‘ವೈದೇಹಿ’ ಆಸ್ಪತ್ರೆಗೆ….

ಹೆಸರಿನಲ್ಲೇನಿದೆ…?

-ಜಿ ಎನ್ ಅಶೋಕವರ್ಧನ

Athree book center -ಬ್ಲಾಗ್ ನಿಂದ   

vaidehiನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ . . .’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ ಆದ್ದರಿಂದ ನಿರ್ಲಿಪ್ತನಾಗಿಯೇ ಓದುತ್ತಿದ್ದೆ. `. . . ನಾಲ್ವರು ಗಾಯಾಳುಗಳು. ವೈದೇಹಿ ಆಸ್ಪತ್ರೆಗೆ . . . .’ ಮನದ ಮೂಲೆಯಲ್ಲೆಲ್ಲೋ ಆತ್ಮೀಯ ಎಳೆಗೊಂದು ತೀವ್ರ ತುಯ್ತ. ಜಗ್ಗನೆದ್ದು ಒಳಗೆಲಸದಲ್ಲಿದ್ದ ಹೆಂಡತಿಗೆ “ಛೆ. ವೈದೇಹಿ accicidentನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ” ಆತಂಕ ದಾಟಿಸಿದೆ. ಅವಳಿಗೂ shock. ನಮ್ಮ ಪಕ್ಕದ ಮನೆಯ ಮಾವ ವೈದೇಹಿಗೆ ಆತ್ಮೀಯ ಕಾನೂನು ಸಲಹೆಗಾರ. ಅವರಿಗೆ ಹೋದ ಮರುಪ್ರಸಾರದಲ್ಲಿ “ಛೆ, ಕಟ್ಟಡ ಬಿತ್ತಂತೆ. ವೈದೇಹಿ ಬೆಂಗಳೂರಿಗೆ ಯಾವುದೋ ಸಭೆಗೆ ಹೋಗಿದ್ದಿರಬೇಕು, ಅಲ್ಲಿ ಸಿಕ್ಕಿಕೊಂಡಿದ್ದಾರೆ. ಈಗ ಆಸ್ಪತ್ರೆಗೆ ಹಾಕಿದ್ದಾರಂತೆ.” ಮಾವನಿಗೂ ಅವರ ಕ್ಷೇಮ ವಾರ್ತೆಯ ಕಾತರ. ಕಡತ ಕೆದರಿ ಮಣಿಪಾಲದ ಇರವಂತಿಗೆಗೆ (ವೈದೇಹಿಯವರ ಮನೆ) ಕೂಡಲೇ ದೂರವಾಣಿಸಿದರು. ಭಯದ ಬುಗ್ಗೆ ಫುಸ್ ಎನ್ನುವಂತೆ ವೈದೇಹಿಯೇ ಉತ್ತರಿಸಿದರು! ಸುದ್ಧಿ ಸುರುಳಿ ಮತೆ ಮತ್ತೆ ಹರಿಯುತ್ತಲೇ ಇತ್ತು `. . . ನಾಲ್ವರು ಗಾಯಾಳುಗಳು ವೈದೇಹಿ (ಎಂಬ) ಆಸ್ಪತ್ರೆಗೆ ದಾಖಲು . . .’

 

ಹಿಂದೆಯೂ ಒಮ್ಮೆ ಹೀಗೇ ಆಗಿತ್ತು. . .
ವಾರಾಂತ್ಯದಲ್ಲಿ ಅದೇನೋ ಅಂಗಡಿಗೆ ಎರಡು ದಿನ ರಜೆ ಸಿಕ್ಕಿತ್ತು. ನಾನು ಸಪತ್ನೀಕನಾಗಿ `ಅಭಯಾರಣ್ಯ’ಕ್ಕೆ (ಇಲ್ಲೇ ನಗರದ ಹೊರ ವಲಯದಲ್ಲಿರುವ ನಮ್ಮದೇ ವನ್ಯ ಪುನರುತ್ಥಾನದ ಪ್ರಯೋಗಭೂಮಿ) ಹೋಗಿದ್ದೆ. ಪುತ್ತೂರಿನ ಹಳ್ಳಿ ಮೂಲೆಯಲ್ಲಿದ್ದ ನನ್ನೊಬ್ಬ ಸೋದರಮಾವ ರೇಡಿಯೋ ವಾರ್ತೆಯಲ್ಲಿ ಕೇಳಿದರು “ಮಲೆನಾಡಿನ ಮೂಲೆಯ ಕಾಡುಹೊಳೆಯಲ್ಲಿ ಅತ್ರಿಯವರು ಸಪತ್ನೀಕರಾಗಿ ಮುಳುಗಿ ಸತ್ತರು”. ನನ್ನ ಅಂಗಡಿಯ ಪರಿಚಯಸ್ತರಿಗೆಲ್ಲ ನಾನು ಅತ್ರಿಯವನೇ. ಮತ್ತೆ ನನ್ನ ಹವ್ಯಾಸ ಪರಿಚಯವಿರುವವರಿಗೆಲ್ಲಾ ನಾನು ಮಲೆನಾಡಿನ ಕಾಡಮೂಲೆಯಲ್ಲಿದ್ದಿರಬಹುದಾದ್ದು ತೀರಾ ಸಂಭಾವ್ಯ! ನನ್ನ ನೆರೆಮನೆಯ ಮಾವನ ಮನೆಗೆ ಫೋನಿನ ಮೇಲೆ ಫೋನು. ಅವರಿಗೆ ಸ್ಪಷ್ಟವಿತ್ತು, ಆದರೆ ಸಂಶಯದ ಹುಳುವಿನ ಕಡಿತ ನಂಜಾದರೆ? `ಅಭಯಾರಣ್ಯ’ದಲ್ಲಿ ಫೋನಿಲ್ಲ. ನಾನು ಜಂಗಮವಾಣಿಯನ್ನು ಬಹಿಷ್ಕರಿಸಿದವ. ಅಭಯಾರಣ್ಯದ ಒತ್ತಿನ ಭೂಮಿಯ ನನ್ನ ಚಿಕ್ಕಮ್ಮನ ಮನೆಗೆ ಭಯದ ವರ್ಗಾವಣೆಯಾಯ್ತು. ತಮ್ಮ ಇದ್ದ ಕೆಲಸ ಬಿಟ್ಟು ನಾವಿದ್ದಲ್ಲಿಗೆ ಧಾವಿಸಿ, ನಮ್ಮನ್ನು ನೋಡಿ ನಿಟ್ಟುಸಿರು ಬಿಟ್ಟ. ನಮ್ಮ ಕ್ಷೇಮಸಮಾಚಾರದ ಹಿಂಪ್ರಸಾರ ಎಲ್ಲ ಕುತೂಹಲಿಗಳಿಗೆ ಮುಟ್ಟುವ ವೇಳೆಯಲ್ಲಿ ನಿಜದ ದುರಂತ ಸ್ಪಷ್ಟವಾಗಿತ್ತು – ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಅತ್ರಿ ಶಿವಮೊಗ್ಗದ ಸಮೀಪದ ತಮ್ಮ ಮಾವನ ಮನೆಯ ಬಳಿ ವಿಹಾರಕ್ಕೆ ಹೋದವರು ಸಪತ್ನೀಕರಾಗಿ ಹೊಳೆಪಾಲಾಗಿದ್ದರು.

ಚಿತ್ರ: ಲೈಬ್ರರಿ ಆಫ್ ಕಾಂಗ್ರೆಸ್ 

‍ಲೇಖಕರು avadhi

November 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

3 ಪ್ರತಿಕ್ರಿಯೆಗಳು

 1. vijayakumar

  kannada scriptnalli hege bariyodu. Gottaglilla.
  mele helida incidents yellargu agiratte. Sattu badakibandange. Namma atmiyara tudita nijakku bayalagatte.

  ಪ್ರತಿಕ್ರಿಯೆ
 2. kumarsringeri

  nanagu thumba bhyavagithu adare tv nodi hala nana Email nali vidhi aspathrege antha node amele purna nodi swalp kushi ahithu.

  kumarsringeri

  ಪ್ರತಿಕ್ರಿಯೆ
 3. malathi S

  ’ವೈದೇಹಿ ಆಸ್ಪತ್ರೆಗೆ’ ಅಂತ ಫೋಟೊ ಸಮೇತ ಹಾಕಿ ಬಿಟ್ಟಿದ್ದೀರಾ.
  ಎಷ್ಟು ಗಾಬಾರಿಯಾಯ್ತು ಗೊತ್ತಾ??
  wishing her immortality.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: