ವೀರಣ್ಣ ಮಡಿವಾಳರ ’ಆ ದಿನಗಳು’

ಕೊಪ್ಪಳದ ಆ ದಿನಗಳು

-ಹುಸೇನ್ ಪಾಷಾ, ಕೊಪ್ಪಳ

‘ನೆಲದ ಕರುಣೆಯ ದನಿ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಸ್ವೀಕರಿಸಿದ ವೀರಣ್ಣ ಮಡಿವಾಳರು ಕೊಪ್ಪಳದಲ್ಲಿ ಡಿ.ಎಡ್. ಓದಿದವರು.

ಅವರ ನೆನಪುಗಳ ಮಾತುಗಳು ಇವು

ಟಿ.ಸಿ.ಹೆಚ್. ಓದಲು ಕೊಪ್ಪಳಕ್ಕೆ… ಮೊದಲು ನನಗೆ ಬೆಂಗಳೂರಿನಲ್ಲಿ ಸೀಟು ಸಿಕ್ಕಿತ್ತು ಅಲ್ಲಿ ಓದೋಕೆ ಆಗ್ತಿರಲಿಲ್ಲ. ನಮ್ಮ ಊರಿಗೆ ಹತ್ತಿರ ಅಂತ ಕೊಪ್ಪಳ ಆಯ್ಕೆ ಮಾಡಿಕೊಂಡೆ. ಕೊಪ್ಪಳಕ್ಕೆ ಬಂದಾಗ… ಕೊಪ್ಪಳಕ್ಕೆ ಬಂದಾಗ ನನಗೆ ಓದುವುದೊಂದೇ ಗುರಿ. ಏನಾದರೂ ಮಾಡಿ ನೌಕರಿ ಪಡೆಯಬೇಕಿತ್ತು. ಕೊಪ್ಪಳಕ್ಕೆ ಬಂದ ಮೇಲೆ ಅಲ್ಲಿನ ಸಾಂಸ್ಕೃತಿಕ ವಾತಾವರಣ ನನ್ನನ್ನು ಆಕಷರ್ಿಸಿತು. ಸಾಹಿತ್ಯ ಭವನದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು, ಸಾಹಿತ್ಯಿಕ ಕಾರ್ಯಕ್ರಮಗಳು ಬಹಳಷ್ಟು ಆಸಕ್ತಿ ಉಂಟು ಮಾಡಿದವು. ಕೊಪ್ಪಳ ಸಾಹಿತ್ಯ ವಲಯ ಕಂಪೇರ್… ಎಲ್ಲ ಕಡೆ ಒಂದೇ ರೀತಿ ವಾತಾವರಣ ಇದೆ. ನಾನು ಕೊಪ್ಪಳದಲ್ಲಿ ಇದ್ದು ಬಂದವನಾಗಿ ಹೇಳಬೇಕೆಂದ್ರೆ ಸಾಂಸ್ಕೃತಿಕವಾಗಿ ಕೊಪ್ಪಳದಲ್ಲಿ ತುಂಬಾನೆ ಸಮೃದ್ಧಿ ಇದೆ. ಬೇರೆ ಕಡೆ ಅಷ್ಟೊಂದು ಸಿಗಲಿಲ್ಲ. ಅಲ್ಲಿಂದ ಬಂದ ಮೇಲೆ ನನ್ನ ಓಡಾಟಗಳು ಒಂದೇ ಕಡೆ ಇರಲಿಲ್ಲ…

ಕೊಪ್ಪಳದ ಸಾಹಿತ್ಯ ವಲಯದ ಬಗ್ಗೆ.. ತುಂಬಾನೆ ಅದ್ಭುತವಾಗಿದೆ ಅಲ್ಲಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ. ಕೇವಲ ಬರವಣಿಗೆ ಅಷ್ಟೇ ಅಲ್ಲ, ನನ್ನನ್ನು ತುಂಬಾ ಆಪ್ತವಾಗಿ ನೋಡಿಕೊಂಡಿದೆ ಸಾಹಿತ್ಯವಲಯ. ಕೊಪ್ಪಳದ ಬಹಳಷ್ಟು ಸ್ನೇಹಿತರು ಸಾಹಿತ್ಯದ ಅಭಿರುಚಿ ಮೂಡಲು ಕಾರಣೀಕರ್ತರು. ಮುಖ್ಯವಾಗಿ ವಿಜಯ್ ಅಮೃತರಾಜ್ಸರ್. ನನಗೆ ಆಕಸ್ಮಿಕವಾಗಿ ದಾರಿಯಲ್ಲಿ ಸಿಕ್ಕಂಥವರು. ನನ್ನನ್ನು, ನನ್ನ ಆಸಕ್ತಿ ಗಮನಿಸಿ ರೂಂಗೆ ಬಂದು ನನ್ನ ಪಾಡಿಗೆ ನಾನು ಬೇರೆ ರೀತಿ ಇದ್ದವನಿಗೆ ನಿಜವಾದ ಸಾಹಿತ್ಯ ವಲಯ ಎಂಥದಿದೆ. ಸಾಹಿತ್ಯದ ನಡೆ ಹೇಗಿರುತ್ತೆ, ನಾವು ಹೇಗಿರಬೇಕು ಎನ್ನುವುದು ತುಂಬಾನೆ ಹೇಳಿಕೊಟ್ಟರು. ನಂತರದಲ್ಲಿ ರವಿ ಕಾಂತನವರ (ಪೋಸ್ಟ್ಮಾಸ್ಟರ್) ಸರ್ ಸ್ನೇಹ ಸಿಕ್ಕತು. ರಾಮಣ್ಣ, ಲೋಕೇಶ (ಈಗ ಬೈಲುಹೊಂಗಲ್ ತಹಶೀಲ್ದಾರ) ಸರ್ ಸಿಕ್ರು, ಅವರೆಲ್ಲರ ಜೊತೆ ಪ್ರತಿದಿನ ತಾಸುಗಟ್ಟಲೇ ನಡಕೊಂಡೇ ಚಚರ್ಿಸುತ್ತಾ ಹೋಗ್ತಿದ್ವಿ. ನಿಜವಾದ, ಗಟ್ಟಿಯಾದ ಸಾಹಿತ್ಯದ ನೆಲೆಯಾವುದು ಅಂತ ಗೊತ್ತಾಗ್ತಾ ಹೋಯ್ತು. ಟಿ.ಸಿ.ಎಚ್. ಕಾಲೇಜಿಗೆ ಹೋದಾಗ.. ಆವತ್ತು ತುಂಬಾ ಖುಷಿಯ ದಿನ. ದಶಕಗಳ ಕಾಲ ನಾನು ಏನೆಲ್ಲ ಸಂಕಷ್ಟಗಳ ಮಧ್ಯೆ ಓದಿದ್ದೆ. ಬದುಕಿನಲ್ಲಿ ಏನಾದರೊಂದು ಪಡಕೊಬೇಕೆಂಬ ಇಚ್ಛೆ ಇತ್ತಲ್ಲ… ಅದಕ್ಕೆ. ಕೊಪ್ಪಳದ ಗೆಳೆಯರು… ನೆನಪಿಸಿಕೊಳ್ಳಬೇಕಾದ್ದು ಇಬ್ಬರನ್ನು ಮಂಜುನಾಥ ಖಾನಾವಳಿಯಲ್ಲಿರುವ ಬಸವರಾಜ ಜೋಗಿ ಗಾರ್ಡನ್ ಹೋಟೇಲ್ನ ಹನುಮಂತ. ಇವರಿಬ್ಬರೂ ನನ್ನನ್ನು ಎಷ್ಟು ಪ್ರೀತಿಯಿಂದ ನೋಡಿಕೊಡರೆಂದರೆ ಹೇಳೋಕೆ ಆಗಲ್ಲ. ಎಂಥ ಸಂದರ್ಭವಿರಲಿ ನನಗೆ ಊಟ ಹಾಕಿದ್ದಾರೆ. ನನ್ನಿಂದ ಏನನ್ನೂ ಅಪೇಕ್ಷಿಸದೇ. ಕೊಪ್ಪಳದ ಲೆಕ್ಚರರ್ಗಳ ಬಗ್ಗೆ… ಕೊಪ್ಪಳದಲ್ಲಿ ಮರೆಯದೇ ಇರುವಂತಹ ಲೆಕ್ಚರರ್ ಅಂದ್ರೆ ಕೆ.ಎಂ. ವಾಣಿ ಮೇಡಂ. ಹೊಸ ವರ್ಷದ ದಿನ ನಮಗೆಲ್ಲ ಸಂಕಲ್ಪದ ದಿನ. ಈ ವರ್ಷ ನಾವು ಏನು ಮಾಡಿಕೊಬೇಕು ಅಂತ ಸಂಕಲ್ಪದ ಮಹತ್ವ ಹೇಳಿದವರು. ಪಠ್ಯೇತರವಾಗಿ ಅವರು ತುಂಬಾನೆ ಬದುಕಿಗೆ ಹತ್ತಿರವಾಗುವಂಥ ಬಹಳಷ್ಟು ಮಾತು ಹೇಳಿದ್ರು. ಬಿ.ಎಸ್. ಗೌಡರು ಅವಕಾಶ ಕೊಟ್ಟು ಸಾಂಸ್ಕೃತಿಕವಾಗಿ ಬೆಳೆಸಿದರು. ನಾನು ಕಾಲೇಜ್ಗೆ ಹೋಗಿ 15 ದಿನ ಆಗಿರಲಿಲ್ಲ. ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ನೀಡಿ ಆತ್ಮವಿಶ್ವಾಸ ತುಂಬಿದ್ರು. ಕೊಪ್ಪಳದಲ್ಲಿ ಖುಷಿಯಾದದ್ದು… ಅಂಥದ್ದೇನೂ ಇಲ್ಲ. ಅಲ್ಲಿ ಸಂಕಟದ ದಿನಗಳು ಹೆಚ್ಚು. ಓದಿನ ಮಧ್ಯೆ ಆಥರ್ಿಕ ಪರಿಸ್ಥಿತಿ, ಆರೋಗ್ಯ ಹದಗೆಟ್ಟಿತ್ತು. ಒಮ್ಮೆ 2 ದಿನ ಊಟ ಮಾಡಿರಲಿಲ್ಲ. ನಮ್ಮಪ್ಪ ದುಡ್ಡು ಕಳಿಸೋದು ತಡವಾಗಿತ್ತು. ಹೊಟ್ಟೆ ತುಂಬಾ ನೀರು ಕುಡಿದು ಬಿಟ್ಟಿದ್ದೆ, ಗ್ಯಾಸ್ ಹಿಡಿದುಬಿಟ್ಟಿತು. ರಾತ್ರಿ 2ರ ಸುಮಾರಿಗೆ ಚಪ್ಪರದಳ್ಳಿಯಿಂದ (ದೇವರಾಜ ಅರಸ್ ಕಾಲೋನಿ) ಕ್ಲಾಸ್ಮೇಟ್ ಇರುವ ಗಂಜ್ ಸರ್ಕಲ್ಗೆ ಹೋಗುವ ಹಾದಿ ತುಂಬಾ ವಾಂತಿ ಮಾಡಿಕೊಂಡಿದ್ದೆ. ಆ ಮೇಲೆ ಕ್ಲಾಸ್ಮೇಟ್ಸ್ ಆಸ್ಪತ್ರೆಗೆ ಸೇರಿಸಿದ್ದರು. ನನ್ನ ಒಟ್ಟು ಮನಸ್ಥಿತಿ ರೂಪುಗೊಳ್ಳಲು ಕೊಪ್ಪಳ ಮುಖ್ಯ ಕಾರಣ. ಕೊಪ್ಪಳ ಬಿಟ್ಟು ಹೋಗುವಾಗ .. ಕೊಪ್ಪಳ ನನ್ನ ಜೀವನದ ಒಂದು ಭಾಗ ಆಗಿಬಿಟ್ಟಿತ್ತು. ಕೊಪ್ಪಳವನ್ನು ಪ್ರೀತಿಸುತ್ತೇನೆ. ನನ್ನಲ್ಲಿ ವಿಶ್ವಾಸ ತುಂಬಿದ ಗೆಳೆಯರು, ನನ್ನ ಪ್ರೀತಿಸುವ ಜೀವಗಳು, ಇಷ್ಟಪಡುವಂಥವರು ಕೊಪ್ಪಳದಲ್ಲಿದ್ದಾರೆ. ಈಗ ಕೊಪ್ಪಳದಿಂದ ದೂರವಾಗಿದ್ದೇನೆ ಅಂತ ಅನ್ನಿಸಿಯೇ ಇಲ್ಲ.]]>

‍ಲೇಖಕರು G

August 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

  1. vijayamrithraj

    ವೀರಣ್ಣ ಕಸುವಿದ್ದ ಹುಡುಗ ಆತನೊಂದಿಗೆ ಒಡನಾಟ ಮಾಡಿದೆ ಅಷ್ಟೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: