್ತೆ, 6ನೇ ಅಡ್ಡರಸ್ತೆ ಹಂಪಿನಗರ, ವಿಜಯನಗರ 2 ನೇ ಹಂತ, ಬೆಂಗಳೂರು – 560104 ದೂರವಾಣಿ : 080-23300967 ವೆಬ್ ಸೈಟ್ : www.vijayanagarabimba.com  ]]>

‍ಲೇಖಕರು G

August 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This