ವೆಂಕಟ್ರಮಣ ಭಟ್ ಕಂಡ ಏಪ್ರಿಲ್ ಹೂವುಗಳು

ವೆಂಕಟ್ರಮಣ ಭಟ್ ‘ಅವಧಿ’ ಓದುಗರಿಗೆ ಸಾಕಷ್ಟು ಪರಿಚಿತರೇ. ‘ರೂಪಾಂತರ’ ಬ್ಲಾಗ್ ಹೊಂದಿರುವ ಭಟ್ಟರು ‘ಅವಧಿ’ಯಲ್ಲಿ ತಮ್ಮ ಕಲೆಗಾರಿಕೆಯ ಮೂಲಕ ಕಾಣಿಸಿಕೊಂಡಿದ್ದಾರೆ. ಅವರು ಹೀಗೆ ತಮ್ಮ ಮನದಲ್ಲಿ ಅಚ್ಚೊತ್ತಿದ ಎಪ್ರಿಲ್ ಹೂಗಳನ್ನು ‘ಅವಧಿ’ಗಾಗಿ ಕಳಿಸಿಕೊಟ್ಟಿದ್ದಾರೆ. ಅವರ ವಿವರ ಪರಿಚಯ ಇಲ್ಲಿದೆ-

ನಾನು ಹುಟ್ಟಿದ್ದು ಉತ್ತರಕನ್ನಡದ ಯಲ್ಲಾಪುರವೆಂಬ ಕಾನಿನ ಮತ್ತು ಅಡಿಕೆ ತೋಟ-ಭತ್ತದ ಗದ್ದೆಗಳ ಊರಿನಲ್ಲಿ. ಬೆಳೆದದ್ದು ಅಡಿಕೆ ಬೇಯಿಸುವ ವಲೆಯ ಮುಂದೆ ಕಥೆ ಆಡುತ್ತ, ಅಪ್ಪನ ಜೊತೆ ತಾರೆಗಳನ್ನು ನೋಡುತ್ತ,ಏರೋಪ್ಲೇನಿನ ಹಾಗೆ ಹಾರುವ ಡ್ರಾಗನ್ ಫ್ಲೈನ ಬಾಲಕ್ಕೆ ದಾರ ಕಟ್ಟಿ ಬಿಡುತ್ತ,ತೋಳಂಭಟ್ಟನ ಹಾಗೆ ಜಿಗಿಯುತ್ತ ಹಾಗು ನೇರಳೆ ಮರ ಹತ್ತುತ್ತ.ಆಮೇಲೆ ಸ್ವಲ್ಪ ಸಿರಸಿಯಲ್ಲಿ,ಸ್ವಲ್ಪ ಬೆಳಗಾವಿಯೆಂಬ ಗಡಿನಾಡಲ್ಲಿ. ಈಗ ಹೊಸ ವಿಳಾಸ,ಬೆಂಗಳೂರೆಂಬೊ ಬೆಂಗಳೂರು. ನನಗೆ ಇಷ್ಟವಾಗದೆ ಇರುವ ವಿಷಯಗಳು ಕಮ್ಮಿ,ತಿಳಕೊಳ್ಳುವ ನಿರಂತರ ಕುತೂಹಲ.

ಏನು ಸಿಕ್ಕರೂ ಓದುವ ಹುಚ್ಚು,ಧೋ ಸುರಿವ ಮಳೆಯೆಂದರೆ ಇಷ್ಟ, ಚಿತ್ರ ಬಿಡಿಸುವುದೂ,ಬರೆಯುವುದೂ ಹತ್ತಿಸಿಕೊಂಡ ಗೀಳು.ಸ್ವಲ್ಪ ಶೈ,ಸ್ವಲ್ಪ ಹುಚ್ಚು .ಆದರೆ ಜೊತೆಗೂಡಿದರೆ ಮಾತೇ ಮಾತು.ಸಂಗೀತ,ಬಣ್ಣಗಳು,ಬದುಕು ಹಾಗು ಅಕ್ಷರಗಳು ನನ್ನನ್ನು ಬಿಡದೇ ತಮ್ಮೆಡೆಗೆ ಜಗ್ಗುತ್ತವೆ. ಕನಸು ಕಾಣುವುದು ನನ್ನ ಹಕ್ಕು. ಟ್ರಾಫಿಕ್ಕು,ಕೆಲಸ ಎನ್ನುತ್ತ ಪುರಸೊತ್ತಿಲ್ಲದ ಭರಾಟೆಯಲ್ಲಿ ಎಲ್ಲೆಲ್ಲೋ ಇಣುಕುವ ಪುಟ್ಟ ಇಣಚಿಯಂತ ಸಣ್ಣ ಖುಷಿಗಳನ್ನು ಹಂಬಲಿಸುತ್ತ ಬದುಕುವುದು ಇಷ್ಟ.

ದೈನಿಕದ ಮಾನವೀಯ ಕ್ಷಣಗಳು,ನನ್ನದೇ ತಲ್ಲಣಗಳು,ಮನುಷ್ಯನಾಗುವೆಡೆಗಿನ ಧಾವಂತ ಮತ್ತು ಮನದೊಳಗೆ ಗೂಡುಬಿಟ್ಟ ಹಂಬಲದಂಥ ತುಡಿತ ನನ್ನನ್ನು ಸದಾ ಪೊರೆಯುತ್ತಿವೆ. ಯಾರಿಗೂ ಹಾಗೂ ನನಗೂ ಅರ್ಥವಾಗದ ಹಾಗೆಲ್ಲ ನನ್ನ ಬಗ್ಗೆ ಬರೆದು ತಲೆತಿನ್ನಬೇಕೆಂದು ಅನ್ನಿಸುತ್ತಿದೆ, ಆದರೆ ಸಧ್ಯಕ್ಕೆ ಇಷ್ಟೇ ನೆನಪಾಗುತ್ತಿದೆ ಮತ್ತು ರಾಶೀ ಬರೆದುಕೊಳ್ಳಲು ಬೇಜಾರು.

]]>

‍ಲೇಖಕರು G

April 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. suri

  ಇದೊಂದು ಸುಂದರ ದೃಶ್ಯ ಕಾವ್ಯ. ಇವರ ಕುಸುರಿ ಚಿತ್ರಗಳನ್ನು ಅವಧಿಯಲ್ಲಿ ನೋಡುತ್ತಾ ಇದ್ದೇನೆ. ಸರಳ ರೇಖೆಗಳಲ್ಲಿ, ಕೆಲವೇ ಬಣ್ಣಗಳಲ್ಲಿ ಅದೆಷ್ಟು ಜೀವ ತುಂಬುತ್ತಾರೆ ಇವರು. ಭಟ್ಟರೇ, ನಿಮ್ಮ ಕುಂಚ ಕಿತ್ತಿಟ್ಟು ಕೊಳ್ಳುವ ಆಸೆ ನನ್ನದು. ಹಾಗಾದರೂ ನಿಮ್ಮ ಪ್ರತಿಭೆಯಲ್ಲಿ ನನಗೆ ಒಂದಿಷ್ಟು ಒಲಿದೀತು ಅಂತ. ಸೂರಿ.

  ಪ್ರತಿಕ್ರಿಯೆ
 2. Venkatraman Bhat

  ಖುಷಿಯಾಯ್ತು ಅವಧಿ. ನೀವು ನನಗೆ, ನನ್ನೊಳಗಿನ ಕಲೆಗೆ ಜೀವ ತುಂಬುತ್ತಿದ್ದೀರಿ ಸೂರಿ..
  -ವೆಂಕಟ್ರಮಣ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: