ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕಥೆಗಾರ ಎಂ ವ್ಯಾಸರು ಬರೆದ ಕೊನೆಯ ಪತ್ರದ ಕೊನೆಯ ಸಾಲುಗಳು ಹೀಗಿವೆ…
“ಹೋಗಲಿ ಬಿಡಿ 69 ರಲ್ಲಿದ್ದೇನೆ…
ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು?…
.. ಒಂದು ಅಗಾಧ ದೈಹಿಕ ನೋವು ಇಂತಹ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ…ಜೀವ ಒಂದು ಉಳಿದರೆ ಸಾಕು ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತೆ…ಕೊನೆಯ ಉಸಿರಿರುವವರೆಗೂ….”
ವ್ಯಾಸರ ಕೊನೆಯ ಪತ್ರ
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ವ್ಯಾಸ ಇನ್ನಿಲ್ಲ ಅನ್ನೋ ಸುದ್ದಿ ತಿಳಿದಾಕ್ಷಣ ಏನೊಂದೂ
ಕ್ಷಣ ಕಾಲ ತಲೆಗೆ ಹೊಳೆಯಲೇ ಇಲ್ಲ…ಫುಲ್ ಬ್ಲ್ಯಾಂಕ್ ಬ್ಲ್ಯಾಂಕ್ … ಯಾಕೋ
ಅವರೊಂದಿಗಿದ್ದ ಆ ಕ್ಷಣಗಳನ್ನು ನೆನಪಿಸುತ್ತಿದ್ದಂತೆಲ್ಲಾ ದುಃಖ ಉಮ್ಮಳಿಸಿ ಬರುತ್ತದೆ…
ನನ್ನಂತ ಕಿರಿಯರನ್ನೂ ಅವರು ಮನೆಯವನಂತೆ ಮಾತನಾಡಿಸುತ್ತಿದ್ದ ರೀತಿ…ಛೆ…
ಅದೆಲ್ಲಾ ಇನ್ನು ಕೇವಲ ಕನಸು ಮಾತ್ರ…
ಕಾಕತಾಳೀಯ ಎಂದರೆ ಇದೇ ಇರಬೇಕು. ಬುಧವಾರ ಸಂಜೆ ನಾನು ಗೆಳೆಯ ರವಿಕುಮಾರ್್ ಅಜ್ಜೀಪುರ ವ್ಯಾಸರ ಬಗ್ಗೆ, ಅವರ ಕಥೆಗಳ ಬಗ್ಗೆ ಮಾತನಾಡುತ್ತಿದ್ದೆವು. ಇತ್ಥೀಚೆಗೆ ಗೆಳೆಯರೊಬ್ಬರ ಭಿನಂದನಾ ಗ್ರಂಥಕ್ಕೆ ಅವರೇ ಬರೆದ ಲೇಖನವೊಂದನ್ನು ಕುರಿತು ಚರ್ಚಿಸುತ್ತಿದ್ದೆವು. ಆ ಸಮಯದಲ್ಲಿ ಎಸ್್ಎಂಎಸ್್ ಒಂದು ರವಿ ಮೊಬೈಲ್ ಗೆ ಬಂತು. ಅದರಲ್ಲಿ ‘ವ್ಯಾಸ ನೋ ಮೋರ್’ ಎಂದಿತ್ತು. ರವಿ ಒಮ್ಮೆಲೇ ದಿಗ್ಭ್ರಾಂತನಾದ. ಏಕೆಂದರೆ ಕೆಲವು ದಿನಗಳ ಹಿಂದಷ್ಟೇ ವ್ಯಾಸ ಅವರು ರವಿಯನ್ನು ನೋಡಬೇಕೆಂದು ಸ್ನೇಹಿತರೊಬ್ಬರ ಹತ್ತಿರ ಹೇಳಿಕೊಂಡಿದ್ದರಂತೆ ಅವರ ಬರಹಗಳು ಇಷ್ಟ ಎಂದು ಹಾಡಿ ಹೊಗಳಿದ್ದರಂತೆ. ಹೀಗಾಗಿ ಇಬ್ಬರು ವ್ಯಾಸರನ್ನು ಭೇಟಿಯಾಗೋಣ ಎಂದುಕೊಂಡಿದ್ದೆವು. ಆದರೆ ಅವರು ಭೇಟಿಯಾಗದ ಸ್ಥಳಕ್ಕೆ ಹೋಗಿಬಿಟ್ಟಿದ್ದಾರೆ. ಅಕ್ಷರಗಳೊಡನೆ ನಮ್ಮೆಲ್ಲರ ಮಧ್ಯೆ ಸ್ನೇಹ ಸಂಬಂಧ ಬೆಳೆಸಿದ್ದ ವ್ಯಾಸಾರವರ ಗಲಿಕೆ ಕಥಾ ಲೋಕದಲ್ಲಿ ಸಣ್ಣದೊಂದು ಶೂನ್ಯ ಸೃಷ್ಟಿ ಮಾಡಿತೇನೊ ಎನ್ನಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ
Vyasa is one of best writer in Kannada. His passion towards death in all his small stories are visible. Unfortunately no worth discussion held on his stories.
B.M.Haneef