ವೈವಿಧ್ಯದ ಊರುಗಳ ರಾಣಿ!

burger.jpg

vnew3.jpg“ವೆಂಕಿ ಬರ್ಗರ್”

 

 

 

ವೆಂಕಿ

ಜಾಗತೀಕರಣಗೊಂಡ ಅರ್ಥವ್ಯವಸ್ಥೆಗೊಂದು ಥ್ಯಾಂಕ್ಸ್; “ಮೆಲ್ಟಿಂಗ್ ಪಾಟ್” ಅನ್ನೋ ನುಡಿಗಟ್ಟು ಈಚಿನ ದಿನಗಳಲ್ಲಿ ಕ್ಲೀಷೆ ಅನ್ನಿಸೋವಷ್ಟು ಕಾಣಿಸಿಕೊಳ್ಳಲು ಕಾರಣವಾಗಿರೋದಕ್ಕೆ. ನಮ್ಮದೇ ಬೆಂಗಳೂರು, ಮೈಸೂರು ಸಿಟಿಗಳಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಆದರೆ ಕೆಲವು ನಗರಗಳಿವೆ; ಅವು ಬದಲಾಗುವುದಕ್ಕೆಂದೇ, ವೈವಿಧ್ಯವನ್ನು ಒಳಗೊಳ್ಳುವುದಕ್ಕೆಂದೇ ಹೇಳಿ ಮಾಡಿಸಿದವುಗಳು ಅನ್ನುವ ಹಾಗಿವೆ. ಅಂಥವುಗಳ ಪಟ್ಟಿಯಲ್ಲಿ ನ್ಯೂಯಾರ್ಕಿಗೆ ಮೊದಲ ರ್‍ಯಾಂಕ್. ನ್ಯೂಯಾರ್ಕಿನೊಳಗೆ ಕ್ವೀನ್ಸ್ ಉಪನಗರಿ (ನ್ಯೂಯಾರ್ಕ್ ಸಿಟಿಯನ್ನು ಐದು ಉಪನಗರಿಗಳನ್ನಾಗಿ ವಿಭಜಿಸಲಾಗಿದೆ) ಅಮೆರಿಕೆಯಲ್ಲಿ ಮಾತ್ರವಲ್ಲ, ಪ್ರಾಯಶಃ ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಜನಾಂಗೀಯ ವೈವಿಧ್ಯವಿರುವ ಕೌಂಟಿ ಎಂಬ ಖ್ಯಾತಿ ಹೊಂದಿದೆ.

ಮೀನು ಮತ್ತು ನೆಂಟರನ್ನು ಮೂರು ದಿನ ಆದ ಮೇಲೆ ಸಹಿಸಿಕೊಳ್ಳೋದು ಕಷ್ಟ ಎಂದು ಹೇಳುವುದುಂಟು. ಆದರೆ ಇಲ್ಲಿ ನನಗೆ ಆತಿಥ್ಯ ನೀಡಿದ ಡಾ. ಶ್ರೀನಿವಾಸ ರಾವ್ ಮತ್ತು ಡಾ. ಕಲಸಪಡಿ ಅವರ ಸತ್ಕಾರ ಗುಣ ಎಷ್ಟು ದೊಡ್ಡದೆಂದರೆ, ನನಗೆ ನನ್ನ ಮನೆಯೇ ಮರೆತುಹೋಗುವಂತಾಗಿತ್ತು.

vai.jpg

ನಾನು ಕ್ವೀನ್ಸ್ ಗೆ ಬಂದಿಳಿದದ್ದು ನನ್ನ ಗುರಿ ಹುಡುಕಿಕೊಂಡು. ಕ್ವೀನ್ಸ್ ಹೆಸರು ಬಂದದ್ದು ೧೭ನೇ ಶತಮಾನದಲ್ಲಿ. ಬ್ರಿಟಿಷ್ ದೊರೆ ೨ನೇ ಚಾರ್ಲ್ಸ್ ನ ಪತ್ನಿಗೆ ಗೌರವ ಸೂಚಕವಾಗಿ. ನೋಡಿ, ಎಲ್ಲಿ ಹೋದರೂ ವಸಾಹತುಶಾಹಿ ಭೂತದ ಛಾಯೆ! ಡೀಮೋಗ್ರಫಿಕ್ ಸರ್ವೆ ಪ್ರಕಾರ, ಇಲ್ಲಿನ ಅರ್ಧದಷ್ಟು ಮಂದಿ ವಲಸೆ ಬಂದವರ್‍ಏ. ಕ್ವೀನ್ಸ್ ನೊಳಗೆ ನಾನಿರುವ ಪ್ರದೇಶದ ಹೆಸರು ರಿಗೋ ಪಾರ್ಕ್.

ಕ್ವೀನ್ಸ್ ಗೆ ನಾನು ಬಂದದ್ದು ಆಫ್ರಿಕಾ ಮೂಲಕ! ಹೌದು. ಪಶ್ಚಿಮ ಆಫ್ರಿಕಾ ಖಂಡದ ಸೆನೇಗಲ್ ಎಂಬ ದೇಶದ ಗೆಳೆಯ ಹೆಮೆಡಿ ಡಿಯಾ ಕೂಡ ಮನೆ ಹುಡುಕುತ್ತಿದ್ದ. ನಾನು ಕೂಡ ಉಳಿದುಕೊಳ್ಳಲೊಂದು ಸ್ಥಳಕ್ಕಾಗಿ ತಲಾಶ್ ಮಾಡುತ್ತಿದ್ದೆ. ಫೇಸ್ ಬುಕ್ ಮತ್ತು ಬ್ಲಾಗ್ ಗಳ ಜಗತ್ತಿನಲ್ಲಿ ನಮ್ಮಿಬ್ಬರ ಭೇಟಿಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

ಹೆಮೆಡಿ ಮ್ಯಾರಥಾನ್ ಓಟಗಾರ ಅಥವಾ ಫುಟ್ಬಾಲ್ ಪಟು (ಇಲ್ಲಿನ ಫುಟ್ಬಾಲ್ ಬೇರೆಯೇ ತೆರನಾದದ್ದು. ನಮ್ಮಲ್ಲಿಯ ಫುಟ್ಬಾಲ್ ಇಲ್ಲಿ ಸಾಕರ್) ಆಗುವುದರಿಂದ ಅಕಸ್ಮಾತ್ತಾಗಿ ತಪ್ಪಿಸಿಕೊಂಡಿರಬೇಕು. ಈ ಸುಂದರ ಮತ್ತು ದೃಢ ಕಾಯದ ಯುವಕ ಇಲ್ಲಿ ಶೈಕ್ಷಣಿಕ ಪ್ರಾಜೆಕ್ಟ್ ಗಳಿಗಾಗಿ ಆಫ್ರಿಕಾ ಮೂಲದವರನ್ನು ಒಂದೆಡೆಗೆ ತರುವ ಯತ್ನ ಮಾಡುತ್ತಿದ್ದಾನೆ. ಆ ಮೂಲಕ  ಪಶ್ಚಿಮ ಆಫ್ರಿಕಾದ ಸೆನೇಗಲ್, ಮೌರಿತಾನಿಯ, ಗಂಬಿಯ ದೇಶಗಳಿಗೆ ಸೇತುವೆಯಾಗುವ ದಾರಿ ಆತನದು.

ನನ್ನ ಆಫ್ರಿಕಾ ದೋಸ್ತಿ ಹೆಮೆಡಿ ವಿಚಾರಕ್ಕಷ್ಟೇ ನಿಂತುಹೋಗಲಿಲ್ಲ. ಇಥಿಯೋಪಿಯದಿಂದ ಬಂದ ನಮ್ಮಿಬ್ಬರಿಗೂ ಗೆಳೆಯನಾದ ಮುಲು ಈ ವಾರ ನಮ್ಮೊಂದಿಗೆ ಕಳೆದ. ನಾವೆಲ್ಲ ನಮ್ಮ ಓದಿನ ದಿನಗಳ ನೆನಪು ಹಂಚಿಕೊಂಡೆವು.

ಮತ್ತೆ ವೈವಿಧ್ಯದ ಊರಿಗೆ. ನಾನಿಲ್ಲಿ ರಿಗೋ ಪಾರ್ಕ್ ನ ಚೈನೀಸ್ ಅಂಗಡಿಗಳಲ್ಲಿ ಶಾಪಿಂಗ್ ಮಾಡಿದೆ. ಬೀದಿಯ ಕೊನೆಯಲ್ಲಿರುವ ಕೊರಿಯಾದವನ ಮಾಲೀಕತ್ವದ ಲಾಂಡ್ರಿ ಅಂಗಡಿಯಲ್ಲಿ ಲಾಂಡ್ರಿ ಮಾಡಿಕೊಂಡೆ. ಸೆಲ್ಫ್ ಸರ್ವೀಸ್. ಇಲ್ಲಿನ ರಷಿಯನ್ನರನ್ನು ಗುರುತಿಸಲು ನಾನು ನಿಧಾನವಾಗಿ ಕಲಿಯುತ್ತಿದ್ದೇನೆ. ಆದರೆ ಉಜ್ಬೇಕಿಯನ್ನರು, ಅಲ್ಬೇನಿಯನ್ನರು, ರೊಮಾನಿಯನ್ನರು ಮತ್ತು ಉಕ್ರೇನಿಯನ್ನರ ನಡುವಿನ ವ್ಯತ್ಯಾಸ ಹೇಳಲು ನನಗೆ ಇನ್ನೂ ಸಮಯ ಬೇಕಾಗಬಹುದು. ಒಂದು ದಿನ ನಾನು ಆ ಹಂತ ಮುಟ್ಟುತ್ತೇನೆ!

ಚಿತ್ರ: ಜಿ ಎನ್ ಮೋಹನ್

‍ಲೇಖಕರು avadhi

October 17, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This