-ಜಿ ಎನ್ ಮೋಹನ್
ಜೋಗಿ ಕರೆ ಮಾಡಿದರೆ ಎಂತಹ ಒತ್ತಡದಲ್ಲೂ ನಗೆ ಉಕ್ಕಿ ಆರಾಮಾಗುತ್ತೇನೆ. ಆದರೆ ಈಗಷ್ಟೇ ಫೋನ್ ಮಾಡಿದ ಜೋಗಿ ದನಿ ಭಾರವಾಗಿತ್ತು. ಅದು ಜೋಗಿಯ ವ್ಯಕ್ತಿತ್ವಕ್ಕೆ ಖಂಡಿತಾ ಹೇಳಿ ಮಾಡಿಸಿದ್ದಲ್ಲ. ಯಾಕೆ ಜೋಗಿ? ಎಂದು ಕೇಳುವ ಮುಂಚೆಯೇ ವ್ಯಾಸ ಇನ್ನಿಲ್ಲ ಅಂದರು. ಶಾಕ್ ಆಯಿತು. ಕೆಲವೇ ದಿನಗಳ ಹಿಂದಷ್ಟೇ ಫೋನಾಯಿಸಿದ್ದರು. ‘ಸಂಚಯ’ದ ಕಾವ್ಯ ವಿಶೇಷಾಂಕದಲ್ಲಿ ಬಂದಿದ್ದ ನನ್ನ ಕವಿತೆ ‘ಮಿ ಅಂಡ್ ಮಿಸೆಸ್ ಅಯ್ಯರ್’ ಕುರಿತು ಮಾತನಾಡಿದ್ದರು.
ಒಂದು ನಿಮಿಷ ನಾನು ರೆಕ್ಕೆ ಪಡೆದು ಎಲ್ಲೆಲ್ಲಿಗೋ ಹಾರಿದೆ. ವ್ಯಾಸ ನಾನು ಶ್ರದ್ದೆಯಿಂದ ಓದಿದ ಕಥೆಗಾರ. ಅವರ ಕಥೆಗಳ ವಿಕ್ಷಿಪ್ತತೆ ನನ್ನ ಒಳಗನ್ನು ಕಲಕಿ ಹಾಕುತ್ತಿತ್ತು. ಇನ್ನಿಲ್ಲದಂತೆ ಅಂತರ್ಮುಖಿಯನ್ನಾಗಿಸುತ್ತಿತ್ತು ಕಳೆದು ಹೋದ ದಿನಗಳಲ್ಲಿ ಇನ್ನಷ್ಟು ಕಳೆದು ಹೋಗಲು ತಿದಿ ಒತ್ತುತ್ತಿತ್ತು.
ನಾನು ವ್ಯಾಸರ ಕಥಾಲೋಕಕ್ಕೆ ಹೆಜ್ಜೆ ಹಾಕಿದ್ದು ಜಿ ಎಸ್ ಸದಾಶಿವರ ಮೂಲಕ. ಅವರು ಮಯೂರ ಸಂಪಾದಿಸುತ್ತಿದ್ದ ಸಮಯದಲ್ಲಿ ವ್ಯಾಸರ ಕಥೆ ‘ಬೇರು’ ಪ್ರಕಟವಾಗಿತ್ತು. ಮಯೂರದ ಮುಖಪುಟ ಇಡೀ ಆವರಿಸಿಕೊಂಡು ನಿಂತಿದ್ದು ಚಂದ್ರನಾಥ್ ಬೇರು ಕಥೆಗೆ ಬರೆದ ಕಲೆ. ಆ ಕಲೆ, ಆ ಕಥೆ ಎರಡೂ ಕಾಡಿಸಿಹಾಕಿತ್ತು.
ನಾನು ನಾಟಕ ಪದವಿಗಾಗಿ ವಿಶ್ವವಿದ್ಯಾಲಯ ಹೊಕ್ಕಾಗ ನಾಟಕ ನಿರ್ದೆಶಿಸಬೇಕಾಯಿತು. ಆಗ ಮತ್ತೆ ಈ ‘ಬೇರು’ ನನ್ನೊಳಗಿಂದ ಎದ್ದು ಬಂತು. ನನ್ನೊಳಗಿನ ಹತಾಶೆ, ಒಂಟಿತನವನ್ನೂ ಸೇರಿಸಿ ರಂಗವೇರಿಸಿದೆ. ಅದನ್ನು ನಟಿಸುವಾಗ ನನ್ನೊಳಗಿಂದ ಪಾತ್ರಗಳು ಎದ್ದು ರಂಗದ ಮೇಲೆ ಕುಣಿಯುತ್ತಿದೆಯೇನೋ ಎನಿಸುತ್ತಿತ್ತು.
‘ಅವಳು ಸುಖವನ್ನು ಕದ್ದುಕೊಳ್ಳುತ್ತಿದ್ದಾಳೆ..’ ಎಂಬ ಸಾಲುಗಳೇಕೋ ನನ್ನನ್ನು ಮತ್ತೆ ಮತ್ತೆ ಕಟ್ಟಿಹಾಕುತ್ತಿತ್ತು.
ಆ ನಂತರ ನಾನು ಮಂಗಳೂರಿಗೆ ಹೋದೆ. ಅವರ ನೆರೆಯಲ್ಲೇ ಇದ್ದೆ. ವ್ಯಾಸ ಬದುಕಿನತ್ತ ಬೆನ್ನು ಹಾಕಿ ನಡೆದಿದ್ದಾರೆನೋ ಅನಿಸಿದ್ದು ನಂತರ ಸುಳ್ಳಾಗುವಂತೆ ಬರೆದರು. ಹೊಸಬರ ಬೆನ್ನು ತಟ್ಟಿದರು. ಗುಲ್ಬರ್ಗಾದಲ್ಲಿದ್ದಾಗ ಆಲ್ಲಿಗೂ ಅವರ ಎರಡು ಕಥಾ ಸಂಕಲನಗಳು ಹುಡುಕಿಕೊಂಡು ಬಂದವು.
ಆ ನಂತರ ಕವಿತೆಯ ಕಾರಣಕ್ಕಾಗಿ ಮತ್ತೆ ಸೇತುವೆ ಏರ್ಪಟ್ಟಿತು. ಮತ್ತೆ ಮತ್ತೆ ಫೋನ್ ಮಾಡುತ್ತಿದ್ದರು. ಬರೆದ ಬಗ್ಗೆ ಹೇಳುತ್ತಿದ್ದರು. ಖುಷಿಯಾಗುತ್ತಿತ್ತು. ಅವರ ಈ ಜೀವನ ಉತ್ಸಾಹ ಗಮನಿಸುತ್ತಿದ್ದ ನನಗೆ ಇನ್ನು ವ್ಯಾಸರ ಕಥೆಗಳು ಖಂಡಿತಾ ಬದಲಾಗಲಿಕ್ಕಿದೆ ಎನಿಸಿತು. ಆದರೆ ನನಗೆ ಗೊತ್ತಿರಲಿಲ್ಲ.-ವ್ಯಾಸರ ಕಥೆಯೇ ಮುಗಿಯಲಿಕ್ಕಿದೆ ಎಂದು..
ಡಾ.ಶ್ರೀಧರ ಉಪ್ಪೂರ ಇನ್ನಿಲ್ಲ: ಶಿಷ್ಯನ ನೆನೆದ ವಿವೇಕ ರೈ
ಬಿ ಎ ವಿವೇಕ ರೈ ನನ್ನ ವಿದ್ಯಾರ್ಥಿ ಡಾ. ಶ್ರೀಧರ ಉಪ್ಪೂರ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಮೈಸೂರು...
vyasadolage karagi hoda vyasa
-Siddamukhi
Dear Mohan,
The coverpage of Mayura for Vyasa’s Beru story is drawmn by Manohar, not by Chandranath.
Vyasa’s rememberence errrected my memories also
Haneef BM